ಹಲವು ಆರೋಪ ಹೊತ್ತ ನನ್ನ ಕಾಂಗ್ರೆಸ್​​ಗೆ ಹೇಗೆ ಸೇರಿಸಿಕೊಂಡ್ರಿ?: ಸಿದ್ದರಾಮಯ್ಯಗೆ ಆನಂದ್​​ ಸಿಂಗ್ ಪ್ರಶ್ನೆ​​​

ಇನ್ನು, ನನ್ನ ಮೇಲಿರುವ ಯಾವುದೇ ಆರೋಪಗಳು ಇಲ್ಲಿಯವೆರಗೂ ಸಾಬೀತಾಗಿಲ್ಲ. ಅನೇಕ ಪ್ರಕರಣಗಳು ಖುಲಾಸೆಗೊಂಡಿವೆ. ಇಂತವರನ್ನು ಎದುರಿಸುವ ಶಕ್ತಿ ದೇವರು ನನಗೆ ನೀಡಿದ್ಧಾರೆ. ಚುನಾವಣೆ ಎದುರಿಸಿ ಜನಾಭಿಪ್ರಾಯ ಪಡೆದು ಅರ್ಹನಾಗಿ ಸಚಿವನಾಗಿ ವಿಧಾನಸಭೆ ಪ್ರವೇಶಿಸುತ್ತಿದ್ದೇನೆ. ಇವರು ಅನರ್ಹರು ಎನ್ನುವುದನ್ನು ಕಟ್ಟಿಕೊಂಡು ಏನು ಆಗಬೇಕಿಲ್ಲ ಎಂದರು.

ಸಿದ್ದರಾಮಯ್ಯ ಹಾಗೂ ಆನಂದ್​ ಸಿಂಗ್​

ಸಿದ್ದರಾಮಯ್ಯ ಹಾಗೂ ಆನಂದ್​ ಸಿಂಗ್​

 • Share this:
  ಬೆಂಗಳೂರು(ಫೆ.17): ಹಲವು ಆರೋಪಗಳನ್ನು ಹೊತ್ತ ನನ್ನನ್ನು ಕಾಂಗ್ರೆಸ್​ಗೆ ಹೇಗೆ ಸೇರಿಸಿಕೊಂಡ್ರಿ ಎಂದು ಸಚಿವ ಆನಂದ್​​ ಸಿಂಗ್​​ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ಧಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್​ ಸಿಂಗ್​​, ನನ್ನ ಮೇಲಿನ ಆರೋಪಗಳು ಹೊಸತೇನಲ್ಲ. ನಾನು ಈ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದಾಗಲೂ ಇದ್ದವು. ಅಂತಹ ಆರೋಪಗಳನ್ನು ಹೊತ್ತ ನನ್ನನ್ನು ಕಾಂಗ್ರೆಸ್​​ ಪಕ್ಷಕ್ಕೆ ಹೇಗೆ ಸೇರಿಸಿಕೊಂಡರು? ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

  ನನ್ನನ್ನು ಅರಣ್ಯ ಸಚಿವರನ್ನಾಗಿ ಮಾಡಿದ್ದಕ್ಕೆ ಕಾಂಗ್ರೆಸ್​​ ವಿರೋಧ ಮಾಡುತ್ತಿದೆ. ಈ ಆರೋಪಗಳು ಹಿಂದೆಯೂ ಇದ್ದವು. ಇಂದು ನನ್ನನ್ನು ವಿರೋಧಿಸುತ್ತಿರುವ ಕಾಂಗ್ರೆಸ್​ ಅಂದು ಹೇಗೆ ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿತ್ತು. ಬದಲಿಗೆ ನನ್ನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬಾರದಿತ್ತು ಎಂದು ಸಚಿವ ಆನಂದ್​​ ಸಿಂಗ್​ ಕುಟುಕಿದರು.

  ಇನ್ನು, ನನ್ನ ಮೇಲಿರುವ ಯಾವುದೇ ಆರೋಪಗಳು ಇಲ್ಲಿಯವೆರಗೂ ಸಾಬೀತಾಗಿಲ್ಲ. ಅನೇಕ ಪ್ರಕರಣಗಳು ಖುಲಾಸೆಗೊಂಡಿವೆ. ಇಂತವರನ್ನು ಎದುರಿಸುವ ಶಕ್ತಿ ದೇವರು ನನಗೆ ನೀಡಿದ್ಧಾನೆ. ಚುನಾವಣೆ ಎದುರಿಸಿ ಜನಾಭಿಪ್ರಾಯ ಪಡೆದು ಅರ್ಹನಾಗಿ ಸಚಿವನಾಗಿ ವಿಧಾನಸಭೆ ಪ್ರವೇಶಿಸುತ್ತಿದ್ದೇನೆ. ಇವರು ಅನರ್ಹರು ಎನ್ನುವುದನ್ನು ಕಟ್ಟಿಕೊಂಡು ಏನು ಆಗಬೇಕಿಲ್ಲ ಎಂದರು.

  ಇದನ್ನೂ ಓದಿ: ‘15 ಕೇಸ್​ ಇರುವುದು ನಿಜ; ಯಾರದ್ದೋ ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲಾಗಿದೆ‘: ಸಚಿವ ಆನಂದ್​​ ಸಿಂಗ್​​​​​

  ನೂತನ ಸಚಿವ ಆನಂದ್ ಸಿಂಗ್​​ಗೆ ಅರಣ್ಯ ಖಾತೆ ನೀಡಿರುವುದಕ್ಕೆ ವಿರೋಧ ಪಕ್ಷಗಳು ಖ್ಯಾತೆ ತೆಗೆದಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರನ್ನು ತರಾಟೆ ತೆಗೆದುಕೊಂಡಿದ್ದಾರೆ. ಕರ್ನಾಟಕ ಅರಣ್ಯ ಕಾಯ್ದೆ ಉಲ್ಲಂಘನೆ ಸೇರಿದಂತೆ 15ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿರುವ ಆನಂದ್ ಸಿಂಗ್​​​​​ಗೆ ಹೇಗೆ ಅರಣ್ಯ ಖಾತೆ ನೀಡಿದ್ದೀರಿ? ಎಂದು ಪ್ರಶ್ನಿಸುತ್ತಿದ್ದಾರೆ. ಹೀಗೆ ನೂತನ ಅರಣ್ಯ ಸಚಿವ ಮೇಲೆ ಗಂಭೀರ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ಆನಂದ್​ ಸಿಂಗ್​​ ಖಾತೆಯನ್ನು ಮತ್ತೊಮ್ಮೆ ಬದಲಾಯಿಸಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ.

  ಸಿಎಂ ಯಡಿಯೂರಪ್ಪ ಈ ನಿರ್ಧಾರಕ್ಕೆ ಬಂದ ಕೂಡಲೇ ನೂತನ ಸಚಿವ ಆನಂದ್ ಸಿಂಗ್ ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ಈಗಾಗಲೇ ಭೇಟಿ ನೀಡಿದ್ದಾರೆ. ಬಿ.ಎಸ್​​ ಯಡಿಯೂರಪ್ಪ ಜತೆ ಕೆಲವು ನಿಮಿಷಗಳ ಕಾಲ ಆನಂದ್​ ಸಿಂಗ್​​ ಮಾತುಕತೆ ನಡೆಸಿದ್ದಾರೆ. ನಾನು ಅರಣ್ಯ ಖಾತೆ ಕೇಳಲಿಲ್ಲ. ಮೊದಲು ನನಗೇ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನೀಡಿದ್ದೀರಿ. ನಂತರ ನೀವೇ ಖಾತೆ ಬದಲಾಯಿಸಿ ಅರಣ್ಯ ಇಲಾಖೆ ಜವಾಬ್ದಾರಿ ಕೊಟ್ಟಿರಿ. ಈಗ ಪುನಃ ಖಾತೆ ಬದಲಾವಣೆ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
  First published: