ಆರ್​​ಆರ್​ ನಗರ, ಶಿರಾ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತದೆ; ಸಚಿವ ಭೈರತಿ ಬಸವರಾಜ್ ವಿಶ್ವಾಸ

ಆರ್ ಆರ್ ನಗರ ಮತ್ತು ಶಿರಾದಲ್ಲಿ ಬಿಜೆಪಿ ಗೆಲುವಿನ ದಾಪುಗಾಲು ಇಡುತ್ತಿದೆ. ಆರ್ ಆರ್ ನಗರದಲ್ಲಿ 28 ಸಾವಿರ ಮತಗಳ ಅಂತರದಲ್ಲಿ ಇದ್ದೇವೆ. ಶಿರಾದಲ್ಲಿ 4 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ ಎಂದರು.

ಸಚಿವ ಭೈರತಿ ಬಸವರಾಜ್​.

ಸಚಿವ ಭೈರತಿ ಬಸವರಾಜ್​.

 • Share this:
  ಬೆಂಗಳೂರು(ನ.10): ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಪರವಾದ ಫಲಿತಾಂಶ ಬರುತ್ತಿದೆ. ಆರ್. ಆರ್. ನಗರದಲ್ಲಿ ಬಿಜೆಪಿಗೆ ಅದ್ಬುತವಾದ ಫಲಿತಾಂಶ ಬಂದಿದೆ. ಬಿಜೆಪಿ ಗೆಲುವಿನತ್ತ ದಾಪುಗಾಲು ಇಡುತ್ತಿದೆ. ಶಿರಾದಲ್ಲೂ ಬಿಜೆಪಿಗೆ ಬಹುಮತ ಬರುತ್ತಿದೆ. ರಾಜ್ಯದ ಜನತೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ.  ಸಿಎಂ ಸೇರಿದಂತೆ ನಾವೆಲ್ಲ ಆರ್ ಆರ್ ನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದ್ದವು.  ಆರ್ ಆರ್ ನಗರದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ.  ಶಿರಾದಲ್ಲಿ 4 ಸಾವಿರ ಅಂತರದಲ್ಲಿ ಮುಂದಿದ್ದೇವೆ. ಆರ್ ಆರ್ ನಗರದಲ್ಲಿ 50 ಸಾವಿರಕ್ಕೂ ಹೆಚ್ಚಿನ ಮತಗಳ ಮುನ್ನಡೆಯಲ್ಲಿ ಗೆಲ್ಲುತ್ತೇವೆ ಎಂದು ಸಚಿವ ಭೈರತಿ ಬಸವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಜಿಗಣಿ ಪುರಸಭೆಯಲ್ಲಿ ಅರಳಿದ ಕಮಲ; ಕೊರೋನಾ ನಿಯಮ ಉಲ್ಲಂಘಿಸಿ ಬಿಜೆಪಿಯಿಂದ ವಿಜಯೋತ್ಸವ

  ಫಲಿತಾಂಶ ಪ್ರಕಟಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ಭರವಸೆಯನ್ನು ವ್ಯಕ್ತಪಡಿಸಿದರು.  ಆರ್ ಆರ್ ನಗರ ಮತ್ತು ಶಿರಾದಲ್ಲಿ ಬಿಜೆಪಿ ಗೆಲುವಿನ ದಾಪುಗಾಲು ಇಡುತ್ತಿದೆ. ಆರ್ ಆರ್ ನಗರದಲ್ಲಿ 28 ಸಾವಿರ ಮತಗಳ ಅಂತರದಲ್ಲಿ ಇದ್ದೇವೆ. ಶಿರಾದಲ್ಲಿ 4 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ ಎಂದರು.

  ನಮ್ಮ ನಾಯಕರಾದ ಯಡಿಯೂರಪ್ಪನವರ ನೇತೃತ್ವದಲ್ಲಿ ಈ ಚುನಾವಣೆ ಗೆಲ್ಲುತ್ತೇವೆ. ಸಿಎಂ ಬಿಎಸ್​ವೈ ಆದಿಯಾಗಿ ನಾವು ಪ್ರಚಾರ ಮಾಡಿದ್ದೆವು. ಇವತ್ತು ಗೆಲುವಿನ ನಗೆ ಬೀರುತ್ತೇವೆ. ರಾಜ್ಯದ ಜನರಿಗೆ ಮತ್ತು ಎರಡು ಕ್ಷೇತ್ರದ ಜನರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಚಿವ ಭಯರತಿ ಬಸವರಾಜ್ ಹೇಳಿದರು.

  ಇನ್ನು,  ಬಿಹಾರದಲ್ಲೂ ಕೂಡ ಬಿಜೆಪಿ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಭೈರತಿ ಬಸವರಾಜ್ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಹಾರದಲ್ಲಿಯೂ ಬಿಜೆಪಿ ಗೆಲ್ಲುತ್ತದೆ. ಬಿಹಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವೇ ಇಲ್ಲ ಎಂದರು.
  Published by:Latha CG
  First published: