ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ಶೀಘ್ರ ನಿರ್ಧಾರ; ಸಚಿವ ಬಿ. ಶ್ರೀರಾಮುಲು

ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪನವರು ನಿರ್ಧಾರ ತೆಗೆದುಕೊಂಡಿಲ್ಲ, ಕೇಂದ್ರದ ನಾಯಕರ ಜೊತೆ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಯುತ್ತಿದೆ. ಆದಷ್ಟು ಶೀಘ್ರದಲ್ಲಿ ಸಿಎಂ ಯಡಯೂರಪ್ಪ ತೀರ್ಮಾನಿಸುತ್ತಾರೆ

ಸಚಿವ ಶ್ರೀರಾಮುಲು.

ಸಚಿವ ಶ್ರೀರಾಮುಲು.

  • Share this:
ಚಿತ್ರದುರ್ಗ(ನ.29): ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕುರಿತು ನಮ್ಮ ಮುಖ್ಯಮಂತ್ರಿಗಳು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಕೇಂದ್ರದ ನಾಯಕರ ಜೊತೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲಿಯೇ ಸಿಎಂ ಈ ಬಗ್ಗೆ ತೀರ್ಮಾನಿಸುತ್ತಾರೆ ಎಂದು ಚಿತ್ರದುರ್ಗದಲ್ಲಿ  ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಗ್ರಾಮ ಸ್ವರಾಜ್ ಸಮಾವೇಶ ಕುರಿತು  ಚಿತ್ರದುರ್ಗ ನಗರದ ಖಾಸಗಿ ಹೋಟೆಲ್​​ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಗೆ ಆಗಮಿಸಿದ್ದ ಸಚಿವ ಬಿ. ಶ್ರೀರಾಮುಲು ಮಾಧ್ಯಮಗಳ ಜೊತೆ ಮಾತನಾಡಿ, ಕೋರೋನಾ ಲಸಿಕೆ ಯಾರಿಗೆ ನೀಡಬೇಕು ಎಂದು ವಾರಿಯರ್ಸ್ ಪಟ್ಟಿಯನ್ನ  ಕೇಂದ್ರಕ್ಕೆ ಕಳುಹಿಸಿದ್ದೇವೆ. ಲಸಿಕೆ ಬರುವ ವೇಳೆಗೆ  ಮುನ್ನೆಚ್ಚರಿಕೆ  ವಹಿಸುವ ಕುರಿತು ತಂಡ ಮಾಡಿದ್ದೇವೆ, ಯಾವ ಯಾವ ಜಿಲ್ಲೆಗಳಲ್ಲಿ ಸ್ಟೋರೇಜ್ ಮಾಡಬೇಕು ಅನ್ನೋದರ ಕುರಿತು ಗಮನ ಹರಿಸಲಾಗಿದೆ ಎಂದು ಹೇಳಿದರು.

ಅಷ್ಟೆ ಅಲ್ಲದೇ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪನವರು ನಿರ್ಧಾರ ತೆಗೆದುಕೊಂಡಿಲ್ಲ, ಕೇಂದ್ರದ ನಾಯಕರ ಜೊತೆ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಯುತ್ತಿದೆ. ಆದಷ್ಟು ಶೀಘ್ರದಲ್ಲಿ ಸಿಎಂ ಯಡಯೂರಪ್ಪ ತೀರ್ಮಾನಿಸುತ್ತಾರೆ. ಯಾವುದೇ ತೀರ್ಮಾನವನ್ನೂ ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುತ್ತಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ನಮ್ಮ ಅಭಿಪ್ರಾಯ ಪಕ್ಷ ತೀರ್ಮಾನಿಸುವ ನಿರ್ಧಾರಕ್ಕೆ ನಾವು ಬದ್ದರಾಗಿರುತ್ತೇವೆ ಎಂದಿದ್ದಾರೆ.

ಇನ್ನೂ ಸರ್ಕಾರ ದಿವಾಳಿಯಾಗಿದೆ ಎಂಬ ಮಾಜಿ ಸಿಎಂ  ಸಿದ್ದರಾಮಯ್ಯ ಹೇಳಿಕೆಗೆ ತೀರುಗೇಟು ನೀಡಿದ್ದು, ಸರ್ಕಾರ ದಿವಾಳಿ ಆಗುವ ಪ್ರಶ್ನೆಯೇ ಇಲ್ಲ, ಕೋವಿಡ್ ಬಂದಿದ್ದ ವೇಳೆ ಸಿದ್ದರಾಮಯ್ಯ ಸರ್ಕಾರ ನಡೆಸಿದ್ದರೇ , ಇವತ್ತು ರಾಜ್ಯ ಯಾವ ಸ್ಥಿತಿಯಲ್ಲಿ ಇರುತ್ತಿತ್ತು ಅಂತ ಗೊತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇನ್ನು, ಈ ವಿಚಾರದಲ್ಲಿ ಬೇರೆ ಬೇರೆ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ವೇತನ ನೀಡಿಲ್ಲ , ಆದರೇ ನಮ್ಮ ರಾಜ್ಯದಲ್ಲಿ ಆ ರೀತಿ ಆಗಿಲ್ಲ, ಅಭಿವೃದ್ದಿಯೂ ಕುಂಟಿತ ಆಗಿಲ್ಲ. ಎಲ್ಲವನ್ನೂ ನಮ್ಮ ಸರ್ಕಾರ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದೆ ಎಂದರು.

ಡಿಸಿಸಿ ಬ್ಯಾಂಕ್ ಚುನಾವಣೆ: ಅವಿರೋಧ ಆಯ್ಕೆಯಲ್ಲಿ ಕಾಂಗ್ರೆಸ್ ಮೇಲುಗೈ; ಅಧಿಕಾರ ಹಿಡಿಯುವತ್ತ ಬಿಜೆಪಿ ಚಿತ್ತ

ರಾಜ್ಯದಲ್ಲಿ ವಿಜಯನಗರ ಪ್ರತ್ಯೇಕ ಜಿಲ್ಲೆ  ವಿಚಾರಕ್ಕೆ ಶ್ರೀರಾಮುಲು ಪಡೆಗೆ ಯಾವುದೇ ಹಿನ್ನಡೆ ಆಗುವ ಪ್ರಶ್ನೆಯೇ ಇಲ್ಲ, ವಿಜಯ ನಗರ ಜಿಲ್ಲೆ ಆಡಳಿತಾತ್ಮಕ ದೃಷ್ಠಿಯಿಂದ ಸಿಎಂ ತೀರ್ಮಾನ ತೆಗೆದುಕೊಂಡಿದ್ದಾರೆ.250 ಕಿಲೋ ಮೀಟರ್ ದೊಡ್ಡ ಜಿಲ್ಲೆಯಾಗಿತ್ತು, ಆದ್ದರಿಂದಲೇ ಮುಖ್ಯ ಮಂತ್ರಿ ಯಡಯೂರಪ್ಪ, ತೀರ್ಮಾನ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಮಶೇಖರ್ ರೆಡ್ಡಿಯವರನ್ನ ನಾವು ಮತ್ತು ಮುಖ್ಯ ಮಂತ್ರಿ ಯಡಯೂರಪ್ಪ ಸೇರಿ ಮನವೊಲಿಸಿದ್ದೇವೆ ಎಂದು ಹೇಳಿದರು.

ಮೊಳಕಾಲ್ಮೂರು ಜನರು 371 ಜೆ ಗೆ ಬೇಡಿಕೆ ಇಟ್ಟಿದ್ದಾರೆ, ಅದಕ್ಕೆ ಯಾವ ರೀತಿ ತೀರ್ಮಾನ ಮಾಡಬೇಕು ಎಂದು ಸಿಎಂ ಯಡಿಯೂರಪ್ಪ ನಿರ್ಧಾರ ಮಾಡುತ್ತಾರೆ. ಮೊಳಕಾಲ್ಮೂರು ಬಳ್ಳಾರಿಗೆ ಸೇರಿಸಬೇಕೋ ಬೇಡವೋ ಎಂದು ಅಂತಿಮವಾಗಿ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ ಎಂದರು.

ಸಿಎಂ ರಾಜಕೀಯ ಕಾರ್ಯದರ್ಶಿ NR ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಸಂತೋಷ್ ಯುವ ನಾಯಕರು, ಎಮೋಷನಲ್ ನಿರ್ಧಾರ ತೆಗೆದುಕೊಂಡ್ಡು ಜೀವಕ್ಕೆ ಅಪಾಯ ಆದರೆ ಕುಟುಂಬ ನೋವು ಪಡಬೇಕಾಗುತ್ತದೆ. ರಾಜಕಾರಣದಲ್ಲಿ ಏರುಪೇರು ಆಗ್ತಾ ಇರುತ್ತವೆ, ಯಾವತ್ತೂ ಯಾವುದೂ ಶಾಶ್ವತ ಅಲ್ಲ. ಅಂಥ ಸಮಯದಲ್ಲಿ ಬೇಗ ಸಂತೋಷ್ ಗುಣ ಮುಖರಾಗಬೇಕು. ದೇವರಲ್ಲಿ ಪ್ರಾರ್ಥಿಸುತ್ತೇನೆ,  ಏನು ಆಗಿದೆ ಎಂಬುದನ್ನ ಮಾನವೀಯತೆ ದೃಷ್ಟಿಯಿಂದ ಮಾತನಾಡಲ್ಲ ಎಂದರು.

ಸಂತೋಷ್ ಈ ರೀತಿ ಮಾಡಿಕೊಂಡಿದ್ದು, ಯಾರಿಗೂ ಕೂಡಾ ಸರಿಯಲ್ಲ, ಅದೇನು ಹೆಚ್ಚು ಕಡಿಮೆ ಆಗಿದ್ದರೂ ಕೂಡಾ ಆ ಬಗ್ಗೆ ನಾನು ಸಿಎಂ ಜೊತೆ ಮಾತನಾಡುತ್ತೇನೆ, ಯಾವುದೇ ಒತ್ತಡ ಸಂತೋಷ್ ಮೇಲೆ ಇಲ್ಲ. ಈ ರೀತಿಯ ನಿರ್ಧಾರಕ್ಕೂ ಮುನ್ನ ಒಮ್ಮೆ ಯೋಚನೆ ಮಾಡಬೇಕು ಎಂದು ವಿನಂತಿ ಮಾಡಿದ್ದಾರೆ.
Published by:Latha CG
First published: