ಬೆಂಗಳೂರು (ಮೇ 10): ಪಿಎಸ್ಐ ಅಕ್ರಮ ನೇಮಕಾತಿ ಹಗರಣದಿಂದ ರಕ್ಷಣೆ ಪಡೆಯಲು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ (Minister Ashwath Narayan) ಪ್ರಯತ್ನಿಸುತ್ತಿದ್ದೀರಾ? ಅಂಥದ್ದೊಂದು ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ (State Politics) ನಡೆದಿದೆ. ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷವೂ ಬಾಕಿಯಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಚುನಾವಣೆಗೆ (Congress, BJP) ಭರ್ಜರಿ ಸಿದ್ಧತೆ ಆರಂಭಿಸಿವೆ. ಎದುರಾಳಿಗಳ ಸಣ್ಣ ತಪ್ಪನ್ನು ದೊಡ್ಡದಾಗಿ 3 ಪಕ್ಷಗಳು ಬಿಂಬಿಸುತ್ತಿವೆ. ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಪಿಎಸ್ಐ ಅಕ್ರಮ ನೇಮಕಾತಿ (PSI Recruitment Scam) ಹಗರಣ ಕಾಂಗ್ರೆಸ್ ನಾಯಕರ ‘ಕೈ’ಗೆ ಬಹುದೊಡ್ಡ ಅಸ್ತ್ರವನ್ನೇ ಕೊಟ್ಟಿದೆ. ಈ ಹಗರಣ ಆಡಳಿತ ಪಕ್ಷ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಇಂತಹ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರನ್ನು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಭೇಟಿ ಮಾಡಿ ಚರ್ಚೆ ನಾಡಿದ್ದಾರೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲವನ್ನುಂಟು ಮಾಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಎಂ.ಬಿ. ಪಾಟೀಲ್ ತುರ್ತು ಸುದ್ದಿಗೋಷ್ಠಿಯನ್ನು ಮಾಡಿದ್ದಾರೆ.
ನಿನ್ನೆ ಭೇಟಿ ಮಾಡಿದ್ದ ನಾಯಕರು?
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರನ್ನು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ನಿನ್ನೆ ಭೇಟಿ ಮಾಡಿ, ಸುಮಾರು 1 ಗಂಟೆ 15 ನಿಮಿಷಗಳ ಕಾಲ ಸುದೀರ್ಘ ಚರ್ಚೆಯನ್ನು ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಬಂದಿದೆ. ಬೆಂಗಳೂರಿನ ಸದಾಶಿವನಗರದ ಎಂ.ಬಿ. ಪಾಟೀಲ್ ಅವರ ನಿವಾಸದಲ್ಲಿ ಇಬ್ಬರೂ ನಾಯಕರು ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಸಂಚಲವನ್ನುಂಟು ಮಾಡಿವೆ. ಡಾ. ಅಶ್ವಥ್ ನಾರಾಯಣ ಅವರ ಮೇಲೆ ರಾಜ್ಯ ಕಾಂಗ್ರೆಸ್ ನಾಯಕರು ಪಿಎಸ್ಐ ಅಕ್ರಮ ನೇಮಕಾತಿ ಕುರಿತಂತೆ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ.
ತಕ್ಷಣ ಸಚಿವಸ್ಥಾನಕ್ಕೆ ಡಾ. ಅಶ್ವಥ್ ನಾರಾಯಣ ಅವರು ರಾಜೀನಾಮೆ ಕೊಡಬೇಕು ಎಂದೂ ‘ಕೈ’ ನಾಯಕರು ಪಟ್ಟು ಹಿಡಿದಿದ್ದಾರೆ. ಇದೇ ವೇಳೆ ಎಂ.ಬಿ. ಪಾಟೀಲ್ ಅವರನ್ನು ಅಶ್ವಥ್ ನಾರಾಯಣ ಭೇಟಿ ಮಾಡಿರುವುದು ತೀವ್ರ ಕುತೂಹಲವನ್ನುಂಟು ಮಾಡಿದೆ.
ಇದನ್ನೂ ಓದಿ: H.D Kumaraswamy: ಬಾದಾಮಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆ; ಸಿದ್ದು ಕಾಲೆಳೆದ ಕುಮಾರಸ್ವಾಮಿ
ರಕ್ಷಣೆ ಕೋರಿ ಬಂದಿದ್ದಾರೆ!
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗರಂ ಆಗಿ ಮಾತನಾಡಿದ್ದಾರೆ. ಭೇಟಿ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಡಿಕೆ ಶಿವಕುಮಾರ್, ‘ಅವರ (ಅಶ್ವಥ್ ನಾರಾಯಣ) ರಕ್ಷಣೆಗೆ ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದವರು ಯಾರು ಏನೂ ಮಾಡಬಾರದು. ಯಾರೂ ವಿಷಯವನ್ನು ಎತ್ತಬಾರದು ಅಂತಾ ಭೇಟಿ ಮಾಡುತ್ತಾರೆ. ನಾವು ಕೇಳಿದರೆ ಖಾಸಗಿ ಭೇಟಿ, ಶಿಕ್ಷಣ ಸಂಸ್ಥೆಗಳನ್ನು ಇಟ್ಟುಕೊಂಡಿದ್ದೇವೆ. ಅವರಿಂದ ಸಲಹೆ ಪಡೆಯಲು ಹೋಗಿದ್ದೇವು ಎನ್ನುತ್ತಾರೆ’ ಎಂದು ಡಿ.ಕೆ. ಶಿವಕುಮಾರ್ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಆ ಮೂಲಕ ಇಬ್ಬರೂ ನಾಯಕರು ಭೇಟಿ ಮಾಡಿರುವುದನ್ನು ಖಚಿತಪಡಿಸಿದ್ದಾರೆ.
ತುರ್ತು ಸುದ್ದಿಗೋಷ್ಠಿ ನಡೆಸಿದ ಎಂಬಿಪಿ!
ಇನ್ನು ಭೇಟಿ ವಿಚಾರದ ಕುರಿತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ತುರ್ತು ಸುದ್ದಿಗೋಷ್ಠಿ ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ‘ನಾನು ನಿನ್ನೆ ಅಶ್ವಥ್ ನಾರಾಯಣ ಅವರನ್ನು ಭೇಟಿ ಮಾಡಿಲ್ಲ. ಆದರೆ ಭೇಟಿ ಮಾಡಬಾರದು ಎಂದೇನಿಲ್ಲ’ ಎಂದು ಹೇಳಿಕೆ ಕೊಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇನ್ನು ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿರುವ ಎಂ.ಬಿ. ಪಾಟೀಲ್, ‘ಅಶ್ವಥ್ ನಾರಾಯಣ ಅವರಿಗೆ ರಕ್ಷಣೆ ಕೊಡಲು ನಾನ್ಯಾರು? ಅವರ ಹೇಳಿಕೆ ಕುರಿತು ಅವರೊಂದಿಗೆ ಮಾತನಾಡುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ: BBMP ಎಲೆಕ್ಷನ್ ನಡೆಸುವಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ; ಶೀಘ್ರವೇ ನೋಟಿಫಿಕೇಷನ್ ಹೊರಡಿಸಲು ಸೂಚನೆ
‘ಅಶ್ವಥ್ ನಾರಾಯಣ ಅವರ ಮಗಳು ಹಾಗೂ ನನ್ನ ಮಗ ಕ್ಲಾಸ್ಮೇಟ್ಸ್, ಸ್ನೇಹಿತರು. ಹೀಗಾಗಿ ನಮ್ಮ ಭೇಟಿ ಸ್ವಾಭಾವಿಕ. ಆದರೆ ನಾನು ಅವರನ್ನು ಕಳೆದ 6 ತಿಂಗಳುಗಳಿಂದ ಭೇಟಿ ಆಗಿಲ್ಲ. ಆದರೆ ನಾವು ಭೇಟಿ ಮಾಡಬಾರದು ಅಂನಾನೂ ಇಲ್ಲ. ನಾನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೇನೆ. ಅವರು ಮತ್ತೊಂದು ಪಕ್ಷದ ಹಿರಿಯ ನಾಯಕರಾಗಿದ್ದಾರೆ. ಹೀಗಾಗಿ ಭೇಟಿ ಮಾಡುವುದು ತಪ್ಪಲ್ಲ’ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಇಲ್ಲಿಗೆ ಮುಗಿಯುತ್ತದೆಯಾ ‘ಭೇಟಿ’ ಚರ್ಚೆ?
ಇದು ಚುನಾವಣಾ ವರ್ಷ ಆಗಿರುವುದರಿಂದ ಇಬ್ಬರೂ ನಾಯಕರ ಭೇಟಿ ಮಹತ್ವ ಪಡೆದುಕೊಂಡಿದೆ. ಒಂದೆಡೆ ಡಾ. ಅಶ್ವಥ್ ನಾರಾಯಣ ಅವರು ಸಚಿವಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರನ್ನು ಅಶ್ವಥ್ ನಾರಾಯಣ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ವಿಚಾರದ ಚರ್ಚೆ ಇಲ್ಲಿಗೆ ನಿಲ್ಲುವಂತೆ ಕಾಣುತ್ತಿಲ್ಲ. ರಾಜ್ಯ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಈ ವಿಚಾರವನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ವರದಿ: ಅನಿಲ್ ಬಾಸೂರು ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ