ಆನೇಕಲ್(ಜು.05): ಅದು ಸಾವಿರ ಕೋಟಿ ಮೌಲ್ಯದ ಸರ್ಕಾರದ ಸ್ವತ್ತು. ಅದನ್ನು ದಶಕಗಳ ಹಿಂದೆ ಶ್ಯಾನುಭೋಗ ಕುಟುಂಬ ರೈತರಿಗೆ ಅನುಕೂಲವಾಗಲೆಂದು ಸುಮಾರು 200 ಎಕರೆ ಪ್ರದೇಶವನ್ನು ಸರ್ಕಾರಕ್ಕೆ ದಾನವಾಗಿ ನೀಡಿದ್ದರು. ಸರ್ಕಾರ ಅದನ್ನು ಕೃಷಿ ಇಲಾಖೆಗೆ ನೀಡಿ ರೈತರ ಉಪಯೋಗಕ್ಕಾಗಿ ಜಿಲ್ಲಾ ಮಟ್ಟದ ರೈತ ತರಬೇತಿ ಕೇಂದ್ರವನ್ನು ಸ್ಥಾಪಿಸಿದೆ.
ಆದರೆ, ಇತ್ತೀಚಿನ ದಿನಗಳಲ್ಲಿ 200 ಎಕರೆ ಜಾಗದಲ್ಲಿ ಹತ್ತಾರು ಎಕರೆ ಒತ್ತುವರಿಯಾಗಿದ್ದು, ತೆರವುಗೊಳಿಸುವಂತೆ ಸರ್ಕಾರವನ್ನು ರೈತ ಸಮುದಾಯ ಒತ್ತಾಯಿಸಿತ್ತು. ರೈತರ ದೂರಿಗೆ ಸ್ಪಂದಿಸಿದ ಕೃಷಿ ಸಚಿವ ಬಿ ಸಿ ಪಾಟೀಲ್ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ರಾಮಕೃಷ್ಣಪುರದ ಬಳಿ ಇರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೆ ಅಧಿಕಾರಿಗಳು ಮತ್ತು ರೈತ ನಾಯಕರೊಂದಿಗೆ ಚರ್ಚೆ ನಡೆಸಿದ ಸಚಿವರು ಇಡೀ ತರಬೇತಿ ಕೇಂದ್ರವನ್ನು ಪ್ರದಕ್ಷಿಣೆ ಹಾಕಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ದಶಕಗಳ ಹಿಂದೆ ವೆಂಕಟರಮಣಯ್ಯ ಶಾಸ್ತ್ರಿ ಎಂಬುವವರು ಸರ್ಕಾರಕ್ಕೆ ಸುಮಾರು 200 ಎಕರೆಗೂ ಅಧಿಕ ಜಮೀನನ್ನು ದಾನವಾಗಿ ನೀಡಿದ್ದಾರೆ. ಇದರಲ್ಲಿನ 70 ಎಕರೆ ಜಾಗವನ್ನು ಎಸ್ಕಾರ್ಟ್ ಕಂಪನಿಗೆ ಈ ಹಿಂದೆ ಸರ್ಕಾರ ಲೀಜ್ಗೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ