ಖಾಸಗಿ ಆಸ್ಪತ್ರೆಗಳಲ್ಲಿನ ಶೇ. 50ರಷ್ಟು ಹಾಸಿಗೆಗಳನ್ನು ಸರ್ಕಾರವೇ ಹಂಚಲಿದೆ; ಸಚಿವ ಬಿ.ಶ್ರೀರಾಮುಲು

ಜಿಲ್ಲೆಯಲ್ಲಿ KPME ಕಾಯ್ದೆ ಅನ್ವಯ ನೊಂದಣಿಯಾದ 33 ಖಾಸಗಿ ಆಸ್ಪತ್ರೆಗಳಿದ್ದು, ಇದರಲ್ಲಿ 1317 ಹಾಸಿಗೆ ಇವೆ. ಒಟ್ಟು ಬೆಡ್​​ಗಳಲ್ಲಿ ಶೇ. 50 ರಷ್ಟು ಹಾಸಿಗೆಯನ್ನು ಕೋವಿಡ್‍ಗೆ ಮೀಸಲು ಇರಿಸಬೇಕು. ಇದರಿಂದ 658 ಹಾಸಿಗೆಗಳು ಲಭ್ಯವಾಗಲಿವೆ ಎಂದರು.

ಸಚಿವ ಶ್ರೀರಾಮುಲು ನೇತೃತ್ಬದಲ್ಲಿ ನಡೆದ ಸಭೆ

ಸಚಿವ ಶ್ರೀರಾಮುಲು ನೇತೃತ್ಬದಲ್ಲಿ ನಡೆದ ಸಭೆ

  • Share this:
ಚಿತ್ರದುರ್ಗ(ಮೇ 12): ಕೊರೋನಾ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿನ ಹಾಸಿಗೆ ಸಾಮರ್ಥ್ಯದಲ್ಲಿ ಶೇ. 50 ರಷ್ಟು ಬೆಡ್​ಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಾಗಿದೆ. ಈ ಬೆಡ್​ಗಳನ್ನು ಸರ್ಕಾರದಿಂದಲೇ ಕೋವಿಡ್ ಚಿಕಿತ್ಸೆಗೆ ಹಂಚಿಕೆ ಮಾಡಲಾಗುತ್ತದೆ ಎಂದು ಚಿತ್ರದುರ್ಗದಲ್ಲಿ ಸಮಾಜ ಕಲ್ಯಾಣ ಹಾಗೂ  ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು  ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮಾತನಾಡಿದ ಅವರು, ಜಿಲ್ಲೆಯ KPME ಕಾಯ್ದೆ ಅನ್ವಯ ವಿಪತ್ತಿನ ಸಂದರ್ಭದಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳು ಹಾಸಿಗೆ ಸಾಮರ್ಥ್ಯದ  ಶೇ. 50 ರಷ್ಟು ಬೆಡ್​ಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಾಗಿದ್ದು, ಇದಕ್ಕೆ ಸರ್ಕಾರ ನಿರ್ದಿಷ್ಟ ದರವನ್ನು ನೀಡಲಿದೆ. ಸರ್ಕಾರದಿಂದ ಮೀಸಲಿರಿಸಿದ ಬೆಡ್​​ಗಳಿಗೆ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಹಾಸಿಗೆಯನ್ನು ಹಂಚಿಕೆ ಮಾಡಲಿದೆ. ಇದರ ಪ್ರಯೋಜನ ಪಡೆಯಲು ಕೊರೋನಾ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಂದಾಗ ಇಲ್ಲಿ ಹಾಸಿಗೆ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಆಸ್ಪತ್ರೆಯಲ್ಲಿನ ಸರ್ಕಾರದ ಕೋಟಾದ ಬೆಡ್‍ಗಳಿಗೆ ಹಂಚಿಕೆ ಮಾಡಲಾಗುತ್ತದೆ. ಇದನ್ನು ಜಿಲ್ಲೆಯಲ್ಲಿ ಖುದ್ದಾಗಿ ಮೇಲ್ವಿಚಾರಣೆ ನಡೆಸಲಾಗುತ್ತದೆ.  ಯಾರೂ ಸಹ ಬೆಡ್ ಇಲ್ಲ ಎಂದು ಸಂಕಷ್ಟವನ್ನು ಎದುರಿಸಬಾರದು ಎಂದರು.

100 ಹಾಸಿಗೆಯುಳ್ಳ ಕೋವಿಡ್ ಆಸ್ಪತ್ರೆ ಆರಂಭಿಸಿದ ಕೊಪ್ಪಳದ ಗವಿಮಠ ಸ್ವಾಮೀಜಿ

ಇನ್ನೂ ಜಿಲ್ಲೆಯಲ್ಲಿ KPME ಕಾಯ್ದೆ ಅನ್ವಯ ನೊಂದಣಿಯಾದ 33 ಖಾಸಗಿ ಆಸ್ಪತ್ರೆಗಳಿದ್ದು, ಇದರಲ್ಲಿ 1317 ಹಾಸಿಗೆ ಇವೆ. ಒಟ್ಟು ಬೆಡ್​​ಗಳಲ್ಲಿ ಶೇ. 50 ರಷ್ಟು ಹಾಸಿಗೆಯನ್ನು ಕೋವಿಡ್‍ಗೆ ಮೀಸಲು ಇರಿಸಬೇಕು. ಇದರಿಂದ 658 ಹಾಸಿಗೆಗಳು ಲಭ್ಯವಾಗಲಿವೆ. ಈಗಾಗಲೇ ಬಸವೇಶ್ವರ, ಬಸಪ್ಪ ಆಸ್ಪತ್ರೆ, ಅಕ್ಷಯ ಗ್ಲೋಬಲ್, ಮಲ್ಟಿ ಸ್ಪೆಷಾಲಿಟಿ, ವಾಯುಪುತ್ರ 5 ಆಸ್ಪತ್ರೆಗಳನ್ನು ಮಾತ್ರ ಗುರುತಿಸಿದ್ದು, ಇನ್ನುಳಿದ ಆಸ್ಪತ್ರೆಗಳನ್ನು ಸಹ ಗುರುತಿಸಲಾಗುತ್ತದೆ. ಸದ್ಯ  ಇವುಗಳಲ್ಲಿ ಶೇ 50 ರಷ್ಟು 166 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ ಎಂದರು.

ಸಿಟಿ ಸ್ಕ್ಯಾನ್‍ಗೆ 1500 ರೂ.ಗಳು ಮತ್ತು ಎಕ್ಸ್​​ ರೇಗೆ  ರೂ.250 ನಿಗದಿ ಮಾಡಲಾಗಿದೆ. ಇದಕ್ಕಿಂತ ಹೆಚ್ಚು ದರ ಪಡೆದಲ್ಲಿ ಅಂತಹ ಡಯೋಗ್ನಾಸ್ಟಿಕ್ ಸೆಂಟರ್, ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಜಿಲ್ಲಾ ಆಸ್ಪತ್ರೆಯಲ್ಲಿ ಈಗಿರುವ 175 ಬೆಡ್‍ಗಳ ಜೊತೆಗೆ 200 ಹೆಚ್ಚುವರಿ ಬೆಡ್‍ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಪ್ರತಿನಿತ್ಯ 6 ಸಾವಿರ ಲೀಟರ್ ಆಕ್ಸಿಜನ್ ಬೇಕಾಗುತ್ತದೆ. ಇತರೆ ಸಾರ್ವಜನಿಕ ಆಸ್ಪತ್ರೆ, ಡೆಡಿಕೇಟೆಡ್ ಕೋವಿಡ್ ಕೇರ್ ಸೆಂಟರ್​ಗಳು  ಸೇರಿದಂತೆ ಒಟ್ಟು 16,154 ಲೀಟರ್ ಆಕ್ಸಿಜನ್ ಬೇಕಾಗಿದ್ದು, ಸುಮಾರು 15000 ಲೀಟರ್​​ನಷ್ಟು ಪೂರೈಕೆಯಾಗುತ್ತಿದೆ. ಕೊರತೆಯಾಗುವ ಆಕ್ಸಿಜನ್ ಪೂರೈಕೆಗೆ ಕ್ರಮ ವಹಿಸಲಾಗುತ್ತದೆ ಎಂದಿದ್ದಾರೆ.

SDRF ನಿಂದ ಜಿಲ್ಲೆಗೆ 20 ಕೋಟಿ ಮಂಜೂರಾಗಿದ್ದು, ಇದರಲ್ಲಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಇದು ನಿರ್ಮಾಣವಾಗಲಿದೆ. ಅಲ್ಲದೆ ಪ್ರತಿ ತಾಲ್ಲೂಕಿನಲ್ಲೂ ಉತ್ಪಾದನಾ ಘಟಕ ಸ್ಥಾಪನೆ ಸೇರಿದಂತೆ ಜಿಲ್ಲೆಯಲ್ಲಿನ ಸ್ಟೀಲ್ ಇಂಡಸ್ಟ್ರೀಸ್‍ಗಳಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲು ಉತ್ತೇಜಿಸಲಾಗುತ್ತದೆ ಎಂದು ಹೇಳಿದ್ದಾರೆ.
Published by:Latha CG
First published: