Cooking Oil: ಹಾಸನ ಗಾಣದೆಣ್ಣೆಗೆ ಹೆಚ್ಚಿದ ಬೇಡಿಕೆ: ಶುದ್ದ ಅಡುಗೆ ಎಣ್ಣೆ ಕೊಳ್ಳಲು ಜನರು ಮುಗಿ

ಉತ್ತಮ ಗುಣಮಟ್ಟದ ಎಣ್ಣೆಯಿಂದ ಜನರ ಆರೋಗ್ಯ ಕಾಪಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಬೇಕು ಎಂಬುದು ಈ ಯುವಕರ ತಂಡದ ಕಾಳಜಿಯಾಗಿದೆ

ಗಾಣದೆಣ್ಣೆ

ಗಾಣದೆಣ್ಣೆ

  • Share this:
ಹಾಸನ (ಆ. 24):  ಇತ್ತೀಚಿಗೆ ಎಲ್ಲಾ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಹೆಚ್ಚುತ್ತಿದೆ.‌ ಇದಕ್ಕೆ ಅಡುಗೆ ಎಣ್ಣೆ ಹೊರತಾಗಿಲ್ಲ. ವಿಷಪೂರಿತ ಅಡುಗೆ ಎಣ್ಣೆಯಿಂದ ತಯಾರಾದ ಪದಾರ್ಥಗಳನ್ನು ಸೇವಿಸಿದರೆ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಉತ್ತಮ ಗುಣಮಟ್ಟದ ಅಡುಗೆ ಎಣ್ಣೆ ಬೆಲೆ (Cooking oil price) ಗಗನಕ್ಕೆರಿದೆ. ಹಿಂದೆಲ್ಲಾ ಎತ್ತಿನ ಗಾಣದಿಂದ ಅಡುಗೆ ಎಣ್ಣೆ ತೆಗೆಯುತ್ತಿದ್ದರು. ಕಾಲ ಕ್ರಮೇಣ ಗಾಣದಿಂದ ಎಣ್ಣೆ ತೆಗೆಯುವುದು ನಶಿಸಿದೆ.‌ ಈ ಆಧುನಿಕ ಯುಗದಲ್ಲೂ ಯುವಕರ ತಂಡವೊಂದು ಮರದ ಗಾಣದಿಂದ (traditional Oil mill) ವಿವಿಧ ಕಾಳುಗಳಿಂದ ಎಣ್ಣೆ ತೆಗೆದು ರಿಯಾಯ್ತಿ ದರದಲ್ಲಿ ಮಾರಾಟ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಬೆಂಗಳೂರು- ಮಂಗಳೂರು ಹೆದ್ದಾರಿಯ (bangalore-mangalore high way) ಚಿಕ್ಕಗೊಂಡನಹಳ್ಳಿ ಗೇಟ್ ಬಳಿ ಭೂಸಿರಿ ಪ್ರಾಡಕ್ಟ್ ಹೆಸರಿನ ಉದ್ಯಮ ಆರಂಭಿಸಿರುವ ನಾಗೇಂದ್ರ, ಬಿ.ವಿ.ರುದ್ರಮೂರ್ತಿ, ಬಿ.ವಿ.ಮೋಹನ್ ಕುಮಾರ್ ಎಂಬ ಯುವಕರ‌ ತಂಡ ಕೊಬ್ಬರಿ, ಕಡಲೆ ಬೀಜ, ಹುಚ್ಚೆಳ್ಳು, ಹರುಳು, ಸಾಸಿವೆ, ಎಳ್ಳು, ಸೂರ್ಯಕಾಂತಿಯಿಂದ ಎಣ್ಣೆ ತಯಾರಿಸುತ್ತಿದ್ದಾರೆ.ಇದಕ್ಕೆ ಯಾವುದೇ ಆಧುನಿಕ ಯಂತ್ರವನ್ನು ಬಳಸದೆ ಎತ್ತಿನ ಗಾಣದ ಮೂಲಕ ಎಣ್ಣೆ ತೆಗೆಯುತ್ತಿದ್ದಾರೆ. ರೈತರಿಂದ ನೇರವಾಗಿ ಎಣ್ಣೆ ಕಾಳು ಬೀಜಗಳನ್ನು ಉತ್ತಮ ದರ ನೀಡಿ ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವುದರ ಜೊತೆಗೆ ಎತ್ತಿನ ಗಾಣದಿಂದ ಉತ್ತಮ ಗುಣಮಟ್ಟದ ಎಣ್ಣೆ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷ ಭೂಸಿರಿ ಪ್ರಾಡೆಕ್ಟ್‌‌ ಪ್ರಾರಂಭವಾದ ಕೂಡಲೇ ಕೊವೀಡ್-19 ದೊಡ್ಡ ಪೆಟ್ಟು ನೀಡಿತು. ಇದರಿಂದ ಧೃತಿಗೆಡದ ಯುವಕರು, ಲಾಕ್‌ಡೌನ್ ಮುಗಿದ ನಂತರ ಮತ್ತೆ ಕೆಲಸ ಆರಂಭಿಸಿದರು. ಇದೀಗ ಉದ್ಯಮ ಚೇತರಿಕೆ ಕಂಡಿದ್ದು, ಪ್ರತಿದಿನ ಎರಡು ಗಾಣದಿಂದ ಸುಮಾರು ಐವತ್ತು ಲೀಟರ್ ಎಣ್ಣೆ ಉತ್ಪಾದನೆ ಮಾಡಲಾಗುತ್ತಿದೆ.

ಇದನ್ನು ಓದಿ: ಮಣಿರತ್ನಂ ಸಿನಿಮಾದಲ್ಲಿನ ಐಶ್ವರ್ಯಾ ರೈ ಪಾತ್ರ ಲೀಕ್​

ಈ ಎಣ್ಣೆಗೆ ಬೇಡಿಕೆ ಹೆಚ್ಚಿರುವುದರಿಂದ ಇನ್ನೂ ಎರಡು ಗಾಣ ಹೂಡಲು ಮುಂದಾಗಿದ್ದಾರೆ. ಕೆಲವರು ಗಾಣದ ಬಳಿ ಬಂದು ಎಣ್ಣೆ ಖರೀದಿ ಮಾಡಿದರೆ, ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ಹೋಂ ಡಿಲಿವರಿ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ  ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಎತ್ತಿನ ಗಾಣದಿಂದ ಉತ್ಪಾದಿಸಿದ ಎಣ್ಣೆಯನ್ನು ಸರಬರಾಜು ಮಾಡುವ ಗುರಿ ಇಟ್ಟುಕೊಂಡಿದ್ದು ಅನೇಕ ಕಡೆಗಳಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದಾರೆ. ಗಾಣದಿಂದ ಎಣ್ಣೆ ತೆಗೆಯಲು ನಾಲ್ಕು ಹಳ್ಳಿಕಾರ್ ದೇಸಿ ಎತ್ತುಗಳಿಗೆ ಒಂದೂವರೆ ಲಕ್ಷ ನೀಡಿ ಖರೀದಿಸಲಾಗಿದೆ.ಸ್ವಾತಂತ್ರ್ಯ ದಿನಾಚರಣೆ ದಿನದಂದು ಇಲ್ಲಿಗೆ ಕನ್ನಡದ ಖ್ಯಾತ ನಟಿ ತಾರಾ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಳೆಯ ಪದ್ಧತಿಗೆ ಈಗ ಮರುಜೀವ ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿ ಎಣ್ಣೆ ಖರೀದಿಸಿದರು ಎಂದು ಉದ್ಯಮಿ ಬಿ.ವಿ.ರುದ್ರಮೂರ್ತಿ ತಿಳಿಸಿದ್ದಾರೆ. ಉತ್ತಮ ಗುಣಮಟ್ಟದ ಎಣ್ಣೆಯಿಂದ ಜನರ ಆರೋಗ್ಯ ಕಾಪಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಬೇಕು ಎಂಬುದು ಈ ಯುವಕರ ತಂಡದ ಕಾಳಜಿಯಾಗಿದ್ದು, ಇದನ್ನು ಅವರೇ ನಿಂತು ಕಾರ್ಯಗತ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: