ಪರಮೇಶ್ವರ್ ಕಟ್ಟಿದ ಪಕ್ಷಕ್ಕೆ ಜಿಗಿದು ಅವರನ್ನೇ ತುಳಿದ ಸಿದ್ಧರಾಮಯ್ಯ; ಶ್ರೀರಾಮುಲು ವಾಗ್ದಾಳಿ

ಸಿದ್ದರಾಮಯ್ಯ ಅವರಿಗೆ ರಾಜಕಾರಣದಲ್ಲಿ ಶಕ್ತಿಯಿಲ್ಲ. ಈ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಬಿಗಿ ಹಿಡಿದು ಮಾತನಾಡಲಿ. ವಿರೋಧ ಪಕ್ಷದ ನಾಯಕರಾಗಿ ಲಘುವಾಗಿ ಮಾತನಾಡಬಾರದು.

news18-kannada
Updated:November 22, 2019, 2:04 PM IST
ಪರಮೇಶ್ವರ್ ಕಟ್ಟಿದ ಪಕ್ಷಕ್ಕೆ ಜಿಗಿದು ಅವರನ್ನೇ ತುಳಿದ ಸಿದ್ಧರಾಮಯ್ಯ; ಶ್ರೀರಾಮುಲು ವಾಗ್ದಾಳಿ
ಸಚಿವ ಶ್ರೀರಾಮುಲು ಹಾಗೂ ಸಿದ್ದರಾಮಯ್ಯ
  • Share this:
ಬಳ್ಳಾರಿ(ನ.22): ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಪಕ್ಷದಿಂದ ಪಕ್ಷಕ್ಕೆ ಜಿಗಿದು ಪರಮೇಶ್ವರ್ ಕಟ್ಟಿದ ಪಕ್ಷಕ್ಕೆ ಹೋಗಿ ಅವರನ್ನೇ ತುಳಿದು ಹಾಕಿ ರಾಜಕಾರಣ ಮಾಡಿದ್ದಾರೆ ಎಂದು ಸಿದ್ದರಾಮಯ್ಯನವರ ವಿರುದ್ದ ಸಚಿವ ಬಿ. ಶ್ರೀರಾಮುಲು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರು ನಮ್ಮಂಥವರಿಗೆ ಮಾದರಿಯಾಗಬೇಕು. ಆದರೆ ನೀವು ಈ ರೀತಿ ಮಾತನಾಡಿ ಸಣ್ಣವರಾಗ್ತೀರಿ. ಸಿದ್ದರಾಮಯ್ಯ ಅವರಷ್ಟು ನಾನು ಪಾಪ್ಯುಲರ್ ಇಲ್ಲದೇ ಇರಬಹುದು. ಜನರು ನನ್ನ ಬೆಳೆಸುತ್ತಿದ್ದಾರೆ. ಅದರಿಂದ ಹತಾಶರಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

ವಿಜಯನಗರ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಚಿವ ಶ್ರೀರಾಮುಲು ಪೆದ್ದ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾನು ಪೆದ್ದನಾದ್ರೆ ನೀವು ಬುದ್ದಿವಂತನಾಗಿ ಏನು ಮಾಡಿದಿರಿ. ದಲಿತ ನಾಯಕರನ್ನು ಬೆಳೆಸಿದ್ರಾ? ನೀವು ಪಕ್ಷವನ್ನೇ ನಿರ್ನಾಮ ಮಾಡಿದಿರಿ. ದಲಿತ, ಹಿಂದುಳಿದ ನಾಯಕರನ್ನು ತುಳಿದಿರಿ. ಮೋಸ ಮಾಡಿ ವಂಚನೆ ಮಾಡಿ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಅವರನ್ನು ತುಳಿದಿದ್ದೀರಿ. ಈ ಬಗ್ಗೆ ನಾನು ಹೇಳುವುದಿಲ್ಲ. ಬದಲಾಗಿ ಅವರ ಶಿಷ್ಯರೇ ಹೇಳುತ್ತಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಅಧಿಕಾರ ಚಲಾಯಿಸಿದ್ದೀರಿ. ಸಿದ್ದರಾಮಯ್ಯ ಅವರಿಗೆ ಯಾವ ಜವಾಬ್ದಾರಿ ಕೊಟ್ಟಿದ್ದಾರೆ? ಅವರ ಜೊತೆ ಯಾರೂ ಇಲ್ಲ, ಏಕಾಂಗಿ. ನನಗೆ ಜವಾಬ್ದಾರಿ ಇದೆ  ಎಂದು ತಿಳಿಸಿದರು.

ಇದನ್ನೂ ಓದಿ : ಸಿದ್ಧರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ - ಕಾಂಗ್ರೆಸ್ ದಯನೀಯ ಸ್ಥಿತಿಗೆ ತಲುಪಿದ್ರೂ ಬುದ್ಧಿ ಬಂದಿಲ್ಲ; ಡಿ.ವಿ.ಸದಾನಂದಗೌಡ

ಸಿದ್ದರಾಮಯ್ಯ ಅವರಿಗೆ ರಾಜಕಾರಣದಲ್ಲಿ ಶಕ್ತಿಯಿಲ್ಲ. ಈ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಬಿಗಿ ಹಿಡಿದು ಮಾತನಾಡಲಿ. ವಿರೋಧ ಪಕ್ಷದ ನಾಯಕರಾಗಿ ಲಘುವಾಗಿ ಮಾತನಾಡಬಾರದು. ಸಿದ್ದರಾಮಯ್ಯ ವರ್ಸಸ್ ಶ್ರೀರಾಮುಲು ಆಗಲಿ. ಜಾತಿವಾರು ಸಂಘರ್ಷ ವಾಗಬಾರದು. ನಾವು ಕಷ್ಟಪಟ್ಟು ಸರ್ಕಾರ ರಚಿಸಿದ್ದೇವೆ ಎಂದರು.
First published: November 22, 2019, 12:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading