Cauvery Flood:ಕುಶಾಲನಗರದಲ್ಲಿ ಪ್ರವಾಹ ತಪ್ಪಿಸಲು ಐದು ಕೋಟಿಯಲ್ಲಿ ಕಾವೇರಿಗೆ ತಡೆಗೋಡೆ; ಬಿ ಸಿ ನಾಗೇಶ್

ಸದ್ಯ ಮಳೆ ಬರುತ್ತಿರುವುದರಿಂದ ಯಾವುದೇ ಅಧ್ಯಯನ ಅಥವಾ ಪರಿಶೀಲನೆ ಸಾಧ್ಯವಿಲ್ಲ. ಹೀಗಾಗಿ ಮಳೆ ಮುಗಿದ ಬಳಿಕ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದ್ದಾರೆ. 

ಚೆಕ್ ವಿತರಣೆ

ಚೆಕ್ ವಿತರಣೆ

  • Share this:
ಮಡಿಕೇರಿ: ಕೊಡಗು (Kodagu) ಜಿಲ್ಲೆಯ ಕುಶಾಲನಗರದ (Kushalanagara) ಕೆಲವು ಬಡಾವಣೆಗಳಲ್ಲಿ ಪ್ರತೀ ವರ್ಷ ಪ್ರವಾಹದ ಪರಿಸ್ಥಿತಿ ಎದುರಿಸುತ್ತಿರುವುದರಿಂದ ಕಾವೇರಿ ಪ್ರವಾಹದ ನೀರು (Cauvery Flood) ನುಗ್ಗದಂತೆ ತಡೆಗೋಡೆ ನಿರ್ಮಿಸಲು ಐದು ಕೋಟಿ ರೂಪಾಯಿ ನೀಡಲಾಗಿದೆ ಎಂದು ಕೊಡಗು ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ (Minister BC Nagesh) ಹೇಳಿದ್ದಾರೆ. ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ (Kodlipete, Somavarapete) ಕೆಲವು ಗ್ರಾಮಗಳಲ್ಲಿ ಮನೆಗಳು ಕುಸಿದು ಬಿದ್ದಿರುವ ಸ್ಥಳಗಳಿಗೆ ಭೇಟಿ ನೀಡಿದ ಸಚಿವ ಬಿ.ಸಿ. ನಾಗೇಶ್ ಸಂತ್ರಸ್ತರನ್ನು ಮಾತನಾಡಿಸಿದರು. ಸಂತ್ರಸ್ತರಿಗೆ (Victims) ಸಾಂತ್ವನ ಹೇಳಿದ ಸಚಿವ ನಾಗೇಶ್ ಸ್ಥಳದಲ್ಲಿಯೇ ಪರಿಹಾರದ ಚೆಕ್‍ಗಳನ್ನು ವಿತರಿಸಿದರು. ಬಳಿಕ ಕುಶಾಲನಗರಕ್ಕೆ ಭೇಟಿ ನೀಡಿದ ಅವರು ಅಲ್ಲಿನ ಸಾಯಿ ಬಡಾವಣೆ, ಕುವೆಂಪು ಬಡಾವಣೆಗಳಿಗೆ ಭೇಟಿ ನೀಡಿ ಪ್ರವಾಹದ ಭೀತಿ ಇರುವ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದರು. ನಂತರ ಅಲ್ಲಿನ ನಿವಾಸಿಗಳಿಗೆ ಸಮಾಧಾನ ಹೇಳಿದ ಸಚಿವರು ಇದಕ್ಕೆಲ್ಲಾ ಶಾಶ್ವತ ಪರಿಹಾರ ಕಂಡುಕೊಳ್ಳೋಣ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶಾಸಕರಾದ ಅಪ್ಪಚ್ಚು ರಂಜನ್ (MLA Appachchu Ranjan) ಅವರು ಈ ಹಿಂದೆಯೇ ಇಲ್ಲಿ ತಡೆಗೋಡೆ ಮಾಡಲು ಯೋಜನೆ ರೂಪಿಸಿದ್ದರು. ಒಂದಷ್ಟು ಭಾಗ ತಡೆಗೋಡೆ ನಿರ್ಮಿಸಿದ್ದರಿಂದ ಒಂದಷ್ಟು ಅನುಕೂಲವಾಗಿದೆ ಎಂದು ಸ್ಥಳೀಯರೇ ಹೇಳಿದ್ದಾರೆ. ಹೀಗಾಗಿ ಮಳೆ ನಿಂತ ಬಳಿಕ ತಡೆಗೋಡೆ ನಿರ್ಮಿಸಲಾಗುವುದು ಎಂದು ಹೇಳಿದರು.

ಜಲಸ್ಪೋಟಕ್ಕೆ ಸಂಬಂಧಿಸಿದಂತೆ ಅಧ್ಯಯನ

ಇನ್ನು ಜಿಲ್ಲೆಯಲ್ಲಿ ಕೆಲವೆಡೆ ಮತ್ತೆ ಜಲಸ್ಫೋಟವಾಗಿದ್ದರೂ ಇದುವರೆಗೆ ವಿಜ್ಞಾನಿಗಳ ತಂಡ ಬಾರದಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ಆಗಿರುವ ಭೂಕಂಪನ ಮತ್ತು ಭೂಕುಸಿತ ಹಾಗೆ ಜಲಸ್ಫೋಟಕ್ಕೆ ಏನಾದರೂ ಸಂಬಂಧವಿದೆಯೇ ಎನ್ನುವುದನ್ನು ಪರಿಶೀಲಿಸಬೇಕಾಗಿದೆ. ಅದಕ್ಕೆ ಸಂಬಂಧಿಸಿದಂತೆ ವಿಶ್ವ ವಿದ್ಯಾಲಯಗಳ ವಿಜ್ಞಾನಿಗಳ ತಂಡದೊಂದಿಗೆ ಮಾತನಾಡಲಾಗಿದೆ.

ಇದನ್ನೂ ಓದಿ: Vani Vilasa Sagar: 6 ದಶಕಗಳ ಬಳಿಕ ದಾಖಲೆ ಮಟ್ಟಕ್ಕೆ ಭರ್ತಿಯಾದ ವಾಣಿ ವಿಲಾಸ ಸಾಗರ

ಸದ್ಯ ಮಳೆ ಬರುತ್ತಿರುವುದರಿಂದ ಯಾವುದೇ ಅಧ್ಯಯನ ಅಥವಾ ಪರಿಶೀಲನೆ ಸಾಧ್ಯವಿಲ್ಲ. ಹೀಗಾಗಿ ಮಳೆ ಮುಗಿದ ಬಳಿಕ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದ್ದಾರೆ.ಹಣ ಬಿಡುಗಡೆಯ ಭರವಸೆ

ಕೊಡಗನ್ನು ಕಡೆಗಣಿಸಿಲ್ಲ ಎಂದಿರುವ ಅವರು ಮಳೆ, ಪ್ರವಾಹ ಮುಂತಾದವುಗಳನ್ನು ಎದುರಿಸಲು ವಿವಿಧ ಜಿಲ್ಲೆಗಳಿಗೆ ಸಾಕಷ್ಟು ಅನುದಾನ ಕೊಟ್ಟು, ಕೊಡಗಿಗೆ ಅನುದಾನ ಕೊಡದೆ ಇರುವುದರಿಂದ ಜಿಲ್ಲೆಯನ್ನು ಕಡೆಗಣಿಸಲಾಗಿದೆ ಎಂದು ಜನರು ಆರೋಪಿಸುತ್ತಿರುವುಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಕೊಡಗು ಜಿಲ್ಲೆಯನ್ನು ಕಡೆಗಣಿಸುವ ಮಾತೇ ಇಲ್ಲ. ಮಳೆಗಾಲ ಅಥವಾ ಪ್ರವಾಹ ಎದುರಿಸಲು ತಕ್ಷಣಕ್ಕೆ ಅನುದಾನವಿಲ್ಲದ ಜಿಲ್ಲೆಗಳಿಗೆ ಸಿಎಂ ಅವರು ಹಣ ಬಿಡುಗಡೆ ಮಾಡಿದ್ದಾರೆ.

ಕೊಡಗಿನಲ್ಲಿ ಜಿಲ್ಲಾಧಿಕಾರಿ ಅವರ ಖಾತೆಯಲ್ಲಿ ಇನ್ನೂ 35 ಕೋಟಿ ಹಣವಿದೆ. ಹೀಗಾಗಿ ಅದೇ ಹಣವನ್ನು ಬಳಸಿ ಜನರಿಗೆ ಪರಿಹಾರ ಕೊಡುವುದು, ತಕ್ಷಣಕ್ಕೇ ಅಗತ್ಯವಾಗಿ ಬೇಕಾಗಿರುವ ಕೆಲಸಗಳನ್ನು ಮಾಡಿಸಲಾಗುತ್ತಿದೆ ಎಂದರು.

ಮಕ್ಕಳಿಗೆ ಕೇಕ್ ವಿತರಣೆ

ಮಡಿಕೇರಿಯಲ್ಲಿ ರೆಡ್ ಕ್ರಾಸ್ ಭವನದಲ್ಲಿ ಆರಂಭಿಸಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ನಾಗೇಶ್, 2 ನೇ ಮೊಣ್ಣಂಗೇರಿಯಿಂದ ಸ್ಥಳಾಂತರ ಮಾಡಿರುವ 35 ಕುಟುಂಬಗಳ ಸಂತ್ರಸ್ತರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಎಲ್ಲವೂ ಸರಿಯಾಗಿ ದೊರೆಯುತ್ತಿದೆಯೇ, ಏನಾದರೂ ಕೊರತೆಗಳು ಇವೆಯೇ ಎಂದು ವಿಚಾರಿಸಿದರು. ಈ ವೇಳೆ ಕಾಳಜಿ ಕೇಂದ್ರದಲ್ಲಿರುವ ಮಕ್ಕಳಿಗೆ ಕೇಕ್ ವಿತರಿಸಿದರು.

ಇದನ್ನೂ ಓದಿ:  Mutyalamaduvu Falls: ಮಳೆಯಿಂದ ಮೈದುಂಬಿಕೊಂಡ ಮುತ್ಯಾಲಮಡುವು, ಜಲಪಾತ ನೋಡಲು ಪ್ರವಾಸಿಗರ ದಂಡುಮಳೆ ಅಲರ್ಟ್

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಬೀದರ್, ಕಲಬುರಗಿ ಈ ಏಳು ಜಿಲ್ಲೆಗಳ ಹಲವೆಡೆ ಭಾರೀ ಮಳೆ ಆಗಬಹುದು. ಉಳಿದ ಕಡೆಗಳಲ್ಲಿ ಸಾಧಾರಣ ಮಳೆ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ. ಕರ್ನಾಟಕದಲ್ಲಿ ಹಲವು ಕಡೆಗಳಲ್ಲಿ ಬುಧವಾರದ ವರೆಗೆ ಹೆಚ್ಚು ಮಳೆ ಸುರಿಯಲಿದೆ. ನಂತರ ಹಂತ ಹಂತವಾಗಿ ಮಳೆ ಕಡಿಮೆಯಾಗಲಿದೆ
Published by:Mahmadrafik K
First published: