news18-kannada Updated:November 12, 2020, 2:59 PM IST
ಬಿ.ಸಿ. ಪಾಟೀಲ್.
ಬೆಂಗಳೂರು; ಕೃಷಿ ಸಚಿವ ಬಿ ಸಿ ಪಾಟೀಲ ಅವರ ಹುಟ್ಟುಹಬ್ಬ ನವೆಂಬರ್ 14 . ಆ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಮುಂದಾಗಿದ್ದಾರೆ. ಆ ದಿನವನ್ನು ರೈತರ ಜೊತೆ ಕಳೆಯಲು ತೀರ್ಮಾನಿಸಿದ್ದಾರೆ. ಅದಕ್ಕೆ ರೈತರೊಂದಿಗೊಂದು ದಿನ ಎಂದು ಹೆಸರಿಟ್ಟಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಳೆದ ಏಪ್ರಿಲ್ 1 ರಿಂದಲೇ ರೈತ ವಾಸ್ತವ್ಯ ಮಾಡಬೇಕೆಂದಿದ್ದೆ. ಆದರೆ ಕೋವಿಡ್ ಅಡ್ಡಿ ಆಯಿತು. ಈಗ ರೈತರೊಂದಿಗೊಂದು ದಿನ ಎಂಬ ವಿನೂತನ ಕಾರ್ಯಕ್ರಮವನ್ನು ನ. 14ರಿಂದ ಮಂಡ್ಯದಿಂದ ಆರಂಭಿಸುತ್ತಿದ್ದೇನೆ. ರೈತರಿಗೆ ಆತ್ಮಸ್ಥೈರ್ಯ ತುಂಬುವುದು, ಸಮಗ್ರ ಕೃಷಿ, ಕೃಷಿ ರೈತೋದ್ಯಮ ಕುರಿತು ಉತ್ಪಾದನಾ ವೆಚ್ಚ ಕುರಿತು ಮಾಹಿತಿ ನೀಡಿ ಹುರಿದುಂಬಿಸುವುದು ಹಾಗೂ ರೈತರ ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ಮೂಲದಿಂದ ಅರಿಯಲು ಹಾಗೂ ಕೋಲಾರ ಕೃಷಿ ಮಾದರಿಯಾಗುವಂತೆ ಮನೋಸ್ಥೈರ್ಯ ತುಂಬುವ ಉದ್ದೇಶ ಈ ಕಾರ್ಯಕ್ರಮದಾಗಿದೆ. ಮಾದರಿ ರೈತರ ಭೇಟಿ, ಅವರ ಅನುಭವ ಬೇರೆಯವರಿಗೆ ಮಾದರಿಯಾಗುವಂತೆ ಮಾಡುವುದು. ಮಂಡ್ಯ ಜಿಲ್ಲೆಯಲ್ಲಿ ಕಾರ್ಯಕ್ರಮದಲ್ಲಿ ಎಲ್ಲಾ ತಾಲೂಕುಗಳ ರೈತ ಮುಖಂಡರು ಪ್ರಗತಿಪರರು ಕೃಷಿ ಅಧಿಕಾರಿಗಳು ಕೂಡ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಇದನ್ನು ಓದಿ: ತಾಲಿಬಾನಿಗಳಂತೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹುಲಿ, ಬಂಡೆ ಎಂದು ಹೆಸರಿಟ್ಟುಕೊಂಡು ಓಡಾಡುತ್ತಿದ್ದಾರೆ; ನಳಿನ್ ಕುಮಾರ್ ಕಟೀಲ್
ಪ್ರತಿ ತಿಂಗಳು 2 ಜಿಲ್ಲೆಯಲ್ಲಿ ಕಾರ್ಯಕ್ರಮ ಮಾಡಿ ಬೆಳಿಗ್ಗೆ 7ರಿಂದ ಇಡೀ ದಿನ ರೈತರೊಂದಿಗೆ ಇರುವ ಕಾರ್ಯಕ್ರಮ ಇದಾಗಿದೆ. ಇದೆಲ್ಲ ಆದ ಬಳಿಕ ಸಮಗ್ರ ವರದಿಯನ್ನು ಮುಖ್ಯಮಂತ್ರಿಗೆ ನೀಡಿ ಕೃಷಿ ಇಲಾಖೆಯಲ್ಲಿ ಹೊಸ ಬದಲಾವಣೆ ಮಾಡಲಾಗುವುದು ಎಂದರು.
ರೈತರಿಗೆ ತಾತ್ಕಾಲಿಕ ಸಮಸ್ಯೆಗಳಿಗೆ ಪರಿಹಾರ ನೀಡುವುದಕ್ಕಿಂತ ಶಾಶ್ವತ ಪರಿಹಾರ ನೀಡಬೇಕು. ಎಲ್ಲಾ ಜಿಲ್ಲೆಗಳನ್ನು ಈಗ ಮತ್ತೆ ಸುತ್ತಿ ರೈತರ ಸಮಸ್ಯೆಯನ್ನು ಅರಿಯಲು ಅಧ್ಯಯನದ ಮತ್ತೊಂದು ಪ್ರಯತ್ನವಾಗಿದೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಕೂಡ ಎಲ್ಲಾ ಜಿಲ್ಲೆಗಳನ್ನು ಸುತ್ತಿ ಲಾಕ್ಡೌನ್ ಸಂದರ್ಭದಲ್ಲಿ ರೈತರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಯಿತು. ಪ್ರತಿ ತಿಂಗಳು ಕನಿಷ್ಠ ಎರಡು ಜಿಲ್ಲೆಗಳಲ್ಲಿ ಭೇಟಿ ನೀಡುವ ಉದ್ದೇಶವಿದೆ ಎಂದು ಸಚಿವರು ಹೇಳಿದರು.
Published by:
HR Ramesh
First published:
November 12, 2020, 2:59 PM IST