ಬೆಂಗಳೂರು (ಮೇ.13): ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಹಾಗೂ ಸಚಿವ ಅಶ್ವತ್ಥ ನಾರಾಯಣ (Ashwath Narayan) ನಡುವಿನ ವಾಕ್ ಸಮರ ಮುಂದುವರಿದೆ. PSI ನೇಮಕಾತಿ ವಿಚಾರದಲ್ಲಿ ಆರಂಭವಾದ ಯುದ್ಧ ನಿಲ್ಲೋ ಲಕ್ಷಣ ಕಾಣ್ತಿಲ್ಲ. ಸಚಿವ ಅಶ್ವತ್ಥ ನಾರಾಯಣ, ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ್ರನ್ನು ಭೇಟಿಯಾದ ಬಳಿಕ ನಟಿ ರಮ್ಯಾ (Ramya) ಮಾಡಿದ ಟ್ವೀಟ್ (Tweet) ಬಿಜೆಪಿಗೆ ನಾಯಕರಿಗೆ ವರವಾಗಿದೆ. ಡಿಕೆಶಿ ವಿರುದ್ಧ ಟ್ವೀಟ್ ಮಾಡಿದ ರಮ್ಯಾ ಅಭಿಪ್ರಾಯಕ್ಕೆ ಸಚಿವ ಅಶ್ವತ್ಥ ನಾರಾಯಣ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಕುರಿತ ರಮ್ಯಾ ಮಾತಿಂದ ನನಗೆ ಸಂತೋಷ ಆಗ್ತಿದೆ ಎಂದ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.
ಡಿಕೆಶಿ ರಾಂಗ್ ನಂಬರ್ ಡಯಲ್ ಮಾಡಿದ್ದಾರೆ
ರಮ್ಯಾ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಸಚಿವ ಅಶ್ವತ್ಥ ನಾರಾಯಣ, ಇದು ಕಾಂಗ್ರೆಸ್ನವರ ಆಂತರಿಕ ವಿಚಾರ, ಆದರೂ ಮಾಧ್ಯಮಗಳು ನನ್ನನ್ನೂ ಇದರಲ್ಲಿ ಸೇರಿಸಿದ್ದೀರಿ, ಇರಲಿ ಎಂದು ಮಾತು ಶುರುಮಾಡಿದ ಸಚಿವರು, ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ರು. ಡಿ.ಕೆ ಶಿವಕುಮಾರ್ ರಾಂಗ್ ನಂಬರ್ ಡಯಲ್ ಮಾಡಿದ್ದು ಅವರ ತಪ್ಪು, ನನ್ನನ್ನ ಟಚ್ ಮಾಡಿಕೊಂಡು ಅಯ್ಯೋ ಪಾಪ ಅನ್ನೋ ಪರಿಸ್ಥಿತಿ ಡಿ.ಕೆ ಶಿವಕುಮಾರ್ಗೆ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.
ನಾಯಕರ ಬಗ್ಗೆ ಕಾಂಗ್ರೆಸಿಗರಿಗೆ ಮುಜುಗರ
ಇದ್ರಿಂದ ಕಾಂಗ್ರೆಸ್ನವರಿಗೆ ಮುಜುಗರವಾಗ್ತಿದೆ. ಎಂಥಾ ವ್ಯಕ್ತಿ ನಮ್ಮ ಅಧ್ಯಕ್ಷರಾಗಿದ್ದಾರೆ ಅನ್ನೋ ಮುಜುಗರ ಕಾಂಗ್ರೆಸ್ ನಾಯಕರಿಗೆ ಉಂಟಾಗಿದೆ. ಅನುಕಂಪ ಒಳ್ಳೆಯವರ ಮೇಲೆ ಇರತ್ತೆ, ಸಜ್ಜನರ ಮೇಲೆ ಇರತ್ತೆ, ಡಿ.ಕೆಶಿವಕುಮಾರ್ ಅಂಥವರ ಮೇಲಲ್ಲ ಎಂದು ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಇದನ್ನು ಓದಿ: ಡಿಕೆಶಿ ಕರ್ಮಕಾಂಡಕ್ಕೆ ಪರ್ಮನೆಂಟ್ ಜಾಗ ತಿಹಾರ್ ಜೈಲು ಎಂದ ಅಶ್ವಥ್ ನಾರಾಯಣ್
ಕಾಂಗ್ರೆಸ್ನಲ್ಲೇ ಡಿಕೆಶಿ ವಿರುದ್ಧ ಆಕ್ರೋಶ
ಅವರದೇ ಪಕ್ಷದ ಹೆಣ್ಣು ಮಗಳ ಮೇಲೇಯೇ ತೇಜೋವಧೆ ಮಾಡಿದರೆ ಏನಾಗುತ್ತೆ ಅನ್ನೋದು ಡಿ.ಕೆ ಶಿವಕುಮಾರ್ ಅವರಿಗೆ ಈಗ ಗೊತ್ತಾಗಿದೆ ಎಂದು ಸಚಿವ ಡಾ. ಅಶ್ವತ್ಥ ನಾರಾಯಣ ಹೇಳಿದ್ದಾರೆ.ವ್ಯಕ್ತಿಯ ಸ್ವಾತಂತ್ರ್ಯ, ಪರಸ್ಪರ ಸಂಬಂಧ ಸ್ನೇಹ ಪ್ರಶ್ನಿಸುವ ಕೀಳುಮಟ್ಟಕ್ಕೆ ಹೋದಂತ ವ್ಯಕ್ತಿ ಶಿವಕುಮಾರ್, ಇದೀಗ ಅವ್ರ ನಡೆಯನ್ನು ಅವರ ಪಕ್ಷದ ನಾಯಕರೇ ಖಂಡಿಸಿದ್ದಾರೆ.
ಏನೋ ಆಪಾದನೆ ಮಾಡಬೇಕು, ಅದಕ್ಕೊಂದು ಅರ್ಥ ಕಲ್ಪಿಸಿ ದಿಕ್ಕು ತಪ್ಪಿಸಬೇಕು ಅಂತ ಹೊರಟಿದ್ದವರಿಗೆ ಅವರ ಪಕ್ಷದವರೇ ತಕ್ಕ ಪಾಠ ಕಲಿಸಿದ್ದಾರೆ.ಇನ್ಮುಂದೆ ಆದರೂ ಡಿ.ಕೆ ಶಿವಕುಮಾರ್ ಇಂಥ ಮಾತನಾಡಲ್ಲ ಅಂದ್ಕೊತ್ತೀನಿ ಎಂದ್ರು.
ರಮ್ಯಾ ಮಾತಿಂದ ನನಗೆ ಖುಷಿಯಾಗಿದೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ಮೂಲಕ ಅವರ ವ್ಯಕ್ತಿತ್ವ ಮನೋಭಾವ ಏನು ಅನ್ನೋದು ಬಹಳ ಸ್ಪಷ್ಟವಾಗಿ ಗೊತ್ತಾಗ್ತಿದೆ. ಆದರೆ ಡಿಕೆಶಿ ಕುರಿತ ರಮ್ಯಾ ಮಾತಿಂದ ನನಗೆ ಸಂತೋಷ ಆಗ್ತಿದೆ ಎಂದು ಸಚಿವ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.
ಬಿಜೆಪಿ ಸರಣಿ ಟ್ವೀಟ್ ಮೂಲಕ ವಾಗ್ದಾಳಿ
ಮಾಜಿ ಸಂಸದೆ ರಮ್ಯಾ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವಿನ ಟ್ಟಿಟ್ಟರ್ ವಾರ್ ಕುರಿತಂತೆ ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಸಂಬಂಧ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ಸಿದ್ದರಾಮಯ್ಯ ಬಣ ಡಿಕೆಶಿ ವಿರುದ್ಧ ಒಳಸಂಚು ನಡೆಸುತ್ತಿದೆ. ಭ್ರಷ್ಟಾಧ್ಯಕ್ಷ ರಿಗೆ ರಮ್ಯಾ ಮಂಗಳಾರತಿ ಮಾಡಿದರೆ, ಸಿದ್ದರಾಮಯ್ಯ ಆಪ್ತರು ರಮ್ಯಾ ಪರ ನಿಲ್ಲುತ್ತಿದ್ದಾರೆ.
ಇದನ್ನು ಓದಿ: ಎಲ್ಲೋ ಏನೋ ಮಿಸ್ ಫೈರ್ ಆಗಿದೆ ಎಂದ ಡಿಕೆಶಿ; ಕೆಸಿ ವೇಣುಗೋಪಾಲ್ ಮೊರೆ ಹೋದ ರಮ್ಯಾ
ಡಿಕೆಶಿ ಅವರೇ, ನಿಮ್ಮ ವಿರೋಧಿ ಶಕ್ತಿಗಳ ಕೈ ಮೇಲಾಗುತ್ತಿದೆಯೇ?
ಇಷ್ಟು ದಿನಗಳ ಕಾಲ "ಅಂತರ್ಧಾನ" ಸ್ಥಿತಿಯಲ್ಲಿದ್ದ ರಮ್ಯಾ ಈಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಾ ಹಠಾತ್ ಪ್ರತ್ಯಕ್ಷರಾಗಿದ್ದಾರೆ. ಈ ಅನಿರೀಕ್ಷಿತ ದಾಳಿಯ ಹಿಂದೆ ಮೀರ್‌ಸಾದಿಕ್ ಕೈವಾಡವಿದೆ. ಡಿಕೆಶಿ ಅವರೇ, ನಿಮ್ಮ ವಿರೋಧಿ ಶಕ್ತಿಗಳ ಕೈ ಮೇಲಾಗುತ್ತಿದೆಯೇ?
ಮಾಜಿ ಸಚಿವ ಮಹಾದೇವಪ್ಪ ಅವರು ರಮ್ಯಾ ಪರ ಬ್ಯಾಟ್ ಬೀಸಿದ್ದಾರೆಯೇ ಹೊರತು ಡಿಕೆಶಿ ಪರವಲ್ಲ! ಮಹಾದೇವಪ್ಪ, ಸಿದ್ದರಾಮಯ್ಯ ಅತ್ಯಾಪ್ತರಲ್ಲೋರ್ವರು. ಸಿದ್ದರಾಮಯ್ಯ ಆಪ್ತರೆಲ್ಲಾ ರಮ್ಯಾ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಇದೆಲ್ಲ ಏನನ್ನು ಸೂಚಿಸುತ್ತದೆ? ಮೀರ್‌ಸಾದಿಕ್ ಬಣ ಡಿಕೆಶಿಯನ್ನು ಹರಕೆಯ ಕುರಿಯಾಗಿಸಲು ಹೊರಟಿದೆಯೇ? ಎಂದು ಪ್ರಶ್ನಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ