B. Sriramulu: ದೇಶದಲ್ಲಿ ಜನ ಸಾಯಬೇಕು ಎಂಬುದು ಕಾಂಗ್ರೆಸ್ ಪಕ್ಷದ ಅಜೆಂಡಾ: ಸಚಿವ ಶ್ರೀರಾಮುಲು ಗಂಭೀರ ಆರೋಪ

ಕಾಂಗ್ರೆಸ್ ಪಕ್ಷ‌‌ ಜಾಯಮಾನದಲ್ಲಿ ಜನರಿಗಾಗಿ‌‌ ಪ್ಯಾಕೇಜ್ ನೀಡಿಲ್ಲ, ಸಿಎಂ ಬಿಎಸ್ ಯಡಿಯೂರಪ್ಪ 1250 ಕೋಟಿ ರೂ. ಪ್ಯಾಕೇಜ್ ನೀಡಿದ್ದಾರೆ, ಜೀವ ಉಳಿಸುವ ಕೆಲಸ ನಮ್ಮ‌ ಸರ್ಕಾರ ಮಾಡ್ತಿದೆ, ಜೀವ ಕಳೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಬಿ ಶ್ರೀರಾಮುಲು

ಬಿ ಶ್ರೀರಾಮುಲು

  • Share this:
ಚಿತ್ರದುರ್ಗ(ಮೇ 19): ರಾಜ್ಯದಲ್ಲಿ ಜನರು ಸಾಯುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್(KPCC President DK Shivakumar), ಸಿದ್ದರಾಮಯ್ಯ(Siddaramaiah) ಅವರೇ ಕಾರಣ. ಕರ್ನಾಟಕ ರಾಜಕಾರಣ(Karnataka Politics) ಹೊಲಸು ಆಗುತ್ತಿದೆ. ದೇವೇಗೌಡರು(HD Devegowda), ಕುಮಾರಸ್ವಾಮಿ(HD Kumaraswamy) ಈ ರೀತಿ ರಾಜಕಾರಣ ಮಾಡಿಲ್ಲ, ಲಜ್ಜೆಗೆಟ್ಟ, ಸಣ್ಣ ರಾಜಕಾರಣವನ್ನು ಯಾರೂ ಮಾಡಬಾರದು, ಕೇಂದ್ರ, ರಾಜ್ಯ ಸರ್ಕಾರಕ್ಕೆ‌ ಕೆಟ್ಟ ಹೆಸರು ತರಲು ಕಾಂಗ್ರೆಸ್​ನವರು(Congress) ರಾಜಕಾರಣ ಮಾಡುತ್ತಿದ್ದಾರೆ. ದೇಶದಲ್ಲಿ ಜನರ ಸಾವು ಆಗಬೇಕೆಂಬುದು ಎಂಬುದು ಕಾಂಗ್ರೆಸ್ ಪಕ್ಷದ ಅಜೆಂಡಾ ಎಂದು ಚಿತ್ರದುರ್ಗದಲ್ಲಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು(Social Welfare Minister B Sriramulu) ಕಾಂಗ್ರೆಸ್​ ನಾಯಕರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೋನಾ ಸ್ಥಿತಿಗತಿ ತಿಳಿಯಲು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಬಿ. ಶ್ರೀರಾಮುಲು, ರಾಜ್ಯ ಹಾಗೂ ದೇಶದಲ್ಲಿ ಕೊರೋನಾ ಸೋಂಕಿನಿಂದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್​ನವರು ರಾಜಕಾರಣ ಮಾಡುತ್ತಿದ್ದಾರೆ. ಆದರೆ ದೇಶದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ರಾಜ್ಯದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ರಾಜಕೀಯ ಮಾಡದೆ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದಾರೆ. ಆದ್ದರಿಂದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: R Ashok: ವಿಪಕ್ಷಗಳು ಸದಾ ಟೀಕೆ ಮಾಡುವ ಪ್ರವೃತ್ತಿಗೆ ಬಂದುಬಿಟ್ಟಿವೆ; ಸಚಿವ ಆರ್​.ಅಶೋಕ್​ ವಾಗ್ದಾಳಿ

ಇನ್ನು, ಕೋವಿಡ್ ಲಸಿಕೆಯನ್ನು(COVID Vaccine) ಇದು ಬಿಜೆಪಿ ಲಸಿಕೆ. ಇದರಿಂದ‌ ಉಪಯೋಗ ಇಲ್ಲ ಅಂತ ಲಸಿಕೆ ಬಗ್ಗೆ ಕಾಂಗ್ರೆಸ್​ನವರು ಅಪಪ್ರಚಾರ ಮಾಡಿದ್ದಾರೆ. ಆದರೆ ತಾವು ತಮ್ಮ‌ ಮನೆಯವರು ರಾತೋರಾತ್ರಿ ಲಸಿಕೆ ಹಾಕಿಸಿಕೊಳ್ಳುತ್ತಾರೆ. ಶಾಸಕರ ಅನುದಾನದಿಂದ ಹಣ ನೀಡುತ್ತೇವೆ ಅಂತ ಹೇಳ್ತಾರೆ. ಈಗಾಗಲೇ ನಾವು ಶಾಸಕರ ನಿಧಿಯನ್ನು ಕೊರೊನಾಗೆ ಬಳಸಲು ನಿರ್ಧರಿಸಿದ್ದೇವೆ. ಸ್ವಂತ ಹಣ ಕೊಡುವುದಿಲ್ಲ, ಶಾಸಕರ ನಿಧಿ ಸರ್ಕಾರದ ಹಣವದು. ಕಾಂಗ್ರೆಸ್ ಪಕ್ಷದಿಂದ ಒಂದು ರೂಪಾಯಿಯೂ ಕೊಟ್ಟಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಕೊರೋನಾದಿಂದ ಜನರ ಸಾವಿಗೆ ಕಾಂಗ್ರೆಸ್ ಪಕ್ಷದವರು, ಡಿಕೆಶಿ, ಸಿದ್ಧರಾಮಯ್ಯ ಅವರೇ ಕಾರಣ. ಕರ್ನಾಟಕ ರಾಜಕಾರಣ ಹೊಲಸು ಆಗುತ್ತಿದೆ, ದೇವೇಗೌಡರು, ಕುಮಾರಸ್ವಾಮಿ ಈ ರೀತಿ ರಾಜಕಾರಣ ಮಾಡಿಲ್ಲ. ಲಜ್ಜೆಗೆಟ್ಟ, ಸಣ್ಣ ರಾಜಕಾರಣ ಯಾರೂ ಮಾಡಬಾರದು, ಕೇಂದ್ರ, ರಾಜ್ಯ ಸರ್ಕಾರಕ್ಕೆ‌ ಕೆಟ್ಟ ಹೆಸರು ತರಲು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ದೇಶದಲ್ಲಿ ಜನರ ಸಾವು ಆಗಬೇಕೆಂಬುದು ಕಾಂಗ್ರೆಸ್ ಪಕ್ಷದ ಅಜೆಂಡಾ. ಕಾಂಗ್ರೆಸ್, ಡಿಕೆಶಿ, ಸಿದ್ಧರಾಮಯ್ಯ‌ ಮಾತನ್ನು ಯಾರೂ‌ ಕೇಳಬೇಡಿ. ಅವರಿಗೆ ಮೊದಲು ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು, ತಾವು ಸಿಎಂ ಆಗಬೇಕೆಂಬ ಅನ್ನೋ ಉದ್ದೇಶಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ‌‌ ಜಾಯಮಾನದಲ್ಲಿ ಜನರಿಗಾಗಿ‌‌ ಪ್ಯಾಕೇಜ್ ನೀಡಿಲ್ಲ, ಸಿಎಂ ಬಿಎಸ್ ಯಡಿಯೂರಪ್ಪ 1250 ಕೋಟಿ ರೂ. ಪ್ಯಾಕೇಜ್ ನೀಡಿದ್ದಾರೆ, ಜೀವ ಉಳಿಸುವ ಕೆಲಸ ನಮ್ಮ‌ ಸರ್ಕಾರ ಮಾಡ್ತಿದೆ, ಜೀವ ಕಳೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು  ವಿರೋಧ ಪಕ್ಷ ಕಾಂಗ್ರೆಸ್​ ನಾಯಕರ ವಿರುದ್ಧ   ವಾಗ್ದಾಳಿ ಮಾಡಿದ್ದಾರೆ.
Published by:Latha CG
First published: