School Reopening: ಮುಂದಿನವಾರದಿಂದಲೇ ಎಲ್ಲಾ ಶಾಲೆಗಳು ಪುನರ್ ಆರಂಭ: ಸಚಿವ ಬಿ ಸಿ ನಾಗೇಶ್ 

ಇದೀಗ 29 ರಂದು ನಡೆಯುವ ಸಭೆಯಲ್ಲಿ ಶಾಲೆ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

ಧ್ವಜಾರೋಹಣ ನೆರವೇರಿಸಿದ ಸಚಿವ ಬಿಸಿ ನಾಗೇಶ್​

ಧ್ವಜಾರೋಹಣ ನೆರವೇರಿಸಿದ ಸಚಿವ ಬಿಸಿ ನಾಗೇಶ್​

  • Share this:
ಕೊಡಗು (ಜ. 26): ರಾಜ್ಯದಲ್ಲಿ ಕೋವಿಡ್ (Covid) ಪ್ರಕರಣ  ಜಾಸ್ತಿಯಾಗಿದ್ದ ಹಿನ್ನೆಲೆಯಲ್ಲಿ ಪುನರ್ ಆರಂಭ ಮಾಡಲಾಗಿದದ  ಶಾಲೆಗಳನ್ನು ಬೆಂಗಳೂರಿನಲ್ಲಿ ಬಂದ್ ಮಾಡಲಾಗಿತ್ತು. ಅವುಗಳನ್ನು ಮುಂದಿನ ವಾರದಿಂದಲೇ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ (BC Nagesh) ಖಚಿತಪಡಿಸಿದ್ದಾರೆ.  ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮೂರ್ನಾಡು ಗ್ರಾಮದಲ್ಲಿ ಗ್ರಾಮ ಒನ್ (Gram one) ಕೇಂದ್ರಕ್ಕೆ ಚಾಲನೆ ನೀಡಿದ ಬಳಿಕ ಅಮಾತನಾಡಿದ ಅವರು,  ಕಳೆದ ವಾರ ನಡೆದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ (Covid Technical suggestion Commitee) ಸಭೆಯಲ್ಲೇ ಶಾಲೆ ಆರಂಭದ ಬಗ್ಗೆ ಚರ್ಚಿಸಲಾಗಿತ್ತು. ಇದೀಗ 29 ರಂದು ನಡೆಯುವ ಸಭೆಯಲ್ಲಿ ಶಾಲೆ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

19 ಜಿಲ್ಲೆಗಳಲ್ಲಿ ಬಂದ್ ಆಗಿದ್ದ ಶಾಲೆ

ರಾಜ್ಯದ 19 ಜಿಲ್ಲೆಗಳಲ್ಲಿ 246 ಶಾಲೆಗಳನ್ನು ಕೋವಿಡ್ ಕಾರಣದಿಂದ ಬಂದ್ ಮಾಡಲಾಗಿತ್ತು. ಅದರಲ್ಲೂ ಮೂರರಿಂದ 7 ದಿನಗಳವರೆಗೆ ಮಾತ್ರ ಬಂದ್ ಮಾಡಿ ಮತ್ತೆ ಆರಂಭಿಸಲಾಗಿದೆ. 5 ಜಿಲ್ಲೆಗಳಲ್ಲಿ ಶಾಲೆಗಳನ್ನೇ ಬಂದ್ ಮಾಡಿಲ್ಲ . ಈಗಾಗಲೇ ಮಾರ್ಚ್ 28 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಿಗದಿ ಮಾಡಲಾಗಿದೆ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಪರೀಕ್ಷೆ ನಡೆಸಲಾಗುವುದು. ಈ ಸಂಬಂಧ ಈಗಾಗಲೇ ಶಿಕ್ಷಣ ಮಂಡಳಿಗೆ ತಿಳಿಸಲಾಗಿದೆ. ಕಳೆದ ಬಾರಿಯಂತೆಯೇ ಈ ಬಾರಿ ಕೂಡ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗುವುದು ಎಂದಿದ್ದಾರೆ.

ಇನ್ನು ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಮಾತನಾಡಿದ್ದ  ಅವರು, ಉಸ್ತುವಾರಿ ಸಚಿವಸ್ಥಾನಗಳನ್ನು ಬದಲಾವಣೆ ಮಾಡಿರುವುದಕ್ಕೆ ನನಗೆ ಯಾವುದೇ ಅಸಮಾಧಾನ ಇಲ್ಲ ಎಂದು ಕೊಡಗು ಜಿಲ್ಲೆ ಉಸ್ತುವಾರಿ ನೀಡಿರುವುದು ಸಂತಸ ತಂದಿದೆ ಎಂದು ಜಿಲ್ಲಾ ನೂತನ ಉಸ್ತುವಾರಿ ಸಚಿವರು ತಿಳಿಸಿದರು.

ಇದನ್ನು ಓದಿ: ನಾವು ಕುಡಿದು ಬಿಟ್ಟ ನೀರನ್ನು ತಮಿಳುನಾಡಿನವರು ಕುಡೀತಾರೆ: ಹೊಗೇನಕಲ್ ಯೋಜನೆ ಬಗ್ಗೆ Minister Somanna ಹೇಳಿಕೆ

ಮಾಧುಸ್ವಾಮಿ ಸಮರ್ಥಿಸಿಕೊಂಡ ಸಚಿವರು

ಇದೇ ವೇಳೇ  ಸಚಿವ ಮಾಧುಸ್ವಾಮಿ ಅವರಿಗೂ ಯಾವುದೇ ಅಸಮಾಧಾನವಿಲ್ಲ. ಆದರೆ ಬೇರೆ ಜಿಲ್ಲೆಗಳಿಗೆ ಹೋಗಿ ಮಾಡುವುದೇನು ಎಂದು ಪ್ರಶ್ನಿಸಿದ್ದಾರೆ ಅಷ್ಟೇ. ಅದಕ್ಕಿಂತ ನಮ್ಮದೇ ಜಿಲ್ಲೆಯ ಉಸ್ತುವಾರಿ ನೀಡಿದ್ದರೆ ಅಭಿವೃದ್ಧಿ ಕೆಲಸ ಮಾಡುವುದಕ್ಕೆ ಅನುಕೂಲವಾಗುತಿತ್ತು ಎಂದು ಹೇಳಿದ್ದಾರೆ. ಮಾಧುಸ್ವಾಮಿ ಅವರೊಂದಿಗೆ ಖುದ್ದು  ಸಿಎಂ ಬೊಮ್ಮಾಯಿ ಅವರು ಕೂಡ ಮಾತನಾಡಿದ್ದಾರೆ. ಹೀಗಾಗಿ ಯಾರಿಗೂ ಯಾವ ಅಸಮಾಧಾನವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನು ಓದಿ: ಡಿಕೆಶಿ, ಸಿದ್ದರಾಮಯ್ಯ ತಿಕ್ಕಾಟದಿಂದ ಬಹಳ ಜನರು ಕಾಂಗ್ರೆಸ್ ಬಿಡ್ತಾರೆ ವಿನಃ, ಕಾಂಗ್ರೆಸ್ ಸೇರಲ್ಲ

ಕಾಲವೇ ಉತ್ತರಿಸಲಿದೆ

ಇನ್ನು ಕಾಂಗ್ರೆಸಿನ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬಿಜೆಪಿಯ ಕೆಲವು ಸಚಿವರೇ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದಿರುವುದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವ ಬಿ ಸಿ ನಾಗೇಶ್, ಅದಕ್ಕೆಲ್ಲಾ ಕಾಲವೇ ಉತ್ತರಿಸುತ್ತದೆ ಎಂದು ಹೇಳಿ ಸುಮ್ಮನಾದರು.

ದಕ್ಕೂ ಮೊದಲು ಕೊಡಗಿನ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶಿಸ್ತುಬದ್ಧವಾಗಿ ನೆರವೇರಿದ 73 ನೇ ಗಣರಾಜ್ಯೋತ್ಸವದಲ್ಲಿ ಉಸ್ತುವಾರಿ ಸಚಿವ ಬಿ ಸಿ ನಾಗೇಶ್ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಮತ್ತು ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಧ್ವಜಾರೋಹಣ ನೆರವೇರಿಸಿದರು. ತೆರೆದ ವಾಹನದಲ್ಲಿ ಪಥಸಂಚಲನ ವೀಕ್ಷಿಸಿದ ಸಚಿವ ನಾಗೇಶ್ ಗೌರವ ವಂದನೆ ಸ್ವೀಕರಿಸಿದರು. ಈ ಸಂದರ್ಭ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಸಚಿವರಿಗೆ ಈ ವೇಳೆ ಉಪಸ್ಥಿತರಿದ್ದರು.
Published by:Seema R
First published: