ಸಿದ್ದರಾಮಯ್ಯ ಸಾವಿನ ಕುರಿತ ಈಶ್ವರಪ್ಪ ಹೇಳಿಕೆಗೆ ಶ್ರೀರಾಮುಲು ಖಂಡನೆ

ಉಪಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯ ಅವರ ಸ್ಥೈರ್ಯ ಕುಗ್ಗಿಸುವ ಸಲುವಾಗಿ ಬಿಜೆಪಿ ನಾಯಕರು ಅವರ ವೈಯಕ್ತಿಕ ಟೀಕೆಗೆ ಇಳಿಯುತ್ತಿದ್ದಾರೆ. ಈ ಹಿಂದೆ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಸಿದ್ದರಾಮಯ್ಯ ಮಗನ ಸಾವಿನ ಕುರಿತು ಪ್ರಸ್ತಾಪಿಸಿದ್ದರು. ಈಗ ಈಶ್ವರಪ್ಪ ಸಿದ್ದರಾಮಯ್ಯ ಸಾವಿನ ಕುರಿತು ಮಾತನಾಡಿದ್ದಾರೆ

Seema.R | news18-kannada
Updated:November 30, 2019, 5:37 PM IST
ಸಿದ್ದರಾಮಯ್ಯ ಸಾವಿನ ಕುರಿತ ಈಶ್ವರಪ್ಪ ಹೇಳಿಕೆಗೆ ಶ್ರೀರಾಮುಲು ಖಂಡನೆ
ಶ್ರೀರಾಮುಲು
  • Share this:
ಮೈಸೂರು (ನ.30): ಸಿದ್ದರಾಮಯ್ಯ ಸಾವಿನ ಕುರಿತು ತಮ್ಮ ಪಕ್ಷದ ನಾಯಕ ಈಶ್ವರಪ್ಪ ನೀಡಿರುವ ಹೇಳಿಕೆಯನ್ನು ಸಚಿವ ಶ್ರೀರಾಮುಲು ಖಂಡಿಸಿದ್ದಾರೆ. 

ಹುಣಸೂರಿನಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಈಶ್ವರಪ್ಪನವರ ಹೇಳಿಕೆ ಸರಿಯಲ್ಲ. ಚುನಾವಣೆ ವೈಯಕ್ತಿಕ ಟೀಕೆಗೆ ಬಳಕೆಯಾಗಬಾರದು. ಯಾರ ಕುಟುಂಬ, ಸಾವಿನ ಕುರಿತೂ ಕೂಡ ಮಾತು ಬೇಡ ಎಂದಿದ್ದಾರೆ.

ಚುನಾವಣೆಯಲ್ಲಿ ಆರೋಪ ಪ್ರತ್ಯಾರೋಪ ಸರಿ. ಸಿದ್ದರಾಮಯ್ಯ, ಕುಮಾರಸ್ವಾಮಿ ನಮ್ಮನ್ನು ಬಯ್ಯಲಿ. ನಾವು ಕೂಡ ಬಯ್ಯೋಣ. ಆದರೆ ಕುಟುಂಬ ಹಾಗೂ ವೈಯಕ್ತಿಕ ಟೀಕೆ ಬೇಡ. ಚುನಾವಣೆ ಮುಗಿದ ಮೇಲೆ ನಾವೆಲ್ಲ ಒಳ್ಳೆಯ ಸ್ನೇಹಿತರೇ ಎಂದು ಕಿವಿಮಾತು ಹೇಳಿದರು.

 

ರಾಣೆಬೆನ್ನೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ವೀರಾವೇಷದ ಭಾಷಣ ಮಾಡಿದ ಕೆಎಸ್​ ಈಶ್ವರಪ್ಪ ಸಿದ್ದರಾಮಯ್ಯ ಇನ್ನೆಷ್ಟು ದಿನ ಬದುಕುತ್ತಾರಾ ಎಂದಿದ್ದರು. ಇದಕ್ಕೆ ಟ್ವೀಟರ್​ನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ನನ್ನ ಸಾವು ಬಯಸುವ ಈಶ್ವರಪ್ಪ ನೂರು ಕಾಲ ಬದುಕಲಿ ಎಂದು ಹಾರೈಸಿದರು.

ಇದನ್ನು ಓದಿ: ರಾಕೇಶ್​ ಸಾವಿಗೆ ನಾನೇಕೆ ಕಾರಣವಾಗಲಿ, ಎಂಟಿಬಿ ಹತಾಶೆಯಿಂದ ಹೇಳ್ತಿದ್ದಾರೆ; ಭೈರತಿ ಸುರೇಶ್

ಉಪಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯ ಅವರ  ಸ್ಥೈರ್ಯ ಕುಗ್ಗಿಸುವ ಸಲುವಾಗಿ ಬಿಜೆಪಿ ನಾಯಕರು ಅವರ ವೈಯಕ್ತಿಕ ಟೀಕೆಗೆ ಇಳಿಯುತ್ತಿದ್ದಾರೆ. ಈ ಹಿಂದೆ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಸಿದ್ದರಾಮಯ್ಯ ಮಗನ ಸಾವಿನ ಕುರಿತು ಪ್ರಸ್ತಾಪಿಸಿದ್ದರು. ರಾಕೇಶ್​ ಸಾವಿಗೆ ಭೈರತಿ ಸುರೇಶ್​ ಕುಮಾರ್​ ಕಾರಣ ಎಂದು ಅವರ ಮಗನ ಸಾವನ್ನು ಚುನಾವಣಾ ಪ್ರಚಾರದ ವೇಳೆ ಎಳೆದು ತಂದಿದ್ದರು.ಇದನ್ನು ಓದಿ: ‘ನನ್ನ ಸಾವು ಬಯಸುವ ಕೆ.ಎಸ್​ ಈಶ್ವರಪ್ಪ ನೂರು ವರ್ಷ ಬಾಳಲಿ‘; ಮಾಜಿ ಸಿಎಂ ಸಿದ್ದರಾಮಯ್ಯ

ಇನ್ನು ಕಳೆದ ವರ್ಷ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದಿದ್ದ ಶ್ರೀರಾಮುಲು ಆಪ್ತ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸಿದ್ದರಾಮಯ್ಯ ಮಗನ ಸಾವು ದೇವರು ಅವರಿಗೆ ನೀಡಿದ ಶಾಪ ಎಂದು ಟೀಕಿಸಿದ್ದರು. ಇದಕ್ಕೆ ಸೌಜನ್ಯಯುತವಾಗಿ ಉತ್ತರಿಸಿದ ಸಿದ್ದರಾಮಯ್ಯ, ನಿಮ್ಮ ಪಾಪಗಳಿಗಾಗಿ ದೇವರು ನಿಮ್ಮ ಮಕ್ಕಳಿಗೆ ಶಿಕ್ಷೆ ನೀಡದಿರಲಿ ಎಂದಿದ್ದರು. ಅಲ್ಲದೇ ಈ ರೀತಿ ಮಗನ ಸಾವು ಪ್ರಸ್ತಾಪಿಸಿದ್ದ ರೆಡ್ಡಿ ವಿರುದ್ಧ ಎಲ್ಲೆಡೆ ಆಕ್ರೋಶ ಕೂಡ ವ್ಯಕ್ತವಾಗಿತ್ತು.

(ವರದಿ: ಪುಟ್ಟಪ್ಪ)
First published: November 30, 2019, 5:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading