Anand Singh| ಮುಗಿಯದ ಸಂಪುಟ ಬಿಕ್ಕಟ್ಟು, ಖಾತೆ ಬದಲಾವಣೆಗೆ ಪಟ್ಟು; ದೆಹಲಿಗೆ ತೆರಳಿದ ಸಚಿವ ಆನಂದ್ ಸಿಂಗ್

ಅಸಲಿಗೆ ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್​ನಲ್ಲಿ ಸಚಿವ ಆನಂದ್ ಸಿಂಗ್ ಇಂಧನ ಅಥವಾ ಲೋಕೋಪಯೋಗಿ ಇಲಾಖೆ ಮೇಲೆ ಕಣ್ಣಿಟ್ಟಿದ್ದರು. ಆದರೆ, ಅವರಿಗೆ ಇದೀಗ ಪ್ರವಾಸೋದ್ಯಮ ಖಾತೆಯನ್ನು ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಆನಂದ್​ ಸಿಂಗ್​

ಆನಂದ್​ ಸಿಂಗ್​

 • Share this:
  ಬೆಂಗಳೂರು (ಆಗಸ್ಟ್​ 18); ಬಿ.ಎಸ್​. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದು, ಬಸವರಾಜ ಬೊಮ್ಮಾಯಿ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾಗಿದೆ. ಅಲ್ಲದೆ, ಹೊಸ ಸಂಪುಟವನ್ನೂ ರಚಿಸಿದ್ದು, ಎಲ್ಲರಿಗೂ ಖಾತೆಯನ್ನೂ ಸಹ ಹಂಚಿಕೆ ಮಾಡಲಾಗಿದೆ. ಆದರೆ, ಖಾತೆ ಹಂಚಿಕೆಯಲ್ಲಿ ಇದೀಗ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಸ್ಥಾನದ ಆಕಾಂಕ್ಷೆಯಲ್ಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಈ ಹಿಂದೆ ಬಿಜೆಪಿ ಜೊತೆ ಕೈಜೋಡಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದದ್ದು ಇಂದು ಇತಿಹಾಸ. ಆದರೆ, ಎಂಟಿಬಿ ನಾಗರಾಕ್, ಆನಂದ್​ ಸಿಂಗ್ ಹಾದಿಯಾಗಿ ಅನೇಕ​ ಪಕ್ಷಾಂತರ ಶಾಸಕರು ಇದೀಗ ಪ್ರಬಲ ಖಾತೆಗಾಗಿ ಪಟ್ಟು ಹಿಡಿದು ಲಾಭಿ ಮಾಡುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಆನಂದ್​ ಸಿಂಗ್ ಪ್ರಬಲ ಖಾತೆಗಾಗಿ ಇಂದು ದೆಹಲಿಗೆ ತೆರಳಿದ್ದಾರೆ. ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

  ಅಸಲಿಗೆ ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್​ನಲ್ಲಿ ಸಚಿವ ಆನಂದ್ ಸಿಂಗ್ ಇಂಧನ ಅಥವಾ ಲೋಕೋಪಯೋಗಿ ಇಲಾಖೆ ಮೇಲೆ ಕಣ್ಣಿಟ್ಟಿದ್ದರು. ಆದರೆ, ಅವರಿಗೆ ಇದೀಗ ಪ್ರವಾಸೋದ್ಯಮ ಖಾತೆಯನ್ನು ನೀಡಲಾಗಿದೆ. ಇದೇ ಕಾರಣಕ್ಕೆ ಆನಂದ್ ಸಿಂಗ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈ ಹಿಂದೆಯೇ ಅವರು ಅನೇಕ ಬಾರಿ ನೇರ ಮತ್ತು ಪರೋಕ್ಷವಾಗಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

  ಇದೀಗ ಗೋವಾ ಮೂಲಕ ನಿನ್ನೆಯೇ ರಹಸ್ಯವಾಗಿ ದೆಹಲಿ ತೆರಳಿರುವ ಆನಂದ್ ಸಿಂಗ್, ರಹಸ್ಯವಾಗಿಯೇ ಬಿಜೆಪಿ ವರಿಷ್ಠರ ಭೇಟಿಗೆ ಮುಂದಾಗಿದ್ದಾರೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಮೂಲಕ ಬಯಿಸಿದ ಖಾತೆ ಪಡೆಯಲು ಸಿಂಗ್ ಕಸರತ್ತು ನಡೆಸುತ್ತಿದ್ದು, ಈ ಹಿನ್ನೆಲೆ ಯಾರಿಗೂ ಗೊತ್ತಾಗದಂತೆ ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

  ಈ ಹಿಂದೆ ಬಳ್ಳಾರಿಯಲ್ಲಿ ಕೊಟ್ಟಿರುವ ಖಾತೆಯನ್ನು ಇನ್ನೂ ಯಾಕೆ ಸ್ವೀಕರಿಸಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದ ಆನಂದ್ ಸಿಂಗ್, ಖಾತೆ ಸ್ವೀಕರಿಸಲು ಮುಹೂರ್ತ ನೋಡುವೆ. ಎಲ್ಲರೂ ಮುಹೂರ್ತ ನೋಡಿಕೊಂಡೇ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಎರಡು ಮೂರು‌ ದಿನದಲ್ಲಿ ಒಳ್ಳೆಯ ಮುಹೂರ್ತ ಸಿಗಲಿದೆ. ಆಗ ಖಾತೆ ಸ್ವೀಕರಿಸುವ ಕುರಿತು ಆಲೋಚನೆ ಮಾಡುತ್ತೇನೆ. ದೇವರು ಮುಹೂರ್ತ ಕೊಡಬೇಕು ಹಾಗೂ ನನ್ನ ನಕ್ಷತ್ರಕ್ಕೆ ಸರಿಹೋಗಬೇಕು. ಆವಾಗ ಖಾತೆ ಸ್ವೀಕರಿಸುತ್ತೆನೆ ಎಂದು ಹೇಳುವ ಮೂಲಕ ತಾನು ಪ್ರಬಲ ಖಾತೆಯ ಆಕಾಂಕ್ಷಿ ಎಂದು ಮಾರ್ಮಿಕವಾಗಿ ಉತ್ತರ ನೀಡಿದ್ದರು.

  ಇದನ್ನೂ ಓದಿ: Narendra Modi| ಒಂದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಶೇ.66 ರಿಂದ ಶೇ24ಕ್ಕೆ ಇಳಿಕೆ; ಇಂಡಿಯಾ ಟುಡೆ ಸಮೀಕ್ಷೆ

  ಆದರೆ, ಇದೀಗ ಆನಂದ್​ ಸಿಂಗ್ ಏಕಾಏಕಿ ದೆಹಲಿಗೆ ತೆರಳಿ ಲಾಭಿ ಮಾಡಲು ಮುಂದಾಗಿರುವುದು ಮೂಲ ಬಿಜೆಪಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಅಲ್ಲದೆ, ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಈ ಎಲ್ಲಾ ಬೆಳವಣಿಗೆಗಳು ಇಕ್ಕಟ್ಟಿನ ವಾತಾವರಣ ನಿರ್ಮಾಣ ಮಾಡುತ್ತಿದ್ದು, ಆಡಳಿತವನ್ನು ಸುಗಮವಾಗಿ ನಿಭಾಯಿಸಲು ಅಡ್ಡಿಯಾಗಿದೆ ಎನ್ನಲಾಗುತ್ತಿದೆ.

  ಇದನ್ನೂ ಓದಿ: KRS Dam Controversy| ಮುಗಿಯದ ಕೆಆರ್​ಎಸ್​ ಡ್ಯಾಂ ವಿವಾದ; ಇಂದು ಮತ್ತೆ ಅಣೆಕಟ್ಟೆಗೆ ಭೇಟಿ ನೀಡಲಿರುವ ಸಂಸದೆ ಸುಮಲತಾ

  ಒಟ್ಟಿನಲ್ಲಿ ರಾಜ್ಯದಲ್ಲಿ ಮೂರನೇ ಕೊರೋನಾ ಅಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮಕ್ಕಳಲ್ಲೂ ಈ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಖಾತೆ ಹಂಚಿಕೆ ವ್ಯಾಜ್ಯಗಳು ಬಗೆಹರಿದು ಸರ್ಕಾರ ತುರ್ತಾಗಿ ಸೋಂಕು ನಿವಾರಣೆ ಕೆಲಸಕ್ಕೆ ಮುಂದಾಗಬೇಕು ಎಂಬುದೇ ಎಲ್ಲರ ಆಶಯ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ ವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊ ಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸು ವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರ ವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮ ಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತ ವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: