• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Koppal: ಅಂಗನವಾಡಿಗಳಲ್ಲಿ ಹಾಲು ಪೂರೈಕೆ ಸ್ಥಗಿತ; ಇನ್ನಾದರೂ ಸಿಗುತ್ತಾ ಪರಿಹಾರ?

Koppal: ಅಂಗನವಾಡಿಗಳಲ್ಲಿ ಹಾಲು ಪೂರೈಕೆ ಸ್ಥಗಿತ; ಇನ್ನಾದರೂ ಸಿಗುತ್ತಾ ಪರಿಹಾರ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತೀವ್ರ ಅಪೌಷ್ಠಿಕತೆ ಏದುರಿಸುತ್ತಿರುವ ಕೊಪ್ಪಳ ಜಿಲ್ಲೆ ಸೇರಿ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿ ಮಕ್ಕಳಿಗೆ ಹಾಗು ಗರ್ಭಿಣಿಯರು, ಬಾಣಂತಿಯರಿಗೆ ಹಾಲು ನೀಡಲು ಅಂಗನವಾಡಿ ಮಕ್ಕಳಿಗೆ ಕ್ಷೀರ ಭಾಗ್ಯ, ತಾಯಂದಿರಿಗೆ ಮಾತೃಪೂರ್ಣ ಯೋಜನೆಯಲ್ಲಿ ಹಾಲನ್ನು ಸರಕಾರ ನೀಡುತ್ತಿತ್ತು. ಆದರೆ ಈಗ ಈ ಸೌಲಭ್ಯ ಸಿಗುತ್ತಿಲ್ಲ.

ಮುಂದೆ ಓದಿ ...
 • Share this:

ಬೆಳೆಯುವ ಮಕ್ಕಳು (Students) ಸದೃಡವಾಗಿ ಬೆಳೆಯಲಿ. ಗರ್ಭೀಣಿಯರು ಹಾಗು ಬಾಣಂತಿಯರಲ್ಲಿ ಅಪೌಷ್ಠಿಕತೆ ಕಾಡದಿರಲಿ ಎಂಬ ಕಾರಣಕ್ಕೆ ಅಂಗನವಾಡಿಗಳಲ್ಲಿ ಹಾಲು ನೀಡಲಾಗುತ್ತಿದೆ. ಆದರೆ ಕೊಪ್ಪಳ (Koppal) ಜಿಲ್ಲೆ ಸೇರಿ ರಾಜ್ಯದಾದ್ಯಂತ ಆರು ತಿಂಗಳನಿಂದ ಹಾಲು ನೀಡುತ್ತಿಲ್ಲ. ಹಾಲು ಕೊರತೆ, ಹಾಲಿನ ದರ ನೆಪ ಹೇಳಲಾಗುತ್ತಿದೆ. ಈಗಿನ ಸರಕಾರವಾದರೂ ಅಂಗನವಾಡಿಗಳಿಗೆ (Anganwadi) ಹಾಲು ನೀಡುತ್ತಾ ಕಾದು ನೋಡಬೇಕು.


ತೀವ್ರ ಅಪೌಷ್ಠಿಕತೆ ಏದುರಿಸುತ್ತಿರುವ ಕೊಪ್ಪಳ ಜಿಲ್ಲೆ ಸೇರಿ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿ ಮಕ್ಕಳಿಗೆ ಹಾಗು ಗರ್ಭಿಣಿಯರು, ಬಾಣಂತಿಯರಿಗೆ ಹಾಲು ನೀಡಲು ಅಂಗನವಾಡಿ ಮಕ್ಕಳಿಗೆ ಕ್ಷೀರ ಭಾಗ್ಯ, ತಾಯಂದಿರಿಗೆ ಮಾತೃಪೂರ್ಣ ಯೋಜನೆಯಲ್ಲಿ ಹಾಲನ್ನು ಸರಕಾರ ನೀಡುತ್ತಿತ್ತು.


ಆದರೆ ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ ತಿಂಗಳನಿಂದ ಹಾಲಿನ ಪೌಡರ ವಿತರಿಸಿಲ್ಲ. ಕೆನೆಭರಿತ ಹಾಲು ನೀಡುತ್ತಿರುವದರಿಂದ ಅಂಗನವಾಡಿ ಮಕ್ಕಳು ಹಾಲನ್ನು ಕೇಳುತ್ತಿದ್ದಾರೆ. ಮಕ್ಕಳಿಗೆ ಹೇಗೊ ಹೇಳಬಹುದು ಆದರೆ ಗರ್ಭೀಣಿಯರು ಬಾಣಂತಿುಯರಿಗೆ ಹೇಳೋದು ಕಷ್ಟವಾಗಿದೆ. ಅಂಗನವಾಡಿಗೆ ಬರುವವರು ಹಾಲು ನೀಡಿ ಎಂದು ಕೇಳುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಹೇಳಿ ಹೇಳಿ ಸಾಕಾಗಿದೆ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಮುಮ್ತಾಜ್ ಬೇಗಂ.


ಇದನ್ನೂ ಓದಿ: Education News: ಸರ್ಕಾರಿ ಶಾಲೆಗಳ ಮೇಲ್ವಿಚಾರಣೆಗೆ 'ವಿದ್ಯಾ ಸಮೀಕ್ಷಾ ಕೇಂದ್ರ' ಸ್ಥಾಪನೆ!


ಈ ಬಗ್ಗೆ ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರನ್ನು ಕೇಳಿದರೆ ಕೆಎಂಎಫ್ ನಿಂದ ಸರಬರಾಜು ಆಗುವ ಹಾಲಿನ ಕೊರತೆ ಕಾರಣ ಎನ್ನುತ್ತಿದ್ದಾರೆ. ಹಾಲು ಉತ್ಪಾದಕ ಸಂಘಗಳಲ್ಲಿ ನಿಗಿದಿ ಪ್ರಮಾಣದ ಹಾಲು ಬಾರದ ಹಿನ್ನೆಲೆಯಲ್ಲಿ ಹಾಲಿನ ಪೌಡರ ವಿತರಣೆಯಾಗುತ್ತಿಲ್ಲ ಎನ್ನಲಾಗಿದೆ. ಈ ಮಧ್ಯೆ ಕೆಎಂಎಫ್ ಸರಬರಾಜು ಮಾಡುವ ಹಾಲಿನ ಪೌಡರ ಬೆಲೆಯಲ್ಲಿ 275 ರಿಂದ 325 ರೂಪಾಯಿ ಏರಿಕೆ ಮಾಡಿದೆ. ಈ ಏರಿಕೆಯ ಬಗ್ಗೆ ಹಣಕಾಸು ಇಲಾಖೆಯಿಂದ ಒಪ್ಪಿಗೆ ಪಡೆದ ನಂತರ ಹಾಲನ್ನು ವಿತರಿಸುವ ಸಾಧ್ಯತೆ ಇದೆ.


ಇದನ್ನೂ ಓದಿ: Siddaganga Mutt: ಸಿದ್ದಗಂಗಾ ಮಠದಲ್ಲಿ ನಿಮ್ಮ ಮಕ್ಕಳ ವಿದ್ಯಾಭ್ಯಾಸ ಮಾಡಿಸಬೇಕಾ? ಹಾಗಾದ್ರೆ ಇಲ್ಲಿದೆ ಅಡ್ಮಿಷನ್ ವಿವರ


ಕೊಪ್ಪಳ ಜಿಲ್ಲೆಯಲ್ಲಿ ಪ್ರತಿ ತಿಂಗಳು 40-42 ಕ್ವಿಂಟಾಲ್ ಮಕ್ಕಳಿಗೆ. 8 ರಿಂದ 13 ಕ್ವಿಂಟಾಲ್ ತಾಯಂದಿರಿಗೆ ಹಾಲಿನ ಪೌಡರ ಬೇಕಿದೆ. ಡಿಸೆಂಬರ್ ತಿಂಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಾಲು ನೀಡಿದ ಕೆಎಂಎಫ್ ಜನವರಿ ತಿಂಗಳಿನಿಂದ ಹಾಲು ನೀಡಿಲ್ಲ.
ಸರಕಾರದ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಮಕ್ಕಳಿಗೆ ಹಾಲಿನ ಪೌಡರ ನೀಡಲಾಗಿಲ್ಲ. ತಾಂತ್ರಿಕ ಕಾರಣ ಹೇಳುವ ಅಧಿಕಾರಿಗಳು ಈಗಲಾದರೂ ಮಕ್ಕಳಿಗೆ ಹಾಗು ತಾಯಂದಿರಿಗೆ ಹಾಲು ನೀಡಲಿ ಎಂದು ಜನತೆ ಆಗ್ರಹಿಸಿದ್ದಾರೆ.

top videos


  ವರದಿ : ಶರಣಪ್ಪ ಬಾಚಲಾಪುರ

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು