ಕೊಡಗು: ನನ್ನ ಸ್ವಂತ ಸಾಮಾಜಿಕ ಜಾಲತಾಣದ ನಿರ್ವಹಣೆಗೆ ನಾನು ಶಿಕ್ಷಣ ಇಲಾಖೆಯ (Department Of Education) ಅಥವಾ ಸರ್ಕಾರದ (Government) ಯಾವುದೇ ಹಣವನ್ನು (Money) ಬಳಕೆ ಮಾಡುತ್ತಿಲ್ಲ. ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ (BK Hariprasad) ನನ್ನ ವಿರುದ್ಧ ಆರೋಪಿಸಿ ಮಾಡಿರುವ ಟ್ವೀಟ್ (Tweet) ಬರೀ ಸುಳ್ಳು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (Education Minister BC Nagesh) ಸ್ಪಷ್ಪಪಡಿಸಿದ್ದಾರೆ. ಮಡಿಕೇರಿಯಲ್ಲಿ (Madikeri) ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅದು ಶಿಕ್ಷಣ ಇಲಾಖೆ ಜಾಲತಾಣ. ಅದಕ್ಕೆ 94,400 ರೂಪಾಯಿಯನ್ನು ಬಿಡುಗಡೆಯೂ ಮಾಡಿಲ್ಲ. ಅದಕ್ಕೆ ಇನ್ನು ಎಂಒಯೂ ಕೂಡ ಆಗಿಲ್ಲ. ಆದ್ದರಿಂದ ಹಣ ಬಿಡುಗಡೆ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಆದರೆ ಬಿ.ಕೆ ಹರಿಪ್ರಸಾದ್ ಅವರ ಅವಾಂತರ ನಿಮಗೂ ಗೊತ್ತೇ ಇದೆ. ಅವರು ಯಾವತ್ತೂ ಅಪೂರ್ಣ ಮಾಹಿತಿಗಳನ್ನು ಪಡೆದುಕೊಂಡೇ ಮಾತನಾಡುತ್ತಾರೆ. ವಿನಃ, ಪೂರ್ಣ ಮಾಹಿತಿ ಪಡೆದು ಮಾತನಾಡುವುದಿಲ್ಲ. ನಾನೂ ಕೂಡ ಎಕ್ಸ್ ಕ್ಲೂಸಿವ್ ಟ್ವೀಟ್ ಮಾಡಬೇಕೆಂಬ ಹುಚ್ಚು ಅವರಿಗೂ ಇದೆ.
ಹರಿಪ್ರಸಾದ್ಗೆ ಬಿ.ಸಿ.ನಾಗೇಶ್ ತಿರುಗೇಟು
ಹೀಗಾಗಿ ಅವರು ನನ್ನ ಸ್ವಂತ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಶಿಕ್ಷಣ ಇಲಾಖೆಯ ಹಣವನ್ನು ದುರುಪಯೋಗ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ ಎಂದು ಸಚಿವ ಬಿ.ಸಿ.ನಾಗೇಶ್ ಮಡಿಕೇರಿಯಲ್ಲಿ ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ಅವರಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: Chikkamagaluru: ಚಾರ್ಮಾಡಿ ಘಾಟಿನಲ್ಲಿ ಪ್ರವಾಸಿಗರ ಮೋಜು ಮಸ್ತಿ, ಸಾರ್ವಜನಿಕರಿಂದ ಆಕ್ರೋಶ
ಪರಿಷತ್ ವಿಪಕ್ಷ ನಾಯಕರಾಗಿರುವ ಹರಿಪ್ರಸಾದ್ ಅವರಿಗೆ ತಾಳ್ಮೆ ಬೇಕು. ಇದುವರೆಗೆ ಕೇಂದ್ರದಲ್ಲಿದ್ದ ಅವರಿಗೆ ಕರ್ನಾಟಕಕ್ಕೆ ಬಂದು ಎಲ್ಲರಿಗಿಂತ ಮೊದಲು ಟ್ವೀಟ್ ಮಾಡಬೇಕು ಗುರುತಿಸಿಕೊಳ್ಳಬೇಕು ಎಂಬ ಭರದಲ್ಲಿ ಹೀಗೆಲ್ಲಾ ಮಾಡಿದ್ದಾರೆ ಎಂದಿದ್ದಾರೆ.
ಹರಿಪ್ರಸಾದ್ ಟ್ವೀಟ್ ಏನು?
ಶಿಕ್ಷಣ ಸಚಿವರು ತಮ್ಮ ಸ್ವಂತ ಸಾಮಾಜಿಕ ಜಾಲತಾಣದ ನಿರ್ವಹಣೆಗೆ ಪಿ.ಪೋಲ್ ಅನಲಿಟಿಕಲ್ ಎಂಬ ಸಂಸ್ಥೆ ಪ್ರತಿ ತಿಂಗಳು 94,400 ರೂಪಾಯಿಯನ್ನು ಶಿಕ್ಷಣ ಇಲಾಖೆಯ ಹಣವನ್ನು ಪೋಲು ಮಾಡುತ್ತಿದ್ದಾರೆ. ಸರ್ಕಾರಕ್ಕೆ ಈಗಾಗಲೇ ತೆಗೆದುಕೊಳ್ಳುತ್ತಿರುವ 40 ಪರ್ಸೆಂಟ್ ಕಮಿಷನ್ ಸಾಲುತ್ತಿಲ್ಲವೆ ಎಂದು ಹರಿಪ್ರಸಾದ್ ಟ್ವೀಟ್ ಮಾಡಿದ್ದರು.
ಯಾವುದೇ ಸಮಸ್ಯೆ ಎದುರಾಗಲ್ಲ
ಇನ್ನು ಕೊಡಗು ಜಿಲ್ಲೆಯಲ್ಲಿ ಮಳೆಗಾಲ ನಿಭಾಯಿಸುವ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಎರಡು ಬಾರಿ ಭೂಕಂಪ ಆಗಿದ್ದರೂ ಭೂಮಿಯಲ್ಲಿ ಯಾವುದೇ ಬಿರುಕುಗಳು ಕಾಣಿಸಿಕೊಂಡಿಲ್ಲ. ಹೀಗಾಗಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ ಎಂದು ಕೊಡಗು ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಸಂಪಾಜೆ ಬಳಿ ಭೂಕಂಪ ಕೇಂದ್ರ
ಭೂಕಂಪ ತುಂಬಾ ಕಡಿಮೆ ತೀವ್ರತೆಯಲ್ಲಿ ಅಂದರೆ 2.3 ಮ್ಯಾಗ್ನಟ್ಯೂಡ್ ನಲ್ಲಿ ಆಗಿದೆ. ಭೂಕಂಪದ ಕೇಂದ್ರ ಬಿಂದು ಸಂಪಾಜೆ ಬಳಿಯೇ ಆಗಿದ್ದರಿಂದ ಜಿಲ್ಲೆಯ ಜನರಿಗೆ ಅದರ ಅನುಭವ ಬಂದಿದೆ. ಆದರೆ ಇದರಿಂದ ಯಾವುದೇ ತೊಂದರ ಇಲ್ಲ ಎಂದು ಹೇಳಿದ್ದಾರೆ.
ಭೂಕಂಪವಾದ್ರೂ ತೀವ್ರತೆ ಕಡಿಮೆ
2018 ರಲ್ಲೂ ಭೂಕಂಪವಾಗಿತ್ತು. ಆದರೆ ಆ ಸಂದರ್ಭ 3.7 ತೀವ್ರತೆಯ ಭೂಕಂಪವಾಗಿತ್ತು. ಆಗ ಭೂಮಿಯಲ್ಲಿ ಬಿರುಕುಗಳಾಗಿದ್ದವು. ನಂತರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ತೀವ್ರ ಮಳೆ ಸುರಿದಿತ್ತು. ಇದರಿಂದಾಗಿ ಜಿಲ್ಲೆಯಲ್ಲಿ ಭೂಕುಸಿತ ಮತ್ತು ಪ್ರವಾಹ ಎದರಾಗಿತ್ತು. ಆದರೆ ಈ ಬಾರಿ ಭೂಕಂಪವಾಗಿದ್ದರೂ ತೀವ್ರತೆ ಕಡಿಮೆ ಇದ್ದಿದ್ದರಿಂದ ಮತ್ತು ಭೂಮಿಯಲ್ಲಿ ಬಿರುಕು ಆಗಿಲ್ಲದೆ ಇರುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ.
ಇದನ್ನೂ ಓದಿ: Sudha Murthy: ನಾಯಕ ಪರರಿಗಾಗಿಯೇ ಬದುಕುತ್ತಾನೆ, ಆ ಗುಣ ಮೋದಿಯವರಲ್ಲಿದೆ! ಪ್ರಧಾನಿ ಬಗ್ಗೆ ಸುಧಾಮೂರ್ತಿ ಮೆಚ್ಚುಗೆ
ಒಂದು ವೇಳೆ ತೊಂದರೆ ಎದುರಾದರೂ ಸರ್ಕಾರ ಮತ್ತು ಜಿಲ್ಲಾಡಳಿತ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಎಲ್ಲವನ್ನು ನಿಭಾಯಿಸುತ್ತೇವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ