HOME » NEWS » State » MINING OFFICER RAIDS ON ILLEGAL MINING UNITS AND SEIZED CRUSHER MACHINE IN MANDYA MAK

ಮಂಡ್ಯದ ಅಕ್ರಮ ಕಲ್ಲು ಗಣಿಗಾರಿಕೆ ಘಟಕಗಳ ಮೇಲೆ ಗಣಿ ಅಧಿಕಾರಿಗಳ ದಾಳಿ; ಕ್ರಷರ್​ ಯಂತ್ರಗಳು ವಶಕ್ಕೆ

ಇದೀಗ ಗಲ್ಲು ಗಣಿಗಾರಿಕೆಗೆ ಬೀಗ ಜಡಿದಿರುವ ಅಧಿಕಾರಿಗಳು ಮತ್ತೆ ಗಣಿಗಾರಿಕೆ ನಡೆಸದಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಗಣಿಗಾರಿಕೆಗೆ ಬಳಸುತ್ತಿದ್ದ ಯಂತ್ರಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

news18-kannada
Updated:January 31, 2020, 10:06 AM IST
ಮಂಡ್ಯದ ಅಕ್ರಮ ಕಲ್ಲು ಗಣಿಗಾರಿಕೆ ಘಟಕಗಳ ಮೇಲೆ ಗಣಿ ಅಧಿಕಾರಿಗಳ ದಾಳಿ; ಕ್ರಷರ್​ ಯಂತ್ರಗಳು ವಶಕ್ಕೆ
ಮಂಡ್ಯದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಪ್ರಾತಿನಿಧಿಕ ಚಿತ್ರ.
  • Share this:
ಮಂಡ್ಯ (ಜನವರಿ 31); ಜಿಲ್ಲೆಯಲ್ಲಿ ಅಕ್ರಮವಾಗಿ ಗಲ್ಲು ಗಣಿಗಾರಿಕೆ ನಡೆಸುತ್ತಿದ್ದ ಅಹಲ್ಯಾದೇವಿ ಸ್ಟೋನ್ ಕ್ರಷರ್ ಮತ್ತು ಎಂಎಂಟಿ ಕ್ರಷರ್​ ಕಂಪೆನಿಗಳ ಮೇಲೆ ದಾಳಿ ನಡೆಸಿರುವ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗಣಿಗಾರಿಗಾರಿಗಳು ಜಲ್ಲಿಕಲ್ಲು ಕ್ರಷರ್​ಗೆ ಬಳಸುವ ಸಾಮಗ್ರಿಗಳು ಮತ್ತು ಯಂತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಸುತ್ತಮುತ್ತಲ ಪ್ರದೇಶಗಳಾದ ಗಂಣಗೂರು, ಹಂಗರಹಳ್ಳಿ, ಟಿ.ಎಂ.ಹೊಸೂರು ಹಾಗೂ ಹುಂಜನಕೆರೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆಗಳು ನಡೆಯುತ್ತಿದ್ದವು. ಈ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ಹಿರಿಯ ಭೂ ವಿಜ್ಞಾನಿ ಪುಷ್ಟ ನೇತೃತ್ವದಲ್ಲಿ ತಡರಾತ್ರಿ ಕ್ರಷರ್ ಗಳ ಮೇಲೆ ದಾಳಿ ನಡೆಸಲಾಗಿದೆ.

ಇದೀಗ ಗಲ್ಲು ಗಣಿಗಾರಿಕೆಗೆ ಬೀಗ ಜಡಿದಿರುವ ಅಧಿಕಾರಿಗಳು ಮತ್ತೆ ಗಣಿಗಾರಿಕೆ ನಡೆಸದಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಗಣಿಗಾರಿಕೆಗೆ ಬಳಸುತ್ತಿದ್ದ ಯಂತ್ರಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ರಾಜ್ಯದ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಇಂದು ನಿವೃತ್ತಿ; ಫೇರ್ ವೆಲ್ ಪೆರೇಡ್ ಮೂಲಕ ಬೀಳ್ಕೊಡುಗೆ
First published: January 31, 2020, 10:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading