HOME » NEWS » State » MINISTER B SRI RAMULU HITS OUT AT CONGRESS PARTY ON FARMERS PROTEST VTC LG

ಕಾಂಗ್ರೆಸ್ ಪಕ್ಷ​​ ರೈತರ ಪರ ಡೋಂಗಿ ರಾಜಕಾರಣ ಮಾಡುತ್ತಿದೆ; ಸಚಿವ ಬಿ.ಶ್ರೀರಾಮುಲು

ರಾಜಕೀಯ ಪಕ್ಷಗಳು ಸ್ವಾರ್ಥಕ್ಕಾಗಿ ಹೋರಾಟ ಮಾಡುತ್ತಿವೆ. ಬಂದಿರುವವರೆಲ್ಲಾ ರೈತರಾಗಿದ್ದರೂ ಕೂಡಾ ಪರ್ಸನಲ್ ಅಜೆಂಡಾ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಅಷ್ಟೆ ಅಲ್ಲದೇ ರೈತರ ಪರ ಯಾರೂ ಕೂಡಾ ಹೋರಾಟ ಮಾಡುತ್ತಿಲ್ಲ. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರವಾಗಿದೆ ಎಂದು ಹೇಳಿದ್ದಾರೆ.

news18-kannada
Updated:January 27, 2021, 8:53 AM IST
ಕಾಂಗ್ರೆಸ್ ಪಕ್ಷ​​ ರೈತರ ಪರ ಡೋಂಗಿ ರಾಜಕಾರಣ ಮಾಡುತ್ತಿದೆ; ಸಚಿವ ಬಿ.ಶ್ರೀರಾಮುಲು
ಸಚಿವ ಶ್ರೀರಾಮುಲು.
  • Share this:
ಚಿತ್ರದುರ್ಗ(ಜ.27): ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜಾರಿ‌ ಮಾಡಿದ ಕಾಯ್ದೆ ಒಳ್ಳೆಯ ಕಾಯ್ದೆ. ಇದನ್ನ ಸಹಿಸದ ರಾಜಕೀಯ ಪಕ್ಷಗಳು ಸ್ವಾರ್ಥಕ್ಕಾಗಿ ಹೋರಾಟ ಮಾಡುತ್ತಿವೆ. ಹೋರಾಟಕ್ಕೆ ಬಂದಿರುವವರೆಲ್ಲಾ ರೈತರಾಗಿದ್ದರೂ ಕೂಡಾ ಪರ್ಸನಲ್ ಅಜೆಂಡಾ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆಯೇ ಹೊರತು ಯಾರೂ ಕೂಡಾ ರೈತರ ಪರವಾದ ಹೋರಾಟ ಮಾಡುತ್ತಿಲ್ಲ ಎಂದು ಚಿತ್ರದುರ್ಗದಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಚಿತ್ರದುರ್ಗ ನಗರದಲ್ಲಿ ನಡೆದ 72 ನೇ ಗಣರಾಜ್ಯೋತ್ಸವ ದಿನದ ಧ್ವಜಾರೋಹಣ ಮಾಡಿದ ಸಚಿವ ಶ್ರೀರಾಮುಲು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡಿ, ದೇಶದ ಪ್ರತಿಯೊಬ್ಬ ರೈತರನ್ನ ಶಕ್ತಿಶಾಲಿಯಾಗಿಸಲು ಪ್ರಧಾನಿಗಳು ಒಂದು ಲಕ್ಷ ಕೋಟಿ ಬೆಂಬಲ ಬೆಲೆ ನಿಧಿ ನೀಡಿದ್ದಾರೆ. ಅದರಂತೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಸರ್ಕಾರ ರೈತರ ಪರ ಕಾಳಜಿ ವಹಿಸಿದೆ ಎಂದು ಹೇಳಿದ್ದಾರೆ.

ಅಲ್ಲದೇ ಈ ದೇಶದಲ್ಲಿ ರೈತರ ಪಾತ್ರ ಬಹಳ ದೊಡ್ಡದು. ಆದರೆ ಕಾಂಗ್ರೆಸ್ ನಾಯಕರು ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರೈತರನ್ನ ದುರ್ಬಳಕೆ ಮಾಡಿಕೊಳ್ಳುವ ಮೂಲಕ 60 ದಿನಗಳಿಂದ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜಭವನ ಚಲೋ ಮಾಡಿದ ಡಿಕೆಶಿಯವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಮುಂಚಿನಿಂದಲೂ ರೈತರ ಬಗ್ಗೆ ಹೋರಾಟ ಮಾಡಲಿಲ್ಲ. ಇಂದು ರೈತರ ಬಗ್ಗೆ ಮಾತನಾಡುತ್ತಿದ್ದಾರೆ.  ರಾಜಕಾರಣಕ್ಕಾಗಿ ರೈತರನ್ನ ಬಳಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ರೈತರ ಪರ ಕಾಂಗ್ರೆಸ್ ಪಕ್ಷ ಡೋಂಗಿ ರಾಜಕಾರಣ ಮಾಡುತ್ತಿದೆ. ಇದನ್ನ ನಾನು ತೀವ್ರವಾಗಿ  ಖಂಡಿಸುತ್ತೇನೆ ಎಂದು ವಾಗ್ದಾಳಿ ಮಾಡಿದರು.

ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಇಳಿಸಿದವರು ಭಯೋತ್ಪಾದಕರಿಗಿಂತ ಹೆಚ್ಚು; ಸಂಸದ ಎಸ್. ಮುನಿಸ್ವಾಮಿ ಆಕ್ರೋಶ

ಇನ್ನು, ಕೃಷಿ ಕಾಯ್ದೆಗಾಗಿ 18 ತಿಂಗಳ ಕಾಲ  ಸುಪ್ರೀಂ ಕೋರ್ಟ್ ನಲ್ಲಿ ತಡೆಯಾದೇಶ ಸಿಕ್ಕಿದೆ. ಇದೀಗ ಕಾಯ್ದೆ ಕುರಿತು ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನ ರಚನೆ ಮಾಡಿದ್ದು, ವರದಿ ಬಂದ ಬಳಿಕ ಕಾನೂನು ಜಾರಿ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ ಎಂದರು. ಪ್ರಧಾನಿ ಮೋದಿಯವರು ಜಾರಿ ಮಾಡಿದ ಕಾಯ್ದೆ ಒಳ್ಳೆಯ ಕಾಯ್ದೆ, ಆದರೇ ರಾಜಕೀಯ ಪಕ್ಷಗಳು ಸ್ವಾರ್ಥಕ್ಕಾಗಿ ಹೋರಾಟ ಮಾಡುತ್ತಿವೆ. ಬಂದಿರುವವರೆಲ್ಲಾ ರೈತರಾಗಿದ್ದರೂ ಕೂಡಾ ಪರ್ಸನಲ್ ಅಜೆಂಡಾ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಅಷ್ಟೆ ಅಲ್ಲದೇ ರೈತರ ಪರ ಯಾರೂ ಕೂಡಾ ಹೋರಾಟ ಮಾಡುತ್ತಿಲ್ಲ. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರವಾಗಿದೆ ಎಂದು ಹೇಳಿದ್ದಾರೆ.

ಇನ್ನೂ ರಾಜ್ಯ ಸರ್ಕಾರದಲ್ಲಿ ಖಾತೆ ಹಂಚಿಕೆ ಕುರಿತು ಹಲವು ಶಾಸಕ, ಸಚಿವರು ಅಸಮಾಧಾನ ಕುರಿತು ಪ್ರತಿಕ್ರಿಯಿಸಿ, ಯಾವುದೇ ಸರ್ಕಾರದಲ್ಲಿ ಖಾತೆ ಹಂಚಿಕೆ ವೇಳೆ ಸಮಾಧಾನ, ಅಸಮಾಧಾನ ಇದ್ದೇ ಇರುತ್ತದೆ. ಇದೊಂದು ಸಹಜ ಪ್ರಕ್ರಿಯೆ. ಈ ವಿಷಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ವಿವೇಚನೆ ಮೇಲೆ ಈ ರೀತಿ ಮಾಡಿರುತ್ತಾರೆ. ಸರ್ಕಾರದ ಮಂತ್ರಿ ಮಂಡಲದಲ್ಲಿರುವ ಎಲ್ಲಾ ಮಂತ್ರಿಗಳು ಸಮರ್ಥರು. ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದ್ದು, ಮಾಧುಸ್ವಾಮಿ, ಆನಂದ ಸಿಂಗ್ ರನ್ನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕರೆದಿದ್ದಾರೆ, ಇಂದು ಮಾಧುಸ್ವಾಮಿ,ಆನಂದ್ ಸಿಂಗ್ ಅವರು ಸಿಎಂ ಭೇಟಿ ಮಾಡುತ್ತಾರೆ ಬಳಿಕ ತೀರ್ಮಾನ ತಿಳಿಯುತ್ತದೆ ಎಂದಿದ್ದಾರೆ.
Published by: Latha CG
First published: January 27, 2021, 8:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories