Chaddi Politics: ಚಡ್ಡಿ ಹೋಗಿ ಪ್ಯಾಂಟ್ ಬಂದಿರೋದು ಸಿದ್ದುಗೆ ಗೊತ್ತಿಲ್ಲ! ಬಿ.ಸಿ. ನಾಗೇಶ್ ಟಾಂಗ್

ಸಿದ್ದರಾಮಯ್ಯ ಚಡ್ಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ ನಾಗೇಶ್, ಚಡ್ಡಿ ಹೋಗಿ ಪ್ಯಾಂಟ್ ಬಂದಿರೋದು ಅವರಿಗೆ ಗೊತ್ತಿಲ್ಲ ಅನಿಸುತ್ತೆ. ಅವರು ವೋಟ್ ಬ್ಯಾಂಕ್ ಪೋಲಿಟಿಕ್ಸ್ ಮಾಡ್ತಾರೆ ಎಂದಿದ್ದಾರೆ.

ಸಿದ್ದರಾಮಯ್ಯ ಮತ್ತು ಬಿ ಸಿ ನಾಗೇಶ್

ಸಿದ್ದರಾಮಯ್ಯ ಮತ್ತು ಬಿ ಸಿ ನಾಗೇಶ್

  • Share this:
ಧಾರವಾಡ(ಜೂ.07): ಪಠ್ಯಪುಸ್ತಕ ಪರಿಷ್ಕರಣೆ ಮಾಡುವಾಗ ದೊಡ್ಡ ತಪ್ಪು ಮಾಡಬಾರದು, ಇಂತದ್ದೊಂದು ಜವಾಬ್ದಾರಿ ಸಿಕ್ಕಾಗ ಜಾಗರೂಕತೆ ಇರಬೇಕು. ಆದ್ರೆ ತಪ್ಪು ಆಗಿದ್ದನ್ನ ನಾವು ಗಮನಿಸಿ ಅದನ್ನ ಮರು ಪರಿಷ್ಕರಣೆಗೆ ಮುಂದಾಗಿದ್ದೇವೆ ಎಂದು  ಶಿಕ್ಷಣ ಸಚಿವ (Education Minister) ಬಿ ಸಿ ನಾಗೇಶ್ (B.C. Nagesh) ಹೇಳಿದರು. ಧಾರವಾಡದಲ್ಲಿ ಖಾಸಗಿ ಹೊಟೆಲ್ ನಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಪದೋಷಗಳನ್ನ ಯಾರೇ ಕಂಡು ಹಿಡಿದರು ಅದನ್ನ ಸರಿ ಮಾಡುತ್ತೇವೆ. ಯಾವುದೇ ತಪ್ಪನ್ನ ಮುಚ್ಚಿಡುವುದು ನಾವು ಮಾಡುತ್ತಿಲ್ಲ. ವಾದ ವಿವಾದ ಮಕ್ಕಳ ಮೇಲೆ ಪರಿಣಾಮ ಬಿರಬಾರದು, ಹೀಗಾಗಿ ಅದನ್ನ ಸರಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಈಗಾಗಲೇ ಶೇಕಡಾ 84 ರಷ್ಟು ಪುಸ್ತಕಗಳು ಬಿಇಓ ಕಚೇರಿ ಸೇರಿದೆ, ಇನ್ನೊಂದು ತಿಂಗಳಲ್ಲಿ ಎಲ್ಲ ಪುಸ್ತಕ ಕೊಡುತ್ತೆವೆ. ಅಲ್ಲದೇ ಈ ಸಾರಿ ಅತಿಥಿ ಶಿಕ್ಷಕರನ್ನ ಶಿಕ್ಷಕರನ್ನಾಗಿ ತೆಗೆದುಕೊಳ್ಳುತ್ತಿದ್ದೇವೆ. ಬಿಜೆಪಿ ಸರ್ಕಾರದಲ್ಲಿ 27 ಸಾವಿರ ಅತಿಥಿ ಶಿಕ್ಷಕರನ್ನ ತೆಗೆದುಕೊಂಡಿದ್ದೇವೆ. ಮುಂಬರೋ ದಿನಗಲ್ಲಿ ಸೈಕಲ್ ವಿತರಣೆಯನ್ನ ಸಹ ಮಾಡುವ ವಿಚಾರ ಇದೆ ಎಂದರು.

ಸಾಹಿತಿಗಳನ್ನ ಯಾವುದೇ ರೀತಿಯಲ್ಲಿ ಕಡೆಗಣಿಸಿಲ್ಲ

ಇದೇ‌ ಸಂದರ್ಭದಲ್ಲಿ ಸಾಹಿತಿಗಳನ್ನ ಯಾವುದೇ ರೀತಿಯಲ್ಲಿ ಕಡೆಗಣಿಸಿಲ್ಲ ಎಂದ ಸಚಿವರು, ಮಹಾರಾಜರನ್ನ ತೆಗೆದು ಟಿಪ್ಪು ಸುಲ್ತಾನ್ ನ್ನ ತರಲಾಗಿತ್ತು. ಸಿಂಧೂ ಸಂಸ್ಕೃತಿ ಕಿತ್ತುಹಾಕಿ ನೆಹರೂ ಪಾಠ ತರಲಾಗಿತ್ತು. ಇಸ್ಲಾಂ ಮತ್ತು ಕ್ರೈಸ್ತರನ್ನ ಮಾತ್ರ ಪುಸ್ತಕದಲ್ಲಿ ತರಲಾಗಿತ್ತು,‌ಇಂತಹ 100 ಉದಾಹರಣೆಗಳು ಇದ್ದಾವೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: BY Vijayendra: ಈಗಲೇ ಸಿಎಂ ಅನ್ನಬೇಡಿ, ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿದ್ದೇನೆ: ಬಿ ವೈ ವಿಜಯೇಂದ್ರ ಮನವಿ

ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ದೇವನೂರು ಮಹಾದೇವ ನಮಗೆ ಹೇಳಬಹುದಿತ್ತು, ಆದ್ರೆ ಪುಸ್ತಕ ಬಿಡುಗಡೆಯಾದ ಮೇಲೆ ಹೇಳಿದ್ದು ನೋವಾಗಿದೆ ಎಂದರು. ಇನ್ನೂ ಕುವೆಂಪು ಅವರಿಗೆ ಅವಮಾನ ಆದ್ರೆ ಅದು, ಬರಗೂರು ರಾಮಚಂದ್ರಪ್ಪರಿಗೆ ಸೇರುತ್ತೆ ಅವರೇ ಅದನ್ನ ಹಾಕಿದ್ರು. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ನಾಡ ಗೀತೆಗೆ ಅವಮಾನ ಆಗಿದೆ. ಪಠ್ಯಪುಸ್ತಕವನ್ನ ಒಬ್ಬರೇ ಮಾಡುವುದಿಲ್ಲ, ತಪ್ಪು ಆಗಿದೆ ಈಗ ಅದನ್ನ ಪರಿಷ್ಕರಣೆ ಮಾಡುತ್ತಿದ್ದೇವೆ ಎಂದರು.

ಚಡ್ಡಿ ಹೋಗಿ ಪ್ಯಾಂಟ್ ಬಂದಿರೋದು ಅವರಿಗೆ ಗೊತ್ತಿಲ್ಲ

ಸಿದ್ದರಾಮಯ್ಯ ಚಡ್ಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಚಡ್ಡಿ ಹೋಗಿ ಪ್ಯಾಂಟ್ ಬಂದಿರೋದು ಅವರಿಗೆ ಗೊತ್ತಿಲ್ಲ ಅನಿಸುತ್ತೆ. ಅವರು ವೋಟ್ ಬ್ಯಾಂಕ್ ಪೋಲಿಟಿಕ್ಸ್ ಮಾಡ್ತಾರೆ. ಸ್ವಾತಂತ್ರ್ಯ ಬಂದಾಗಿನಿಂದ ಅವರು ಹೀಗೆ ಮಾಡುತ್ತಾ ಬಂದಿದ್ದಾರೆ. ಏನು ಸಿಗದೆ ಹೋದಾಗ ಆರ್ ಎಸ್ ಎಸ್ ಬಗ್ಗೆ ಮಾತನಾಡುತ್ತಾರೆ.

ಸಿದ್ದರಾಮಯ್ಯ ಮತಬ್ಯಾಂಕ್ ಗೋಸ್ಕರ ಹೀಗೆ ಮಾಡುತ್ತಾರೆ. ಬೇಕಾದಷ್ಟು ವಿಷಯಗಳನ್ನ ಬಿಟ್ಟು ಆರ್ ಎಸ್ ಎಸ್ ಬಗ್ಗೆ ಯಾಕೆ ಮಾತನಾಡಬೇಕು. ಎಷ್ಟೊಂದು ಸಮಸ್ಯೆಗಳನ್ನ ಜನರು ಎದುರಿಸುತ್ತಿದ್ದಾರೆ, ಎಂತಹ ಸಮಯದಲ್ಲಿ ಸರ್ಕಾರಕ್ಕೆ ಅವರು ಸಲಹೆ ಕೊಡಬೇಕು. ಅದನ್ನ ಬಿಟ್ಟು ಹಿಜಾಬ್, ಮತ್ತು ಆರ್ ಎಸ್ ಎಸ್ ಬಗ್ಗೆ ಮಾತನಾಡುವುದನ್ನ ಅವರು ಬಿಡಬೇಕೆಂದು ಕಿವಿ‌ಮಾತು ಹೇಳಿದರು.

ಇದನ್ನೂ ಓದಿ: Karnataka Politics: ಬಸವರಾಜ ಹೊರಟ್ಟಿ ಅಧಿಕಾರದ ಆಸೆಯಿಂದ ಬಿಜೆಪಿಗೆ ಹೋಗಿದ್ದಾರೆ- ಸಿದ್ದರಾಮಯ್ಯ

ಸುದ್ದಿಗೋಷ್ಠಿಯಲ್ಲಿ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕಿ ಸಿಮಾ‌ಮಸೂತಿ, ಮಹಾನಗರ ಪಾಲಿಕೆ ಮಹಾಪೌರರಾದ ಈರೇಶ ಅಂಚಟಗೇರಿ ಸೇರಿದಂತೆ ಹಲವು ಬಿಜೆಪಿ ಮುಖಂಡರು‌ ಭಾಗವಿಸಿದರು.
Published by:Divya D
First published: