• Home
  • »
  • News
  • »
  • state
  • »
  • Milk Price Hike: ರಾಜ್ಯದ ಜನರಿಗೆ ಮತ್ತೊಂದು ಬಿಗ್​ ಶಾಕ್; ಹಾಲು, ಮೊಸರಿನ ದರದಲ್ಲಿ ಭಾರೀ ಹೆಚ್ಚಳ​!

Milk Price Hike: ರಾಜ್ಯದ ಜನರಿಗೆ ಮತ್ತೊಂದು ಬಿಗ್​ ಶಾಕ್; ಹಾಲು, ಮೊಸರಿನ ದರದಲ್ಲಿ ಭಾರೀ ಹೆಚ್ಚಳ​!

ಹಾಲಿನ ದರ ಹೆಚ್ಚಳ

ಹಾಲಿನ ದರ ಹೆಚ್ಚಳ

ನಾಳೆಯಿಂದ ಒಂದು ಲೀಟರ್ ಹಾಲಿನ ದರ 40 ರೂಪಾಯಿ ಆಗಲಿದೆ. ಹಾಲಿನ ಜೊತೆ ಮೊಸರಿನ ದರ ಕೂಡ ಏರಿಕೆಯಾಗಿದೆ.

  • News18 Kannada
  • Last Updated :
  • Karnataka, India
  • Share this:

ರಾಜ್ಯದ ಜನರಿಗೆ ಮತ್ತೆ ಬೆಲೆ ಏರಿಕೆ (Price Hike) ಬಿಸಿತಟ್ಟಿದೆ.  ಪೆಟ್ರೋಲ್​, ಡಿಸೇಲ್​ ಆಯ್ತು ನಿತ್ಯೋಪಯೋಗಿ ವಸ್ತುಗಳ ಬೆಲೆ ಕೂಡ ಏರಿಕೆ ಆಯ್ತು, ಎಲ್ಲಾ ಬೆಲೆಗಳು ಗಗನಕ್ಕೇರಿರುವಾಗಲೇ ಸರ್ಕಾರ ಹಾಲಿನ ದರ (Milk Rate) ಕೂಡ ಹೆಚ್ಚಳ ಮಾಡಿದ್ದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ನಾಳೆಯಿಂದ ಹಾಲಿನ ದರ ಹೆಚ್ಚಳ ಮಾಡಿರುವುದಾಗಿ KMFಅಧಿಕೃತ ಮಾಹಿತಿ ನೀಡಿದೆ. ನಾಳೆಯಿಂದ ಪ್ರತಿ ಲೀ. ಹಾಲಿನ ದರ 3 ರೂಪಾಯಿ ಹೆಚ್ಚಳವಾಗಲಿದೆ. ನಾಳೆ ಹಾಲು ತರಲು ಹೋಗುವವರು 3 ರೂಪಾಯಿ ಹೆಚ್ಚಾಗಿ ತೆಗೆದುಕೊಂಡು ಹೋಗಿ 


ನಾಳೆಯಿಂದಲೇ ಹೊಸ ದರ ಜಾರಿ


ನಾಳೆಯಿಂದ ಒಂದು ಲೀಟರ್ ಹಾಲಿನ ದರ 40 ರೂಪಾಯಿ ಆಗಲಿದೆ. ಹಾಲಿನ ಜೊತೆ ಮೊಸರಿನ ದರ ಕೂಡ ಏರಿಕೆಯಾಗಿದ್ದು, ಮೊಸರು ಪ್ರತಿ ಲೀಟರ್ ಗೆ 45 ರೂಪಾಯಿ ಇತ್ತು ಈಗ ನಾಳೆಯಿಂದ ಒಂದು ಲೀಟರ್ ಮೊಸರು 48 ರೂಪಾಯಿ ಆಗಲಿದೆ.




ಯಾವ ಹಾಲಿನ ಬೆಲೆ ಎಷ್ಟಿದೆ?


ಟೋನ್ಡ್ ಹಾಲು ₹37 ರಿಂದ ₹40 ಏರಿಕೆ


- ಹೊಮೋಜಿನೈಸ್ಡ್ ಹಾಲು ₹38 ರಿಂದ ₹41 ಏರಿಕೆ


- ಹೊಮೊಜಿನೈಸ್ಡ್ ಹಸುವಿನ ಹಾಲು ₹42 ರಿಂದ ₹45 ಏರಿಕೆ


- ಸ್ಪೆಷಲ್ ಹಾಲು ₹43 ರಿಂದ ₹46 ಏರಿಕೆ


- ಶುಭಂ ಹಾಲು ₹43 ರಿಂದ ₹46 ಏರಿಕೆ


- ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು ₹44 ರಿಂದ ₹47 ಏರಿಕೆ


- ಸಮೃದ್ಧಿ ಹಾಲು ₹48 ರಿಂದ ₹51 ಏರಿಕೆ


- ಸಂತೃಪ್ತಿ ಹಾಲು ₹51 ರಿಂದ ₹53 ಏರಿಕೆ


- ಡಬಲ್ ಟೋನ್ಡ್ ಹಾಲು ₹36 ರಿಂದ ₹39 ಏರಿಕೆ


- ಮೊಸರು ಪ್ರತಿ ಕೆಜಿಗೆ ₹45 ರಿಂದ ₹48 ಏರಿಕೆ


ಸದ್ಯ ಇರುವ ಬೇರೆ ಬೇರೆ ಹಾಲುಗಳ ದರ


ನಂದಿನಿ 37
ದೊಡ್ಲ 44
ಜೆರ್ಸಿ 44
ಹೆರಿಟೇಜ್ 48
ತಿರುಮಲ 48
ಗೋವರ್ಧನ್ 49
ಆರೋಗ್ಯ 50


ಬೇರೆ ಬೇರೆ ರಾಜ್ಯಗಳಲ್ಲಿ ಹಾಲಿ ದರ :


ಕರ್ನಾಟಕ 37
ಆಂಧ್ರಪ್ರದೇಶ 55
ತಮಿಳುನಾಡು 40
ಕೇರಳ 46
ಮಹಾರಾಷ್ಟ್ರ 51
ದೆಹಲಿ 51
ಗುಜರಾತ್ 50


ರೈತರಿಗೆ ನಾಳೆಯಿಂದ ಬಂಪರ್ ಆಫರ್


ರೈತರ ಹಲವು ದಿನಗಳ ಬೇಡಿಕೆ KMF ಈಡೇರಿಸಿದೆ. ನಾಳೆಯಿಂದ ರೈತರಿಗೆ ಪ್ರತಿ ಲೀಟರ್​ಗೆ ಸರ್ಕಾರ ನೀಡುತ್ತಿದ್ದ ಬೆಲೆ ಕೂಡ ಹೆಚ್ಚಾಗಿದೆ. ಹೈನುಗಾರಿಕೆಯನ್ನೇ ನಂಬಿದ ಅನೇಕ ರೈತ ಕುಟುಂಬಗಳಿಗೆ ಇದು ಸಂತಸದ ಸುದ್ದಿಯಾಗಿದೆ.


8 ತಿಂಗಳ ಹಿಂದೆಯೇ ಕೆಎಂಎಫ್ ಮನವಿ


ಹಾಲಿನ ದರ ಹೆಚ್ಚಳ ಮಾಡುವಂತೆ ಕಳೆದ 8 ತಿಂಗಳುಗಳ ಹಿಂದೆಯೇ ಕೆಎಂಎಫ್‌ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.  ಹಾಲಿನ ಸಂಸ್ಕರಣೆ, ಕಚ್ಚಾ ಸಾಮಾಗ್ರಿ, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿದಂತೆ ಎಲ್ಲ ವೆಚ್ಚಗಳೂ ಶೇ 30ರಷ್ಟು ಹೆಚ್ಚಾಗಿವೆ. ರೈತರಿಗೆ ಹೆಚ್ಚುವರಿ ದರ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ನಂದಿನಿ ಹಾಲಿನ ದರ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿತ್ತು. ಮೂರು ರೂಪಾಯಿ ದರ ಹೆಚ್ಚಿಸಿದರೆ ಅದರಲ್ಲಿ ಎರಡು ರೂಪಾಯಿಯನ್ನು ರೈತರಿಗೆ ಮತ್ತು ಒಂದು ರೂಪಾಯಿಯನ್ನು ಹಾಲು ಒಕ್ಕೂಟಗಳಿಗೆ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದರು.


ಹಲವು ದಿನಗಳ ಬೇಡಿಕೆಗೆ ಗ್ರೀನ್​ ಸಿಗ್ನಲ್​


ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೀಡಿರುವ ಮನವಿ ಸ್ವೀಕರಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಧಿಕಾರಿಗಳು ಹಾಗೂ ಸಂಬಂಧಿಸಿದವರ ಜೊತೆ ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದರು. ತಿಂಗಳುಗಳಿಂದ ಕೇಳಿಬರುತ್ತಿರುವ ಈ ಬೇಡಿಕೆಗೆ ಈ ಬಾರಿ ಮುಖ್ಯಮಂತ್ರಿ ಬೊಮ್ಮಾಯಿ ಸಹಮತ ಸೂಚಿಸಿದ್ದಾರೆ.


ಇದನ್ನೂ ಓದಿ: Milk Price Hike: ಮತ್ತೆ ಹಾಲಿನ ದರ ಏರಿಕೆ, ಕಾಫಿ-ಟೀ ಕುಡಿಯೋದೂ ಕಷ್ಟ ಗುರೂ!


ಹೋಟೆಲ್​ನಲ್ಲಿ ಕಾಫಿ ಕೂಡ ಹೆಚ್ಚಾಗುತ್ತಾ?


ಹಾಲಿನ ದರ ಏರಿಕೆ ಮಾಡಿದ್ದಾರೆ. ಹಣದುಬ್ಬರ, ಇಂಧನ ಬೆಲೆ ಏರಿಕೆ, ಅಡುಗೆ ತೈಲ ಬೆಲೆ ಏರಿಕೆಗಳಿಂದ ಕಂಗಾಲಾಗಿರುವ ಜನರ ಆರ್ಥಿಕ ಹೊರೆಯನ್ನು ಇದು ಮತ್ತಷ್ಟು ಹೆಚ್ಚಿಸಬಹುದು. ಹೋಟೆಲ್​ಗಳಲ್ಲಿ ಕಾಫಿ, ಟೀ ಬೆಲೆಯೂ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.

Published by:ಪಾವನ ಎಚ್ ಎಸ್
First published: