ಇದು ಮೂರ್ಖತನದ ಪರಮಾವಧಿ. ಅದು ಸುಮ್ಮನೆ ಬೂಟಾಟಿಕೆ: ಸಚಿವ B.C.Patil

ಯಾವ ದೂರು ರೀ ಅದು, ಸುಮ್ಮನೆ ಬೂಟಾಟಿಕೆ. ಜನರ ಗಮನ ಸೆಳೆಯಲು, ನಮ್ಮ ಕಾಂಗ್ರೆಸ್ ಪಕ್ಷ ಜೀವಂತವಾಗಿದೆ ಅಂತಾ ತೋರಿಸಿಕೊಳ್ಳೋಕೆ ಆ ವ್ಯವಸ್ಥೆ ಕ್ರಿಯೇಟ್ ಮಾಡ್ತಿದ್ದಾರೆ. ಜನರು ದಡ್ಡರಿಲ್ಲ,  ಬುದ್ಧಿವಂತರಿದ್ದಾರೆ.

ಸಚಿವ ಬಿ.ಸಿ.ಪಾಟೀಲ್

ಸಚಿವ ಬಿ.ಸಿ.ಪಾಟೀಲ್

  • Share this:
ಹಾವೇರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK ShivakumAr) ಆದಷ್ಟು ಬೇಗ ಸಿಎಂ ಆಗಬೇಕು ಅಂತಾ ಕನಸು ಕಾಣ್ತಿದ್ದಾರೆ.  ಅಧಿಕಾರ ಕಳೆದುಕೊಂಡು ಹಪಾಹಪಿ ಆಗಿದ್ದಾರೆ. ರಾಜ್ಯಪಾಲರನ್ನು (Governor) ಭೇಟಿಯಾಗಿ ರಾಷ್ಟ್ರಪತಿ ಆಳ್ವಿಕೆ ತನ್ನಿ ಅನ್ನೋದು ಮೂರ್ಖತನದ ಪರಮಾವಧಿ. 122 ಜನ ಶಾಸಕರನ್ನ (MLA) ಹೊಂದಿರೋ ಬೊಮ್ಮಾಯಿ (CM Basavaraj Bommai) ನೇತೃತ್ವದ ಸರಕಾರ ಅಧಿಕಾರದಲ್ಲಿರೋವಾಗ ರಾಷ್ಟ್ರಪತಿ ಆಡಳಿತ ತರಬೇಕು ಅನ್ನೋರಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ (Minister BC Patil) ವ್ಯಂಗ್ಯ ಮಾಡಿದರು. ಅವರಿಗೆ ಒಂದು ರೀತಿಯಲ್ಲಿ ಹತಾಷೆ ಮನೋಭಾವನೆ ಬಂದಿದೆ.

ಕಾಂಗ್ರೆಸ್ ನವರು ಇದ್ದ ಅಧಿಕಾರ ಕಳೆದುಕೊಂಡು ನೀರಿನಿಂದ ಹೊರತೆಗೆದ ಮೀನಿನಂತಾಗಿದ್ದಾರೆ. ಕಾಂಗ್ರೆಸ್ ನವರ ಹಗಲುಗನಸು ತಿರುಕನ ಕನಸಾಗುತ್ತೆ ವಿನಃ ಅದು ನನಸಾಗೋದಿಲ್ಲ. ಬಿಜೆಪಿ ಸರಕಾರ ಫರ್ಸೆಂಟೇಜ್ ಸರಕಾರ ಅನ್ನೋ ಕಾಂಗ್ರೆಸ್ ನವರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಡಿಕೆಶಿ ಇರಬಹುದು ಅಥವಾ ಕಾಂಗ್ರೆಸ್ ನ ಯಾರೇ ಇರಬಹುದು.  ಅವರು ಕಮೀಷನ್ ತೆಗೆದುಕೊಳ್ಳೋದ್ರಲ್ಲಿ ಎಕ್ಸಫರ್ಟ್. ಹೀಗಾಗಿ ಅವರು ಕಮೀಷನ್ ಬಿಟ್ಟು ಬೇರೆ ಏನೂ ಮಾತನಾಡೋದಿಲ್ಲ. ಮಾತನಾಡೋಕೂ ಕಮೀಷನ್‌ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದರು.

ರೀ ಅದು ಸುಮ್ಮನೆ ಬೂಟಾಟಿಕೆ

ಯಾವ ದೂರು ರೀ ಅದು, ಸುಮ್ಮನೆ ಬೂಟಾಟಿಕೆ. ಜನರ ಗಮನ ಸೆಳೆಯಲು, ನಮ್ಮ ಕಾಂಗ್ರೆಸ್ ಪಕ್ಷ ಜೀವಂತವಾಗಿದೆ ಅಂತಾ ತೋರಿಸಿಕೊಳ್ಳೋಕೆ ಆ ವ್ಯವಸ್ಥೆ ಕ್ರಿಯೇಟ್ ಮಾಡ್ತಿದ್ದಾರೆ. ಜನರು ದಡ್ಡರಿಲ್ಲ,  ಬುದ್ಧಿವಂತರಿದ್ದಾರೆ. ಯಾರು ಏನು ಅಂತಾ ತಿಳ್ಕೊಂಡು, ಯಾರಿಗೆ ಗೌರವ ಕೊಡಬೇಕು, ಯಾರನ್ನ ಆಯ್ಕೆ ಮಾಡಬೇಕು ಅನ್ನೋದು ಜನರಿಗೆ ಚೆನ್ನಾಗಿ ಗೊತ್ತಿದೆ, ಅದನ್ನ ಮಾಡ್ತಾರೆ ಎಂದು ಆರೋಪಗಳಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ:   Earthquake: ಬೆಂಗಳೂರು, ರಾಮನಗರ, ಮಂಡ್ಯದಲ್ಲಿ ಕಂಪನದ ಅನುಭವ: ಭೂ ವಿಜ್ಞಾನ ಇಲಾಖೆ ಹೇಳಿದ್ದೇನು?

ಸಂಗೀತ‌ ನಿರ್ದೇಶಕ ಹಂಸಲೇಖ ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ.  ಹಂಸಲೇಖ ಬಗ್ಗೆ ನನಗೆ ಬಹಳ ಗೌರವವಿದೆ. ಸ್ವಾಮೀಜಿಗಳ ಬಗ್ಗೆಯೂ ನನಗೆ ಗೌರವವಿದೆ. ಯಾವುದೇ ವ್ಯಕ್ತಿ ತಾನು ಮಾತನಾಡಿದ್ದರ ಬಗ್ಗೆ ಪಶ್ಚಾತ್ತಾಪ ಪಟ್ರೆ, ಕ್ಷಮೆ ಕೇಳಿದ್ರೆ ಅದಕ್ಕಿಂತ ದೊಡ್ಡ ಶಿಕ್ಷೆ ಇಲ್ಲ. ಅದು ಮುಗಿದು ಹೋದ ಅಧ್ಯಾಯ, ಅದನ್ನ ಮತ್ತೆ ಕೆಣಕುವ ಅವಶ್ಯಕತೆ ಇಲ್ಲ ಎಂದು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.

ಅಧಿಕಾರಿಗಳೇನೂ ನಮ್ಮ ಸರಕಾರ ಬಂದ ತಕ್ಷಣ ಹುಟ್ಟಿಕೊಂಡಿಲ್ಲ

ಎಲ್ಲ ಸರಕಾರದಲ್ಲೂ ಎಲ್ಲ ಅಧಿಕಾರಿಗಳಿದ್ದಾರೆ. ಅಧಿಕಾರಿಗಳೇನೂ ನಮ್ಮ ಸರಕಾರ ಬಂದ ತಕ್ಷಣ ಹುಟ್ಟಿಕೊಂಡಿಲ್ಲ. ನಿನ್ನೆ, ಮೊನ್ನೆ ಅವರು ಹುಟ್ಟಿದವರೇನಲ್ಲ. ಯಾವತ್ತಿಂದೋ ಹುಟ್ಟಿಕೊಂಡು, ಇದ್ಕೊಂಡು ಬಂದವರು. ಅಕ್ರಮವಾಗಿ ಸಂಪತ್ತು ಮಾಡಿದ್ದಾರೆ, ಆದಾಯಕ್ಕಿಂತ ಹೆಚ್ಚಾಗಿದೆ ಅಂತಾ ಕಂಡುಬಂದ್ರೆ ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇವ ಎಂದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಭೇಟಿ ವೇಳೆ ಅಧಿಕಾರಿಗಳನ್ನ ರೈತ ಮುಖಂಡರು ತರಾಟೆಗೆ ತೆಗೆದುಕೊಂಡರು.  ಸಚಿವರು ಬೆಳೆ ಹಾನಿ ವೀಕ್ಷಣೆಗೆ ಬರೋ ಬಗ್ಗೆ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿಲ್ಲ.  ಬಿಜೆಪಿ ಪಕ್ಷದ ಮುಖಂಡರು ತಮಗೆ ಬೇಕಾದವರಿಗೆ ಮಾತ್ರ ಮಾಹಿತಿ ನೀಡಿ ಕರೆದುಕೊಂಡು ಬಂದಿದ್ದಾರೆ ಅಂತಾ ರೈತರು ಆಕ್ರೋಶ ಹೊರಹಾಕಿದರು. ಕಂದಾಯ ಇಲಾಖೆ ಅಧಿಕಾರಿಗಳು ಸಚಿವರ ಭೇಟಿಯ ವೇಳೆ ಬಾರದ್ದಕ್ಕೆ ರೈತ ಮುಖಂಡರ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ:  Viral Video: ನಿಜವಾಯ್ತು ಬಬಲಾದಿ ಮಠದ ಮಾತು; 9 ತಿಂಗಳ ಹಿಂದೆಯೇ ತಿರುಪತಿ ಜಲಪ್ರಳದ ಭವಿಷ್ಯ ನುಡಿದಿದ್ದ ಸಿದ್ದು ಮುತ್ಯಾ!

ಸಚಿವರ ವಿರುದ್ಧವೇ ದಿಕ್ಕಾರ

ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಎಲ್ಲರೂ ಬರಲು ಆಗೋದಿಲ್ಲ ಅಂತಾ ರೈತ ಮುಖಂಡರಿಗೆ ಸಚಿವರು ಸ್ಪಷ್ಟನೆ ನೀಡಿದರು. ಕಳೆದ ಬಾರಿಯ ಪರಿಹಾರವೂ ಬಂದಿಲ್ಲ, ಅಧಿಕಾರಿಗಳು ಸರಿಯಾಗಿ ರೈತರಿಗೆ ಪರಿಹಾರ ದೊರಕಿಸಿಕೊಡ್ತಿಲ್ಲ ಅಂತಾ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಲಾಯ್ತು.

ರೈತ ಮುಖಂಡರನ್ನ ಸಮಾಧಾನ ಮಾಡಲು ಯತ್ನಿಸಿದ ಸಚಿವ ಪಾಟೀಲ ವಿರುದ್ಧವೂ ಧಿಕ್ಕಾರ ಕೂಗಿದ ಘಟನೆಯೂ ನಡೆಯಿತು. ಕೊನೆಗೆ ರೈತ ಮುಖಂಡರ ಸಮಸ್ಯೆ ಆಲಿಸಿ ಎಲ್ಲರನ್ನು ಸಚಿವರು ಸಮಾಧಾನ ಪಡಿಸಿದರು.
Published by:Mahmadrafik K
First published: