HOME » NEWS » State » MINISTER ARAVINDA LIMBAVALI SAYS WHO GET MASASHANA ILLEGALLY WILL IMPLEMENT TOUGH RULES RBK LG

ಕಲಾವಿದರಲ್ಲದವರಿಗೆ ಮಾಸಾಶನ ನೀಡುತ್ತಿರುವ ಆರೋಪ; ಪರಿಶೀಲಿಸಿ ಕಠಿಣ ನಿಯಮಾವಳಿ ರೂಪಿಸಲಾಗುತ್ತೆ ಎಂದ ಸಚಿವ ಅರವಿಂದ್ ಲಿಂಬಾವಳಿ

ಕಲಾವಿದರು ಮಾಸಾಶನ ಕೋರಿ ರಾಜ್ಯದಲ್ಲಿ ಸಾವಿರಾರು ಅರ್ಜಿಗಳು ಬಂದಿವೆ .ಅವುಗಳನ್ನು ಪರಿಶೀಲಿಸಿ,ಅರ್ಹ ಕಲಾವಿದರಿಗೆ ಮಾಸಾಶನ ನೀಡಲಾಗುವುದು ಎಂದರು.

news18-kannada
Updated:April 16, 2021, 7:58 AM IST
ಕಲಾವಿದರಲ್ಲದವರಿಗೆ ಮಾಸಾಶನ ನೀಡುತ್ತಿರುವ ಆರೋಪ; ಪರಿಶೀಲಿಸಿ ಕಠಿಣ ನಿಯಮಾವಳಿ ರೂಪಿಸಲಾಗುತ್ತೆ ಎಂದ ಸಚಿವ ಅರವಿಂದ್ ಲಿಂಬಾವಳಿ
ಅರವಿಂದ್ ಲಿಂಬಾವಳಿ
  • Share this:
ಬಾಗಲಕೋಟೆ (ಏ.16) : ರಾಜ್ಯದಲ್ಲಿ ಕಲಾವಿದರಲ್ಲದವರಿಗೆ ಮಾಸಾಶನ ಹಾಗೂ ಸಂಘ ಸಂಸ್ಥೆಗಳಿಗೆ ನೀಡಲಾಗುವ ವಾರ್ಷಿಕ ಅನುದಾನ ಕಲಾವಿದರಿಲ್ಲದ ಸಂಸ್ಥೆಯವರು ಪಡೆಯುತ್ತಿದ್ದಾರೆ ಎನ್ನುವ ಆರೋಪವಿದೆ. ಈ ಬಗ್ಗೆ ಪರಿಶೀಲಿಸಿ, ಕಠಿಣ ಹೊಸ ನಿಯಮಾವಳಿ ರೂಪಿಸಲಾಗುವುದು ಎಂದು ಬಾಗಲಕೋಟೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ್ ಲಿಂಬಾವಳಿ ಹೇಳಿದರು.

ಬಾಗಲಕೋಟೆಯ ಹೊಸ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಅರವಿಂದ್ ಲಿಂಬಾವಳಿ, ಕಲಾವಿದರು ಮಾಸಾಶನ ಕೋರಿ ರಾಜ್ಯದಲ್ಲಿ ಸಾವಿರಾರು ಅರ್ಜಿಗಳು ಬಂದಿವೆ .ಅವುಗಳನ್ನು ಪರಿಶೀಲಿಸಿ,ಅರ್ಹ ಕಲಾವಿದರಿಗೆ ಮಾಸಾಶನ ನೀಡಲಾಗುವುದು ಎಂದರು.

ಚಿಕ್ಕ ಸಂಗಮದಲ್ಲಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ ಪ್ರಸ್ತಾವನೆಗೆ ಅನುಮೋದನೆ!!

ಆಲಮಟ್ಟಿ ಅಣೆಕಟ್ಟೆ ಹಿನ್ನೀರು ಪ್ರದೇಶ ಬಾಗಲಕೋಟೆ ಜಿಲ್ಲೆಯ ಚಿಕ್ಕಸಂಗಮ ಬಳಿ ಬೇಸಿಗೆ ಸಂದರ್ಭದಲ್ಲಿ ಸಂತಾನೋತ್ಪತ್ತಿಗಾಗಿ ದೇಶ ವಿದೇಶಗಳಿಂದ ವಿವಿಧ ಬಗೆಯ ಪಕ್ಷಿಗಳು ವಲಸೆ ಬರುತ್ತವೆ. ಈ ಭಾಗದಲ್ಲಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ ಆಗಬೇಕು ಎನ್ನುವುದು ಪಕ್ಷಿ ಪ್ರೇಮಿಗಳ ಬೇಡಿಕೆ ಆಗಿತ್ತು. ಇದೀಗ ರಾಜ್ಯ ಸರ್ಕಾರ ಸ್ಪಂದಿಸಿ , ಅರಣ್ಯ ಇಲಾಖೆ ರಾಜ್ಯ ವನ್ಯ ಜೀವಿ ಮಂಡಳಿಗೆ ಕಳುಹಿಸಿದ್ದ ಪ್ರಸ್ತಾವನೆಗೆ ಡಿಸೆಂಬರ್ 2020ರಲ್ಲಿ ಅನುಮೋದನೆ ನೀಡಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶದಲ್ಲಿ ಅಗತ್ಯ ಕ್ರಮ ಕೈಗೊಳ್ಳುವರು. ಜೊತೆಗೆ ಅದಕ್ಕೆ ಬೇಕಾಗುವ ಅನುದಾನ ರಾಜ್ಯ ಸರ್ಕಾರ ನೀಡಲಿದೆ ಸಚಿವರು ತಿಳಿಸಿದರು.

123ಚದರ ಕಿಲೋ ಮೀಟರ್ ಹಿನ್ನೀರು ಪ್ರದೇಶದಲ್ಲಿ 3 ದ್ವೀಪಗಳಿದ್ದು, ಒಟ್ಟು 206ಪಕ್ಷಿ ಪ್ರಭೇದಗಳಲ್ಲಿ 34ಪ್ರಭೇದದ ಪಕ್ಷಿಗಳು ವಿದೇಶಿಗಳಿಂದ ವಲಸೆ ಬರುತ್ತವೆ. ಸೈಬೇರಿಯಾದಿಂದ ಬಾರ್ ಹೆಡೆಡ್ ಗೀಸ್, ಆಸ್ಟ್ರೇಲಿಯಾದಿಂದ ಓರಿಯೆಂಟಿಕಲ್ ಪ್ರಾಟಿಂಕೋಲ್,ಮುಖ್ಯ ವಲಸೆ ಪಕ್ಷಿಯಾದ ಫ್ಲೆಮಿಂಗೋ ಸೇರಿದಂತೆ ವಿವಿಧ ಪ್ರಭೇದದ ಪಕ್ಷಿಗಳು ಹಿನ್ನೀರು ಪ್ರದೇಶಕ್ಕೆ ವಲಸೆ ಬರುತ್ತವೆ.

ಇನ್ನು ಈ ಭಾಗದಲ್ಲಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವಾಗುವದರಿಂದ ಅಳಿವಿನಂಚಿನಲ್ಲಿರುವ ಪಕ್ಷಿಗಳ ಸಂರಕ್ಷಣೆ,ಪಕ್ಷಿಗಳ ಗೂಡು ಕಟ್ಟಕವಿಕೆ, ಮರಿಗಳನ್ನು ಬೆಳೆಸುವ ತಾಣ, ಜನರು, ರೈತರಲ್ಲಿ ಪ್ರಾಣಿ,ಪಕ್ಷಿಗಳ ಬಗ್ಗೆ ಜಾಗೃತಿ, ಅರಿವು ಮೂಡಿಸುವುದು ಹಾಗೂ ಪರಿಸರ ಪ್ರವಾಸ ಜೊತೆಗೆ ಫೋಟೋಗ್ರಫಿಗೆ ಉತ್ತೇಜನ ಕೊಡುವ ಉದ್ದೇಶ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.

ಆಲಮಟ್ಟಿ ಹಿನ್ನೀರು ಪ್ರದೇಶದಲ್ಲಿ ಮಾದರಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನಾಗಿಸುವ ಯೋಜನೆ ಸರ್ಕಾರಕ್ಕಿದೆ ಎಂದರು. ಇನ್ನು ಮುಳುಗಡೆಯಾದ ಬಾಗಲಕೋಟೆ ಸುತ್ತಲೂ ಪ್ರದೇಶದಲ್ಲಿ ಅರಣ್ಯೀಕರಣ ಮಾಡುವಂತೆ ಶಾಸಕ ವೀರಣ್ಣ ಚರಂತಿಮಠ ಸಚಿವರಿಗೆ ಮನವಿ ಮಾಡಿಕೊಂಡರು.ಈ ವೇಳೆ ಸ್ಥಳದಲ್ಲೇ ಇದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ಹಿನ್ನೀರಿನಲ್ಲಿ ಕೊಳೆಯದಂತಹ ಗಿಡಮರಗಳನ್ನು ಬೆಳೆಸಲು ಸೂಚಿಸಿದರು‌.ಇದೇ ವೇಳೆ ಶಾಸಕ ವೀರಣ್ಣ ಚರಂತಿಮಠ, ಹಿನ್ನೀರು ಪ್ರದೇಶದಲ್ಲಿ ಬೆಳೆದ ಮುಳ್ಳು ಗಂಟಿ ತೆರವುಗೊಳಿಸಲಾಗುವುದು.ಬಿಟಿಡಿಎ ಅಧಿಕಾರಿಗಳು,ಅರಣ್ಯ ಇಲಾಖೆ ಅಧಿಕಾರಿಗಳು ಹಿನ್ನೀರು ಪ್ರದೇಶದಲ್ಲಿ ಜಂಟಿ ಸರ್ವೆ ಕಾರ್ಯ ಮಾಡಿ, ಅರಣ್ಯೀಕರಣ ಮಾಡಿ, ಬಾಗಲಕೋಟೆ ನಗರ ಹಸಿರು, ಸುಂದರ ನಗರವನ್ನಾಗಿಸಲು ಸೂಚಿಸಿದರು.

ಸಚಿವರ ಎದುರೇ ಕಲಾ ಪ್ರದರ್ಶನ!!

ಬಾಗಲಕೋಟೆ ಹೊಸ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಲು ಬಂದಿದ್ದ ಕಲಾ ತಂಡದವರು ಕನ್ನಡ ಮತ್ತು ಸಂಸ್ಕೃತಿ ಸಚಿವರ ಎದುರೇ  ಗೊಂದಲರ ಪದವನ್ನು ಹಾಡುವ ಮೂಲಕ ಗಮನ ಸೆಳೆದರು.

ಕೊರೊನಾ ತಡೆಗೆ ಸಿಎಂ, ಆರೋಗ್ಯ ಮಂತ್ರಿ, ಗೃಹ ಮಂತ್ರಿ ಕಠಿಣ ಕ್ರಮ!!

ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿರುವ  ಹಿನ್ನಲೆ ಸಿಎಂ, ಆರೋಗ್ಯ ಹಾಗೂ ಗೃಹ ಸಚಿವರು ಚರ್ಚೆ ಮಾಡುತ್ತಿದ್ದಾರೆ.ರಾಜ್ಯದಲ್ಲಿ ಆರ್ಥಿಕ ಸಮಸ್ಯೆಯೂ ಇರುವುದರಿಂದ ಯಾವ ರೀತಿಯ ಕ್ರಮ ಜರುಗಿಸಬೇಕು ಎಂದು ನಿರ್ಧರಿಸಲಿದ್ದಾರೆ. ದೇಶದಲ್ಲಿ ಮಹಾರಾಷ್ಟ್ರ ನಂತರ ಕರ್ನಾಟಕ ಹೆಚ್ಚು ಆದಾಯ ಕೊಡುವ ರಾಜ್ಯವಾಗಿದೆ. ಹೀಗಾಗಿ ಆರ್ಥಿಕ ಮುಗ್ಗಟ್ಟು ಹೇಗೆ ಎದುರಿಸಬೇಕು ಹಾಗೂ ಕೊರೊನಾ ಹೇಗೆ ಎದುರಿಸಬೇಕು. ಮುಖ್ಯಮಂತ್ರಿಗಳು ವಿರೋಧ ಪಕ್ಷಗಳ ನಾಯಕರು, ಕೇಂದ್ರ ಸರ್ಕಾರದ ಜೊತೆಗೂ ಚರ್ಚೆ ಮಾಡಿ, ನಿರ್ಧಾರ ತೆಗೆದುಕೊಳ್ಳುತ್ತಾರೆ. ಸರ್ವ ಪಕ್ಷಗಳ ಸಭೆಗೆ ಹೋಗೇನು ಉಪಯೋಗ? ಸಭೆ ಹೋಗಲ್ಲ ಎಂದಿರುವ ಮಾಜಿ ಸಿಎಂ ಎಚ್ಡಿಕೆ ಹೇಳಿಕೆಗೆ ಸಲಹೆ ಕೇಳುವುದು ನಮ್ಮ ಕರ್ತವ್ಯ. ಬರೋದು, ಬಿಡೋದು ಅವರಿಗೆ ಬಿಟ್ಟಿದ್ದು. ಹೋಗೇನು ಉಪಯೋಗ ಅನ್ನೋದನ್ನು ಅವರು (ಎಚ್ಡಿಕೆ) ಪ್ರಚಾರದಲ್ಲಿಯೇ ಹೇಳಿದ್ದು, ಬಸವಕಲ್ಯಾಣಕ್ಕೆ ಅವರು ಕೂಡಾ ಪ್ರಚಾರಕ್ಕೆ ಹೋಗಿದ್ದು, ಸ್ವಾಭಾವಿಕವಾಗಿ ಅವರು ಕನ್ವಿನೆಂಟ್ ಟೈಮ್ ಫಿಕ್ಸ್ ಮಾಡಬೇಕಾಗುತ್ತೆ ಎಂದರು.

Astrology: ಶುಕ್ರವಾರದ ಈ ದಿನ ಯಾವ ರಾಶಿಗೆ ಯಾವ ಫಲ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ನೈಟ್ ಕರ್ಫ್ಯೂ ಅನ್ನೋ ಒಂದು ಪ್ರಯೋಗ ಈಗಾಗಲೇ ಶುರು ಮಾಡಿದ್ದೀವಿ. ಅದು ಯಶಸ್ವಿ ಆಗುತ್ತೋ ಇಲ್ವೋ ಅನ್ನೋದನ್ನ ನೋಡಬೇಕಲ್ವಾ. ಇದನ್ನ ಆಧಾರವಾಗಿ ಇಟ್ಟುಕೊಂಡು ಏ.18ಕ್ಕೆ ಸಭೆ ಕರೆದಿದ್ದಾರೆ. ರಾಜ್ಯದಲ್ಲಿ ರೆಮಿಡೆವಿಸ್ ಔಷಧಿ ಕೊರತೆ ಇಲ್ಲ. ನಿನ್ನೆ ಆರೋಗ್ಯ ಸಚಿವರೇ ಸ್ಪಷ್ಟಿಕರಣ ಕೊಟ್ಟಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಔಷಧ ಇದೆ. ಕೊರತೆ ಕಮ್ಯುನಿಕೇಶನ್ ಗ್ಯಾಪ್ ನಿಂದ ಆಗಿರಬಹುದು. ಔಷಧ ಕೊರತೆ ಇದೆ ಎಂದು ನನಗೆ ಅನ್ನಿಸಲ್ಲ ಎಂದರು.

ಉಪಚುನಾವಣೆಯಲ್ಲಿ ಮೂರು ಕ್ಷೇತಗಳಲ್ಲಿ  ಬಿಜೆಪಿ ಗೆಲ್ಲಲಿದೆ. ಮಸ್ಕಿಯಲ್ಲಿ ಬಿಜೆಪಿಯಿಂದ ಹಣದ ಹೊಳೆ ಹರಿದಿದೆ ಎಂಬ ಆರೋಪಕ್ಕೆ, ಬೇಸಿಗೆಯಲ್ಲಿ ಹೊಳೆ ಹೆಂಗೆ ಹರಿಸೋಕೆ ಆಗುತ್ತೆ ಎಂದು ಅರವಿಂದ್ ಲಿಂಬಾವಳಿ ಮಾರ್ಮಿಕವಾಗಿ ಹೇಳಿದರು. ನಂದೀಶ್ ರಡ್ಡಿ ಹಣ ಹಂಚುವ ವಿಡಿಯೋ ವೈರಲ್ ಆಗಿದೆ ಎನ್ನುವುದಕ್ಕೆ ಅವರು ಹಣ ಹಂಚತಾ ಇದ್ರೋ, ಪೇಪರ್ ಹಂಚತಾ ಇದ್ರೋ ಯಾರಿಗೆ ಗೊತ್ತು ಎಂದು ಜಾರಿಕೊಂಡರು.

ಜಿಲ್ಲೆಯಲ್ಲಿ ರೆಮಿಡೆವಿಸ್ ಕೊರತೆಯೂ ಇಲ್ಲ, ಹೆಚ್ಚಿನ ಬೆಲೆಗೆ ಮಾರಾಟ ಇಲ್ಲ -ಶಾಸಕ ಚರಂತಿಮಠ..

ರೆಮಿಡೆವಿಸ್ ಎಂಆರ್ ಪಿ 4500 ರೂ. ಇದೆ. ಹೊರಗಡೆ ಇದೇ ಬೆಲೆಗೆ ಮಾರಾಟ ಮಾಡ್ತಿದ್ದಾರೆ. ಸರ್ಕಾರ ಕನ್ಸಿಷನ್ ರೇಟ್ ನಲ್ಲಿ 1600 ರೂ.ಗೆ ಕೊಡಲಾಗುತ್ತೆ. ಬಿಪಿಎಲ್ ಕಾರ್ಡ್ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕೊಡ್ತಿದ್ದೇವೆ ಎಂದು ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಹೊರಗಡೆ ಇರೋರು ಎಂಆರ್ ಪಿಗೆ ಮಾರುತ್ತಾರೆ. 4500 ರೂ. ಗಿಂತ ಹೆಚ್ಚಿಗೆ ತಗೊಳ್ತಿಲ್ಲ. ನಿನ್ನೆಯಷ್ಟೆ ಆರು ಬಾಟಲ್ ಮಹಾರಾಷ್ಟ್ರಕ್ಕೆ ಎಂಆರ್ ಪಿ ರೇಟ್ ನಲ್ಲಿ ಕಳಿಸಿದ್ದಾರೆ. 25, 30 ಸಾವಿರ ಅನ್ನೊದೆಲ್ಲ ಸುಳ್ಳು. ಆ ತರಹದ ಘಟನೆ ಇದ್ರೆ ಗಮನಕ್ಕೆ ತಂದ್ರೆ ಕ್ರಮ ತಗೊಳ್ತಾರೆ ಎಂದರು‌.
Published by: Latha CG
First published: April 16, 2021, 7:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories