ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರತೆಯಿಲ್ಲದ ರಾಜಕಾರಣಿ ; ಸಚಿವ ಶ್ರೀರಾಮುಲು ಕಿಡಿ

ಸಿದ್ದರಾಮಯ್ಯ ಅವರನ್ನ ರಾಜ್ಯದಲ್ಲಿ ದೊಡ್ಡ ಶಕ್ತಿ ಇರುವ ನಾಯಕ ಅವರು ಎಂದಿರೊದು ಮಹತ್ವ ಪಡೆದುಕೊಂಡಿದೆ. ಬಾದಾಮಿ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಯಾರು ಅವರ ಬೇಡಿಕೆಯನ್ನ ತಿರಸ್ಕಾರ ಮಾಡಲ್ಲ

G Hareeshkumar | news18-kannada
Updated:January 28, 2020, 10:45 PM IST
ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರತೆಯಿಲ್ಲದ ರಾಜಕಾರಣಿ ; ಸಚಿವ ಶ್ರೀರಾಮುಲು ಕಿಡಿ
ಸಚಿವ ಶ್ರೀರಾಮುಲು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ.
  • Share this:
ಕೋಲಾರ(ಜ.28) : ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರತೆ ಹೊಂದಿರದ ರಾಜಕಾರಣಿಯಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.  ತಿರುಪತಿಯಿಂದ ಬೆಂಗಳೂರಿಗೆ ವಾಪಸ್ಸಾಗುವ ವೇಳೆ ಕೋಲಾರದ ಕೆಂದಟ್ಟಿ ಬಳಿಯ ಆಪ್ತರ ನಿವಾಸಕ್ಕೆ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿದ ಬಳಿಕ ಮಾತನಾಡಿದ ಅವರು, ಬೆಳಗಾವಿ ಅಧಿವೇಶನ ನಡೆಯುವ ವೇಳೆ ರೈತ ಹೆಣ್ಣು ಮಗಳು ಕಬ್ಬಿನ ಬೆಂಬಲ ಬೆಲೆ ಕೇಳಿದಾಗ ಎಲ್ಲಿ ಮಲಗಿದ್ದಿರಿ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದರು, ಜೊತೆಗೆ ಕೊಪ್ಪಳದಲ್ಲೂ ರೈತರು ರಸ್ತೆ ತಡೆ ಮಾಡಿ ಹೋರಾಟ ಮಾಡಿದಾಗ ನೀವು ನನಗೆ ಮತ ನೀಡಿಲ್ಲ. ಬಿಜೆಪಿಗೆ ಮತ ಹಾಕಿದ್ದೀರಿ ಎಂದು ಪ್ರತಿಭಟನಾ ನಿರತರ ಮೇಲೆಯೇ ಕಿಡಿ ಕಾರಿದ್ದರು ಎಂದು ಕುಮಾರಸ್ವಾಮಿ ವಿರುದ್ದ ಆಕ್ರೊಶ ವ್ಯಕ್ತಪಡಿಸಿದರು. 

ಇನ್ನು ಇತ್ತೀಚೆಗೆ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಮಾತನಾಡುವಾಗ ಸೈನಿಕರು ತಿನ್ನಲು ಊಟವಿಲ್ಲದೇ ಸೈನ್ಯಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದಿದ್ದು ಈ ಮಿಣಿ ಮಿಣಿ ಪೌಡರ್ ಎಂದು ಮಂಗಳೂರು ಬಾಂಬ್ ಪ್ರಕರಣದಲ್ಲಿ ಹೇಳಿದ್ದಾರೆ. ಇದರಿಂದ ಕುಮಾರಸ್ವಾಮಿ ಗಂಭೀರತೆಯಿಲ್ಲದೆ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆಂದು ತಿಳಿಸಿದರು.

ಸಿದ್ದರಾಮಯ್ಯ ಅವರನ್ನ ರಾಜ್ಯದಲ್ಲಿ ದೊಡ್ಡ ಶಕ್ತಿ ಇರುವ ನಾಯಕ ಅವರು ಎಂದಿರೊದು ಮಹತ್ವ ಪಡೆದುಕೊಂಡಿದೆ. ಬಾದಾಮಿ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಯಾರು ಅವರ ಬೇಡಿಕೆಯನ್ನ ತಿರಸ್ಕಾರ ಮಾಡಲ್ಲ, ಹಿಂದಿನ ಮೈತ್ರಿ ಸರ್ಕಾರ ಇದ್ದಾಗ ಅವರು ಅನುದಾನ ಪಡೆದುಕೊಂಡಿದ್ದರು. ಈಗಲೂ ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಕಡೆಗೆ ಆದ್ಯತೆ ನೀಡಿದೆ ಎಂದರು.

ಇದನ್ನೂ ಓದಿ : ರಾಷ್ಟ್ರೀಯ ನಾಯಕರು ಸಿಎಂ ಗೆ ಸ್ವಾತ್ರಂತ್ರ್ಯ ಕೊಡ್ತಿಲ್ಲ - ಸಂಕಷ್ಟಕ್ಕೆ ಸಿಲುಕಿದ ಯಡಿಯೂರಪ್ಪ; ಸಿದ್ಧರಾಮಯ್ಯ ಟೀಕೆ

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ತೀರ್ಮಾನದಂತೆ ನಾನು ಬಾದಾಮಿ ಕ್ಷೇತ್ರದಿಂದ ಚುನಾವಣೆ ಎದುರಿಸಿ ಕಡಿಮೆ ಅಂತರದಿಂದ ಸೋತೆ ಹಾಗೂ ಬಾದಾಮಿ ಕ್ಷೇತ್ರದಲ್ಲಿ ನೆರೆ ಬಂದಾಗ ಸಿದ್ದರಾಮಯ್ಯ ಅವರು ಸರಿಯಾಗಿ ಸ್ಪಂದಿಸಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ, ಸಿದ್ದರಾಮಯ್ಯ ಎಲ್ಲಿ ಬೇಕಾದರು ಎಲೆಕ್ಷನ್ ಗೆ ನಿಲ್ಲಲಿ, ಸ್ವೀಕಾರ ತಿರಸ್ಕಾರ ಜನರಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು.

(ವರದಿ : ರಘುರಾಜ್)
First published:January 28, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading