ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಲ್ ಶೀಟ್ ಸಿಕ್ಕರೆ ಒಳ್ಳೆಯ ಸಿನಿಮಾ ಮಾಡುವೆ: ಕೃಷಿ ಸಚಿವ ಬಿ.ಸಿ.ಪಾಟೀಲ್  

ಆರ್ ಆರ್ ನಗರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್ ಪ್ರಚಾರ ಮಾಡಿದ್ದರು. ಆಗ ಅವರ ಜೊತೆ ನಾನು ಪ್ರಚಾರ ಮಾಡಿದ್ದೆ. ಹಾಗಾಗಿ, ನಮ್ಮ ಮನೆಗೆ ಆಹ್ವಾನ ನೀಡಿದ್ದೆ ಅವರು ಬಂದಿದ್ದರು. ಇದರಲ್ಲಿ ವಿಶೇಷ ಅರ್ಥ ಏನೂ ಇಲ್ಲ

ಸಚಿವ ಬಿ ಸಿ ಪಾಟೀಲ್​​

ಸಚಿವ ಬಿ ಸಿ ಪಾಟೀಲ್​​

  • Share this:
ಬೆಂಗಳೂರು(ನವೆಂಬರ್​. 12): ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಕಾಲ್ ಶೀಟ್ ಸಿಕ್ಕರೆ ಸಿನಿಮಾ ಮಾಡುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ವಿಕಾಸ ಸೌಧದಲ್ಲಿ ಇಂದು ಸುದ್ದಿಗಾರರು ತಮ್ಮ ನಿವಾಸಕ್ಕೆ ನಟ ದರ್ಶನ್ ಭೇಟಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಳ್ಳೆಯ ಕಥೆ ಸಿಕ್ಕರೆ ಮತ್ತು ದರ್ಶನ್ ಅವರ ಕಾಲ್ ಶೀಟ್ ಸಿಕ್ಕರೆ ಖಂಡಿತ ಸಿನಿಮಾ ಮಾಡುತ್ತೇನೆ ಎಂದು ನಗುತ್ತಲೇ ಹೇಳಿದರು. ಆರ್ ಆರ್ ನಗರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್ ಪ್ರಚಾರ ಮಾಡಿದ್ದರು. ಆಗ ಅವರ ಜೊತೆ ನಾನು ಪ್ರಚಾರ ಮಾಡಿದ್ದೆ. ಹಾಗಾಗಿ, ನಮ್ಮ ಮನೆಗೆ ಆಹ್ವಾನ ನೀಡಿದ್ದೆ ಅವರು ಬಂದಿದ್ದರು. ಇದರಲ್ಲಿ ವಿಶೇಷ ಅರ್ಥ ಏನೂ ಇಲ್ಲ ಎಂದರು. ಮಂತ್ರಿ ಮಂಡಲ ಪುನರಚನೆಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಎಲ್ಲ ಶಾಸಕರು ಅರ್ಹರೆ, ಮಂತ್ರಿ ಮಾಡುವಂತೆ ಕೇಳುವುದು ತಪ್ಪಲ್ಲ. ಅಂತಿಮ ತೀರ್ಮಾನ ಸಿಎಂ ಹಾಗೂ ಹೈಕಮಾಂಡ್ ಮಾಡುತ್ತಾರೆ ಎಂದು ಈ ವಿಷಯದ ಬಗ್ಗೆ ಮಾತನಾಡುವಲ್ಲಿ ಹಿಂದೇಟು ಹಾಕಿದರು.

ಕೆಪಿಸಿಸಿ ಅಧ್ಯಕ್ಷರು ನನ್ನ ರಕ್ಷಣೆಗೆ ಬರುತ್ತಿಲ್ಲ ಎಂದು ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶಾಸಕರ ರಕ್ಷಣೆಗೆ ಬರಬೇಕಿತ್ತು. ಅಖಂಡ ಶ್ರೀನಿವಾಸಮೂರ್ತಿ ಅವರು ದಲಿತ ಸಮುದಾಯದ ಶಾಸಕರು. ಮುಸ್ಲಿಂ ಮತಗಳು ಆ ಕ್ಷೇತ್ರದಲ್ಲಿ ಹೆಚ್ಚಿದೆ. ಅಖಂಡ ಶ್ರೀನಿವಾಸ್ ಮೂರ್ತಿ ಪಕ್ಷ ಬಿಟ್ಟು ಹೋಗಲಿ ಎಂಬ ಭಾವನೆ ಕಾಂಗ್ರೆಸ್​​ಗೆ ಇರಬಹುದು. ಹೀಗಾಗಿ ಅಖಂಡ ಶ್ರೀನಿವಾಸ್ ಮೂರ್ತಿ ಅವರಿಗೆ ರಕ್ಷಣೆ ನೀಡುತ್ತಿಲ್ಲ. ಅಖಂಡ ಶ್ರೀನಿವಾಸ್ ಮೂರ್ತಿ ಉತ್ತಮ ಶಾಸಕರು. ಅವರಿಗೆ ಕೆಪಿಸಿಸಿ ಅಧ್ಯಕ್ಷರು ರಕ್ಷಣೆ ನೀಡಬೇಕು ಎಂದರು.

ಕೃಷಿ ಸಚಿವ ಬಿ ಸಿ ಪಾಟೀಲ್​​ ಅವರು ಹುಟ್ಟುಹಬ್ಬ ನವೆಂಬರ್ 14. ಆ ದಿನವನ್ನ ವಿಶಿಷ್ಟ ರೀತಿಯಲ್ಲಿ ಆಚರಿಸಲು ಮುಂದಾಗಿದ್ದಾರೆ. ಆ ದಿನವನ್ನ ರೈತರ ಜೊತೆ ಕಳೆಯಲು ತೀರ್ಮಾನಿಸಿದ್ದಾರೆ. ಅದಕ್ಕೆ ರೈತರೊಂದಿಗೊಂದು ದಿನ ಎಂದು ಹೆಸರಿಟ್ಟಿದ್ದಾರೆ. ಕಳೆದ ಏಪ್ರಿಲ್ ‌1 ರಿಂದಲೇ ರೈತ ವಾಸ್ತವ್ಯ ಮಾಡಬೇಕೆಂದಿದ್ದೆ ಆದರೆ, ಕೋವಿಡ್ ಅಡ್ಡಿ ಆಯಿತು. ಈಗ ರೈತರೊಂದಿಗೊಂದು ದಿನ ಎಂಬ ವಿನೂತನ ಕಾರ್ಯಕ್ರಮವನ್ನು ನ. 14ರಿಂದ ಮಂಡ್ಯದಿಂದ ಆರಂಭಿಸುತ್ತಿದ್ದೇನೆ ಎಂದು ತಿಳಿಸಿದರು.

ರೈತರಿಗೆ ಆತ್ಮಸ್ಥೈರ್ಯ ತುಂಬುವುದು, ಸಮಗ್ರ ಕೃಷಿ, ಕೃಷಿ ರೈತೋದ್ಯಮ ಕುರಿತು ಉತ್ಪಾದನಾ ವೆಚ್ಚ ಕುರಿತು ಮಾಹಿತಿ ನೀಡಿ ಹುರಿದುಂಬಿಸುವುದು ಹಾಗೂ ರೈತರ ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ಮೂಲದಿಂದ ಅರಿಯಲು ಹಾಗೂ ಕೋಲಾರ ಕೃಷಿ ಮಾದರಿಯಾಗುವಂತೆ ಮನೋಸ್ಥೈರ್ಯ ತುಂಬುವ ಉದ್ದೇಶ ಈ ಕಾರ್ಯಕ್ರಮದಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಯಾದಗಿರಿ ಪೊಲೀಸ್​​ ಅಧಿಕಾರಿ ಫೇಸ್​ಬುಕ್​ ಖಾತೆಗೆ ಕನ್ನ; ಹಣ ಸಹಾಯ ಮಾಡುವಂತೆ ಸ್ನೇಹಿತರಿಗೆ ವಂಚನೆ

ಮಾದರಿ ರೈತರ ಭೇಟಿ ಅವರ ಅನುಭವ ಬೇರೆಯವರಿಗೆ ಮಾದರಿಯಾಗುವಂತೆ ಮಾಡುವುದು. ಮಂಡ್ಯ ಜಿಲ್ಲೆಯಲ್ಲಿ ಕಾರ್ಯಕ್ರಮದಲ್ಲಿ ಎಲ್ಲಾ ತಾಲೂಕುಗಳ ರೈತ ಮುಖಂಡರು ಪ್ರಗತಿಪರರು ಕೃಷಿ ಅಧಿಕಾರಿಗಳು ಕೂಡ ಭಾಗವಹಿಸಲಿದ್ದಾರೆ.

ಪ್ರತಿ ತಿಂಗಳು 2 ಜಿಲ್ಲೆಯಲ್ಲಿ ಕಾರ್ಯಕ್ರಮ ಮಾಡಿ ಬೆಳಿಗ್ಗೆ 7 ರಿಂದ ಇಡೀ ದಿನ ರೈತರೊಂದಿಗೆ ಇರುವ ಕಾರ್ಯಕ್ರಮ ಇದಾಗಿದೆ. ಇದೆಲ್ಲ ಆದ ಬಳಿಕ ಸಮಗ್ರ ವರದಿಯನ್ನು ಮುಖ್ಯಮಂತ್ರಿಗೆ ನೀಡಿ ಕೃಷಿ ಇಲಾಖೆಯಲ್ಲಿ ಹೊಸ ಬದಲಾವಣೆ ಮಾಡಲಾಗುವುದು ಎಂದರು.
Published by:G Hareeshkumar
First published: