ಕೋಲಾರ(ಫೆ.14): ಕಾಂಗ್ರೆಸ್ ನಾಯಕರಿಗೆ ಬೇರೇನು ಕೆಲಸವಿಲ್ಲದೆ, ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ತಪ್ಪಾಗಿ ಟೀಕೆಯನ್ನ ಮಾಡುತ್ತಿದ್ದಾರೆಂದು ಕೋಲಾರದಲ್ಲಿ ನಗರಾಭಿವೃದ್ಧಿ ಸಚಿವ ಸಚಿವ ಬೈರತಿ ಬಸವರಾಜ್ ವ್ಯಂಗ್ಯವಾಡಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್ ಅನುಕೂಲಗಳ ಬಗ್ಗೆ ಮಾಹಿತಿ ನೀಡಲು, ಕೋಲಾರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಬಿಜೆಪಿ ಘಟಕ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದ ಬಜೆಟ್ ಬಡವರ, ರೈತ ಪರವಾಗಿದ್ದು, ಕೆಲ ವಸ್ತುಗಳ ಬೆಲೆ ಅನಿವಾರ್ಯವಾಗಿ ಏರಿಸಲಾಗಿದೆ. ಕೋವಿಡ್ ಸಮಯದಲ್ಲಿ ಸರ್ಕಾರ ಜನರ ಮೇಲೆ ಯಾವುದೇ ತೆರಿಗೆಯನ್ನು ವಿಧಿಸಿಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಆರ್ಥಿಕ ಸಂಕಷ್ಟದಲ್ಲಿ ಮಾರ್ಪಾಡು ಆಗಿದೆ ಇಂತಹ ಸಮಯದಲ್ಲಿ ಯಾರು ಸರ್ಕಾರ ನಡೆಸುತ್ತಿದ್ದರು ಬೆಲೆ ಏರಿಕೆ ಮೊರೆ ಹೋಗುತ್ತಿದ್ದರು, ಸುಖಾ ಸುಮ್ಮನೆ ವಿಪಕ್ಷಗಳು ಆರೋಪ ಮಾಡೊದನ್ನ ಬಿಡಬೇಕು ಎಂದು ಕಿಡಿಕಾರಿದರು.
ಇನ್ನು ಕೇಂದ್ರದ ಬಜೆಟ್ "ಆತ್ಮ ಬರ್ಬಾತ್" ಬಜೆಟ್ ಎಂದು ಸಿದ್ದರಾಮಯ್ಯ ಸಮೇತ ವಿರೋಧ ಪಕ್ಷದ ನಾಯಕರು ಟೀಕಿಸಿದ್ದು, ವಿರೋಧ ಪಕ್ಷದವರಿಗೆ ಮಾಡಲು ಏನೂ ಕೆಲಸವಿಲ್ಲ ಎಂದು ಸಚಿವ ಭೈರತಿ ಬಸವರಾಜ್ ವ್ಯಂಗ್ಯವಾಡಿದರು. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಮಧ್ಯೆ ಗೊಂದಲದ ಪೈಪೋಟಿಯಿದೆ. ಹಾಗಾಗಿ ಆಡಳಿತ ಪಕ್ಷದವರ ವಿರುದ್ದ ಗೊಂದಲದ ಹೇಳಿಕೆ ನೀಡುತ್ತಿದ್ದಾರೆಂದು ತಿಳಿಸಿದ್ದಾರೆ.
ಬೆಳಗಾವಿ: ಎರಡು ಲಕ್ಷದ ಆಸೆಗೆ ಮಗು ಕಿಡ್ನಾಪ್, ಮಕ್ಕಳು ಕಳ್ಳರ ಗ್ಯಾಂಗ್ ಈಗ ಪೊಲೀಸರ ಅತಿಥಿ!
ರಾಜ್ಯದಲ್ಲಿ ಮೀಸಲಾತಿಗೆ ಆಗ್ರಹಿಸಿ ಸಮುದಾಯಗಳ ಸರಣಿ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಭೈರತಿ ಬಸವರಾಜ್, ಕೆಲ ಸಮುದಾಯಗಳು ಅವರ ಬೇಡಿಕೆಯನ್ನು ಪ್ರತಿಪಾದನೆ ಮಾಡುತ್ತಿದ್ದಾರೆ. ಆದರೆ ಕುರುಬರ ಎಸ್ಟಿ ಮೀಸಲಾತಿ ಹೋರಾಟಕ್ಕೂ ಆರ್ ಎಸ್ಎಸ್ ಗೂ ಯಾವುದೇ ಸಂಬಂಧವಿಲ್ಲ. ಆದರೂ ಸಿದ್ದರಾಮಯ್ಯ ಅವರು ಯಾಕೆ ಹೀಗೆ ಹೇಳಿದ್ದಾರೊ ಗೊತ್ತಿಲ್ಲ. ಎಸ್ಟಿ ಮೀಸಲಾತಿ ಬಗ್ಗೆ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಎಸ್ಟಿ ಮೀಸಲಾತಿ ಹೋರಾಟಕ್ಕೆ ಆರ್ ಎಸ್ ಎಸ್ ಹಣ ನೀಡಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಏನು ಅರ್ಥವಿಲ್ಲ, ಆಯಾ ಸಮಾಜಗಳು ಹೋರಾಟ ಮಾಡುತ್ತಿವೆ. ಅವರವರ ಹಕ್ಕು ಅವರು ಕೇಳುತ್ತಾರೆ, ಪಂಚಮಸಾಲಿ ಸ್ವಾಮೀಜಿಗಳು ಮನವಿ ನೀಡಿದ ಮೇಲೆ ಸರ್ಕಾರ ಚರ್ಚೆ ನಡೆಸಲಿದೆ. ಕಾಂಗ್ರೆಸ್ ನಲ್ಲಿ ತಿಕ್ಕಾಟ ಹೆಚ್ಚಿದೆ, ಎಲ್ಲವನ್ನೂ ಮರೆ ಮಾಚಲು ಇಂತಹ ಹೇಳಿಕೆಗಳು ಹೊರಬರುತ್ತೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ