• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ashwath Narayan: ಯಾವುದೇ ದುರುದ್ದೇಶದ ಮಾತುಗಳಲ್ಲ; ವಿವಾದತ್ಮಕ ಹೇಳಿಕೆಗೆ ಅಶ್ವತ್ಥ್ ನಾರಾಯಣ್ ಸ್ಪಷ್ಟನೆ

Ashwath Narayan: ಯಾವುದೇ ದುರುದ್ದೇಶದ ಮಾತುಗಳಲ್ಲ; ವಿವಾದತ್ಮಕ ಹೇಳಿಕೆಗೆ ಅಶ್ವತ್ಥ್ ನಾರಾಯಣ್ ಸ್ಪಷ್ಟನೆ

ಅಶ್ವತ್ಥ್ ನಾರಾಯಣ್ ಮತ್ತು ಸಿದ್ದರಾಮಯ್ಯ

ಅಶ್ವತ್ಥ್ ನಾರಾಯಣ್ ಮತ್ತು ಸಿದ್ದರಾಮಯ್ಯ

ನನ್ನನ್ನು ಕೊಲ್ಲಲು ಮಾನಸಿಕ ಅಸ್ವಸ್ಥನಾಗಿರುವ ಅಶ್ವಥ್ ನಾರಾಯಣ್ ಅವರ ಮನವಿಯಿಂದ ಕನ್ನಡಿಗರು ಆಕ್ರೋಶಗೊಂಡಿದ್ದಾರೆಂದು ನನಗೆ ತಿಳಿದಿದೆ. ಆದರೆ ಯಾರಿಗೂ ಅವರಿಗೆ ತೊಂದರೆ ನೀಡಬೇಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.

  • News18 Kannada
  • 3-MIN READ
  • Last Updated :
  • Karnataka, India
  • Share this:

ಬೆಂಗಳೂರು: ಟಿಪ್ಪುವನ್ನು (Tipu Sultan ) ಹೊಡೆದು ಹಾಕಿದಂತೆ ಸಿದ್ದರಾಮಯ್ಯ (Siddaramaiah) ಅವರನ್ನು ಹೊಡದು ಹಾಕಬೇಕು ಎಂದು ನೀಡಿದ್ದ ಹೇಳಿಕೆಯನ್ನು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ (Minister Ashwath Narayan) ಸಮರ್ಥಿಸಿಕೊಂಡಿದ್ದಾರೆ. ಇಂದು ಟ್ವೀಟ್ ಮಾಡಿರುವ ಅಶ್ವಥ್ ನಾರಾಯಣ್ ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕೆಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮಂಡ್ಯದಲ್ಲಿ ಟಿಪ್ಪು –ಸಿದ್ದರಾಮಯ್ಯ (Tipu And Siddarmaiah) ಅವರನ್ನು ಹೋಲಿಸಿ ಆಡಿರುವ ಮಾತುಗಳು ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ ಎಂದಿದ್ದಾರೆ. ರಾಜಕೀಯದಲ್ಲಿ ವಾಗ್ದಾಳಿ ಒಂದು ಅವಿಭಾಜ್ಯ ಅಂಗವಾಗಿದೆ. ನಾನು ಆಡಿರುವ ಮಾತುಗಳನ್ನು ಆ ಚೌಕಟ್ಟಿನಲ್ಲೇ ನೋಡಬೇಕು. ಇದು ಆರೋಗ್ಯಕರ ಪ್ರಜಾತಂತ್ರಕ್ಕೆ ಅಗತ್ಯವಾಗಿದೆ ಎಂದಿದ್ದಾರೆ.


ಮುಂದುವರಿದು ಟ್ವೀಟ್ ಮಾಡಿರುವ ಅಶ್ವತ್ಥ್ ನಾರಾಯಣ್, ಸಾಂದರ್ಭಿಕವಾಗಿ ಆಡು ಭಾಷೆಯಲ್ಲಿ ಸೋಲಿಸಿ ಎಂಬ ಅರ್ಥದಲ್ಲಿ ಹೇಳಿರುವ ಮಾತನ್ನು ತಮಗೆ ಬೇಕಾದ ಹಾಗೆ ಅರ್ಥೈಸಿಕೊಂಡು, ಮಾತನಾಡುತ್ತಿರುವ ಸಿದ್ದರಾಮಯ್ಯ ಅವರ ಭಾಷಾ ಪ್ರಾವೀಣ್ಯತೆ, ಅವರು ಬಳಸುವ (ಗ್ರಾಮೀಣ!) ಪದಗಳು ಏನೆಂಬುದನ್ನು ರಾಜ್ಯದ ಜನತೆಯೇ ನೋಡಿದೆ. ಅಷ್ಟಕ್ಕೂ, ಟಿಪ್ಪುವಿನಲ್ಲಿರುವ ಕಟುಕತನದ ಮನಸ್ಥಿತಿ ನಮ್ಮ ಮಂಡ್ಯದ ಜನತೆಗೆ ಇಲ್ಲ ಎಂದು ಹೇಳಿದ್ದಾರೆ.


ನೋವುಂಟಾಗಿದ್ದಾರೆ ವಿಷಾದ


ಪ್ರಧಾನಿಯವರನ್ನು ನರ ಹಂತಕ ಎನ್ನುವುದು, ಮುಖ್ಯಮಂತ್ರಿ ಅವರಿಗೆ ಮನೆ ಹಾಳಾಗ ಎನ್ನುವುದು ಸಿದ್ದರಾಮಯ್ಯ ಅವರ ಸಂಸ್ಕೃತಿ ಆಗಿರಬಹುದು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಬೇಕು ಎನ್ನುವ ಅರ್ಥದಲ್ಲಷ್ಟೇ ನಾನು ಆ ಮಾತನ್ನಾಡಿದ್ದೇನೆ. ಅದರಿಂದ ಅವರಿಗೆ ನೋವುಂಟಾಗಿದ್ದಾರೆ ವಿಷಾದಿಸುತ್ತೇನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.



ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ


ಟಿಪ್ಪುವನ್ನು ಹೇಗೆ ಕೊಂದರೋ ಹಾಗೆ ನನ್ನನ್ನೂ ಸಾಯಿಸಿ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಅಶ್ವತ್ಥ್ ನಾರಾಯಣ ಅವರೇ ಜನರನ್ನು ಯಾಕೆ ಪ್ರಚೋದಿಸುತ್ತಿದ್ದೀರಿ? ನೀವೇ ಅವರಿಗೆ ಬಂದೂಕು ನೀಡಿ. ಸಚಿವರು ನೀಡಿದ ಕರೆ ಕೇಳಿ ನನಗೆ ಆಶ್ವರ್ಯವಾಗಿಲ್ಲ. ಮಹಾತ್ಮ ಗಾಂಧಿಯವರ ಕೊಲೆಗಾರನನ್ನು ಆರಾಧಿಸುವ ಪಕ್ಷದ ನಾಯಕರಿಂದ ನಾವು ಪ್ರೀತಿ ಮತ್ತು ಸ್ನೇಹವನ್ನು ಹೇಗೆ ನಿರೀಕ್ಷಿಸಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.


ಹತ್ಯೆಗೆ ಬಹಿರಂಗವಾಗಿ ಕರೆ ನೀಡಿದ ಸಚಿವರ ವಿರುದ್ಧ ಸರ್ಕಾರ ಯಾವುದೇ ಕ್ರಮಕೈಗೊಳ್ಳದಿರೋದು ಅಚ್ಚರಿಯನ್ನುಂಟು ಮಾಡಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ನಿದ್ದೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.


ಸಚಿವರ ಹೇಳಿಕೆಗೆ ಬಿಜೆಪಿಯ ಸಮ್ಮತ ಇದೆಯಾ?


ಯಾವುದೇ ಕ್ರಮಕೈಗೊಳ್ಳದ ಸಿಎಂ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಆಶ್ವತ್ಥ್ ನಾರಾಯಣ್ ನೀಡಿದ ಹೇಳಿಕೆಗೆ ಸಮ್ಮತಿ ಇದೆ ಎಂಬುವುದು ತೋರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದೆ.




ಕರ್ನಾಟಕ ಬಿಜೆಪಿಯಲ್ಲೂ ಗುಜರಾತ್ ಬಿಜೆಪಿ ಸಂಸ್ಕೃತಿ ಬೀರೂರಿದೆಯಾ? ನರೇಂದ್ರ ಮೋದಿಯವರು 2002ರಲ್ಲಿ ಹೇಗೆ ಮೌನವಾಗಿದ್ದರೋ ಹಾಗೆಯೇ ಈಗಲಾದರೂ ಸುಮ್ಮನಿರುತ್ತಾರಾ? ಕರ್ನಾಟಕವನ್ನು ಗುಜರಾತ್‌ನಂತೆ ಆಗಲು ಕನ್ನಡಿಗರು ಎಂದಿಗೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.


ಅಶ್ವತ್ಥ್ ನಾರಾಯಣ್ ಅವರನ್ನು ಸಂಪುಟದಿಂದ ವಜಾಗೊಳಿಸಿ ಬಂಧಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಸಚಿವರ ಹೇಳಿಕೆಗೆ ಬಿಜೆಪಿಯ ಒಮ್ಮತವಿದೆ ಎಂದರ್ಥ ಎಂದಿದ್ದಾರೆ.


ಮಾನಸಿಕ ಅಸ್ವಸ್ಥನಾದ ಅಶ್ವಥ್ ನಾರಾಯಣ್


ನನ್ನನ್ನು ಕೊಲ್ಲಲು ಮಾನಸಿಕ ಅಸ್ವಸ್ಥನಾಗಿರುವ ಅಶ್ವಥ್ ನಾರಾಯಣ್ ಅವರ ಮನವಿಯಿಂದ ಕನ್ನಡಿಗರು ಆಕ್ರೋಶಗೊಂಡಿದ್ದಾರೆಂದು ನನಗೆ ತಿಳಿದಿದೆ. ಆದರೆ ಯಾರಿಗೂ ಅವರಿಗೆ ತೊಂದರೆ ನೀಡಬೇಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: Narayana Gowda: ಬಿಜೆಪಿಯಿಂದ ಸ್ಪರ್ಧಿಸಬೇಕಾ, ನಿವೃತ್ತಿಯಾಗಬೇಕಾ ಹೇಳ್ತೀನಿ! ಹೊಸ ಬಾಂಬ್ ಸಿಡಿಸಿದ ನಾರಾಯಣ ಗೌಡ


ದೂರು ದಾಖಲು


ಇನ್ನು ಸಚಿವರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಿರ್ಧರಿಸಿದೆ. ಇತ್ತ ಕುರುಬ ಸಮುದಾಯದ ನಾಯಕರು ಸಹ ಪ್ರತಿಭಟನೆಗೆ ಮುಂದಾಗಿದ್ದಾರೆ. ಇತ್ತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಅವರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Published by:Mahmadrafik K
First published: