HOME » NEWS » State » MINISTER CP YOGESHWAR SAYS CAN DO ANYTHING USING BY GRAPHICS SO MINISTERS GO TO COURT PMTV LG

ಗ್ರಾಫಿಕ್ಸ್​​ಗೆ ಬಲಿಪಶು ಆಗುವ ಭಯ ಇದೆ; ಹೀಗಾಗಿ ಮಾನ ಮರ್ಯಾದೆಗೆ ಅಂಜಿ ಕೋರ್ಟ್‌ ಮೊರೆ ಹೋಗಿದ್ದಾರೆ: ಸಚಿವ ಸಿ.ಪಿ.ಯೋಗೇಶ್ವರ್‌

ಸುಳ್ಳು ಬೇಗ ಹರಡುತ್ತದೆ, ಅದು ಸುಳ್ಳು ಎಂದು ಸಾಬೀತಾಗಲು ಸಮಯ ಬೇಕಾಗುತ್ತದೆ. ಆದರೆ ಮಾಧ್ಯಮದಲ್ಲಿ ಬಂದ ಕೂಡಲೇ ಜನರು ಅದನ್ನು ನಂಬುತ್ತಾರೆ. ಅದು ಸುಳ್ಳಾ ಅಥವ ಸತ್ಯವಾ ಎಂದು ಹೊರಬರುವುದು ಪೊಲೀಸ್ ತನಿಖೆಯಿಂದ ಅಥವ ನ್ಯಾಯಲಯದ ಆದೇಶದ ಮೂಲಕ. ಆದ್ರೆ ಅದಕ್ಕಿಂತ ಮುಂಚೆ ಮಾಧ್ಯಮದಲ್ಲಿ ಬಂದ್ರೆ ಆ ಘಟನೆಯಲ್ಲಿ ಸಿಲುಕಿಕೊಂಡವರಿಗೆ ಘಾಸಿ ಜಾಸ್ತಿ ಆಗುತ್ತೆ.

news18-kannada
Updated:March 7, 2021, 2:21 PM IST
ಗ್ರಾಫಿಕ್ಸ್​​ಗೆ ಬಲಿಪಶು ಆಗುವ ಭಯ ಇದೆ; ಹೀಗಾಗಿ ಮಾನ ಮರ್ಯಾದೆಗೆ ಅಂಜಿ ಕೋರ್ಟ್‌ ಮೊರೆ ಹೋಗಿದ್ದಾರೆ: ಸಚಿವ ಸಿ.ಪಿ.ಯೋಗೇಶ್ವರ್‌
ಸಚಿವ ಸಿ.ಪಿ.ಯೋಗೇಶ್ವರ್​​
  • Share this:
ಮೈಸೂರು(ಮಾ.07): ಆಧುನಿಕ ಯುಗದ ಗ್ರಾಫಿಕ್ಸ್ ಗೆ ಬಲಿಪಶು ಆಗುವ ಭಯ ನಮಗೆ ಕಾಡುತಿದೆ, ಇದು ಗ್ರಾಫಿಕ್ ಯುಗ ಅದಕ್ಕಾಗಿ ಮಾನ ಮರ್ಯಾದೆಗೆ ಅಂಜಿದ್ದೇವೆ, ಇದೆ ಕಾರಣದಿಂದಲೇ ನಮ್ಮ ಹಲವು ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ ಅಂತ ಸಚಿವ ಸಿ,ಪಿ.ಯೋಗೇಶ್ವರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ದೃಶ್ಯ ಮಾಧ್ಯಮಗಳನ್ನು ತಿರುಚುವ, ಬೇರೆ ಧ್ವನಿ‌ ನೀಡುವ ಕೆಲಸ ಆಗುತ್ತಿದೆ. ಗ್ರಾಫಿಕ್ಸ್‌ ಮೂಲಕ ಕೈ ಕಾಲು ತಲೆ ಕತ್ತರಿಸಿದಂತೆ ಮಾಡಬಹುದು. ನಾನು ಸಿನಿಮಾ ಕ್ಷೇತ್ರದಿಂದ ಬಂದವನು, ಹಾಗಾಗಿ ನನಗೆ ಅದೆಲ್ಲಾ ಗೊತ್ತಿದೆ. ಸಿನಿಮಾದಲ್ಲಿ ಕೈ ಕಾಲು ಕಟ್‌ ಮಾಡಿಕೊಂಡು ನಿಮ್ಮ ಮುಂದೆ ಬಂದು ನಿಲ್ಲೋಕಾಗುತ್ತಾ. ಈ ಕಾಲದಲ್ಲಿ ಗ್ರಾಫಿಕ್ಸ್ ನಲ್ಲಿ ಏನೂ ಬೇಕಾದ್ರು ಮಾಡಬಹುದು. ಈ ಗ್ರಾಫಿಕ್ಸ್ ಕುತಂತ್ರದಿಂದ ಮಾನ ಮರ್ಯಾದೆ, ಗೌರವದ ಕಾರಣಕ್ಕಾಗಿ ಹಲವು ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಸುಳ್ಳು ಬೇಗ ಹರಡುತ್ತದೆ, ಅದು ಸುಳ್ಳು ಎಂದು ಸಾಬೀತಾಗಲು ಸಮಯ ಬೇಕಾಗುತ್ತದೆ. ಆದರೆ ಮಾಧ್ಯಮದಲ್ಲಿ ಬಂದ ಕೂಡಲೇ ಜನರು ಅದನ್ನು ನಂಬುತ್ತಾರೆ. ಅದು ಸುಳ್ಳಾ ಅಥವ ಸತ್ಯವಾ ಎಂದು ಹೊರಬರುವುದು ಪೊಲೀಸ್ ತನಿಖೆಯಿಂದ ಅಥವ ನ್ಯಾಯಲಯದ ಆದೇಶದ ಮೂಲಕ. ಆದ್ರೆ ಅದಕ್ಕಿಂತ ಮುಂಚೆ ಮಾಧ್ಯಮದಲ್ಲಿ ಬಂದ್ರೆ ಆ ಘಟನೆಯಲ್ಲಿ ಸಿಲುಕಿಕೊಂಡವರಿಗೆ ಘಾಸಿ ಜಾಸ್ತಿ ಆಗುತ್ತೆ. ಇದು ಸಮಾಜದಲ್ಲಿ ರಾಜಕಾರಣಿಗಳಿಗೆ ಹೆಚ್ಚಾಗಿ ಕಾಡುತ್ತಿದೆ. ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣದ ನಂತರದಲ್ಲಿ ರಾಜಕೀಯ ಷಡ್ಯಂತ್ರದಿಂದ ಮತ್ಯಾರ ಸಿಡಿ ಗ್ರಾಫಿಕ್ಸ್ ಮೂಲಕ ತಿದ್ದಿ ಬಿಡುಗಡೆ ಮಾಡಿಬಿಡುತ್ತಾರೋ ಅನ್ನೋ ಭಯದಿಂದ ನ್ಯಾಯಾಲಯದ ಮೊರೆ ಹೋಗಲಾಗಿದೆ. ನಮಗೇಲ್ಲ ಈ ಬಗ್ಗೆ ಭಯವಿದೆ. ಅದರಲ್ಲು ಮಾಧ್ಯಮಗಳನ್ನ ಜನರು ನಂಬುವುದರಿಂದ ಮಾಧ್ಯಮಗಳಲ್ಲಿ ಈ ವಿಚಾರ ಪ್ರಸಾರ ಆಗಬಾರದು, ಸುಳ್ಳು ಹರಡಬಾರದು ಅಂತ ಕೋರ್ಟ್ ಗೆ ಹೋಗಿದ್ದಾರೆ ಅಷ್ಟೇ ಅಂತ ತಮ್ಮ ಸಹಪಾಠಿ ಸಚಿವರನ್ನ ಸಮರ್ಥಿಸಿಕೊಂಡರು.

ಮೈಸೂರು ಪ್ರವಾಸೋದ್ಯಮಕ್ಕೆ ಬ್ರ್ಯಾಂಡ್​​​ ಮೈಸೂರು ಯೋಜನೆ; ಸಚಿವ ಸಿ.ಪಿ.ಯೋಗೇಶ್ವರ್​​ರಿಂದ ಹೊಸ ಪ್ರಸ್ತಾಪ

ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರದ ಆರೋಪ ಕೇಳಿ ಬಂದಿರುವ ಹಿನ್ನೆಯಲ್ಲಿ, ಮೊದಲ ದಿನವೇ ರಮೇಶ್‌ ಜಾರಕಿಹೊಳಿರನ್ನ ಸಮರ್ಥಿಸಿಕೊಂಡಿದ್ದ ಸಿ.ಪಿ.ಯೋಗೇಶ್ವರ್, ಅವರೊಬ್ಬ ದೈವಭಕ್ತ, ಅವರನ್ನ ಹತ್ತಿರದಿಂದ ನಾನು ನೋಡಿದ್ದೇನೆ, ರಮೇಶ್‌ ಜಾರಕಿಹೊಳಿಯವರಿಗೆ ನಾನು ನೈತಿಕ ಬೆಂಬಲ ಕೊಡುತ್ತೇನೆ ಎಂದು ಹೇಳಿದ್ದರು.  ಘಟನೆ ನಂತರ 6 ಸಚಿವರು ಕೋರ್ಟ್‌ ಮೊರೆ ಹೋಗಿರುವ ವಿಚಾರಕ್ಕು ಮತ್ತೆ ಸಮರ್ಥನೆಗೆ ಮುಂದಾದ ಸಿ.ಪಿ.ಯೋಗೇಶ್ವರ್‌  ಮಾನ ಮರ್ಯಾದೆಗೆ ಅಂಜಿ ಈ ಸಚಿವರು ಸಹ ಕೋರ್ಟ್‌ ಮೊರೆ ಹೋಗಿದ್ದಾರೆ. ಇದು ಗ್ರಾಫಿಕ್ಸ್ ಯುಗ ಅನ್ನೋ ಆರೋಪವನ್ನು ಮಾಡಿದ್ದಾರೆ.

ಜಾರಕಿಹೊಳಿ ಸಿಡಿ ಪ್ರಕರಣ ಬಿಜೆಪಿ ನಾಯಕರಿಗೆ ಭಾರಿ ಮುಜುಗರ ಉಂಟು ಮಾಡಿದ್ದು, ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಸಹ ಹಲವು ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಸಿ.ಪಿ.ಯೋಗೇಶ್ವರ್‌ ರಮೇಶ್ ಜಾರಕಿಹೊಳಿ ಹಾಗೂ ಕೋರ್ಟ್‌ ಮೊರೆ ಹೋದ ಸಚಿವರನ್ನ ಸಮರ್ಥಿಸಿಕೊಂಡಿರೋದು ಸಿಡಿ ಘಟನೆಯಿಂದ ಬಿಜೆಪಿ ಪಕ್ಷಕ್ಕೆ ಆಗುವ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವಂತೆ ಕಾಣುತ್ತಿದೆ.
Published by: Latha CG
First published: March 7, 2021, 2:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories