• Home
  • »
  • News
  • »
  • state
  • »
  • Minister B Sriramulu: ಸ್ನೇಹಿತನ ಪರ ನಿಂತ್ರಾ ಶ್ರೀರಾಮುಲು? ಬಿಜೆಪಿ ಪಕ್ಷ ಬಿಡ್ತಾರಾ ಸಚಿವ? IT ಭಯನಾ ಅಂತ ಕಾಲೆಳೆದ ಕಾಂಗ್ರೆಸ್​

Minister B Sriramulu: ಸ್ನೇಹಿತನ ಪರ ನಿಂತ್ರಾ ಶ್ರೀರಾಮುಲು? ಬಿಜೆಪಿ ಪಕ್ಷ ಬಿಡ್ತಾರಾ ಸಚಿವ? IT ಭಯನಾ ಅಂತ ಕಾಲೆಳೆದ ಕಾಂಗ್ರೆಸ್​

ಸಚಿವ ಶ್ರೀರಾಮುಲು/ ಮಾಜಿ ಜನಾರ್ದನ ರೆಡ್ಡಿ

ಸಚಿವ ಶ್ರೀರಾಮುಲು/ ಮಾಜಿ ಜನಾರ್ದನ ರೆಡ್ಡಿ

ಜನಾರ್ದನ ರೆಡ್ಡಿ ಹೊಸ ಪಕ್ಷಕ್ಕೆ ಶ್ರೀರಾಮುಲು ಸೇರ್ಪಡೆ ಆಗ್ತಾರಾ? ರೆಡ್ಡಿ ಸಹೋದರರು ಬಿಜೆಪಿ ತೊರೆಯುತ್ತಾರಾ ಅನ್ನೋ ಪ್ರಶ್ನೆಗಳಿಗೆ ಬಂತು ಮರುಜೀವ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ(Janardhana Reddy), ಸಾರಿಗೆ ಸಚಿವ ಶ್ರೀರಾಮುಲು (Minister Sriramulu ) ನಡುವಿನ ಇಬ್ಬರ ಗೆಳೆತನ (Friendship) ಎಂಥದ್ದು ಅಂತ ಎಲ್ಲರಿಗೂ ಗೊತ್ತು. ಈ ನಡುವೆ ರಾಜಕೀಯವಾಗಿ ಇಬ್ಬರೂ ಸ್ವಲ್ಪ ದೂರ ಆಗಿದ್ದರು. ಆದರೆ ರೆಡ್ಡಿ ಹೊಸ ಪಕ್ಷಕ್ಕೆ (New Political Party) ಜೈಕಾರ ಹಾಕಿ ಶ್ರೀರಾಮುಲು ಟ್ವಿಟರ್ ಖಾತೆಯಿಂದ ಟ್ವೀಟ್​ ಮಾಡಿದ್ದು, ಬಳಿಕ ಆ ಟ್ವೀಟ್​ ಡಿಲೀಟ್​ ಮಾಡಿದ್ದಾರೆ. ಇದನ್ನು ನೋಡಿದ ಕಾಂಗ್ರೆಸ್ (Congress)​ ಐಟಿ (IT Department) ಭಯನಾ ಅಂತ ಶ್ರೀರಾಮುಲು ಅವರ ಕಾಲೆಳೆದಿದೆ. ಹೌದು, ಗಣಿ ಉದ್ಯಮಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ (Kalyan Praja Pragathi Paksha) ಕಟ್ಟಿ ಭರ್ಜರಿ ಯಾತ್ರೆ ಮಾಡುತ್ತಿದ್ದಾರೆ. ಇದರಿಂದ ಸಿಟ್ಟಾಗಿರುವ ಶ್ರೀರಾಮುಲು, ಕುಚುಕು ಗೆಳೆಯ ರೆಡ್ಡಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಇದೆಲ್ಲಾ ಸುಳ್ಳು, ರೆಡ್ಡಿ ಹೊಸ ಪಕ್ಷಕ್ಕೆ ಪರೋಕ್ಷವಾಗಿ ಶ್ರೀರಾಮುಲು ಬೆಂಗಾವಲಾಗಿ ನಿಂತಿದ್ದಾರೆ. ಹೀಗಂತ ನಾವ್​ ಹೇಳುತ್ತಿಲ್ಲ, ಶ್ರೀರಾಮುಲು ಅವರ ಅಧಿಕೃತ ಟ್ವಿಟರ್​ ಖಾತೆಯಿಂದ (Twitter Account) ಮಾಡಿರುವ ಟ್ವೀಟ್ ಹೇಳುತ್ತಿದೆ.


ಶ್ರೀರಾಮುಲು ಟ್ವೀಟ್​ ನಿಜನಾ?


ಗಾಲಿ ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆಗೆ ಸಿಂಧನೂರಿನ ಮಹಾಜನತೆಯನ್ನ ಹೃದಯಪೂರ್ವಕವಾಗಿ ಆಹ್ವಾನಿಸುತ್ತೇನೆ. ಇಂಥದ್ದೊಂದು ಟ್ವೀಟ್​​ ಈಗ ವೈರಲ್​ ಆಗಿದೆ. ವೈರಲ್​ ಜೊತೆಗೆ ಕಾಂಗ್ರೆಸ್​ಗೂ ಆಹಾರ ಆಗಿದೆ.


ಇದನ್ನೂ ಓದಿ: Janardhan Reddy: ಜನಾರ್ದನ ರೆಡ್ಡಿ ಎಂಟ್ರಿಯಿಂದ ರಂಗೇರಿದ ಗಂಗಾವತಿ ವಿಧಾನಸಭಾ ಅಖಾಡ; ತಲೆಕೆಳಗಾಗುತ್ತಾ ರಾಜಕೀಯ ನಾಯಕರ ಲೆಕ್ಕಾಚಾರ?


ನಿಮ್ಮ ಮೇಲೂ ಐಟಿ ದಾಳಿ ಬೆದರಿಕೆ ಬಂತಾ?


'ಜನಾರ್ದನ ರೆಡ್ಡಿಯವರ ಪಕ್ಷಕ್ಕೆ ಕಾರ್ಯಕರ್ತರನ್ನು ಆಹ್ವಾನಿಸುವ ಟ್ವೀಟ್ ಮಾಡಿ ಡಿಲೀಟ್ ಮಾಡಿದ ಶ್ರೀರಾಮುಲು ಅವರೇ, ತಮ್ಮ ಆಪ್ತರ ಮೇಲಿನ ಐಟಿ ದಾಳಿಗೂ, ಈ ಟ್ವೀಟ್‌ಗೂ ಸಂಬಂಧವಿರುವಂತಿದೆ ಅಲ್ಲವೇ? ಡಿಲೀಟ್ ಮಾಡಿದ್ದೇಕೆ? ದೆಹಲಿಯಿಂದ ನಿಮ್ಮ ಮೇಲೂ ಐಟಿ ದಾಳಿ ಮಾಡುವ ಬೆದರಿಕೆ ಬಂತೇ? ರಾಮುಲು ಪಕ್ಷ ಬಿಡುವರೇ? ಎಂದು ಕಾಂಗ್ರೆಸ್‌ ಗೇಲಿ ಮಾಡಿದೆ. ಇದರ ಜೊತೆಗೆ ಶ್ರೀರಾಮುಲು ಅವರ ಟ್ವಿಟರ್ ಖಾತೆಗೂ ಕೂಡ ಟ್ಯಾಗ್​ ಮಾಡಿ ಕಾಂಗ್ರೆಸ್ ಪ್ರಶ್ನಿಸಿದೆ.
ನನ್ನ ಟ್ವಿಟರ್ ಹ್ಯಾಕ್ ಆಗಿದೆ ಎಂದ ಸಚಿವ ಶ್ರೀರಾಮುಲು


ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀರಾಮುಲು, ಅಲ್ಲಿ ಯಾವನೋ ಒಬ್ಬ ಟ್ವಿಟರ್​ ಖಾತೆಯನ್ನು ಹ್ಯಾಕ್​ ಮಾಡಿದ್ದಾನೆ. ನಮ್ಮ ಪಕ್ಷ ರಾಷ್ಟ್ರೀಯ ಪಕ್ಷ. ಈಗ ನನ್ನ ಟ್ವಿಟರ್ ಖಾತೆ ಹ್ಯಾಕ್ ಮಾಡಿರುವ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೀನಿ. ಈ ಬಗ್ಗೆ ದಯವಿಟ್ಟು ಕ್ರಮತೆಗೆದುಕೊಳ್ಳಿ ಅಂತ ಹೇಳಿದ್ದೀನಿ. ಹ್ಯಾಕ್ ಮಾಡಿರುವವನ ಮೇಲೆ ಗಮನಹರಿಸಿ ಕ್ರಮಕೈಕೊಳ್ಳಬೇಕು ಎಂದು ತಿಳಿಸಿದ್ದೇನೆ. ರಾಜ್ಯದಲ್ಲಿ ಬೇರೆ ಬೇರೆ ಸಣ್ಣ ಪುಟ್ಟ ಪಕ್ಷಗಳು ಬರುವುದರಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ಇದನ್ನೂ ಓದಿ:  Karnataka Eelection 2023: ಬಿಎಸ್​​ವೈ ಜೊತೆ ಪ್ರಧಾನಿ ಮೋದಿ 1 ಗಂಟೆ ಮಾತುಕತೆ; ಮತ್ತೆ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಮಣೆ!


ಜನಾರ್ದನ ರೆಡ್ಡಿ ಹೊಸ ಪಕ್ಷಕ್ಕೆ ಶ್ರೀರಾಮುಲು ಸೇರ್ಪಡೆ ಆಗ್ತಾರಾ? ರೆಡ್ಡಿ ಸಹೋದರರು ಬಿಜೆಪಿ ತೊರೆಯುತ್ತಾರಾ ಅನ್ನೋ ಪ್ರಶ್ನೆಗಳು ಕೆಲ ಸಮಯ ಮೂಲೆ ಸೇರಿದ್ದವು. ಈಗ ಮತ್ತೆ ಆ ಪ್ರಶ್ನೆಗಳಿಗೆ ಮರುಜೀವ ಬಂದಿದೆ. ಇದಕ್ಕೆ ಶ್ರೀರಾಮುಲು ಮತ್ತು ರೆಡ್ಡಿಯವ್ರೇ ಉತ್ತರ ಕೊಡ್ಬೇಕು.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು