Siddaramaiah: ಅಧಿಕಾರದ ರುಚಿ ನೋಡಿರೋ ಅಂಕಲ್​ಗೆ ರಾಜಕೀಯ ಕಂಟಿನ್ಯೂ ಮಾಡುವ ಆಸಕ್ತಿ ಇದೆ; Ashwath Narayan

ಮನೆಗೆ ಬೆಂಕಿ ಬಿದ್ದಾಗ ಅಡುಗೆ ಮಾಡಿಕೊಳ್ಳುವ ಪ್ರಯತ್ನ ಬಿಡಲಿ. ಜನರ ಭಾವನೆ ಜೊತೆ ಆಟವಾಡುವ ಕೆಲಸ ಬೇಡ. ‌ಪ್ರಕರಣ ಬಗ್ಗೆ ಸಿಎಂ ಸೂಕ್ತವಾದ ಕ್ರಮವಹಿಸುತ್ತಿದ್ದಾರೆ.

ಸಚಿವ ಅಶ್ವಥ್ ನಾರಾಯಣ

ಸಚಿವ ಅಶ್ವಥ್ ನಾರಾಯಣ

  • Share this:
ರಾಮನಗರ : ಆಗಸ್ಟ್ 3ರಂದು ಸಿದ್ದರಾಮೋತ್ಸವ ಆಚರಣೆಗೆ (Siddaramotsva Celebration) ಸಚಿವ ಅಶ್ವಥ್ ನಾರಾಯಣ್ (Minister CN Ashwath Narayan) ವ್ಯಂಗ್ಯವಾಡಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ರಂಗನಾಥ ಸ್ವಾಮಿ (Ranganath Swamy Temple)‌ ದರ್ಶನ ಪಡೆದು ಮಾತನಾಡಿದ ಅಶ್ವಥ್ ನಾರಾಯಣ, ಸಿದ್ದರಾಮಯ್ಯರಿಗೆ (Siddarmaiah) 75 ವರ್ಷ ಆಗಿದೆ ಅದಕ್ಕೆ ಮನೆಗೆ ಹೋಗಪ್ಪಾ ಅಂತ ಕಳಿಸ್ತಿದ್ದಾರೆ. ಗುಡ್ ಬಾಯ್ ಅಂತ ಹೇಳೋದಿಕ್ಕೆ ಕಾರ್ಯಕ್ರಮ ಮಾಡ್ತಿದ್ದಾರೆ. ಹಿಂದೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ತಿನಿ ಅಂದಿದ್ರು, ಅಧಿಕಾರದ ರುಚಿ ನೋಡಿರೋ ಅಂಕಲ್ ಗೆ ರಾಜಕೀಯ ಕಂಟಿನ್ಯೂ ಮಾಡುವ ಆಸಕ್ತಿ ಇದೆ.‌ ಆದರೆ ಜನ ಈ ಕಾಲಕ್ಕೆ ಸಿದ್ದರಾಮಯ್ಯರನ್ನ ತಿರಸ್ಕರಿಸುತ್ತಾರೆ.‌ ದುರಾಸೆ ಬಿಟ್ಟು ಗೌರವಾನ್ವಿತವಾಗಿ ಯುವಕರಿಗೆ ಅವಕಾಶ ಮಾಡಿಕೊಡಲಿ. ಇನ್ನಾದರೂ ಅವರಿಗೆ ದುರಾಸೆ ಹೋಗಿ ತಿಳುವಳಿಕೆ ಬರಲಿ ಎಂದರು.

ಇನ್ನು ಮಂಗಳೂರು ಹತ್ಯೆ ಪ್ರಕರಣದ ಪರಿಹಾರ ನೀಡುವಲ್ಲಿ ತಾರತಮ್ಯ ಆರೋಪ ವಿಚಾರವಾಗಿ ಮಾತನಾಡಿ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದರು. ಮನೆಗೆ ಬೆಂಕಿ ಬಿದ್ದಾಗ ಅಡುಗೆ ಮಾಡಿಕೊಳ್ಳುವ ಪ್ರಯತ್ನ ಬಿಡಲಿ. ಜನರ ಭಾವನೆ ಜೊತೆ ಆಟವಾಡುವ ಕೆಲಸ ಬೇಡ. ‌ಪ್ರಕರಣ ಬಗ್ಗೆ ಸಿಎಂ ಸೂಕ್ತವಾದ ಕ್ರಮವಹಿಸುತ್ತಿದ್ದಾರೆ.

ರಾಜಕೀಯ ಪ್ರೇರಿತ ಹೇಳಿಕೆ

‌ಎಲ್ಲವೂ ಕೂಡಾ ಪಾರದರ್ಶಕವಾಗಿ ನಡೆಯುತ್ತಿದೆ.‌ ನಮ್ಮ ಸಿಎಂ ತಿಳುವಳಿಕೆ ಇರುವವರು, ಕುಮಾರಸ್ವಾಮಿ ಅವರು ರಾಜಕೀಯ ಪ್ರೇರಿತವಾಗಿ ಹೇಳಿಕೆ ನೀಡಬಾರದು. ಹೇಳಿಕೆ ಕೊಡಬೇಕಾದ್ರೆ ಆಧಾರ, ವಿಚಾರ ಇರಬೇಕು. ಸುಮ್ಮನೆ ಹೇಳಿಕೆ ನೀಡಿ ತಪ್ಪಿಸಿಕೊಳ್ಳಬಾರದು ಎಂದರು.

Siddaramotsava Programme, CN Ashwath Narayana Statement, Karnataka Politics, Kannada News, Karnataka News, ಸಿದ್ದರಾಮೋತ್ಸವ ಕಾರ್ಯಕ್ರಮ, ಕರ್ನಾಟಕ ರಾಜಕೀಯ
ಸಿದ್ದರಾಮಯ್ಯ, ಅಶ್ವತ್ಥ ನಾರಾಯಣ


ಇದನ್ನೂ ಓದಿ:  Rain Effects: ಎರಡು ಎಳೆ ಜೀವ ಬಲಿ ಪಡೆದ ಭಾರೀ ಮಳೆ! ಕೊಲ್ಲಮೊಗು,ಬಾಳುಗೋಡಿನಲ್ಲಿ ಭಾರೀ ನಷ್ಟ

ರಂಗನಾಥಸ್ವಾಮಿ ದೇವಸ್ಥಾನ ಅಭಿವೃದ್ಧಿಗೆ ಸರ್ಕಾರದ ಅನುದಾನ

ಇಲ್ಲಿನ ಪುರಾಣಪ್ರಸಿದ್ಧ ಮತ್ತು ಹೆಸರಾಂತ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನವನ್ನು 5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್ ಅಶ್ವಥನಾರಾಯಣ ಹೇಳಿದರು.

ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ರಾಜ್ಯದಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮ ಅಭಿವೃದ್ಧಿಗೆ ಸರ್ಕಾರವು ಹಲವು ಯೋಜನೆಗಳನ್ನು ರೂಪಿಸಿದೆ. ಇದರಂತೆ ಪ್ರವಾಸೋದ್ಯಮ ವಿಷನ್ ಗ್ರೂಪ್ ನೀಡಿರುವ ಸಲಹೆ ಪ್ರಕಾರ ರಂಗನಾಥ ದೇಗುಲವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು

ಇದನ್ನೂ ಓದಿ:  Siddaramaiah Song: ಸಿದ್ದರಾಮಯ್ಯ ಬರ್ತ್ ಡೇಗೆ ಸಾಂಗ್ ರಿಲೀಸ್: ‘ಮುಂದಿನ ಸಿಎಂ’ ಬೆಂಕಿಗೆ ಬಿತ್ತು ತುಪ್ಪ!

ಬಿಜೆಪಿ ಸರ್ಕಾರವು ರಾಜ್ಯದ ಶ್ರದ್ಧಾಕೇಂದ್ರಗಳ ಸಂರಕ್ಷಣೆಗೆ ಮತ್ತು ಪುನಶ್ಚೇತನಕ್ಕೆ ಬದ್ಧವಾಗಿದೆ. ಇದು ನಮ್ಮ ಪಕ್ಷದ ಮೂಲ ಆಶಯಗಳಲ್ಲಿ ಒಂದಾಗಿದೆ ಎಂದು ಅವರು ನುಡಿದರು.

Siddaramotsava Programme, CN Ashwath Narayana Statement, Karnataka Politics, Kannada News, Karnataka News, ಸಿದ್ದರಾಮೋತ್ಸವ ಕಾರ್ಯಕ್ರಮ, ಕರ್ನಾಟಕ ರಾಜಕೀಯ
ಸಿದ್ದರಾಮಯ್ಯ ಸಂಗ್ರಹ ಚಿತ್ರ


ದೇವಸ್ಥಾನದ ಅಭಿವೃದ್ಧಿ

ಈ ದೇವಸ್ಥಾನದಲ್ಲಿರುವ ಉದ್ಭವಮೂರ್ತಿ ಮತ್ತು ರಂಗನಾಥನ ಪ್ರತಿಮೆಗಳು ಭಕ್ತರ ಪಾಲಿಗೆ ನೆಮ್ಮದಿಯ ತಾಣಗಳಾಗಿವೆ. ಮಾಗಡಿಯ ಆಕರ್ಷಣೆಯನ್ನು ಹೆಚ್ಚಿಸುವ ರೀತಿಯಲ್ಲಿ ದೇವಸ್ಥಾನದ ಪುಣ್ಯತನ ನಡೆಯಲಿದೆ ಎಂದು ಅವರು ವಿವರಿಸಿದರು.
ಶಾಸಕ ಎ.ಮಂಜು ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು.

ಸಿದ್ದರಾಮಯ್ಯ ಮುಂದಿನ ಸಿಎಂ ಸಾಂಗ್​

ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿ ಮಾರ್ಪಟ್ಟಿದೆ. ಬಣಗಳ ಗುದ್ದಾಟಗಳ ನಡುವೆ ಕೈ ಪಾಳಯ ಹೊತ್ತಿ ಉರಿಯುವಂತಾಗಿದೆ.

ಆ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯೋ ಕೆಲಸವನ್ನು ಸಿದ್ದರಾಮಯ್ಯ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಗಿರೀಶ ಗದಿಗೆಪ್ಪಗೌಡ ಮತ್ತು ಮಾಜಿ ಸಚಿವ ಸಂತೋಷ ಲಾಡ್ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಅಲ್ಬಮ್ ಸಾಂಗ್ ನ್ನು ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.
Published by:Mahmadrafik K
First published: