ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು,ಚಾಲಕನ ನಿಯಂತ್ರಣ ತಪ್ಪಿ ಅನಾಹುತಗಳಾಗಿರುವ ಹಲವಾರು ಪ್ರಕರಣಗಳು ವರದಿಯಾಗಿದೆ. ಇದೀಗ ನಿಯಂತ್ರಣ ತಪ್ಪಿ ಹಾಲಿನ ಟ್ಯಾಂಕರ್ ಪಲ್ಟಿ ಆಗಿರುವ ಘಟನೆ ನಡೆದಿದೆ. ಮಂಡ್ಯದ ಇಂಡುವಾಳು ಗ್ರಾಮದಲ್ಲಿ ಘಟನೆ ನಡೆದಿದ್ದು, ಹಾಲನ್ನು ತುಂಬಿಕೊಳ್ಳಲು ಜನ ಚೊಂಬು, ಬಿಂದಿಗೆಯನ್ನು ಹಿಡಿದುಕೊಂಡು ಬಂದಿದ್ದಾರೆ. ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ಸೇರಿದ ಈ ಹಾಲಿನ ಟ್ಯಾಂಕರ್ ಮಂಡ್ಯದ ರಾಗಿಮುದ್ದನ ಹಳ್ಳಿ ಮಾರ್ಗವಾಗಿ ಹಾಲು ಸಂಗ್ರಹಿಸಿಕೊಂಡು ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.
ಹಾಲು ತುಂಬಿಕೊಳ್ಳಲು ಮುಗಿಬಿದ್ದ ಜನ
ಹಾಲು ತುಂಬಿಕೊಂಡು ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಗೆಜ್ಜಲಗೆರೆ ತಲುಪಬೇಕಿದ್ದ ಟ್ಯಾಂಕರ್, ಇಂಡುವಾಳು ಗ್ರಾಮದ ಬೆ-ಮೈ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ವಾಹನ ಪಲ್ಟಿಯಾದ ಪರಿಣಾಮ ಟ್ಯಾಂಕಿನಿಂದ ರಸ್ತೆಗೆ ಹಾಲು ಚೆಲ್ಲಿದ್ದು, ಅಕ್ಕಪಕ್ಕದ ಊರಿನ ಜನರು ಹಾಲು ತುಂಬಿಕೊಳ್ಳಲು ಚೊಂಬು, ಬಿಂದಿಗೆಗಳ ಸಮೇತ ಬಂದಿದ್ದಾರೆ. ಟ್ಯಾಂಕರ್ ಪಲ್ಟಿಯಿಂದ ಇದೀಗ ಮನ್ಮುಲ್ಗೆ ಸಾವಿರಾರು ರೂಪಾಯಿ ನಷ್ಟವಾಗಿದೆ.
ಇದನ್ನೂ ಓದಿ: ಪ್ರಕಾಶ್ ಖಾಸಗಿ ಬಸ್ ಮಾಲೀಕನಿಗೆ ಕಣ್ಣೀರಿನ ವಿದಾಯ.. ಝೀರೋ ಟ್ರಾಫಿಕ್ನಲ್ಲಿ ಪಾರ್ಥೀವ ಶರೀರ ರವಾನೆ!
ಕಳೆದ ಕೆಲ ತಿಂಗಳ ಹಿಂದೆ ಸಹ ಇಂತಹದ್ದೆ ಘಟನೆ ನಡೆದಿದ್ದು, ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಧಾರುಣ ಅಪಘಾತ ಸಂಭವಿಸಿದೆ. ಬನ್ನೇರುಘಟ್ಟ ಮಾರ್ಗದಿಂದ ತುಮಕೂರು ರಸ್ತೆ ಕಡೆ ಹೊರಟಿದ್ದ ವ್ಯಾಗನರ್ ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದ ಸಮಯದಲ್ಲಿ, ಆ ಕಾರಿಗೆ ಲಾರಿ ಬಂದು ಡಿಕ್ಕಿ ಹೊಡೆದ ಪರಿಣಾಮ ಕಾರು ನುಜ್ಜು ಗುಜ್ಜಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಹೆಚ್ಚಾಗುತ್ತಿದ್ದೆ ಅಪಘಾತ ಪ್ರಕರಣಗಳು
ಇದೇ ವೇಳೆ ಆ ಕಾರಿನ ಮುಂದೆ ಚಲಿಸುತ್ತಿದ್ದ ಕ್ವಾಲಿಸ್ ಗಾಡಿಯಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರಿಗೂ ಗಂಭೀರ ಗಾಯಗಳಾಗಿದ್ದು ಸ್ಥಿತಿ ಚಿಂತಾಜನಕವಾಗಿತ್ತು. ಅವರೆಲ್ಲರನ್ನೂ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಇದನ್ನೂ ಓದಿ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ ತಪ್ಪಿದ ಅನಾಹುತ? ನೌಕರರ ವಿರುದ್ಧ ಕ್ರಮ
ಇದಿಷ್ಟೇ ಅಲ್ಲದೇ ಅದರ ಮುಂದಿದ್ದ ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ