• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • North Karnataka: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿಗೆ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ ಸಚಿವ ಬಿ ಸಿ ಪಾಟೀಲ್

North Karnataka: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿಗೆ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ ಸಚಿವ ಬಿ ಸಿ ಪಾಟೀಲ್

ಬಿ ಸಿ ಪಾಟೀಲ್

ಬಿ ಸಿ ಪಾಟೀಲ್

ಕಾಂಗ್ರೆಸ್ ಪಕ್ಷದ ಸಮೀಕ್ಷೆ ಬಗ್ಗೆ ಲೇವಡಿ ಮಾಡಿದ ಅವರು ಸರ್ವೇ ಯಾರು ಮಾಡಿದ್ರು. ಅವರವರ ಸರ್ವೆ ಅವರು ಹೇಳಿಕೊಳ್ಳುತ್ತಾರೆ.‌ ನಿಜವಾದ ಸರ್ವೇ ಮಾಡುವವರು ಜನ. ನಮ್ಮ ಸರ್ವೇ ಪ್ರಕಾರ ಬಿಜೆಪಿ ಪಕ್ಷ 150 ಸೀಟ್ ತಗೊಂಡು ಮತ್ತೆ ಆಡಳಿತಕ್ಕೆ ಬರುತ್ತದೆ.

  • Share this:

ಸಮಯ, ಸಂದರ್ಭ ಬಂದಾಗ ಏನು ಬೇಕಾದ ಆಗಬಹುದು, ಕಾಲೈ ತಸ್ಮೈ ನಮಃ, ಯಾವುದು ಆಗಲ್ಲ ಎಂದು ಹೇಳಲ್ಲ, ಮುಂದೆ ಏನಾಗುತ್ತೆ ಗೊತ್ತಿಲ್ಲ ಎನ್ನುವ ಮೂಲಕ ಉತ್ತರ ಕರ್ನಾಟಕ (North Karnataka) ಪ್ರತ್ಯೇಕ ರಾಜ್ಯವಾಗಬೇಕು ಎನ್ನುವ ಸಚಿವ ಉಮೇಶ್ ಕತ್ತಿ  (Minister Umesh Katti) ಹೇಳಿಕೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್  (Minister BC Patil) ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ. ಹಾಸನ ತಾಲ್ಲೂಕಿನ ಕಾರೇಕೆರೆಯಲ್ಲಿರುವ ಕೃಷಿ ವಿಜ್ಞಾನ ಕಾಲೇಜಿನ (Agriculture Science College) ಆವರಣದಲ್ಲಿ ನೂತನ ವಿದ್ಯಾರ್ಥಿನಿಯರ ವಸತಿ ನಿಲಯ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅದು ಉಮೇಶ್ ಕತ್ತಿಯವರ ಅಭಿಪ್ರಾಯ. ಅವರ ಅಭಿಪ್ರಾಯಕ್ಕೆ ಎಲ್ಲರೂ ಮನ್ನಣೆ ಕೊಡಬೇಕು ಅಂತಿಲ್ಲ. ಆದರೆ ಈಗ ಅದು ಸೂಕ್ತ ಸಮಯ ಅಲ್ಲ, ಯಾವುದು ಆಗಲ್ಲ ಅಂತ ಪ್ರತಿಪಾದನೆ ಮಾಡುತ್ತಿಲ್ಲ ಎಂದರು.


ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ, ಅದರ ಬಗ್ಗೆ ಸಮರ್ಪಕವಾದ ಉತ್ತರ ಕೊಡಲು ನನಗೆ ಯಾವುದೇ ರೀತಿಯ ಅಧಿಕಾರವಿಲ್ಲ.‌ ಮುಖ್ಯಮಂತ್ರಿಗಳು ಸರಿಯಾದ ಸಮಯದಲ್ಲಿ, ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಆಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.


ಬಿಜೆಪಿ ಮತ್ತೆ ಆಡಳಿತಕ್ಕೆ ಬರುತ್ತೆ


ಕಾಂಗ್ರೆಸ್ ಪಕ್ಷದ ಸಮೀಕ್ಷೆ ಬಗ್ಗೆ ಲೇವಡಿ ಮಾಡಿದ ಅವರು ಸರ್ವೇ ಯಾರು ಮಾಡಿದ್ರು. ಅವರವರ ಸರ್ವೆ ಅವರು ಹೇಳಿಕೊಳ್ಳುತ್ತಾರೆ.‌ ನಿಜವಾದ ಸರ್ವೇ ಮಾಡುವವರು ಜನ. ನಮ್ಮ ಸರ್ವೇ ಪ್ರಕಾರ ಬಿಜೆಪಿ ಪಕ್ಷ 150 ಸೀಟ್ ತಗೊಂಡು ಮತ್ತೆ ಆಡಳಿತಕ್ಕೆ ಬರುತ್ತದೆ.


ಇದನ್ನೂ ಓದಿ:  Officers Arrest: ರಾಜ್ಯದಲ್ಲಿ ಒಂದೇ ದಿನ IAS, IPS ಅಧಿಕಾರಿಗಳು ಅರೆಸ್ಟ್; CCTV ಆಫ್ ಮಾಡಿಸಿ ಆನ್ಸರ್​ ಶೀಟ್​ ತಿದ್ದಿದ್ರು


ಕಾಂಗ್ರೆಸ್‌ನಲ್ಲಿ ಏನು ನಡೆಯುತ್ತಿದೆ ಎಂಬುವುದು ಎಲ್ಲ ಗೊತ್ತಿದೆ. ಒಂದು ಕಡೆ ಸಿದ್ದರಾಮೋತ್ಸವ ಅಂತ ಹೇಳ್ತಾರೆ. ಡಿ.ಕೆ.ಶಿವಕುಮಾರ್ ಸಾಮೂಹಿಕ ನಾಯಕತ್ವ ಅಂತ ಹೇಳ್ತಾರೆ, ಅವರವರಲ್ಲಿ ಹೊಂದಾಣಿಕೆ ಇಲ್ಲ, ಅಲ್ಲಿ ಕಚ್ಚಾಟ ನಡೆಯುತ್ತಿದೆ.‌ ಅವರ ಕಚ್ಚಾಟ ಅವರ ವೈಯಕ್ತಿಕ ವಿಚಾರ ನಮಗೆ ಸಂಬಂಧವಿಲ್ಲ.


ಕಾಂಗ್ರೆಸ್ ಭ್ರಮೆ ಭ್ರಮೆಯಾಗಿಯೇ ಇರುತ್ತೆ


ಇವತ್ತು ಕಾಂಗ್ರೆಸ್ ಎಲ್ಲಾ ಕಡೆ ನಿರ್ಣಾಮ ಆಗಿದೆ. ಮಹಾರಾಷ್ಟ್ರದಲ್ಲಿ ಇತ್ತು ಮೊನ್ನ ಅಲ್ಲಿ ಕೂಡ ಹೋಯ್ತು. ಪಂಜಾಬ್‌  ನಲ್ಲಿ ಇತ್ತು ಅಲ್ಲಿಯೂ ಹೋಯ್ತು. ಎಲ್ಲಿಯೂ ಕಾಂಗ್ರೆಸ್‌ಗೆ ನೆಲೆಯಿಲ್ಲ. ಇಲ್ಲಿ ಉಳಿದುಕೊಳ್ಳುತ್ತೀವಿ ಅಂಥ ಭ್ರಮಾಲೋಕದಲ್ಲಿ ಇದ್ದಾರೆ. ಅವರ ಭ್ರಮೆ ಭ್ರಮೆಯಾಗಿಯೇ ಉಳಿಯುತ್ತೆ ಹೊರತು ನಿಜ ಆಗಲ್ಲ ಎಂದು ಭವಿಷ್ಯ ನುಡಿದರು.


ಮುಂದಿನ ಭಾರಿ ನಾನೇ ಮುಖ್ಯಮಂತ್ರಿ ಆಗ್ತಿನಿ ಎಂಬ ಮಾಜಿ ಸಿಎಂ‌ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಎಷ್ಟು ಸೀಟ್ ತೆಗೆದುಕೊಂಡು ಸಿಎಂ ಆಗ್ತೀರ ಎಂದು ಕುಮಾರಸ್ವಾಮಿ ಅವರನ್ನು ಕೇಳಿ, 122 ಸೀಟ್ ತೆಗೆದುಕೊಳ್ಳುತ್ತೀರಾ ಅವರು, ಅವರ ಪಕ್ಷಕ್ಕೆ ಮ್ಯಾಜಿಕ್ ನಂಬರ್ 113 ಬರುತ್ತಾ?  113 ಮ್ಯಾಜಿಕ್ ನಂಬರ್ ಬಂದರೆ ಯಾರು ಬೇಕಾದರೂ ಸಿಎಂ ಆಗಬಹುದು ಎಂದು  ಹೇಳಿದರು.


ರಾಜ್ಯದಲ್ಲಿ ರೈತರಿಗೆ ಸರಿಯಾದ ಸಮಯದಲ್ಲಿ ಗೊಬ್ಬರ, ಬಿತ್ತನೆ ಬೀಜ ಪೂರೈಕೆ ಮಾಡಿದ್ದೇವೆ. ಸರಿಯಾಗಿ ಗೊಬ್ಬರ ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು.


ದೇಶ ಬಿಜೆಪಿ ಕಡೆ ನೋಡುತ್ತಿದೆ


ಇನ್ನೂ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ  ಕೇಂದ್ರ ಕೃಷಿ ಖಾತೆ ಸಚಿವೆ ಶೋಭ ಕರಂದ್ಲಾಜೆ ಭಾಗಯಾಗಿ ಮಾತನಾಡಿದ ಅವರು, ಪೆನ್ನು ಅವರದ್ದೇ, ಪೇಪರ್ ಕೂಡ ಅವರದ್ದೇ, ಅವರು 120 ಬರೆದುಕೊಳ್ಳಬಹುದು, 150, 180 ಕೂಡ ಬರೆದುಕೊಳ್ಳಬಹುದು. ಆದರೆ ಇವತ್ತು ದೇಶ ಮೋದಿ ಕಡೆ ನೊಡುತ್ತಿದೆ. ದೇಶ ಬಿಜೆಪಿ ಕಡೆ ನೋಡುತ್ತಿದೆ.


Minister BC Patil indirectly support Umesh katti North Karnataka Separate State statement sbtv mrq
ಶೋಭಾ ಕರಂದ್ಲಾಜೆ


ಈ ದೇಶದಲ್ಲಿ ಅಭಿವೃದ್ಧಿ ಸಾಧನೆ, ದೇಶದ ರಕ್ಷಣೆ ವಿಚಾರ, ಭ್ರಷ್ಟಾಚಾರ ರಹಿತವಾಗಿ ಬಿಜೆಪಿ ಆಡಳಿತ ನೀಡಿದೆ. ಹಾಗಾಗಿ ಜನರು ಮೋದಿ ಕಡೆಗೆ ನೋಡುತ್ತಿದ್ದಾರೆ. ಕೊರೊನಾದಂತಹ ಮಹಾಮಾರಿ ಸಂದರ್ಭದಲ್ಲಿ ಜನರ ಜೀವ ರಕ್ಷಣೆಗೆ ಮೋದಿಯವರು ಹಗಲು ರಾತ್ರಿ ಪ್ರಯತ್ನ ಮಾಡಿದ್ದಾರೆ.


ಇದನ್ನೂ ಓದಿ: Breaking News: ಲಂಚ ಸ್ವೀಕರಿಸಿದ ಆರೋಪ; ಡಿಸಿ ಜೆ. ಮಂಜುನಾಥ್​ ಅರೆಸ್ಟ್​


ಕಾಂಗ್ರೆಸ್ ಸಮೀಕ್ಷೆಗೆ ಕರಂದ್ಲಾಜೆ  ವ್ಯಂಗ್ಯ


ಕರ್ನಾಟಕದ ಜನ ಬಿಜೆಪಿ ಜೊತೆಗಿದ್ದಾರೆ. ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿ ಇದ್ದಾರೆ, ಅವರ ನಾಯಕರ ನಡುವೆಯೇ ಕಾದಾಟ ಇದೆ. ಹಾಗಾಗಿ ಒಬ್ಬರು 120 ಅಂತಾರೆ, ಇನ್ನೊಬ್ಬರು 150 ಸ್ಥಾನ ಅಂತಾರೆ ಎಂದು ಕಾಂಗ್ರೆಸ್ ಸಮೀಕ್ಷೆ ವಿಚಾರವಾಗಿ ವ್ಯಂಗ್ಯವಾಡಿದರು.


ಅವರಲ್ಲಿ ಇರುವ ಗುಂಪುಗಾರಿಕೆಯನ್ನು ಬೇರೆ ಕಡೆ ತಿರುಗಿಸಲು ರಾಜಕೀಯ ಹೇಳಿಕೆ ಕೊಡುತ್ತಿದ್ದಾರೆ. ಆದರೆ ರಾಜ್ಯದ ಜನರ ಜೊತೆ ನಾವಿದ್ದೇವೆ. ಜನ ಕೂಡ ನಮ್ಮ ಜೊತೆ ಇದ್ದಾರೆ ಎಂದರು.

top videos
    First published: