ಕಾಮಾಲೆ ಕಣ್ಣಿಗೆ ಜಗತ್ತೆಲ್ಲವೂ ಹಳದಿ; ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಕುಟುಕಿದ ಸಚಿವ ಶ್ರೀರಾಮುಲು

ಕುಮಾರಸ್ವಾಮಿ ಸಿಎಂ ಆಗುವ ಮುನ್ನ ಒಂದು ರೀತಿ ಮಾತಾಡ್ತಾರೆ, ಸಿಎಂ ಆದ ನಂತರ ಒಂದು ರೀತಿ ಮಾತಾಡ್ತಾರೆ. ಇದೇ ಕಾರಣಕ್ಕೆ ಅವರ ಪಕ್ಷದ ಶಾಸಕರು ಸಿಡಿದೆದ್ದಿದ್ದು ಪಕ್ಷದಿಂದ ಹೊರ ಬಂದಿದ್ದಾರೆ. ಹೀಗಾಗಿ ಅಧಿಕಾರ ಕಳೆದುಕೊಂಡು ಹತಾಶರಾಗಿ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.

MAshok Kumar | news18-kannada
Updated:September 9, 2019, 3:29 PM IST
ಕಾಮಾಲೆ ಕಣ್ಣಿಗೆ ಜಗತ್ತೆಲ್ಲವೂ ಹಳದಿ; ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಕುಟುಕಿದ ಸಚಿವ ಶ್ರೀರಾಮುಲು
ಶ್ರೀರಾಮುಲು ಮತ್ತು ಹೆಚ್​.ಡಿ. ಕುಮಾರಸ್ವಾಮಿ.
  • Share this:
ಬೆಂಗಳೂರು (ಸೆಪ್ಟೆಂಬರ್.09); "ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಬಿಜೆಪಿ ಅಧಿಕಾರಕ್ಕೇರಿರುವುದು ಸಹಿಸಿಕೊಳ್ಳೋಕೆ ಆಗ್ತಾ ಇಲ್ಲ. ಅವರಿಗೆ ಅಧಿಕಾರದ ಹಪ ಹಪಿ ಅಧಿಕವಾಗಿದೆ. ಇದೇ ಕಾರಣಕ್ಕೆ ಆ ಮನುಷ್ಯ ಅಧಿಕಾರ ಕಳೆದುಕೊಂಡಾಗಿನಿಂದ ಹೀಗೆ ಮಾತಾಡ್ತಾ ಇದಾರೆ. ಕಾಮಾಲೆ ಕಣ್ಣಿಗೆ ಜಗತ್ತೆಲ್ಲವೂ ಹಳದಿ" ಎಂದು ಹೇಳುವ ಮೂಲಕ ಕುಮಾರಸ್ವಾಮಿ ವಿರುದ್ಧ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.

ಈ ಹಿಂದೆ ಹೇಳಿಕೆ ನೀಡಿದ್ದ ಕುಮಾರಸ್ವಾಮಿ "ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಯಾವೊಬ್ಬ ಸಚಿವರೂ ಪ್ರಮಾಣಿಕವಾಗಿಲ್ಲ" ಎಂದು ಹೇಳುವ ಮೂಲಕ ಬಿಜೆಪಿ ನಾಯಕರನ್ನು ಕೆಣಕಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಶ್ರೀರಾಮುಲು, “ಎರಡು ಬಾರಿ ಸಿಎಂ ಆದರೂ ಕುಮಾರಸ್ವಾಮಿಯವರಿಗೆ ಅವರ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳೋಕೆ ಆಗ್ತಿಲ್ಲ.

ಸಿಎಂ ಆಗುವ ಮುನ್ನ ಒಂದು ರೀತಿ ಮಾತಾಡ್ತಾರೆ, ಸಿಎಂ ಆದ ನಂತರ ಒಂದು ರೀತಿ ಮಾತಾಡ್ತಾರೆ. ಇದೇ ಕಾರಣಕ್ಕೆ ಅವರ ಪಕ್ಷದ ಶಾಸಕರು ಸಿಡಿದೆದ್ದಿದ್ದು ಪಕ್ಷದಿಂದ ಹೊರ ಬಂದಿದ್ದಾರೆ. ಹೀಗಾಗಿ ಅಧಿಕಾರ ಕಳೆದುಕೊಂಡು ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಇನ್ನೂ ಬಿಜೆಪಿ ಅಧಿಕಾರಕ್ಕೇರಿರುವುದು ಅವರಿಂದ ಸಹಿಸಿಕೊಳ್ಳೋಕೆ ಆಗ್ತಾ ಇಲ್ಲ. ಕಾಮಾಲೆ ಕಣ್ಣಿಗೆ ಜಗತ್ತೆಲ್ಲವೂ ಹಳದಿ” ಎಂದು ಹೇಳುವ ಮೂಲಕ ತೀಕ್ಷ್ಣವಾಗಿ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಆರ್ಥಿಕ ಸಂಕಷ್ಟದಲ್ಲಿ ರಾಜ್ಯ ಸರ್ಕಾರ, ಖಜಾನೆ ಖಾಲಿ ಖಾಲಿ; ಕೇಂದ್ರದಿಂದ ನೆರೆ ಪರಿಹಾರ ಬರದಿದ್ದರೆ ಎದುರಾಗಲಿದೆ ಮತ್ತಷ್ಟು ಸಮಸ್ಯೆ!

ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಕುರಿತು ಮಾತನಾಡಿದ ಅವರು, “ಸರ್ಕಾರಕ್ಕೆ ಯಾವುದೇ ರೀತಿಯ ಹಣಕಾಸು ಕೊರತೆ ಇಲ್ಲ. ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡುತ್ತಿದೆ. ಪರಿಹಾರ ಕಾರ್ಯಗಳಿಗೆ ಯಾವುದೇ ತೊಂದರೆ ಇಲ್ಲ. ಆರ್ಥಿಕ ಪರಿಸ್ಥಿತಿ ಕೂಡ ಸದೃಢವಾಗಿದೆ. ನಮ್ಮ ಸರ್ಕಾರದಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಯಾವುದೇ ಕಾಮಗಾರಿಗಳು ನಿಂತಿಲ್ಲ. ಹೊಸ ಕಾಮಗಾರಿಗಳಿಗೂ ಹಣ ಬಿಡುಗಡೆ ಸಮಸ್ಯೆ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

First published:September 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ