ರಾಮನಗರ: ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಬಳಿ ನಾಯಿಮರಿಯಂತೆ ಗಡಗಡ ಅಂತ ನಾಡುಗುತ್ತಾರೆ ಎಂದು ಟೀಕೆ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ (Ex CM Siddaramaiah) ಅವರಿಗೆ ಸಚಿವ ಅಶ್ವತ್ಥ್ ನಾರಾಯಣ್ (Minister CS Ashwath Narayan ) ತಿರುಗೇಟು ನೀಡಿದ್ದು, ನೈತಿಕತೆ, ಮೌಲ್ಯ ಇಲ್ಲದ ಪಪ್ಪಿ ಸಿದ್ದರಾಮಯ್ಯ ಎಂದು ಟೀಕೆ ಮಾಡಿದ್ದಾರೆ. ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನೀವು ಒಂದು ಕೌಟುಂಬಿಕ ಪಕ್ಷದಲ್ಲಿ ಇದ್ದೀರಿ, ಕಾಂಗ್ರೆಸ್ (Congress) ಕೌಟುಂಬಿಕ (Family Politics) ಪಕ್ಷ. ನಿಮಗೆ ಆತ್ಮಸಾಕ್ಷಿ ಇದ್ದರೆ ರಾಜೀನಾಮೆ ಕೊಡಿ. ಪಪ್ಪಿ ಯಾರು ಎಂದರೇ ಅದು ಸಿದ್ದರಾಮಯ್ಯ ಅವರೇ ಎಂದು ಕಿಡಿಕಾರಿದ್ದಾರೆ.
‘ಪಪ್ಪಿ ಯಾರು ಅಂದರೆ ಅದು ಸಿದ್ದರಾಮಯ್ಯ'
ವಂಶಪರಂಪಾರ್ಯ ರಾಜಕೀಯ ಪ್ರಜಾಪ್ರಭುತ್ವಕ್ಕೆ ವಿರೋಧ. ಪ್ರಜಾಪ್ರಭುತ್ವದ ಆಶಯಕ್ಕೆ ವಿರೋಧವಾಗಿರೋದು ವಂಶಪರಂಪಾರ್ಯ ಆಡಳಿತ. ಇವರಿಗೆ ಪ್ರಜಾಪ್ರಭುತ್ವದ ಮೇಲೆ ಯಾವ ರೀತಿಯ ಗೌರವವಿದೆ. ಸ್ವಲ್ಪ ಆದರೂ ಆತ್ಮಾಭಿಮಾನ, ಸ್ವಾಭಿಮಾನ, ನೈತಿಕತೆ ಮೌಲ್ಯ ಅಂತ ಇದ್ದರೇ ಅವರು ಒಂದು ಕ್ಷಣ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಇರುವಂತಿಲ್ಲ.
ಪಪ್ಪಿ ಯಾರು ಎಂದರೇ ಅದು ಸಿದ್ದರಾಮಯ್ಯ. ಅವರ ಪರಿಸ್ಥಿತಿ ಏನು ಅಂತ ಅವರಿಗೆ ಗೊತ್ತಿಲ್ಲ. ಜೀ ಹುಜೂರ್, ಜೀ ಹುಜೂರ್ ಎಂತ ಹೇಳುವವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಇದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಮುಂದುವರಿದಿದೆ. ಪಕ್ಷ ವಂಶರಂಪಾರ್ಯ ಅಂತ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇವರಿಗೆ ಸ್ವಲ್ಪ ಆದ್ರೂ ನೈತಿಕತೆ ಹೊಂದಿದ್ದರೇ, ಕೂಡಲೇ ರಾಜೀನಾಮೆ ನೀಡಬೇಕು ಎಂದು ಅಶ್ವತ್ಥ್ ನಾರಾಯಣ್ ಆರೋಪಿಸಿದರು.
ಇದನ್ನೂ ಓದಿ: Siddaramaiah: ಮೋದಿ ಎದುರು ಬೊಮ್ಮಾಯಿ ನಾಯಿ ಮರಿ ತರ, ನಮ್ಮ ಹಳ್ಳಿ ಭಾಷೆಯಲ್ಲಿ ಹೇಳ್ದೆ ಅಂತ ಸಿದ್ದರಾಮಯ್ಯ ಸಮಜಾಯಿಷಿ
ಇನ್ನೇಷ್ಟು ಕಪ್ಪಾಳಮೋಕ್ಷ ಮಾಡಿಸಿಕೊಳ್ತೀರಾ
ಇನ್ನೂ, ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಚಿವ ಕೆ.ಸುಧಾಕರ್ ಅವರು, ಸಿಎಂ ಬಸವರಾಜ ಬೊಮ್ಮಾಯಿ ಆರುಕೋಟಿ ಜನರ ನಿಯತ್ತಿನ ನಾಯಿ. ಸಿದ್ದರಾಮಯ್ಯನಿಗೂ ಚಂದ್ರಶೇಖರ್ ರಾವ್ ಗೂ ಏನ್ ಸಂಬಂಧ. ಚಂದ್ರಶೇಖರ್ ರಾವ್ ಬಳಿ ಯಾಕೆ ಕೈಕಟ್ಟಿಕೊಂಡು ನಿಲ್ತೀರಾ? ಬೊಮ್ಮಾಯಿ ಒಂದರ ಮೇಲೆ ಒಂದು ಬಾಣ ಬಿಡ್ತಾನೆ ಇದ್ದಾರೆ. ಇನ್ನೇಷ್ಟು ಕಪ್ಪಾಳಮೋಕ್ಷ ಮಾಡಿಸಿಕೊಳ್ತೀರಾ ಎಂದು ಕಿಡಿಕಾರಿದ್ದಾರೆ.
ಸಿಎಂಗೆ ನಾಯಿಮರಿ ಅಂತ ಹೇಳಿಲ್ಲ
ಸಿಎಂ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ನಾನು ಸಿಎಂಗೆ ನಾಯಿ ಮರಿ ಅಂತಾ ಹೇಳಿಲ್ಲ. ಕೇಂದ್ರದಿಂದ ಅನುದಾನ ತರಲು ಧೈರ್ಯ ಇರಬೇಕು ಎಂದು ಹೇಳಿದ್ದೇನೆ. ಧೈರ್ಯವಾಗಿ ಇರಬೇಕು ಅಂತಾ ಹೇಳಿದ್ದೇನೆಯೇ ಹೊರತು ನಾಯಿ ಮರಿ ಅಂತಾ ಅಲ್ಲ. ನನ್ನನ್ನು ಟಗರು, ಹುಲಿಯಾ ಅಂತಾ ಕರೆಯುತ್ತಾರೆ. ಅದು ಅಸಂವಿಧಾನ ಪದ ಹೇಗೆ ಆಗುತ್ತದೆ.
ಯಡಿಯೂರಪ್ಪ ಅವರನ್ನು ರಾಜಾಹುಲಿ ಅಂತಾ ಅವರ ಪಕ್ಷದವರೇ ಕರೆಯುತ್ತಾರೆ. ಹಾಗಾದರೆ ಯಡಿಯೂರಪ್ಪ ಹುಲಿನಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಾಯಿ ನಂಬಿಕೆಗಸ್ಥ ಪ್ರಾಣಿ. ನಾಯಿ ರೀತಿ ಧೈರ್ಯದಿಂದ ಕೇಂದ್ರದಿಂದ ಪಾಲು ತೆಗೆದುಕೊಳ್ಳಬೇಕು ಎಂದು ಹೇಳಿದ್ದೇನೆ ಅಂತ ಸ್ಪಷ್ಟನೆ ನೀಡಿದರು.
ನಳಿನ್ ಬಿಜೆಪಿಯಲ್ಲಿ ವಿಧೂಷಕ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲವ್ ಜಿಹಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕಟೀಲ್ ಜೋಕರ್ ಇದ್ದ ಹಾಗೆ, ಬಾಲಿಷ ಹೇಳಿಕೆಗೆ ಉತ್ತರ ಕೊಡಲ್ಲ. ನಳಿನ್ ಬಿಜೆಪಿಯಲ್ಲಿ ವಿಧೂಷಕ ಇದ್ದ ಹಾಗೆ ಎಂದು ಲೇವಡಿ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ