ಮಂಗಳೂರು(ಫೆ.06) : ಸಿದ್ಧರಾಮಯ್ಯ ಓರ್ವ ನಿರುದ್ಯೋಗಿ. ಅವರಿಗೆ ಮಾಡುವುದಕ್ಕೆ ಕೆಲಸ ಇಲ್ಲ. ಕಾಂಗ್ರೆಸ್ ಪಾರ್ಟಿಯ ಎಲ್ಲಾ ನಾಯಕರೂ ನಿರುದ್ಯೋಗಿಗಳು. ನೂತನ ಸಚಿವರು ಅನರ್ಹರಲ್ಲಎಂದು ಜನ ಹೇಳಿದ್ದಾರೆ. ಜನರು ಅವರನ್ನು ಗೆಲ್ಲಿಸಿ ಕಳುಹಿಸಿದ್ದಾರೆ. ಕಮಲದ ಚಿಹ್ನೆ ಮೇಲೆ ಗೆದ್ದು ಬಂದಿದ್ದಾರೆ. ಕಾಂಗ್ರೆಸ್ ನವರು ನಿರುದ್ಯೋಗಿಗಳಾಗಿರೋದ್ರಿಂದ ಹೀಗೆ ಮಾತನಾಡುತ್ತಿದ್ದಾರೆ ಎಂದು ಸಚಿವ ಬಿ ಶ್ರೀರಾಮುಲು ವ್ಯಂಗ್ಯವಾಡಿದರು.
ನಮ್ಮ ಸರ್ಕಾರದಲ್ಲಿ ಈಗಾಗಲೇ ಮೂರು ಮಂದಿ ಉಪಮುಖ್ಯಮಂತ್ರಿಗಳು ಇದ್ದಾರೆ. ಈ ಮೂವರೂ ಕೂಡ ಉಪಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ನನಗೂ
ಉಪಮುಖ್ಯಮಂತ್ರಿ ಆಗುವ ಆಸೆ ಇತ್ತು. ಪಕ್ಷ ಅವಕಾಶ ಕೊಟ್ಟೇ ಕೊಡುತ್ತದೆ. ಬಹಳಷ್ಟು ಮಂದಿಗೆ ಸಚಿವ ಸ್ಥಾನದ ಆಸೆ ಇದೆ. ಎಲ್ಲರೂ ಅವಕಾಶಕ್ಕಾಗಿ ಕಾಯಬೇಕು. ಬಿಜೆಪಿ ಎಲ್ಲರಿಗೂ ಅವಕಾಶ ಮಾಡಿಕೊಡುತ್ತದೆ ಎಂದು ಶ್ರೀರಾಮುಲ ತಮ್ಮ ಪಕ್ಷದ ಅಸಮಾಧಾನಿತರಿಗೆ ಕಿವಿಮಾತು ಹೇಳಿದರು.
ಮಗಳ ಮದುವೆ ಕಾರ್ಯ ನಿಮಿತ್ತ ಒತ್ತಡದಲ್ಲಿದ್ದೇನೆ. ಹಾಗಾಗಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗಿಲ್ಲ. ಪಕ್ಷದ ಅನುಮತಿ ಪಡೆದೇ ಬಂದಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ :
ಮಕ್ಕಳ ಪ್ರತಿರೋಧವನ್ನು ಎದುರಿಸಲಾಗದಷ್ಟು ಬಿಜೆಪಿ ಸೈದ್ಧಾಂತಿಕವಾಗಿ ದಿವಾಳಿಯಾಗಿದೆ : ಸಿದ್ದರಾಮಯ್ಯ
ಬಿಜೆಪಿ ಸರ್ಕಾರ ಐದು ವರ್ಷ ಪೂರ್ಣಗೊಳಿಸಲ್ಲ ಎಂದ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಹತಾಶರಾಗಿದ್ದಾರೆ. ಎಲ್ಲಿ ಸೀರಿಯಸ್ ಆಗಿ ಇರಬೇಕೋ ಅಲ್ಲಿ ಜೋಕ್ ಮಾಡುತ್ತಾರೆ. ಎಲ್ಲಿ ಜೋಕ್ ಮಾಡಬೇಕು ಅಲ್ಲಿ ಸಿರಿಯಸ್ ಆಗುತ್ತಾರೆ. ಕುಮಾರಸ್ವಾಮಿಗೆ ತಾವು ಏನು ಮಾತನಾಡುತ್ತೇನೆ ಅಂತಾ ಅವರಿಗೇ ಗೊತ್ತಿರುವುದಿಲ್ಲ ಎಂದು ತಿರುಗೇಟು ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ