Milk Prices: ಹಾಲಿನ ಪ್ರೋತ್ಸಾಹಧನ 5 ರೂ ದಿಂದ 6 ರೂಗೆ ಏರಿಕೆ; ಕೆಎಂಎಫ್​​ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Milk Price in Karnataka: ಕ್ಷಿರಭಾಗ್ಯ ಯೋಜನೆ ಅಡಿ ಶಾಲಾ ಮಕ್ಕಳಿಗೆ ಹಾಲಿನ ಪುಡಿ ಒದಗಿಸಲಾಗುತ್ತಿದೆ. ಆದರೆ ಶಿಕ್ಷಣ ಇಲಾಖೆಯ ಕೆಲವರು ಪುಡಿಯನ್ನು ಮಾರಿಕೊಳ್ಳುತ್ತಿದ್ದಾರೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ 200 ಮೀ ಲೀ ಹಾಲನ್ನು  ಫ್ಲೆಕ್ಸಿ ಫ್ಯಾಕ್​​​​​​ಗಳಲ್ಲಿ ಪೂರೈಕೆ ಮಾಡಲು ಚಿಂತನೆ ನಡೆದಿದೆ. ಇದರಿಂದ  ಮಕ್ಕಳಿಗೆ  ಗುಣಮಟ್ಟದ ಹಾಲು ದೊರೆಯಲಿದೆ.

G Hareeshkumar | news18-kannada
Updated:November 6, 2019, 8:47 AM IST
Milk Prices: ಹಾಲಿನ ಪ್ರೋತ್ಸಾಹಧನ 5 ರೂ ದಿಂದ 6 ರೂಗೆ ಏರಿಕೆ; ಕೆಎಂಎಫ್​​ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಕೆಎಂಎಫ್
  • Share this:
ಬೆಳಗಾವಿ (06): ಕೆಎಂಎಫ್​​​ ಒಕ್ಕೂಟದಿಂದ  ರೈತರ  ಪ್ರತಿ ಲೀಟರ್​​ ಹಾಲಿಗೆ ನೀಡಲಾಗುತ್ತಿದ್ದ 5 ರೂಪಾಯಿ  ಪ್ರೋತ್ಸಾಹ ಧನವನ್ನು 6 ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ನಾನು ಪ್ರಯತ್ನ ಮಾಡಿದ್ದೆ ಸಚಿವನಾಗುತ್ತಿದ್ದೆ ಆದರೆ ಸಚಿವ ಸ್ಥಾನ ಬೇಕಾಗಿರಲಿಲ್ಲ. ಅದರ ಆಸೆ ನನಗಿಲ್ಲ. ಹೊರತಾಗಿ ಕೆಎಂಎಫ್​​​​​ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ.  ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು

ರೈತರ ಸೇವೆ ಮಾಡಲು  ಸಚಿವ ಸ್ಥಾನ ಬಿಟ್ಟು ಕೆಎಂಎಫ್​​​​​ ಆಧ್ಯಕ್ಷನಾಗಿದ್ದೇನೆ. ರೈತರು ಗುಣಮಟ್ಟದ ಹಾಲು ನೀಡಿದರೆ ಪ್ರತಿ ಲೀಟರ್​​ ಹಾಲಿಗೆ 6 ರೂಪಾಯಿ ಪ್ರೋತ್ಸಾಹಧನ ನೀಡುವ ಚಿಂತನೆ ಇದೆ. ಕೆಎಂಎಫ್​​​​​ನಲ್ಲಿ ಅನೇಕ ಸಮಸ್ಯೆಗಳಿದ್ದು, ಎಲ್ಲವನ್ನೂ ಸರಿಪಡಿಸಲಾಗುವುದು ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಬ್ಯಾಂಕ್​​​ ಖಾತೆಗೆ ಆಧಾರ್​​​ ಲಿಂಕ್​​​ ಮಾಡದೇ ಇರುವುದು ಸೇರಿದಂತೆಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದೆ. ಇದೆಲ್ಲವೂ ಸರಿ ಹೋದ ಬಳಿಕ ಪ್ರತಿ ತಿಂಗಳು ಪ್ರೋತ್ಸಾಹಧನ ಆಯಾ ತಿಂಗಳು ಪಾವತಿಸಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ : ಹಾಲು ಉತ್ಪಾದಕ ರೈತರಿಗೆ 550 ಕೋಟಿ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡ ಕೆಎಂಎಫ್

ಕ್ಷಿರಭಾಗ್ಯ ಯೋಜನೆ ಅಡಿ ಶಾಲಾ ಮಕ್ಕಳಿಗೆ ಹಾಲಿನ ಪುಡಿ ಒದಗಿಸಲಾಗುತ್ತಿದೆ. ಆದರೆ ಶಿಕ್ಷಣ ಇಲಾಖೆಯ ಕೆಲವರು ಪುಡಿಯನ್ನು ಮಾರಿಕೊಳ್ಳುತ್ತಿದ್ದಾರೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ 200 ಮೀ ಲೀ ಹಾಲನ್ನು ಫ್ಲೆಕ್ಸಿ ಫ್ಯಾಕ್​​​​​​ಗಳಲ್ಲಿ ಪೂರೈಕೆ ಮಾಡಲು ಚಿಂತನೆ ನಡೆದಿದೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಹಾಲು ದೊರೆಯಲಿದೆ. ಬೆಳಗಾವಿ, ಮಂಗಳೂರು ಹಾಗೂ ತುಮಕೂರು ಘಟಕಗಳಲ್ಲಿ ಪ್ಯಾಕ್​​ಗಳನ್ನು ಸಿದ್ದಪಡಿಸಲು ಅವಕಾಶವಿದೆ ಎಂದು ಹೇಳಿದರು.

 
First published:November 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ