Tourist Spot: ಕೊಡಗಿನಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಮಿನಿ ನಯಾಗರ

ಅರ್ಧಚಂದ್ರಾಕೃತಿಯಲ್ಲಿ ನೀರು ಬೀಳುವಾಗ ಹಾಲಿನಂತಿರುವ ನೀರಿನ ಬಣ್ಣ ಹಿಂಪಾಗಿ ಕೇಳುವ ಝುಳು ಝುಳುನಾದ, ಪ್ರಕೃತಿಯಲ್ಲಿ ನಿರ್ಮಾಣ ಮಾಡಲಾದ ಈ ಸುಂದರವಾದ ರಮಣೀಯ ದೃಶ್ಯ ನೋಡುತ್ತಾ, ಪ್ರವಾಸಿಗರು ಸಖತ್ ಎಂಜಾಯ್ ಮಾಡ್ತಿದ್ದಾರೆ.

ಚಿಕ್ಲಿಹೊಳೆ

ಚಿಕ್ಲಿಹೊಳೆ

  • Share this:
ಕೊಡಗು (ಜು.26): ಕೊಡಗಿನಲ್ಲಿ ಮುಂಗಾರು (Monsoon) ಆರಂಭವಾದ್ರೆ ಸಾಕು ಜಿಲ್ಲೆಯಲ್ಲಿ ಹಲವು ಜಲಧಾರೆಗಳು ಹೊಳೆಗಳು ಜೀವ ಪಡೆದುಕೊಳ್ಳುತ್ತವೆ. ಅದರಲ್ಲಿ ಪ್ರಮುಖವಾಗಿ ಚಿಕ್ಲಿಹೊಳೆ (Chiklihole) ತುಂಬಿ ಹರಿಯಿತ್ತೆಂದರೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿ ಬಿಡುತ್ತದೆ. ಸತತವಾಗಿ ಸುರಿದ ಮಳೆಯಿಂದಾಗಿ ಸಹಜ ಪ್ರಕೃತಿ ಸೌಂದರ್ಯದ (Beautiful Nature) ನಡುವೆ ಮೈತುಂಬಿ ಹರಿಯುತ್ತಿರುವ ಈ ಹೊಳೆಯನ್ನ ಪ್ರೇಕ್ಷಕರು ಮಿನಿ ನಯಾಗರ ಫಾಲ್ಸ್ (Falls) ಎಂದೇ ಕರೆಯುತ್ತಿದ್ದಾರೆ. ಈ ಮಿನಿ ನಯಾಗರ ನೋಡಲು ಪ್ರವಾಸಿಗರ ದಂಡೇ ಹರಿದು ಬರ್ತಿದೆ. 

ನಯನ ಮನೋಹರ ಜಲಾಶಯ 

ದಟ್ಟ ಕಾನನದ ನಡುವೆ ಪ್ರಶಾಂತವಾಗಿ ಹರಿಯುತ್ತಿರುವ ಈ ಜಲಾಶಯದಿಂದ ಹಾಲಿನ ನೊರೆಯಂತೆ ಹರಿಯುತ್ತಿರುವ ನೀರು, ನೀರು ಹರಿಯುವ ವೇಗಕ್ಕೆ ಹೊರಡುವ ಜುಳು ಜುಳು ನಾದವನ್ನು ಆಲಿಸುತ್ತಾ ಪ್ರವಾಸಿಗರು ಮೈಮರೆತು ಪ್ರಕೃತಿ ಸೌಂದರ್ಯದ ಮಡಿಲಿನ ಜಲಪಾತವನ್ನು ವೀಕ್ಷಿಸುತ್ತಿದ್ದಾರೆ. ನಯಾಗರದಂತೆ ಇರುವ ನಯನ ಮನೋಹರ ಜಲಾಶಯ  ಅದರ ಸಹಜ ಸೌಂದರ್ಯದಿಂದಲೇ ನೋಡುಗರನ್ನು ಸೂಜಿ ಗಲ್ಲಿನಂತೆ ಸೆಳೆಯುತ್ತಿದೆ. ಕೊಡಗು ಜಿಲ್ಲೆ ಕುಶಾನಗರ ತಾಲ್ಲೂಕಿನ ಚಿಕ್ಲಿಹೊಳೆ ಜಲಾಶಯ ಇದೀಗ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನ ತನ್ನತ್ತ ಆಕರ್ಷಿಸುತ್ತಿದೆ.ಅರ್ಧ ಚಂದ್ರಾಕೃತಿಯಲ್ಲಿ ನಿರ್ಮಾಣ

ಜಿಲ್ಲೆಯಲ್ಲಿ ಒಂದು ತಿಂಗಳ ಕಾಲ ಸುರಿದ  ಧಾರಾಕಾರ ಮಳೆಯಿಂದಾಗಿ ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಜಲಾಶಯ ಭರ್ತಿಯಾದಾಗ ನೀರನ್ನು ನದಿಗೆ ಬೀಡುವುದು ಸಾಮಾನ್ಯ. ಆದರೆ ಈ ಜಲಾಶಯ ತುಂಬಿತ್ತೆಂದರೆ ನೀರು ತಾನಾಗಿಯೇ ಹೊರಗೆ ಹರಿಯುತ್ತದೆ. ಈ ವೇಳೆ ಅರ್ಧ ಚಂದ್ರಾಕೃತಿಯಲ್ಲಿ  ನಿರ್ಮಾಣವಾಗುವ ಸುಂದರ ದೃಶ್ಯ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ.

ಇದನ್ನೂ ಓದಿ: Pramoda Devi Wadiyar: ಬೇಬಿ ಬೆಟ್ಟ ವಿವಾದ, ಸರ್ಕಾರದ ವಿರುದ್ಧ 'ರಾಜಮಾತೆ' ಗರಂ; ಯಾಕಿಷ್ಟು ಹಿಂಸೆ ಕೊಡುತ್ತಿದ್ದೀರಾ?

ಪ್ರವಾಸಿಗರ ಕಣ್ಣಿಗೆ ಹಬ್ಬ

ಅರ್ಧಚಂದ್ರಾಕೃತಿಯಲ್ಲಿ ನೀರು ಬೀಳುವಾಗ ಹಾಲಿನಂತಿರುವ ನೀರಿನ ಬಣ್ಣ ಹಿಂಪಾಗಿ ಕೇಳುವ ಜುಳು ಜುಳುನಾದ,  ಪ್ರಕೃತಿಯಲ್ಲಿ ನಿರ್ಮಾಣ ಮಾಡಲಾದ ಈ ಸುಂದರವಾದ ರಮಣೀಯ ದೃಶ್ಯ ನೋಡುತ್ತಾ,  ಪ್ರವಾಸಿಗರು  ಸಖತ್ ಎಂಜಾಯ್ ಮಾಡ್ತಾರೆ. ಅರ್ಧಚಂದ್ರ ಆಕೃತಿಯಲ್ಲಿ ಹರಿಯುವ  ನೀರಿನ ದೃಶ್ಯ ನೋಡುವುದೇ ಕಣ್ಣಿಗೆ ಹಬ್ಬ ಎನ್ನುತ್ತಾರೆ ಮಂಗಳೂರಿನಿಂದ ಬಂದಿದ್ದ ಪ್ರವಾಸಿ ಪ್ರಿಯಾಂಕ. ಇನ್ನು ಕುಶಾಲನಗರ  ತಾಲೂಕಿನ ರಂಗಸಮುದ್ರದಲ್ಲಿರುವ ಈ ಜಲಾಶಯ ಈಗ ಪ್ರವಾಸಿಗರ ಟೂರಿಸ್ಟ್ ಹಾಟ್ ಸ್ಪಾಟ್  ಆಗಿದ್ದು ನಿತ್ಯ ನೂರಾರು ಜನರು ಬಂದು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಚಿಕ್ಲಿ ಹೊಳೆ  ಕೊಡಗಿನ ಅತ್ಯಂತ ಸಣ್ಣ ಪ್ರಮಾಣದ ಜಲಾಶಯವಾಗಿದೆ.

ಟೂರಿಸ್ಟ್ ಹಾಟ್ ಸ್ಪಾಟ್ ಚಿಕ್ಲಿ ಹೊಳೆ

ಇದು 1.18 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯವನ್ನು ಹೊಂದಿದೆ. ತುಂಬಿ ಹರಿದು ಹೋಗುವ ನೀರು ಕಾವೇರಿ ನದಿಯನ್ನು ಸೇರುತ್ತದೆ ಆದರೆ ತುಂಬಿ ಹರಿಯುವಾಗ ಕಾಣುವ ಆ ಸೌಂದರ್ಯಕ್ಕೆ ಯಾವುದೂ ಹೋಲಿಕೆ ಇಲ್ಲ ಎನ್ನುತ್ತಾರೆ ಪ್ರವಾಸಿ ಶ್ಯಾಮ ಸುಂದರ್. ಇನ್ನೂ ಮಡಿಕೇರಿ ತಾಲೂಕಿನಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಜಲಾಶಯದಿಂದ ನೀರು ಬಿಡುತ್ತಿರುವ ದೃಶ್ಯ ಮೈನವಿರೇಳಿಸುವಂತಿದೆ.

ಇದನ್ನೂ ಓದಿ: Mysuru: ಒಂದೇ ತಿಂಗಳಲ್ಲಿ ಮೂರೂವರೆ ಕೋಟಿ ಒಡತಿ ಚಾಮುಂಡೇಶ್ವರಿ

ಚಿಕ್ಲಿಹೊಳೆ ಜಲಾಶಯಕ್ಕೆ ಒಮ್ಮೆ ಹೋಗಿ ಬನ್ನಿ

ಕ್ಷಣಕ್ಷಣಕ್ಕೂ ರೋಮಾಂಚನ ಅನುಭವವನ್ನು ನೀಡುತ್ತದೆ. ಈ ನೀರು ಕೂಡ ಕಾವೇರಿ ನದಿಯನ್ನು ಸೇರುತ್ತದೆ. ಒಟ್ಟಿನಲ್ಲಿ ಕೊಡಗಿನಲ್ಲಿರುವ ಪ್ರವಾಸಿ ತಾಣಗಳ ಜೊತೆಗೆ ಮಳೆಗಾಲದಲ್ಲಿ ಚಿಕ್ಲಿಹೊಳೆ ಜಲಾಶಯ ಇಂತಹ ಅತ್ಯದ್ಭುತ ದೃಶ್ಯ ಕಾವ್ಯವನ್ನು ಸೃಷ್ಟಿಸುತ್ತದೆ. ಇಂತಹ ದೃಶ್ಯವನ್ನು ನೋಡಲು ಮಳೆಗಾಲದಲ್ಲಿ ನೀವು ಕೊಡಗಿಗೆ ಬರಬೇಕು. 
Published by:Pavana HS
First published: