ಡಿಸಿಎಂ ಸ್ಥಾನಕ್ಕಾಗಿ ದೇವರ ಮೊರೆ ಹೋದ ಸಚಿವ ಬಿ. ಶ್ರೀರಾಮುಲು - ಗಡೇ ದುರ್ಗಾದೇವಿಗೆ ವಿಶೇಷ ಪೂಜೆ

ಮಂದಿರದ ಅರ್ಚಕ ಮರಿಸ್ವಾಮಿ ನೇತೃತ್ವದಲ್ಲಿ ಗರ್ಭಗುಡಿಯೊಳಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರು. ಮೂಲಗಳ ಪ್ರಕಾರ ಡಿಸಿಎಂ ಸ್ಥಾನಕ್ಕಾಗಿ ಹಾಗೂ ರಾಜಕೀಯದಲ್ಲಿ ಉನ್ನತ ಸ್ಥಾನ ಹಾಗೂ ದೇಶದಲ್ಲಿ ಕೊರೋನಾ ಮುಕ್ತಿ ಹೊಂದಿ ಜನರಿಗೆ ಒಳಿತಾಗಲಿ ಎಂದು ಪೂಜೆ ಮಾಡಿದ್ದಾರಂತೆ.

ಗಡೇ ದುರ್ಗಾದೇವಿಗೆ ಶ್ರೀರಾಮುಲು ವಿಶೇಷ ಪೂಜೆ

ಗಡೇ ದುರ್ಗಾದೇವಿಗೆ ಶ್ರೀರಾಮುಲು ವಿಶೇಷ ಪೂಜೆ

  • Share this:
ಯಾದಗಿರಿ(ಸೆ.17): ಒಂದು ಕಡೆ ಸಚಿವ ರಮೇಶ್ ಜಾರಕಿಹೊಳಿ ಅವರು ಡಿಸಿಎಂ ಸ್ಥಾನ ಗಿಟ್ಟಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ‌ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದರೆ, ಮತ್ತೊಂದೆಡೆ ಅದೆ ಸಮುದಾಯದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಇದೇ ಹುದ್ದೆಗಾಗಿ ಭಾರೀ ಸರ್ಕಸ್​ ಮಾಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಕಣ್ಣು ಹಾಕಿದ ಡಿಸಿಎಂ ಸ್ಥಾನವನ್ನು ತಾವು ಪಡೆಯಲು ಈಗ ದೇವರ ಮೊರೆ ಹೋಗಿದ್ದಾರೆ. ಶಕ್ತಿ ದೇವತೆಯಾದ ಗಡೇ ದುರ್ಗಾದೇವಿಯ ಮೊರೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಳ ಗ್ರಾಮದ ಗಡೇ ದುರ್ಗಾದೇವಿಯು ಶಕ್ತಿ ದೇವತೆಯಾಗಿದ್ದು ದೇವಿಯಗೆ ಪೂಜೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರೆ ಒಳಿತಾಗಿದ ನಿದರ್ಶನಗಳು ಇವೆ. ಹೀಗಾಗಿ ಸಚಿವ ಬಿ.ಶ್ರೀರಾಮುಲು‌ ಅವರು ದೇವಿಯ ಅರ್ಚಕ ಮರಿಸ್ವಾಮಿಯವರ ಸೂಚನೆಯಂತೆ ಇಂದು ಗಡೇ ದುರ್ಗಾದೇವಿ ಮಂದಿರಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.ಸಚಿವ ರಾಮುಲು ಅವರು ದೇವಿಗೆ  ರಾಜಕೀಯದಲ್ಲಿ ಒಳಿತಾಗಲಿ ಎಂದು ಬರೆದು ದೇವಿಯ ಮೂರ್ತಿಗೆ ಅರ್ಪಿಸಿ ಪೂಜೆ ಮಾಡಿದ್ದಾರೆ.

ಮಂದಿರದ ಅರ್ಚಕ ಮರಿಸ್ವಾಮಿ ನೇತೃತ್ವದಲ್ಲಿ ಗರ್ಭಗುಡಿಯೊಳಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರು. ಮೂಲಗಳ ಪ್ರಕಾರ ಡಿಸಿಎಂ ಸ್ಥಾನಕ್ಕಾಗಿ ಹಾಗೂ ರಾಜಕೀಯದಲ್ಲಿ ಉನ್ನತ ಸ್ಥಾನ ಹಾಗೂ ದೇಶದಲ್ಲಿ ಕೊರೋನಾ ಮುಕ್ತಿ ಹೊಂದಿ ಜನರಿಗೆ ಒಳಿತಾಗಲಿ ಎಂದು ಪೂಜೆ ಮಾಡಿದ್ದಾರಂತೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಅರ್ಚಕ‌ ಮರಿಸ್ವಾಮಿ ಮಾತನಾಡಿ, ಸಚಿವ ಬಿ.ಶ್ರೀರಾಮುಲು‌ ಕೊರೋನಾ ‌ಮುಕ್ತಿ ,ಹಾಗೂ ರಾಜಕೀಯದಲ್ಲಿ ಒಳಿತಾಗಲಿ ಎಂದು ಪೂಜೆ ಮಾಡಿದ್ದು ಮುಂದಿನ ದಿನಗಳಲ್ಲಿ ‌ಸಚಿವ ರಾಮುಲು ಅವರಿಗೆ ಉನ್ನತಸ್ಥಾನ ಸಿಗಲಿದೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ: ಕಾಶ್ಮೀರದ ವಿವಾದಾತ್ಮಕ ನಕ್ಷೆ ಪ್ರದರ್ಶಿಸಿದ ಪಾಕ್‌; SCO ಸದಸ್ಯ ರಾಷ್ಟ್ರಗಳ ಶೃಂಗಸಭೆಯಿಂದ ಹೊರನಡೆದ ಅಜಿತ್‌ ದೋವಲ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ‌ ಅವರು ಸಂಕಷ್ಟದಿಂದ ಪಾರಾಗಲು ಅದೆ ರೀತಿ ಉನ್ನತಸ್ಥಾನ ಸಿಗಲೆಂದು ಕಳೆದ ಫೆಬ್ರವರಿ ತಿಂಗಳಲ್ಲಿ ಗಡೇ ದುರ್ಗಾದೇವಿ ಜಾತ್ರೆಗೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿತು. ದೇವಿಯ ಕೃಪೆಯಿಂದ ಡಿಕೆಶಿಗೆ ಉನ್ನತ ಸ್ಥಾನ ಸಿಕ್ಕಿದೆ ಎಂದು ಅರ್ಚಕರ ಮಾತಾಗಿದೆ. ಇಂದು ಸಚಿವ ಶ್ರೀರಾಮುಲು ದೇವಿಯ ದರ್ಶನ ಪಡೆದಿದ್ದು ಮುಂದಿನ ದಿನಗಳಲ್ಲಿ ದೇವಿಯ ಕೃಪೆಯಿಂದ ರಾಮುಲುಗೆ ಯಾವ ಸ್ಥಾನ ಸಿಗಲಿದೆ ಎಂಬುದು ಕಾದು ನೋಡಬೇಕಾಗಿದೆ.
Published by:Ganesh Nachikethu
First published: