ರಾಜೀನಾಮೆ ವರಸೆ ತೋರಿದ ಉಮೇಶ್​ ಕತ್ತಿ; ಡಿಸಿಎಂ ಆಸೆ ಬಿಚ್ಚಿಟ್ಟ ಶ್ರೀರಾಮುಲು

ಸೋತ ಲಕ್ಷ್ಮಣ ಸವದಿಯನ್ನು ಡಿಸಿಎಂ ಮಾಡಿದ್ದೀರಿ. ನನ್ನನ್ನು ಯಾಕೆ ಮಂತ್ರಿ ಮಾಡಲ್ಲ ಎಂದು ಉಮೇಶ್ ಕತ್ತಿ ಗರಂ ಆಗಿದ್ದಾರೆ. ಹೀಗಾಗಿ ಸಿಎಂ ಬಿಎಸ್​ವೈ ಕತ್ತಿ ಅವರನ್ನು ಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಉಮೇಶ್​ ಕತ್ತಿ

ಉಮೇಶ್​ ಕತ್ತಿ

 • Share this:
  ಸದ್ಯ ಕಮಲ ಪಾಳಯದಲ್ಲಿ ಸಚಿವ ಸ್ಥಾನ ಕೈತಪ್ಪಿ ಹೋದವರ ಮುನಿಸು ಮುಂದುವರೆದಿದೆ. ಮಂತ್ರಿಗಿರಿ ಸಿಗದ ಹಿನ್ನೆಲೆ, ಮೂಲ ಬಿಜೆಪಿ ನಾಯಕರು ರಾಜೀನಾಮೆ ವರಸೆ ತೋರುತ್ತಿದ್ದಾರೆ. ಸಿಎಂ ಬಿಎಸ್​ ಯಡಿಯೂರಪ್ಪನವರ ಮೇಲೆ ಬಹಿರಂಗವಾಗಿ ಅಸಮಾಧಾನ ತೋರುತ್ತಿದ್ದಾರೆ. ಇಂದು ಸಚಿವಾಕಾಂಕ್ಷಿ ಉಮೇಶ್​ ಕತ್ತಿ ಸಿಎಂ ಬಿಎಸ್​ವೈ ಎದುರೇ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ. ಸಚಿವ ಸ್ಥಾನಕ್ಕಾಗಿ ಬಿಗಿ ಪಟ್ಟು ಹಿಡಿದಿರುವ ಕತ್ತಿ, ರಾಜೀನಾಮೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಸಿಎಂ ಬಿಎಸ್​ವೈ ಸಮಾಧಾನ ಮಾಡಿದರೂ ಸಹ ಉಮೇಶ್​ ಕತ್ತಿ ಬಗ್ಗುವ ಲಕ್ಷಣಗಳು ಕಾಣಿಸುತ್ತಿಲ್ಲ ಎನ್ನಲಾಗುತ್ತಿದೆ.

  ನಾನು 8 ಬಾರಿ ಶಾಸಕನಾಗಿದ್ದೇನೆ. ಮೂರು ಪಕ್ಷಗಳ ಚಿಹ್ನೆಗಳಲ್ಲಿ ಗೆದ್ದಿದ್ದೇನೆ. ನಾನು ಜೆಡಿಎಸ್​ನಲ್ಲಿದ್ದಾಗ ಬಿಜೆಪಿಗೆ ಕರೆತಂದವರು ನೀವೇ. ಆದರೆ ನನಗೆ ಮಂತ್ರಿಗಿರಿ ಮಾತ್ರ ಕೊಡಲಿಲ್ಲ ಏಕೆ? ಎಂದು ಬಿಎಸ್​ವೈಗೆ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ, ರಾಜೀನಾಮೆ ಬೆದರಿಕೆಯೊಡ್ಡಿರುವ ಉಮೇಶ್​ ಕತ್ತಿ, ಮುಂದೆ ನನ್ನನ್ನು ಮಂತ್ರಿ ಮಾಡ್ತೀರೋ ಇಲ್ಲವೋ ಸರಿಯಾಗಿ ಹೇಳಿ. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಸೋತ ಲಕ್ಷ್ಮಣ ಸವದಿಯನ್ನು ಡಿಸಿಎಂ ಮಾಡಿದ್ದೀರಿ. ನನ್ನನ್ನು ಯಾಕೆ ಮಂತ್ರಿ ಮಾಡಲ್ಲ ಎಂದು ಉಮೇಶ್ ಕತ್ತಿ ಗರಂ ಆಗಿದ್ದಾರೆ. ಹೀಗಾಗಿ ಸಿಎಂ ಬಿಎಸ್​ವೈ ಕತ್ತಿ ಅವರನ್ನು ಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

  ಬಿಎಸ್​ವೈಗೆ ತಲೆನೋವು ಮುಂದುವರಿಸಿದ ಜಾರಕಿಹೊಳಿ; ಖಾತೆ ಕಿತ್ತಾಟದ ಮಧ್ಯೆ ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ ಅನುಮಾನ

  ಡಿಸಿಎಂ ಆಸೆ ಬಿಚ್ಚಿಟ್ಟ ಶ್ರೀರಾಮುಲು

  ಇನ್ನು, ಡಿಸಿಎಂ ಸ್ಥಾನದ ಆಕಾಂಕ್ಷಿ ಆಗಿರುವ ಆರೋಗ್ಯ ಸಚಿವ ಶ್ರೀರಾಮುಲು ಇಂದು ಮತ್ತೆ ಉಪಮುಖ್ಯಮಂತ್ರಿಯಾಗುವ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ಇಂದು ದಾವಣಗೆರೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಮುಜುಗರ ತರುವ ಕೆಲಸ ಮಾಡಲ್ಲ. ಮುಂದಿನ ದಿನಗಳಲ್ಲಿ ಡಿಸಿಎಂ ಆಗುವ ಅವಕಾಶ ಬರುತ್ತದೆ. ಸಿಎಂ ಬಿಎಸ್​ವೈ ಕೊಟ್ಟ ಮಾತನ್ನು ಯಾವತ್ತೂ ತಪ್ಪಲ್ಲ. ನಮ್ಮ ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಒದಗಿಸುತ್ತಾರೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಯಡಿಯೂರಪ್ಪನವರು ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ. ಅವಕಾಶ ಸಿಗುವ ಲಕ್ಷಣ ಇದೆ. ನಮ್ಮ ಸಲಹೆಗಳನ್ನ ಸಿಎಂಗೆ ನೀಡುತ್ತೇವೆ. ಸಚಿವ ಸ್ಥಾನ ಆಕಾಂಕ್ಷಿಗಳು ಸ್ವಲ್ಪ ಕಾಯಬೇಕು, ಅವಕಾಶ ಎಲ್ಲರಿಗೂ ಸಿಗುತ್ತೆ ಎಂದು ಹೇಳಿದರು.

  ಜಪಾನಿನ ಹಡಗಿನಲ್ಲಿ ಕೊರೊನಾ ರೋಗಪೀಡಿತರ ಮಧ್ಯೆ ಸಿಲುಕಿರುವ 200ಕ್ಕೂ ಹೆಚ್ಚು ಭಾರತೀಯರು
  First published: