‘ಡಿಜೆ ಹಳ್ಳಿ ಗಲಭೆ ಪೂರ್ವ ನಿಯೋಜಿತ‘ - ಕಾಂಗ್ರೆಸ್​ ವಿರುದ್ಧ ಸಚಿವ ಸಿಸಿ ಪಾಟೀಲ್​​ ಕಿಡಿ

ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಿ ಮುಖ್ಯಮಂತ್ರಿ ಬಿಎಸ್​ ಯಡಿಯೂಪ್ಪ ಅವರಿಗೆ ಕೆಟ್ಟ ಹೆಸರು ತರಬೇಕು ಎನ್ನುವುದೇ ಕಾಂಗ್ರೆಸ್ ಉದ್ದೇಶ. ಇವರು ಹೇಗಾದರೂ ಸರಿ ಬಿಜೆಪಿ ಸರ್ಕಾರಕ್ಕೆ ಮಸಿ ಬಳಿಯಬೇಕು ಎಂದು ಕಾಯುತ್ತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ಕೆಂಡಕಾರಿದರು ಸಿಸಿ ಪಾಟೀಲ್​.

ಸಚಿವ ಸಿಸಿ ಪಾಟೀಲ್​​ ಕಿಡಿ

ಸಚಿವ ಸಿಸಿ ಪಾಟೀಲ್​​ ಕಿಡಿ

  • Share this:
ಗದಗ(ಆ.14): ಡಿ.ಜೆ ಹಳ್ಳಿ ಗಲಭೆ ವಿಚಾರವಾಗಿ ಕಾಂಗ್ರೆಸ್​ ವಿರುದ್ಧ ಸಚಿವ ಸಿಸಿ ಪಾಟೀಲ್​​​​ ವಾಗ್ದಾಳಿ ನಡೆಸಿದರು. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಸಿಸಿ ಪಾಟೀಲ್​ ಅವರು,  ಬೆಂಗಳೂರಿನಲ್ಲಿ ನಡೆದ ಗಲಭೆಯು ಪೂರ್ವ ನಿಯೋಜಿತ ಸಂಚು. ಕೇವಲ ಒಂದು ವಾಟ್ಸಾಪ್ ಮೆಸೇಜ್​​ನಿಂದ ಎರಡರಿಂದ ಮೂರು ಸಾವಿರ ಜನರು ಸೇರೋದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಇದೊಂದು ಪೂರ್ವ ನಿಯೋಜಿತ ಸಂಚು. ಇಷ್ಟೆಲ್ಲಾ ಗಲಾಟೆ ಹಿಂಸಾಚಾರ ನಡೆದರೂ ಕಾಂಗ್ರೆಸ್​​ ಮಾತ್ರ ಖಂಡಿಸುತ್ತಿಲ್ಲ. ಈ ಹಿಂದೆಯೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಪಿಎಫ್​ಐ ಮತ್ತು ಎಸ್​ಡಿಪಿಐ ಕಾರ್ಯಕರ್ತರ ಮೇಲಿನ ಕೇಸುಗಳನ್ನು ಹಿಂಪಡೆದಿದ್ದರು. ಇದು ಕಾಂಗ್ರೆಸ್​ ಭಯೋತ್ಪಾದಕರೊಂದಿಗೆ ನಿಕಟ ಸಂಪರ್ಕ ಹೊಂದಿರುವುದನ್ನು ತೋರಿಸಿತ್ತು ಎಂದರು.

ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಿ ಮುಖ್ಯಮಂತ್ರಿ ಬಿಎಸ್​ ಯಡಿಯೂಪ್ಪ ಅವರಿಗೆ ಕೆಟ್ಟ ಹೆಸರು ತರಬೇಕು ಎನ್ನುವುದೇ ಕಾಂಗ್ರೆಸ್ ಉದ್ದೇಶ. ಇವರು ಹೇಗಾದರೂ ಸರಿ ಬಿಜೆಪಿ ಸರ್ಕಾರಕ್ಕೆ ಮಸಿ ಬಳಿಯಬೇಕು ಎಂದು ಕಾಯುತ್ತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ಕೆಂಡಕಾರಿದರು ಸಿಸಿ ಪಾಟೀಲ್​.

ಇನ್ನು, ಎಸ್​​ಡಿಪಿಐ ಮತ್ತು ಪಿಎಫ್​​ಐ ಸಂಘಟನೆಗಳ ಮೇಲೆ ನಿಷೇಧ ಹೇರುವ ಕುರಿತು ಸಿಎಂ ಬಿಎಸ್​​ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟದಲ್ಲಿ ಚರ್ಚೆ ನಡೆಸುತ್ತೇವೆ. ಕ್ಯಾಬಿನೆಟ್​ ಮೀಟಿಂಗ್​​ನಲ್ಲೇ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆ: ‘ಮಾಜಿ ಮೇಯರ್​​ ಸಂಪತ್​ ರಾಜ್​ ಕೈವಾಡ ಇಲ್ಲ‘ - ಜಮೀರ್​​ ಅಹಮದ್​ ಸ್ಪಷ್ಟನೆ

ಹೀಗೆ ಮುಂದುವರಿದ ಸಿಸಿ ಪಾಟೀಲ್​, ಸಾರ್ವಜನಿಕರ ಆಸ್ತಿಪಾಸ್ತಿ ಹಾನಿ ಮಾಡಿದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ಮಾಡಿದ ರೀತಿಯಲ್ಲೇ ಹಾನಿ ಮಾಡಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂಬ ಚರ್ಚೆ ಆಗುತ್ತಿದೆ ಎಂದು ಹೇಳಿದರು.
Published by:Ganesh Nachikethu
First published: