• Home
  • »
  • News
  • »
  • state
  • »
  • BC Nagesh: ಬಿಜೆಪಿ ಮತ, ಅಧಿಕಾರಕ್ಕಾಗಿ ಎಂದೂ ಪಾದಯಾತ್ರೆ ಮಾಡಿಲ್ಲ; ಬಿ ಸಿ ನಾಗೇಶ್ ಹೇಳಿಕೆ

BC Nagesh: ಬಿಜೆಪಿ ಮತ, ಅಧಿಕಾರಕ್ಕಾಗಿ ಎಂದೂ ಪಾದಯಾತ್ರೆ ಮಾಡಿಲ್ಲ; ಬಿ ಸಿ ನಾಗೇಶ್ ಹೇಳಿಕೆ

ಬಿ ಸಿ ನಾಗೇಶ್

ಬಿ ಸಿ ನಾಗೇಶ್

ಕಾಂಗ್ರೆಸ್ ಮುಖಂಡರು ಪಕ್ಷ ಬಿಡಲು ಮುಂದಾಗುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಜೋಡಿಸಲು ಮುಂದಾಗಿದೆ. ಅದಕ್ಕಾಗಿ ಭಾರತ್ ಜೋಡೋ ಯಾತ್ರೆಯಲ್ಲಿ ಆರ್ ಎಸ್ಎಸ್ ಮತ್ತು ಸಾವರ್ಕರ್ ಅವರನ್ನು ಬೈಯಲು ಶುರು ಮಾಡಿದ್ದಾರೆ ಎಂದರು.

  • News18
  • Last Updated :
  • Share this:

ಕೊಡಗು : ಬಿಜೆಪಿಯ ಯಾತ್ರೆಗಳನ್ನು (BJP Rally) ಕಾಪಿ ಮಾಡಿ ಕಾಂಗ್ರೆಸ್ ಪಕ್ಷ (Congress) ಈಗ ಪಾದಯಾತ್ರೆ ನಾಟಕ ಆಡುತ್ತಿದೆ. ಕಾಂಗ್ರೆಸ್​​ಗೆ ದೇಶದ ಜನತೆ ತಕ್ಕ ಉತ್ತರ ನೀಡಿ ಭಾರತ್ ಚೋಡೊ ಎನ್ನುವ ಸ್ಥಿತಿ ಮಾಡಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ (Minister BC Nagesh) ವ್ಯಂಗ್ಯವಾಡಿದರು. ಮಡಿಕೇರಿಯ (Madikeri) ಹೊರವಲಯದಲ್ಲಿ ಸರ್ಕಾರಿ ಗೋಶಾಲೆ ಉದ್ಘಾಟಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಕಾಂಗ್ರೆಸ್​​ನವರಿಗೆ ಜನರು ಹೇಗಿದ್ದಾರೆ, ಅವರ ಸ್ಥಿತಿ ಎನ್ನುವುದು ಗೊತ್ತಿಲ್ಲ. ಟೀ ಅಂಗಡಿ ಹೇಗಿರುತ್ತೆ, ಅವರ ಪರಿಸ್ಥಿತಿ ಎಂತಹದ್ದು ಅಂತ ಗೊತ್ತಿರಲಿಲ್ಲ. ಮಕ್ಕಳು ಹೇಗೆ ಬೆಳೆಯುತ್ತವೆ ಎನ್ನುವುದು ಗೊತ್ತಿರಲಿಲ್ಲ. ಹೀಗಾಗಿ ಕಾಂಗ್ರೆಸ್ ನವರು ಈಗ ಎಲ್ಲವನ್ನು ನೋಡುತ್ತಿದ್ದಾರೆ. ಆದರೆ ಬಿಜೆಪಿಯವರಿಗೆ (BJP) ಪಾದಯಾತ್ರೆಗಳು ಹೊಸದಲ್ಲ. ಮುರಳಿ ಮನೋಹರ ಜೋಷಿ ಅವರಾಗಲಿ, ಎಲ್ ಕೆ ಅಡ್ವಾಣಿ ಅವರಾಗಲಿ ಇಂತಹ ಹತ್ತಾರು ಯಾತ್ರೆಗಳನ್ನು ಮಾಡಿದ್ದರು. ಆದರೆ ಬಿಜೆಪಿ ಎಂದು ವೋಟಿಗಾಗಿ ಆಗಲಿ ಅಧಿಕಾರಕ್ಕಾಗಿ ಆಗಲಿ ಯಾತ್ರೆಗಳನ್ನು ಮಾಡಲಿಲ್ಲ. ನಮ್ಮ ಹಲವು ಯಾತ್ರೆಗಳನ್ನು ಅವರು ಕಾಪಿ ಮಾಡುತ್ತಿದ್ದಾರೆ ಅಷ್ಟೇ ಎಂದಿದ್ದಾರೆ.


ಕಾಂಗ್ರೆಸ್ ನವರು ಮತಕ್ಕಾಗಿ ಈಗ ಪಾದಯಾತ್ರೆ ಆರಂಭಿಸಿದ್ದಾರೆ ಎನ್ನುವುದು, ನಿನ್ನೆ ನನ್ನ ಕ್ಷೇತ್ರದಲ್ಲಿ ವಾಲ್ಮೀಕಿ ಅವರಿಗೆ ಮಾಡಿದ ಅಪಮಾನದಿಂದಲೇ ಗೊತ್ತಾಗುತ್ತದೆ. ನನ್ನ ಕ್ಷೇತ್ರದಲ್ಲಿ ಅವರು ಪಾದಯಾತ್ರೆ ಆರಂಭಿಸಿದರು. ಅದೇಕೋ ಐದು ಕಿಲೋ ಮೀಟರ್ ನಡೆಯಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ವೇದಿಕೆಯೊಂದನ್ನು ಹಾಕಿ, ವಾಲ್ಮೀಕಿ ಫೋಟೋ ಇಟ್ಟು ಕಾಯುತ್ತಿದ್ದರು. ಆದರೆ ರಾಹುಲ್ ಗಾಂಧಿ ಅತ್ತ ತಿರುಗಿ ನೋಡಿಲ್ಲ.


ವಾಲ್ಮೀಕಿ ಅವರಿಗೆ ಅಪಮಾನ


ಕೊನೆ ಪಕ್ಷ ರಾಜ್ಯದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಅಥವಾ ಡಿಕೆಶಿ ಇಲ್ಲವೇ ತುಮಕೂರು ಜಿಲ್ಲೆಯವರೇ ಆದ ಜಿ. ಪರಮೇಶ್ವರ್ ಅವರಾದರೂ ತಿರುಗಿ ನೋಡಲಿಲ್ಲ. ಆ ಮೂಲಕ ವಾಲ್ಮೀಕಿ ಅವರಿಗೆ ಮತ್ತು ಜನರಿಗೆ ಅಪಮಾನ ಮಾಡಿದ್ದಾರೆ ಎಂದರು.


BC Nagesh Statement, Karnataka Politics, Bharat Jodo Yatra Details, Kannada News, Karnataka News, ಬಿ ಸಿ ನಾಗೇಶ್ ಹೇಳಿಕೆ, ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ
ಬಿ ಸಿ ನಾಗೇಶ್


ಇಷ್ಟು ವರ್ಷ ರಾಜ್ಯದಲ್ಲಿ ಎಸ್​​ಸಿ, ಎಸ್​ಟಿ ಮೀಸಲಾತಿಯನ್ನು ಕಾಂಗ್ರೆಸ್ ಅವರಿಗೆ ಹೆಚ್ಚಿಸಲು ಆಗಿರಲಿಲ್ಲ. ನಮ್ಮ ಸರ್ಕಾರ ಅದನ್ನು ಮಾಡಿದೆ ಎಂದರು.


ಮುಸ್ಲಿಮರು ಕಾಂಗ್ರೆಸ್ ಬಿಡ್ತಿದ್ದಾರೆ


ಕಾಂಗ್ರೆಸ್ ಅನ್ನು ಮುಸಲ್ಮಾನರು ಬಿಡುವುದಿಲ್ಲ ಎಂದುಕೊಂಡಿದ್ದರು. ಆದರೆ ಮುಸ್ಲಿಮರು ಕಾಂಗ್ರೆಸ್ ಬಿಡಲು ಶುರು ಮಾಡಿದರು. ಜೊತೆಗೆ ಸಾಕಷ್ಟು ಕಾಂಗ್ರೆಸ್ ಮುಖಂಡರು ಪಕ್ಷ ಬಿಡಲು ಮುಂದಾಗುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಜೋಡಿಸಲು ಮುಂದಾಗಿದೆ. ಅದಕ್ಕಾಗಿ ಭಾರತ್ ಜೋಡೋ ಯಾತ್ರೆಯಲ್ಲಿ ಆರ್ ಎಸ್ಎಸ್ ಮತ್ತು ಸಾವರ್ಕರ್ ಅವರನ್ನು ಬೈಯಲು ಶುರು ಮಾಡಿದ್ದಾರೆ ಎಂದರು.


ಮಗ ಒಂಟಿಯಾಗಿದ್ದಕ್ಕೆ ಸೋನಿಯಾ ಗಾಂಧಿ ಬಂದಿದ್ರು


ಈ ಯಾತ್ರೆಯಲ್ಲಿ ನನ್ನ ಮಗ ಒಂಟಿ ಆಗುತ್ತಾನೆ ಅಂತ ಸೋನಿಯಾ ಗಾಂಧಿ ಅವರು ಬಂದು ಒಂದಷ್ಟು ಜನರನ್ನು ಸೇರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗವಾಡಿದರು. ಮುಂದೆ ಜನರು ಅವರಿಗೆ ತಕ್ಕ ಉತ್ತರ ನೀಡುತ್ತಾರೆ. ಆಗ ಭಾರತ್ ಜೋಡೋ ಅಲ್ಲ, ಭಾರತ್ ಛೋಡೋ ಎನ್ನುವಂತಹ ಸ್ಥಿತಿ ಮಾಡುತ್ತಾರೆ ಎಂದರು.


ಇದನ್ನೂ ಓದಿ:  Bharat Jodo Yatra: ಸಿದ್ದರಾಮಯ್ಯ ಆಯ್ತು ಇದೀಗ ಡಿಕೆಶಿ ಜೊತೆ ರಾಹುಲ್ ಗಾಂಧಿ​ ರನ್ನಿಂಗ್!


12ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ


ಕಾಂಗ್ರೆಸ್​ನ ಭಾರತ್ ಜೋಡೋ ಯಾತ್ರೆ (Bharat Jodo Yatra) 12ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಬೆಳಗ್ಗೆ ಚಿತ್ರದುರ್ಗ (Chitradurga) ಜಿಲ್ಲೆಯ ಹರ್ತಿಕೋಟೆಯಿಂದ ಪಾದಯಾತ್ರೆ ಶುರುವಾಗಲಿದ್ದು, ಸಾಣಿಕೆರೆ ಮತ್ತ ಸಿದ್ದಾಪುರ ಮಾರ್ಗವಾಗಿ ರಾತ್ರಿ ವೇಳೆಗೆ ಚಿತ್ರದುರ್ಗ ತಲುಪಲಿದೆ.


ಇದನ್ನೂ ಓದಿ:  Reservation: ಮುಸ್ಲಿಮರ ಮೀಸಲಾತಿ ತೆಗೆಯುವ ಚರ್ಚೆ ಅಂದ್ರು ಬೆಲ್ಲದ್, ಯತ್ನಾಳ್; ಇಬ್ಬರ ಹೇಳಿಕೆಗೆ ಸಿದ್ದರಾಮಯ್ಯ ಹೇಳಿದ್ದೇನು?


ಇನ್ನೂ ನಿನ್ನೆಯ ಪಾದಯಾತ್ರೆ ವೇಳೆ ಡಾಬಾದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮಿರ್ಚಿ ಕಾರ ಮಂಡಕ್ಕಿ, ಸ್ಯಾಂಡ್ವಿಚ್ ಸೇವಿಸಿದ್ರು. ಎಸ್​ಸಿ, ಎಸ್​ಟಿ ಮೀಸಲಾತಿ ಬಗ್ಗೆ ಕ್ರೆಡಿಟ್ ತೆಗೆದುಕೊಳ್ಳುತ್ತಿರುವ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

Published by:Mahmadrafik K
First published: