• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hosapete: ಆನಂದ್​ ಸಿಂಗ್ ವಿರುದ್ಧ ಭೂಮಿ ಪರಭಾರೆ ಆರೋಪ; ಪುತ್ರ, ಅಳಿಯ ಸೇರಿ 9 ಮಂದಿ ಹೆಸರಿಗೆ ಆಸ್ತಿ ನೋಂದಣಿ!

Hosapete: ಆನಂದ್​ ಸಿಂಗ್ ವಿರುದ್ಧ ಭೂಮಿ ಪರಭಾರೆ ಆರೋಪ; ಪುತ್ರ, ಅಳಿಯ ಸೇರಿ 9 ಮಂದಿ ಹೆಸರಿಗೆ ಆಸ್ತಿ ನೋಂದಣಿ!

ಸಚಿವ ಆನಂದ್ ಸಿಂಗ್​

ಸಚಿವ ಆನಂದ್ ಸಿಂಗ್​

ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಅಧಿಕಾರ ದುರ್ಬಳಕೆ ಮಾಡಿ ಬರೋಬ್ಬರಿ 180 ಎಕರೆ ಭೂಮಿಯನ್ನು ಅಕ್ರಮವಾಗಿ 9 ಮಂದಿ ಹೆಸರಿನಲ್ಲಿ ಪರಭಾರೆ ಮಾಡಿಸಿದ ಆರೋಪ ಸಚಿವ ಆನಂದ್ ಸಿಂಗ್​ ವಿರುದ್ಧ ಹೇಳಿ ಬಂದಿದೆ.

  • News18 Kannada
  • 5-MIN READ
  • Last Updated :
  • Bellary, India
  • Share this:

ವಿಜಯನಗರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023 ) ಸಮೀಪಿಸುತ್ತಿರುವ ಸಂದರ್ಭದಲ್ಲಿಯೇ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ (Anand Singh, Minister of Tourism) ಅವರ ವಿರುದ್ಧ ಸರ್ಕಾರಿ ಜಮೀನನ್ನು ಅಕ್ರಮವಾಗಿ ಕುಟುಂಬಸ್ಥರ (Family) ಹೆಸರಿಗೆ ಭೂಮಿ ಪರಭಾರೆ ಮಾಡಿದ ಆರೋಪ ಕೇಳಿ ಬಂದಿದೆ. ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಅಧಿಕಾರ ದುರ್ಬಳಕೆ ಮಾಡಿ ಬರೋಬ್ಬರಿ 180 ಎಕರೆ ಭೂಮಿಯನ್ನು ಅಕ್ರಮವಾಗಿ ಸಚಿವರ ಕುಟುಂಬಸ್ಥರು ಆಪ್ತರು ಸೇರಿದಂತೆ 9 ಮಂದಿ ಹೆಸರಿನಲ್ಲಿ ಜಮೀನು ನೋಂದಣಿ (Land Registration) ಮಾಡಿಸಿದ ಆರೋಪವನ್ನು ಸಂಡೂರು ಸಾಮಾಜಿಕ ಕಾರ್ಯಕರ್ತ ಕುಮಾರಸ್ವಾಮಿ ಹಾಗೂ ಹೊಸಪೇಟೆ ನಗರಸಭೆ ಅಬ್ದುಲ್​​ ಖದೀರ್​​ ಅವರು ಸಚಿವ ಆನಂದ್ ಸಿಂಗ್​ ವಿರುದ್ಧ ಮಾಡಿದ್ದಾರೆ.


ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ಆಸ್ತಿ ನೋಂದಣಿ


ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಸಾಮಾಜಿ ಕಾರ್ಯಕರ್ತ, ಸಚಿವ ಆನಂದ್​ ಸಿಂಗ್​​ ಹಾಗೂ ಪುತ್ರ ಸಿದ್ದಾರ್ಥ್​ ಸಿಂಗ್​​, ಧರ್ಮೇಂದ್ರ ಸಿಂಗ್ ಸೇರಿದಂತೆ ಅವರ ಮನೆ ಹಾಗೂ ತೋಟದಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಬೇನಾಮಿ ಹೆಸರಿನಲ್ಲಿ 180 ಎಕರೆ ಇನಾಮ್​​ ಆಸ್ತಿಯನ್ನು ಅಕ್ರಮವಾಗಿ ನೋಂದಣಿ ಮಾಡಿಸಿದ್ದಾರೆ.


ಸಚಿವ ಆನಂದ್​ ಸಿಂಗ್​ ವಿರುದ್ಧ ಭೂ ಕಬಳಿಕೆ ಆರೋಪ


ಇದನ್ನೂ ಓದಿ: Karnataka Election 2023: ಕಾಂಗ್ರೆಸ್​​ನಿಂದ ಮತ್ತೊಂದು ಗ್ಯಾರಂಟಿ ಯೋಜನೆ; ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ಭತ್ಯೆ!


ಬಳ್ಳಾರಿ ಜಿಲ್ಲೆಯ ಸಂಡೂರು ಬಳಿಯ ಪೈಮಾಸಿ ನಂಬರ್ 4 ರಲ್ಲಿ 380 ಎಕೆರೆ ಇನಾಮ್ ಜಮೀನಿದೆ. ಇದರಲ್ಲಿ ಸಚಿವರ ಪ್ರಭಾವ ಬಳಸಿ 180 ಎಕರೆ ಜಮೀನು ಒಂಭತ್ತು ಜನರ ಹೆಸರಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ. ಈ ಜಮೀನು 1982 ರಲ್ಲಿ ರಾಜರತ್ನಂ ಶ್ರೀನಿವಾಸ್ ರಾಜಮನೆತನದವರ ಹೆಸರಲ್ಲಿ 74 ಎಕರೆ ಗ್ರ್ಯಾಂಟ್ ಆಗುತ್ತದೆ. ಆದರೆ ರಾಜಮನೆತನದ ಆಸ್ತಿ 380 ಎಕರೆ ನಮಗೆ ಬೇಕು ಅಂದಾಗ ಕೋರ್ಟ್ ತಡೆಹಿಡಿಯುತ್ತದೆ.


ಬೇನಾಮಿ ಆಸ್ತಿ ಗಳಿಕೆಯಲ್ಲಿ ಸಚಿವರ ಕುಟುಂಬಸ್ಥರು ಭಾಗಿ


ಆ ಬಳಿಕ ಇನಾಮ್ ಜಮೀನನ್ನು ಯಾವುದೇ ಕಾರಣಕ್ಕೂ ಬೇರೆ ಕಾರಣಕ್ಕೆ ಬಳಕೆ ಮಾಡಲು ಬರುವುದಿಲ್ಲ. ಆದರೆ ಸದ್ಯ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನೀರಿಕ್ಷಕರು, ಅರಣ್ಯಾಧಿಕಾರಿಗಳು ಭಾಗಿ ಆಗಿದ್ದಾರೆ. ಆದರೆ 36 ಎಕರೆ ಜಮೀನು ಕೂಡಾ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಬೇನಾಮಿ ಆಸ್ತಿ ಗಳಿಕೆಯಲ್ಲಿ ಸಚಿವರ ಕುಟುಂಬಸ್ಥರೇ ಮೂವರಿದ್ದಾರೆ. ಸಚಿವರ ಪುತ್ರ, ಅಳಿಯ ಸೇರಿದಂತೆ 9 ಜನರ ಹೆಸರಲ್ಲಿ ಇನಾಮ್ ಆಸ್ತಿ ರಿಜಿಸ್ಟರ್ ಆಗಿದೆ ಎಂದು ದಾಖಲೆ ಸಮೇತ ಮಾಹಿತಿ ನೀಡಿವುದಾಗಿ ಹೇಳಿದರು.




ಸದ್ಯ ನಾವು 180 ಎಕರೆ ಜಮೀನು ಸರ್ಕಾರಕ್ಕೆ ಉಳಿಯಬೇಕು ಅಂತ ಒತ್ತಾಯ ಮಾಡುತ್ತಿದ್ದೇವೆ. ಈ ಬಗ್ಗೆ ದಾಖಲೆ ಸಮೃತ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಿದ್ದೇವೆ. ಅಲ್ಲಿಯೂ ನಮಗೆ ನ್ಯಾಯ ಸಿಗಲಿಲ್ಲ ಎಂದರೆ ಹೈಕೋರ್ಟ್​​ಗೂ ಹೋಗುತ್ತೇವೆ.


ಇದನ್ನೂ ಓದಿ: Bengaluru: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಕ್ಕೆ ಮನೆಯ ಕಾಂಪೌಂಡ್ ಧ್ವಂಸ; ಮಗನ ಪರ ನಿಂತ ತಾಯಿ ಮೇಲೂ ಹಲ್ಲೆ


ಯಾರ ಯಾರ ಹೆಸರಿನಲ್ಲಿ ಆಸ್ತಿ ನೋಂದಣಿಯಾಗಿದೆ?

top videos


    ಸಿದ್ದಾರ್ಥ ಸಿಂಗ್ ಹೆಸರಲ್ಲಿ 13 ಎಕರೆ ನೋಂದಣಿ, ಧರ್ಮೇಂದ್ರ ಸಿಂಗ್ ಹೆಸರಲ್ಲಿ 22.19 ಎಕರೆ ನೋಂದಣಿ, ಅಬ್ದುಲ್ ರಹೀಮ್ 22.75 ಎಕರೆ ಜಮೀನು ನೋಂದಣಿ, ಸಿ. ಕುಮಾರಸ್ವಾಮಿ ಶೆಟ್ಟಿ 22.75 ಎಕರೆ ನೋಂದಣಿ, ಪಿ‌. ನಾಗರಾಜ್ ಹೆಸರಲ್ಲಿ 22.75 ಎಕರೆ ನೋಂದಣಿ, ಎನ್.ಶ್ರೀನಿವಾಸ್ 14.76 ಎಕರೆ ನೋಂದಣಿ, ಪಿ.ಬಸವನಗೌಡ ಹೆಸರಲ್ಲಿ 16.96 ಎಕರೆ ಜಮೀನು ನೋಂದಣಿ, ಸೂರ್ಯತೇಜ್ ವಿ. ಹೆಸರಲ್ಲಿ 15.24 ಎಕರೆ ನೋಂದಣಿ, ಮತ್ತೊಬ್ಬರ ಹೆಸರಲ್ಲಿ 13 ಹಾಗೂ 16 ಎಕರೆ ನೋಂದಣಿಯಾಗಿದೆ ಎಂದು ತಿಳಿಸಿದ್ದಾರೆ.

    First published: