ಮತ್ತೆ ಚಿಗುರಿದ ಬಳ್ಳಾರಿ ಏರ್ ಪೋರ್ಟ್ ಕನಸು; ಸ್ನೇಹಿತ ರೆಡ್ಡಿ ಆಸೆ ಈಡೇರಿಸಲು ಮುಂದಾದ ಶ್ರೀರಾಮುಲು

2009 ರಲ್ಲಿ ಛಲಬಿಡದ ರೈತ ಹೋರಾಟಗಾರರು ಹೈಕೋರ್ಟ್ ಮೊರೆ ಹೋಗಿ ಕೊನೆಗೂ ಏರ್​ಪೋರ್ಟ್​ ಕೆಲಸಕ್ಕೆ ತಡೆ ತಂದಿದ್ದರು. 26 ರೈತರ 80 ಎಕರೆ ಭೂಮಿಯ ನೋಟಿಫಿಕೇಷನ್ ರದ್ದಾಗಿತ್ತು. ಈಗ ಮತ್ತೆ ನೋಟಿಫಿಕೇಷನ್ ರದ್ದಾಗಿರುವ ಭೂಮಿಯನ್ನ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ.

ಶ್ರೀರಾಮುಲು, ಜನಾರ್ಧನ ರೆಡ್ಡಿ.

ಶ್ರೀರಾಮುಲು, ಜನಾರ್ಧನ ರೆಡ್ಡಿ.

  • Share this:
ಬಳ್ಳಾರಿ; ಗಣಿನಾಡು ಬಳ್ಳಾರಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂದು ರೆಡ್ಡಿ ಸಹೋದರರು ಕನಸು ಕಂಡಿದ್ದರು. ಇದಕ್ಕಾಗಿ 2009 ರಲ್ಲಿ ಸಚಿವರಾಗಿದ್ದ ಜನಾರ್ದನರೆಡ್ಡಿ ರೈತರ ವಿರೋಧದ ನಡುವೆಯೂ ನೂರಾರು ಎಕರೆ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಂಡಿದ್ದರು. ಆದರೆ, ಕೆಲ ರೈತರು ನ್ಯಾಯಾಲಯದ ಮೆಟ್ಟೀಲೇರಿದ್ದರಿಂದ ಇದಕ್ಕೆ ತಾತ್ಕಲಿಕ ಬ್ರೇಕ್ ಬಿದ್ದಿತ್ತು. ಇದೀಗ ಬಿಜೆಪಿ ಸರ್ಕಾರದಲ್ಲಿ ಸ್ನೇಹಿತ ರೆಡ್ಡಿ ಕನಸು ನನಸು ಮಾಡಲು ಸಚಿವ ಶ್ರೀರಾಮುಲು ಮತ್ತೆ ಏರ್ ಪೋರ್ಟ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ.

ಗಣಿನಾಡು ಬಳ್ಳಾರಿ ತಾಲೂಕಿನ  ಚಾಗನೂರು-ಸಿರವಾರ ಗ್ರಾಮಗಳ ರೈತರ ಭೂಮಿಯಲ್ಲಿ ಏರ್ ಪೋರ್ಟ್ ನಿರ್ಮಾಣ ಮಾಡಬೇಕು ಎನ್ನುವ ಉದ್ದೇಶದಿಂದ ಕಳೆದ ಬಿಜೆಪಿ ಸರ್ಕಾರ 2009ರಲ್ಲಿ 900 ಎಕರೆ ಕೃಷಿ ಭೂಮಿಯನ್ನ ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿತ್ತು. ಆದರೆ, ಕೃಷಿ ನೀರಾವರಿ ಭೂಮಿಯನ್ನ ನೀಡಲು ಒಪ್ಪದ ಕೆಲ ರೈತರು ಹೋರಾಟ ಸಮಿತಿ ಕಟ್ಟಿಕೊಂಡು ಅಂದಿನ ಸರ್ಕಾರದ ವಿರುದ್ದ ಹೋರಾಟ ನಡೆಸಿದ್ದರು. ಆ ರೈತರ ಹೋರಾಟ ಇಡೀ ದೇಶದ ಗಮನ ಸೆಳೆದಿತ್ತು. ರೈತರ ಹೋರಾಟದ ನಡುವೆಗೂ ಸರ್ಕಾರ ಬಲವಂತವಾಗಿ 780 ಎಕರೆ ಭೂಮಿಯನ್ನ ವಶಪಡಿಸಿಕೊಂಡಿತ್ತು.

ಆದರೆ, ಛಲಬಿಡದ ರೈತ ಹೋರಾಟಗಾರರು ಹೈಕೋರ್ಟ್ ಮೊರೆ ಹೋಗಿ ಕೊನೆಗೂ ಏರ್​ಪೋರ್ಟ್​ ಕೆಲಸಕ್ಕೆ ತಡೆ ತಂದಿದ್ದರು. 26 ರೈತರ 80 ಎಕರೆ ಭೂಮಿಯ ನೋಟಿಫಿಕೇಷನ್ ರದ್ದಾಗಿತ್ತು. ಈಗ ಮತ್ತೆ ನೋಟಿಫಿಕೇಷನ್ ರದ್ದಾಗಿರುವ ಭೂಮಿಯನ್ನ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದಕ್ಕೂ ಕೂಡ ರೈತರ ನ್ಯಾಯಾಲಯದ ಮೊರೆ ಹೋಗಿದ್ದು, ಈ ವಿಚಾರ ನ್ಯಾಯಲಯದ ಹಂತದಲ್ಲಿದೆ. ಈಗಿರುವಾಗ ರಾಜ್ಯ ಸರ್ಕಾರ ಈ ಪ್ರದೇಶದಲ್ಲಿ ಏರ್ ಪೋರ್ಟ್ ಇಲ್ಲವೇ ಏರ್ ಸ್ಟ್ರಿಪ್ ನಿರ್ಮಾಣ ಮಾಡಲು ಮುಂದಾಗಿದೆ.

ಈ ಸಂಬಂಧ ಕೆಎಸ್ ಎಸ್ ಐಡಿಎಲ್ ( karnataka state small industries development corporation) ಸರ್ಕಾರಕ್ಕೆ ಫಿಜಿಬಲ್ಸ್ ಬಗ್ಗೆ ಸರ್ಕಾರಕ್ಕೆ ಪ್ರಾಥಮಿಕ ವರದಿ ನೀಡಿದೆ. ಈ ಪ್ರದೇಶದಲ್ಲಿ ಏರ್ ಪೋರ್ಟ್ ಇಲ್ಲವೇ ಏರ್ ಸ್ಟ್ರಿಪ್ ನಿರ್ಮಾಣ ಮಾಡ್ಬೇಕು ಎನ್ನುವ ಬಗ್ಗೆ ಸರ್ಕಾರದಿಂದ ಅನುಮೋದನೆ ಸಿಕ್ಕ ಬಳಿಕ ಟೆಂಡರ್ ಹಾಗೂ ಡಿಪಿಆರ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಹೇಳುತ್ತಿದ್ದಾರೆ.

ಬಳ್ಳಾರಿಯ ಚಾಗನೂರು-ಸಿರವಾರ ಗ್ರಾಮಗಳ ಭೂಮಿ ನೀರಾವರಿ ಜೊತೆಗೆ ಫಲವತ್ತಾದ ಭೂಮಿ. ಪ್ರತಿ ವರ್ಷ ಇಲ್ಲಿ 2-3 ಬೆಳೆಗಳನ್ನ ಬೆಳೆಯಲಾಗುತ್ತಿದೆ. ಆದರೆ, ಇಂತಹ ಪ್ರದೇಶದಲ್ಲಿ ಏರ್ ಪೋರ್ಟ್ ನಿರ್ಮಾಣ ಮಾಡಲು ಈ ಭಾಗದ ಕೆಲ ರೈತರ ತೀವ್ರ ವಿರೋಧ ಕೂಡ ಇದೆ. ಈ ನಡುವೆ ಕಳೆದ ಬಿಜೆಪಿ ಸರ್ಕಾರ ಭೂಮಿಯನ್ನ ಸ್ವಾಧೀನಪಡಿಸಿಕೊಂಡಿತ್ತು. ಬಳ್ಳಾರಿಯಲ್ಲಿ ಸಾಕಷ್ಟು ಗಣಿ ಕಂಪನಿಗಳು, ಮೆದು ಕಬ್ಬಿಣ ಘಟಕಗಳು ಜಾಸ್ತಿ ಇರುವುದರಿಂದ ಜಿಲ್ಲೆಯಲ್ಲಿ ಏರ್ ಪೋರ್ಟ್ ಅವಶ್ಯಕ ಎಂದು ಮನಗಂಡಿದ್ದ ರೆಡ್ಡಿ ಸಹೋದರರು ಏರ್ ಪೋರ್ಟ್ ನಿರ್ಮಾಣಕ್ಕೆ ಕೈ ಹಾಕಿದ್ದರು.

ಆದರೆ, ಬಳಿಕ ಬಂದ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರ ಈ ಯೋಜನೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಈಗ ಮತ್ತೆ ಬಿಜೆಪಿ ಸರ್ಕಾರದ ಏರ್ ಪೋರ್ಟ್ ನಿರ್ಮಾಣದ ಕನಸು ಚಿಗುರೊಡೆದಿದೆ. ಆದರೆ, ನೀರಾವರಿ ಭೂಮಿಯಲ್ಲಿ ಏರ್ ಪೋರ್ಟ್ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಚಾಗನೂರು ಸಿರಿವಾರ ಹೋರಾಟ ಸಮಿತಿ ಸಂಚಾಲಕ ರೈತ ಹೋರಾಟಗಾರ, ಮುಖಂಡ ಮಲ್ಲಿಕಾರ್ಜುನ್ ರೆಡ್ಡಿ ಪಟ್ಟು ಹಿಡಿದಿದ್ದಾರೆ.

ಫಲವತ್ತಾದ ಭೂಮಿಯಲ್ಲಿ ಏರ್ ಪೋರ್ಟ್ ನಿರ್ಮಾಣ ಮಾಡೋದು ಬೇಡ ಎಂದು ಕೆಲ ರೈತರು ಈಗಲೂ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಲೇ ಇದ್ದಾರೆ. ಈ ನಡುವೆ ಈಗಿನ ಬಿಜೆಪಿ ಸರ್ಕಾರ ಏರ್ ಪೋರ್ಟ್ ನಿರ್ಮಾಣ ಮಾಡಲು ಮುಂದಾಗುತ್ತಿದೆ. ಆ ಮೂಲಕ ಮಾಜಿ ಸಚಿವ ಜನಾರ್ದನ ರೆಡ್ಡಿ ಕನಸು ಈಡೇರಿಸಲು ಬಿಜೆಪಿ ಸರ್ಕಾರ ಅದರಲ್ಲೂ ಸ್ನೇಹಿತ ಸಚಿವ ಶ್ರೀರಾಮುಲು ಮುಂದಾದಂತೆ ಕಂಡುಬಂದಿದೆ.

ಇದನ್ನೂ ಓದಿ : ನಾಳೆ ದೆಹಲಿಗೆ ಬಿಎಸ್​ವೈ; ಎರಡು ದಿನದಲ್ಲಿ ಸಂಪುಟ ವಿಸ್ತರಣೆ ಖಚಿತ, ಉಮೇಶ್ ಕತ್ತಿಗೂ ಸಚಿವ ಸ್ಥಾನ
First published: