ಖಾತೆ ಬದಲಾವಣೆಗೆ ರಾಜ್ಯಪಾಲರ ಅಂಕಿತ; ಡಾ. ಸುಧಾಕರ್​ಗೆ ಬೋನಸ್, ಶ್ರೀರಾಮುಲುಗೆ ಮೈನಸ್!

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾಗಿದ್ದ ಬಿ. ಶ್ರೀರಾಮುಲು ಅವರಿಗೆ 2 ಖಾತೆಗಳ ಬದಲಾಗಿ ಸಮಾಜ ಕಲ್ಯಾಣ ಇಲಾಖೆ ನೀಡಲಾಗಿದೆ.

ಸಚಿವ ಶ್ರೀರಾಮುಲು

ಸಚಿವ ಶ್ರೀರಾಮುಲು

  • Share this:
ಬೆಂಗಳೂರು (ಅ. 12): ಸಚಿವ ಬಿ. ಶ್ರೀರಾಮುಲು ಅವರ ಬಳಿಯಿದ್ದ ಆರೋಗ್ಯ ಸಚಿವ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರಿಗೆ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಶಿಫಾರಸಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಖಾತೆ ಬದಲಾವಣೆಯ ಅಧಿಕೃತ ಪಟ್ಟಿ ಪ್ರಕಟವಾಗಿದ್ದು, ಸಚಿವ ಶ್ರೀರಾಮುಲು ಅವರ ಬಳಿ ಇದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಖಾತೆಯನ್ನೂ ವಾಪಾಸ್ ಪಡೆದಿರುವ ಸಿಎಂ ಯಡಿಯೂರಪ್ಪ ಎರಡು ಖಾತೆಗಳ ಬದಲಾಗಿ ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ನೀಡಿದ್ದಾರೆ. ಇದರಿಂದ ಡಾ. ಕೆ. ಸುಧಾಕರ್ ಅವರಿಗೆ ಬೋನಸ್ ಸಿಕ್ಕಂತಾಗಿದ್ದು, ಶ್ರೀರಾಮುಲು ಅವರಿಗೆ ಭಾರೀ ನಿರಾಸೆಯಾಗಿದೆ. ಖಾತೆ ಹಂಚಿಕೆ ಪಟ್ಟಿ ಹೊರಬೀಳುತ್ತಿದ್ದಂತೆ ತಮ್ಮ ಸರ್ಕಾರಿ ಕಾರನ್ನು ಬಿಟ್ಟು, ಖಾಸಗಿ ಕಾರಿನಲ್ಲಿ ಬಿ. ಶ್ರೀರಾಮುಲು ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿ ತೆರಳಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾಗಿದ್ದ ಬಿ. ಶ್ರೀರಾಮುಲು ಅವರಿಗೆ 2 ಖಾತೆಗಳ ಬದಲಾಗಿ ಸಮಾಜ ಕಲ್ಯಾಣ ಇಲಾಖೆ ನೀಡಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯನ್ನು ಸಿಎಂ ಯಡಿಯೂರಪ್ಪ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಈ ಮೂಲಕ ಸಿಎಂ ಯಡಿಯೂರಪ್ಪನವರ ಬಳಿ ಡಿಪಿಎಆರ್, ಹಣಕಾಸು, ಬೆಂಗಳೂರು ನಗರಾಭಿವೃದ್ಧಿ, ಗುಪ್ತಚರ ಇಲಾಖೆ, ಇಂಧನ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಣ್ಣ ಕೈಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಳಿದಂತಾಗಿದೆ.

Minister B Sriramulu Gets Social Welfare Department instead of Two Ministry in BS Yediyurappa Cabinet

ತನ್ನ ಖಾತೆ ಬದಲಾವಣೆ ಆಗುತ್ತಿದ್ದಂತೆ ಖಾಸಗಿ ವಾಹನದ ಮೊರೆಹೋದ ಶ್ರೀರಾಮುಲು, ಖಾಸಗಿ ಕಾರಿನಲ್ಲಿ ಬಂದು ಸಿಎಂ ಭೇಟಿ ಮಾಡಲು ಕಾಯುತ್ತಿದ್ದಾರೆ. ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲಿ ಬಂದ ಸಚಿವ ಶ್ರೀರಾಮುಲು ಯಡಿಯೂರಪ್ಪನವರಿಗಾಗಿ ಕಾವೇರಿ ನಿವಾಸದಲ್ಲಿ ಕಾಯುತ್ತಿದ್ದಾರೆ. ನನಗೆ ಯಾವ ಸಚಿವ ಸ್ಥಾನವೂ ಬೇಡ ಎಂದು ಶ್ರೀರಾಮುಲು ತಮ್ಮ ಆಪ್ತರ ಜೊತೆ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
Published by:Sushma Chakre
First published: