ಗಣಿನಾಡಿನ ಈ ದೇವಸ್ಥಾನದಲ್ಲಿ ರಾಶಿ ರಾಶಿ ಜೇನುನೊಣಗಳಿವೆ; ಹೆದರಬೇಡಿ, ಆದರೆ ಇಲ್ಲಿ ದಾಳಿ ಮಾಡೋದಿಲ್ಲ

news18
Updated:June 3, 2018, 4:48 PM IST
ಗಣಿನಾಡಿನ ಈ ದೇವಸ್ಥಾನದಲ್ಲಿ ರಾಶಿ ರಾಶಿ ಜೇನುನೊಣಗಳಿವೆ; ಹೆದರಬೇಡಿ, ಆದರೆ ಇಲ್ಲಿ ದಾಳಿ ಮಾಡೋದಿಲ್ಲ
news18
Updated: June 3, 2018, 4:48 PM IST
-ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಜೂ.03):   ಜೇನಿನ ಹನಿ ಅಂದ್ರೆ ಎಲ್ಲರಿಗೂ ಇಷ್ಟ. ಅದನ್ನು ಸವಿದು ಆಹ್ಲಾದಿಸುತ್ತೇವೆ. ಆದರೆ ಅದೇ ಜೇನ್ನೊಣ ಇದೆಯಂದ್ರೆ ಮಾರುದ್ದ ದೂರು ಹೋಗ್ತೇವೆ. ಅದರ ಸಹವಾಸ ಬೇಡಪ್ಪ ಅಂದುಕೊಳ್ಳುತ್ತೇವೆ. ಗಣಿನಾಡು ಬಳ್ಳಾರಿಯಲ್ಲೊಂದು ಗ್ರಾಮದಲ್ಲಿದೆ. ಈ ಗ್ರಾಮದ ದೇವಸ್ಥಾನದ ಗರ್ಭಗುಡಿಯಲ್ಲಿಯೇ ಜೇನುನೊಣಗಳು ಕಾಣಿಸಿಕೊಂಡಿವೆ. ಅಷ್ಟಕ್ಕೂ ಈ ದೇವಸ್ಥಾನದಲ್ಲಿ ಜೇನುನೊಣಗಳೇನು ಜನರಿಗೇನು ತೊಂದರೆ ಕೊಟ್ಟಿಲ್ವಾ? ಈ ಕುರಿತು ಸ್ಪೆಷೆಲ್ ಸ್ಟೋರಿ ಇಲ್ಲಿದೆ ನೋಡಿ.

ಈ ಗ್ರಾಮ ಕಳೆದೊಂದು ತಿಂಗಳಿನಿಂದ ಸುದ್ದಿಯಲ್ಲಿದೆ. ಈ ಹಿಂದೆ ಮಾಜಿ ಸಚಿವ ಜನಾರ್ದನ ರೆಡ್ಡಿ ವಿಮಾನ ನಿಲ್ದಾಣ ಸಲುವಾಗಿ ಭೂಸ್ವಾಧೀನಕ್ಕೆ ಮುಂದಾದಾಗ ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಹೋರಾಟ ಮಾಡಿದ್ದರು. ಇದೀಗ ಈ ಗ್ರಾಮದಲ್ಲಿರುವ ದೇವಿ ದೇವಮ್ಮ ದೇವಸ್ಥಾನದಲ್ಲಿ ಜೇನುನೊಣ ವಾಸ್ತವ್ಯ ಹೂಡಿವೆ. ಚಾಗನೂರು ಗ್ರಾಮದಲ್ಲಿ ದ್ಯಾವಮ್ಮ ದೇವಸ್ಥಾನದ ಗರ್ಭಗುಡಿಯಲ್ಲಿಯೇ ಅನತಿ ದೂರದಲ್ಲಿಯೇ ಗೂಡುಕಟ್ಟಿಕೊಂಡಿವೆ. ‘

ಇಷ್ಟು ಮಾತ್ರವಲ್ಲ ಗೂಡಿನಲ್ಲಿ ಹೆಚ್ಚಿರದೆ ಯಾವಾಗಲೂ ದೇವಸ್ಥಾನದ ತುಂಬೆಲ್ಲ ಹಾರಾಡುತ್ತವೆ. ಈ ಮೊದಲು ರಾಶಿ ರಾಶಿ ಜೇನುಗಳು ನೋಡಿ ದೇವಸ್ಥಾನದ ಅರ್ಚಕ ಶ್ರೀನಿವಾಸ್ ಆಚಾರ್ ಸೇರಿದಂತೆ ಭಕ್ತರು ಗಾಬರಿಗೊಂಡಿದ್ದರು. ಆದರೆ ಹೆದರುತ್ತಲೇ ದೇವಸ್ಥಾನದಲ್ಲಿ ಪೂಜೆ ಮಾಡುತ್ತ, ದೇವಿ ದರ್ಶನ ಪಡೆದರೂ ಜೇನುಗಳು ಯಾವುದೇ ತೊಂದರೆ ಮಾಡಲಿಲ್ಲ.

ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿಯಂತೂ ಪ್ರತಿ ಅಭ್ಯರ್ಥಿಗಳು ದಂಡಿಯಾಗಿ ರಾಜಕಾರಣಿಗಳು, ಪಕ್ಷದ ಕಾರ್ಯಕರ್ತರ ಆಗಮಿಸಿ ದರ್ಶನ ಪಡೆದರೂ ಜೇನುಗಳು ಯಾರಿಗೇನೂ ತೊಂದರೆ ಮಾಡಿಲ್ಲ ಎನ್ನುತ್ತಾರೆ ದೇವಸ್ಥಾನದ ಅರ್ಚಕ ಶ್ರೀನಿವಾಸ್.

ಇನ್ನು ಅಚ್ಚರಿಯ ವಿಷಯವೆಂದರೆ ಈ ದೇವಿಯ ದೇವಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ಸಕ್ಕರೆಯನ್ನು ಭಕ್ತರಿಗೆ ನೀಡುತ್ತಾರೆ. ಈ ಸಕ್ಕರೆ ತಟ್ಟೆ ತುಂಬೆಲ್ಲ ರಾಶಿರಾಶಿ ಜೇನುನೊಣ ಮುಕ್ಕುರುತ್ತವೆ. ದೇವಿಯ ದರುಶನ ಪಡೆದ ಭಕ್ತರಿಗೆ ಪ್ರಸಾದವಾಗಿ ಸಕ್ಕರೆ ಕೊಡಲು ಅರ್ಚಕರು ಜೇನುನೊಣಗಳನ್ನು ಸರಿಸಿ ನೀಡುತ್ತಾರೆ. ಆದರೂ ಜೇನುಗಳು ಅರ್ಚಕರ ಮೇಲೆ ಯಾವುದೇ ರೀತಿ ದಾಳಿ ಮಾಡಿಲ್ಲ.

ಸಕ್ಕರೆ ಸರಿಸಿದ ಜಾಗಬಿಟ್ಟು ಮತ್ತೆ ಅಲ್ಲಿಗೇ ಜೇನುಗಳ ರಾಶಿ ಕಾಣಿಸಿಕೊಳ್ಳುತ್ತವೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕೆಲವೊಮ್ಮೆ ಚಿಕ್ಕಪುಟ್ಟ ಪ್ರಮಾಣದಲ್ಲಿ ಕಚ್ಚಿದೆಯಾದ್ರೂ ಜೇನುನೊಣ ದಾಳಿ ಮಾಡಿಲ್ಲ. ಆದರೆ ಸಕ್ಕರೆ ಕಾರಣಕ್ಕೆ ಜೇನುನೊಣ ಕಾಣಿಸಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
Loading...

ಕಳೆದೊಂದು ತಿಂಗಳಿನಿಂದ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿ ವಿಹರಿಸುತ್ತಿರುವ ಜೇನುನೊಣಗಳು ಯಾರಿಗೂ ತೊಂದರೆ ಮಾಡದೇ ಇರುವುದಕ್ಕೆ ದೇವಿಯ ಶಕ್ತಿಯೇ ಕಾರಣವೆನ್ನುತ್ತಾರೆ. ಈ ವಿಷಯ ತಿಳಿದು ನೆರೆಯ ಗ್ರಾಮಸ್ಥರು ಭೇಟಿ ಮಾಡಿ ದ್ಯಾಮವ್ವನ ಪವಾಡವೇ ಇದು ಎಂದು ಅಭಿಪ್ರಾಯಪಡುತ್ತಾರೆ.

ಜೇನುನೊಣಗಳು ದಾಳಿ ಸುದ್ದಿಯನ್ನೇ ಹೆಚ್ಚು ಕೇಳುವ ನಮಗೆ ಈ ಗ್ರಾಮದಲ್ಲಿ ದೇವಸ್ಥಾನದಲ್ಲಿಯೇ ಹಾರಾಡುತ್ತಿದ್ದರೂ ಯಾರಿಗೇನು ತೊಂದರೆ ಮಾಡದೇ ಇರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಕಳೆದೊಂದು ತಿಂಗಳಿನಿಂದ ದೇವಸ್ಥಾನದಲ್ಲಿದ್ದ ಜೇನುನೊಣ ಕಳೆದ ಮೂರು ದಿನಗಳಿಂದ ಕ್ರಮೇಣವಾಗಿ ಜೇನುನೊಣಗಳ ಸಂಖ್ಯೆ ಕಡಿಮೆಯಾಗಿದೆ. ಯಾರಿಗೇನು ತೊಂದರೆ ಕೊಡದೇ ಬೇರೆ ಸ್ಥಳಕ್ಕೆ ಜೇನ್ನೊಣ ಹೋಗಿವೆ. ಆದರೆ ಅವು ಮತ್ತೆ ದೇವಿಯ ಕೃಪೆಯಿಂದ ಬರುತ್ತವೆ. ಬಂದರೆ ಅವುಗಳನ್ನು ನಾವು ತೊಂದರೆ ಕೊಡುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಒಟ್ಟಿನಲ್ಲಿ ಜೇನುನೊಣ ದೇವಸ್ಥಾನವಾಗಿ ದ್ಯಾಮವ್ವ ಗುಡಿ ಈ ಮೂಲಕ ಹೆಸರು ವಾಸಿಯಾಗಿದೆ.

 
First published:June 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ