HOME » NEWS » State » MINISTER B C PATIL SHARING FALSE INFORMATION KOURAVA HAS BEEN TAKEN INTO TASK BY SOCIAL MEDIA HK

ಸಚಿವ ಬಿ ಸಿ ಪಾಟೀಲ್ ಸುಳ್ಳು ಮಾಹಿತಿ ಹಂಚಿಕೆ: ಸಾಮಾಜಿಕ ಜಾಲತಾಣಗಳಲ್ಲಿ ಕೌರವನಿಗೆ ಮಂಗಳಾರತಿ

ಸರ್ಕಾರ ಡಿಸೆಂಬರ್ 1 ರಿಂದ ನೋಂದಣಿ ಕೇಂದ್ರ ಆರಂಭಿಸಿದ್ದು, ಕೂಡಲೇ ಖರೀದಿ ಪ್ರಕ್ರಿಯೆ ಆರಂಭಿಸಲಿ ಅಂತಾ ರೈತರು ದಿನವೂ ಹೋರಾಟ ಮಾಡುತ್ತಿದ್ದಾರೆ. ಆದರೂ ಈವರೆಗೆ ರೈತರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ

news18-kannada
Updated:December 4, 2020, 5:30 PM IST
ಸಚಿವ ಬಿ ಸಿ ಪಾಟೀಲ್ ಸುಳ್ಳು ಮಾಹಿತಿ ಹಂಚಿಕೆ: ಸಾಮಾಜಿಕ ಜಾಲತಾಣಗಳಲ್ಲಿ ಕೌರವನಿಗೆ ಮಂಗಳಾರತಿ
ಸಚಿವ ಬಿ ಸಿ ಪಾಟೀಲ್​​
  • Share this:
ಕೊಪ್ಪಳ(ಡಿಸೆಂಬರ್​. 04): ಪೊಲೀಸ್ ಅಧಿಕಾರಿಯಾಗಿ, ಚಿತ್ರನಟನಾಗಿ ರಾಜಕೀಯಕ್ಕೆ ಧುಮುಕಿರುವ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ಸಿ ಪಾಟೀಲ್ ಅವರು ಎರಡು ವೃತ್ತಿ ಬದಲಾಯಿಸಿ, ಎರಡೂ ಪಕ್ಷಗಳನ್ನ ಬದಲಾಯಿಸಿ ಬಿಜೆಪಿಗೆ ಸೇರಿ ಆಡಳಿತರೂಢ ಸರಕಾರದಲ್ಲಿ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ ಖಾತೆಯನ್ನೇ ಬೇಡಿ ಪಡೆದು ಈಗ ಅನ್ನದಾತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ರಾಜ್ಯಾದ್ಯಂತ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂಬ ಕೃಷಿ ಸಚಿವರ ಹೇಳಿಕೆ ರಾಜ್ಯಾದ್ಯಂತ ಟೀಕೆಗೆ ಕಾರಣವಾಗಿದೆ. ಈ ನಡುವೆ ಸಚಿವ ಬಿ ಸಿ ಪಾಟೀಲ್​​ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಹಾಕಿಕೊಂಡಿರುವ ಪೋಸ್ಟ್ ವೊಂದು ಭತ್ತ ಬೆಳೆಗಾರರ ಆಕ್ರೋಶ ಹೆಚ್ಚಿಸಿದೆ. ಆದರೆ, ಭತ್ತ ಬೆಳೆಗಾರರು ಕೃಷಿ ಸಚಿವ ಬಿ ಸಿ ಪಾಟೀಲ್  ಪೋಸ್ಟ್ ಗೆ ತರಹೇವಾರಿ ಪ್ರತಿಕ್ರಿಯೇ ನೀಡಿ ವ್ಯಂಗ್ಯ ಮಾಡಿದ್ದಾರೆ.

ಕೃಷಿ ಸಚಿವ ಬಿ.ಸಿ.ಪಾಟೀಲ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡ ಸಾಲುಗಳ ಸಾರವಿಷ್ಟೇ;  ಸರ್ಕಾರ ಪ್ರಸಕ್ತ 2020-21ನೇ ಸಾಲಿನಲ್ಲಿ ನೋಡಲ್ ಏಜೆನ್ಸಿ ಮೂಲಕ ಈ‌ವರೆಗೆ 297 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿ ಮಾಡಿ, ರೈತರ ಹಣ ಪಾವತಿ ಮಾಡಲಾಗಿದೆ ಎಂಬ ಬರಹ ಭತ್ತ ಬೆಳೆಗಾರರ ಕಣ್ಣು ಕೆಂಪಾಗಿಸಿದೆ. ಒಂದೆಡೆ ಭತ್ತದ ಬೆಲೆ ಪಾತಾಳಕ್ಕೆ ಕುಸಿದಿದ್ದು, ಶೀಘ್ರವೇ ಖರೀದಿ ಕೇಂದ್ರ ಆರಂಭಿಸಬೇಕು ಅಂತಾ ರೈತರು ದಿನವೂ ಹೋರಾಟ ಮಾಡುತ್ತಿದ್ದಾರೆ. ಆದರೆ, ರಾಜ್ಯದ ಕೃಷಿ ಸಚಿವ ಬಿ ಸಿ ಪಾಟೀಲ್ ಮಾತ್ರ, ಸರ್ಕಾರ ಬೆಂಬಲ ಬೆಲೆ ನೀಡಿ  ಭತ್ತ ಖರೀದಿ ಮಾಡಿದ್ದಷ್ಟೇ ಅಲ್ಲ. ಹಣವೂ ಪಾವತಿ ಮಾಡಲಾಗಿದೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.ಈ ಪೋಸ್ಟ್ ನಿಂದ ಭತ್ತದ ಕಣಜ ಎಂಬ ಖ್ಯಾತಿಯ ಗಂಗಾವತಿ ಸೇರಿ ತುಂಗಭದ್ರ ಅಚ್ಚುಕಟ್ಟು ರೈತರಿಗೆ ಆಕ್ರೋಶ ಹೆಚ್ಚಿಸಿದೆ. ಕೃಷಿ ಸಚಿವರೇ ಖರೀದಿ ಕೇಂದ್ರ ಯಾವಾಗ? ಎಲ್ಲಿದೆ ಖರೀದಿ ಮಾಡಿದ ದಾಸ್ತಾನು ಅಂತಾ ಪ್ರತಿಕ್ರಿಯೆ ನೀಡಿದ್ದಾರೆ. ಕೃಷಿ ಸಚಿವರ ಪೋಸ್ಟ್ ಗೆ ಮಾಜಿ  ಸಚಿವ ಶಿವರಾಜ್ ತಂಗಡಗಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಳೆದ 70 ವರ್ಷದ ಇತಿಹಾಸದಲ್ಲಿಯೇ ಭತ್ತದ ಬೆಲೆ ಈ ವರ್ಷ ತೀರಾ ಕುಸಿದಿದೆ. ಒಂದು ಕ್ವಿಂಟಾಲ್ ಭತ್ತಕ್ಕೆ ಕೇಂದ್ರ ಸರ್ಕಾರ 1888 ರೂಪಾಯಿ ಎಂಎಸ್ಪಿ ನಿಗದಿ ಮಾಡಿದೆ. ಆದರೆ, ಸದ್ಯ ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ 75 ಕೆಜಿ ಭತ್ತಕ್ಕೆ 900 ರೂಪಾಯಿಗೆ ಕುಸಿದಿದೆ. ಈ ಕಾರಣಕ್ಕೆ ರೈತರು ರಸ್ತೆ ಮೇಲೆ ಭತ್ತ ಹಾಕಿಕೊಂಡು, ಸರ್ಕಾರದ ಖರೀದಿ ಕೇಂದ್ರಕ್ಕಾಗಿ ಕಾದು ಕುಳಿದಿದ್ದಾರೆ.

ಇದನ್ನೂ ಓದಿ : ಕುರುಬರಿಗೆ ಎಸ್​​ಟಿ ಮೀಸಲಾತಿ - ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ: ಸಿದ್ಧರಾಮಯ್ಯ ಆರೋಪಸರ್ಕಾರ ಡಿಸೆಂಬರ್ 1 ರಿಂದ ನೋಂದಣಿ ಕೇಂದ್ರ ಆರಂಭಿಸಿದ್ದು, ಕೂಡಲೇ ಖರೀದಿ ಪ್ರಕ್ರಿಯೆ ಆರಂಭಿಸಲಿ ಅಂತಾ ರೈತರು ದಿನವೂ ಹೋರಾಟ ಮಾಡುತ್ತಿದ್ದಾರೆ. ಆದರೂ ಈವರೆಗೆ ರೈತರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
Youtube Video

ಕೃಷಿ ಸಚಿವರ ಪೋಸ್ಟ್ ಗೆ ಕೆಲ ರೈತರು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ದಾಖಲೆ ಸಮೇತ ಪ್ರತಿಕ್ರಿಯೆ ನೀಡಿ, ವ್ಯಂಗ್ಯ ಮಾಡಿದ್ದಾರೆ. ಆದರೆ, ಯಾವುದೊಂದು ಕಮೆಂಟ್ ಗೂ ಕೃಷಿ ಮಂತ್ರಿಗಳು ಮಾತ್ರ ಪ್ರತಿಕ್ರಿಯೆ ನೀಡಿಲ್ಲ.
Published by: G Hareeshkumar
First published: December 4, 2020, 5:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories