ಐಟಿ ದಾಳಿ ಮಾಡಿಸಿದ್ದಕ್ಕೆ ಬಿಜೆಪಿಗೆ ಧನ್ಯವಾದ ತಿಳಿಸಿದ ಜೆಡಿಎಸ್​ ಸಚಿವ ಸಿ.ಎಸ್​. ಪುಟ್ಟರಾಜು!

ದೇವೇಗೌಡ್ರು ಈ ರಾಷ್ಟ್ರಕ್ಕೆ, ರಾಜ್ಯಕ್ಕೆ, ಮಂಡ್ಯಕ್ಕೆ ಏನೇನು ಕೊಟ್ಟಿದ್ದಾರೆ ಅನ್ನೋದನ್ನು ಇಲ್ಲಿನ ಜನರು ತಮ್ಮ ಹೃದಯದಲ್ಲಿ ಬರೆದಿಟ್ಟುಕೊಂಡಿದ್ದಾರೆ. ಮಂಡ್ಯದಲ್ಲಿ ಕಮಲವನ್ನು ಅರಳಿಸಲು ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ಸಚಿವ ಸಿ.ಎಸ್​. ಪುಟ್ಟರಾಜು ಆರೋಪಿಸಿದ್ದಾರೆ.

Sushma Chakre | news18
Updated:March 29, 2019, 1:09 PM IST
ಐಟಿ ದಾಳಿ ಮಾಡಿಸಿದ್ದಕ್ಕೆ ಬಿಜೆಪಿಗೆ ಧನ್ಯವಾದ ತಿಳಿಸಿದ ಜೆಡಿಎಸ್​ ಸಚಿವ ಸಿ.ಎಸ್​. ಪುಟ್ಟರಾಜು!
ಸಿಎಸ್​ ಪುಟ್ಟರಾಜು
  • News18
  • Last Updated: March 29, 2019, 1:09 PM IST
  • Share this:
ರಾಘವೇಂದ್ರ ಗಂಜಾಂ

ಮಂಡ್ಯ (ಮಾ. 29): ನಮ್ಮ ಪಕ್ಷಕ್ಕೆ ಸಂಬಂಧಪಟ್ಟವರ ಮೇಲೆ  ಐಟಿ ದಾಳಿ ನಡೆಸಿದ ಬಿಜೆಪಿಗೆ ಧನ್ಯವಾದ. ನೀವು ನಿಮ್ಮ ನಿಜವಾದ ಬಂಡವಾಳವೇನೆಂದು ತೋರಿಸಿಕೊಟ್ಟಿದ್ದೀರಿ ಎಂದು ಸಚಿವ ಸಿ.ಎಸ್​. ಪುಟ್ಟರಾಜು ವ್ಯಂಗ್ಯವಾಡಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಸಚಿವ ಸಿ.ಎಸ್​. ಪುಟ್ಟರಾಜು, ಪಾಪ ಐಟಿ ಅಧಿಕಾರಿಗಳು ಏನೂ ಸಿಗದೆ ನಿರಾಶರಾಗಿದ್ದಾರೆ. ಅವರಿಗೆ ನಮ್ಮ ಸಾಲಪತ್ರಗಳು ಮಾತ್ರ ಸಿಕ್ಕಿವೆ. ಐಟಿ ದಾಳಿ ನಡೆಸಿ ನಮ್ಮನ್ನು ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸುಮಲತಾ ಬಗ್ಗೆ ಬೇಹುಗಾರಿಕೆ ನಡೆಸಲು ಅಧಿಕಾರಿಗಳು ಬೇಕಾಗಿಲ್ಲ. ಸುಮಲತಾರನ್ನು ಗಮನಿಸಲು ನಮ್ಮ ಹುಡುಗರಿದ್ದಾರೆ. ಕೈಲಾಗದವರು ಮೈ ಪರಚಿಕೊಂಡರು ಎಂಬ ಗಾದೆಯೇ ಇದೆಯಲ್ಲ ಎಂದು ಸುಮಲತಾ ಅಂಬರೀಶ್​ ಬಗ್ಗೆ ಪುಟ್ಟರಾಜು ವ್ಯಂಗ್ಯವಾಡಿದ್ದಾರೆ.

ಕೈ ನಾಯಕರಿಂದ ಮುದ್ದಹನುಮೇಗೌಡ ಸಂಧಾನ ಯತ್ನ​; ದೇವೇಗೌಡರೇ ನಾಮಪತ್ರ ವಾಪಾಸ್​ ಪಡೆಯಲಿ ಎಂದ ಬಂಡಾಯ ಅಭ್ಯರ್ಥಿ

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲು ನಾವು ಯಾವುದೇ ಜನರನ್ನು ಕರೆತಂದಿಲ್ಲ. ಅದೆಲ್ಲ ನಮ್ಮ ವಿರೋಧಿಗಳು ಮಾಡುತ್ತಿರುವ ಕೆಲಸ. ಆ ಬಗ್ಗೆ ನಾವು ಎಲ್ಲ ವಿಷಯವನ್ನೂ ದಾಖಲೆ ಸಮೇತ ಕೆಲವೇ ದಿನಗಳಲ್ಲಿ ಜನರ ಮುಂದಿಡುತ್ತೇವೆ. ಲೋಕಸಭೆ ಚುನಾವಣೆಗೆ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ಅತಿಹೆಚ್ಚು ಅಂತರದಿಂದ ನಿಖಿಲ್​ನನ್ನು ಗೆಲ್ಲಿಸುತ್ತೇವೆ ಎಂದು ಸಿ.ಎಸ್​. ಪುಟ್ಟರಾಜು ಹೇಳಿದ್ದಾರೆ.

ದೇವೇಗೌಡ್ರು ಈ ರಾಷ್ಟ್ರಕ್ಕೆ, ರಾಜ್ಯಕ್ಕೆ, ಮಂಡ್ಯಕ್ಕೆ ಏನೇನು ಕೊಟ್ಟಿದ್ದಾರೆ ಅನ್ನೋದನ್ನು ಇಲ್ಲಿನ ಜನರು ತಮ್ಮ ಹೃದಯದಲ್ಲಿ ಬರೆದಿಟ್ಟುಕೊಂಡಿದ್ದಾರೆ. ನಮ್ಮ ತಾತನ ಕಾಲದಿಂದ ನಾನು ವ್ಯವಹಾರ ಮಾಡುತ್ತಿದ್ದೇನೆ. ಅಂದಿನಿಂದ ಇಂದಿನವರೆಗೂ ನಾವು ಪ್ರಾಮಾಣಿಕವಾಗಿ ನಡೆದುಕೊಂಡು‌ಬಂದಿದ್ದೇವೆ. ಯಾವುದೇ ರೀತಿಯ ತೆರಿಗೆಯನ್ನೂ ನಾವು ವಂಚಿಸಿಲ್ಲ. ನಿನ್ನೆ ಬಂದ ಐಟಿ ಅಧಿಕಾರಿಗಳು ನಮಗೆ ಶಹಬ್ಬಾಸ್ ಎಂದು ಹೋಗಿದ್ದಾರೆ ಎಂದು ಹೇಳಿದ್ದಾರೆ. 

First published: March 29, 2019, 12:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading