• Home
  • »
  • News
  • »
  • state
  • »
  • Milk Price Hike: ರಾಜ್ಯದ ಜನರಿಗೆ ಮತ್ತೊಂದು ಬಿಗ್​ ಶಾಕ್; ಹಾಲು, ಮೊಸರಿನ ದರ 2 ರೂ ಹೆಚ್ಚಳ​!

Milk Price Hike: ರಾಜ್ಯದ ಜನರಿಗೆ ಮತ್ತೊಂದು ಬಿಗ್​ ಶಾಕ್; ಹಾಲು, ಮೊಸರಿನ ದರ 2 ರೂ ಹೆಚ್ಚಳ​!

ಹಾಲಿನ ದರ ಹೆಚ್ಚಳ

ಹಾಲಿನ ದರ ಹೆಚ್ಚಳ

ನಾಳೆಯಿಂದ ಪ್ರತಿ ಲೀ. ಹಾಲಿನ ದರ 2 ರೂಪಾಯಿ ಹೆಚ್ಚಳವಾಗಲಿದೆ. ನಾಳೆ ಹಾಲು ತರಲು ಹೋಗುವವರು 2 ರೂಪಾಯಿ ಹೆಚ್ಚಾಗಿ ತೆಗೆದುಕೊಂಡು ಹೋಗಿ 

  • News18 Kannada
  • Last Updated :
  • Karnataka, India
  • Share this:

ರಾಜ್ಯದ ಜನರಿಗೆ ಮತ್ತೆ ಬೆಲೆ ಏರಿಕೆ (Price Hike) ಬಿಸಿತಟ್ಟಿದೆ.  ಪೆಟ್ರೋಲ್​, ಡಿಸೇಲ್​ ಆಯ್ತು ನಿತ್ಯೋಪಯೋಗಿ ವಸ್ತುಗಳ ಬೆಲೆ ಕೂಡ ಏರಿಕೆ ಆಯ್ತು, ಎಲ್ಲಾ ಬೆಲೆಗಳು ಗಗನಕ್ಕೇರಿರುವಾಗಲೇ ಸರ್ಕಾರ ಹಾಲಿನ ದರ (Milk Rate) ಕೂಡ ಹೆಚ್ಚಳ ಮಾಡಿದ್ದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ನಾಳೆಯಿಂದ ಹಾಲಿನ ದರ ಹೆಚ್ಚಳ ಮಾಡಿರುವುದಾಗಿ KMFಅಧಿಕೃತ ಮಾಹಿತಿ ನೀಡಿದೆ. ನಾಳೆಯಿಂದ ಪ್ರತಿ ಲೀ. ಹಾಲಿನ ದರ 2 ರೂಪಾಯಿ ಹೆಚ್ಚಳವಾಗಲಿದೆ. ನಾಳೆ ಹಾಲು ತರಲು ಹೋಗುವವರು 2 ರೂಪಾಯಿ ಹೆಚ್ಚಾಗಿ ತೆಗೆದುಕೊಂಡು ಹೋಗಿ 


ಪ್ರತಿ ಲೀಟರ್​​ಗೆ​ 2 ರೂ. ದರ ಹೆಚ್ಚಳ


KMF ಆಡಳಿತ ಮಂಡಳಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ, ಹಾಲು, ಮೊಸರಿನ ಬೆಲೆ ಏರಿಕೆ ಬಗ್ಗೆ ಘೋಷಣೆ ಮಾಡಿದ್ದಾರೆ. ಗ್ರಾಹಕರಿಗೆ, ರೈತರಿಗೆ ಹೊರೆಯಾಗದಂತೆ ನಿರ್ಧಾರ ಕೈಗೊಂಡಿದ್ದು, ಹಾಲು ಹಾಗೂ ಮೊಸರು ಪ್ರತಿ ಲೀಟರ್​​ಗೆ​ 2 ರೂ. ದರ ಹೆಚ್ಚಳ ಮಾಡಿದ್ದು, ನಾಳಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಗ್ರಾಹಕರು ಸಹಕಾರ ನೀಡಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ.ರೈತರಿಗೆ ನಾಳೆಯಿಂದ ಬಂಪರ್ ಆಫರ್

ರೈತರ ಹಲವು ದಿನಗಳ ಬೇಡಿಕೆ KMF ಈಡೇರಿಸಿದೆ. ನಾಳೆಯಿಂದ ರೈತರಿಗೆ ಪ್ರತಿ ಲೀಟರ್​ಗೆ ಸರ್ಕಾರ ನೀಡುತ್ತಿದ್ದ ಬೆಲೆ ಕೂಡ ಹೆಚ್ಚಾಗಿದೆ. ಹೈನುಗಾರಿಕೆಯನ್ನೇ ನಂಬಿದ ಅನೇಕ ರೈತ ಕುಟುಂಬಗಳಿಗೆ ಇದು ಸಂತಸದ ಸುದ್ದಿಯಾಗಿದೆ.


ರೈತರಿಗೆ ಅನುಕೂಲ ಆಗಬೇಕು


ಈ ಹಣವನ್ನು ನೇರವಾಗಿ ರೈತರಿಗೆ ನೀಡಲಾಗುತ್ತದೆ. ಇದ್ರಿಂದ ರೈತರಿಗೆ ಅನುಕೂಲ ಆಗಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಇದೀಗ ಕೆಎಂಎಫ್​ಗೆ 77 ಲಕ್ಷ ಲೀಟರ್ ಹಾಲು ಬರುತ್ತೆ. 27 ಲಕ್ಷ ಲೀಟರ್‌ನಷ್ಟು ಹಾಲು ಪೌಡರ್ ಆಗುತ್ತದೆ. ಅದರ ಹಣ ರೈತರಿಗೆ ಕೊಡುವುದು ನಿಧಾನವಾಗುತ್ತೆ. 50 ಲಕ್ಷ ಲೀಟರ್ ಹಾಲಿನ ಹಣ ಕೂಡಲೇ ಸಿಗುತ್ತೆ ಎಂದ್ರು.


ಕೆಎಂಎಫ್‌ಗೆ ಒತ್ತಡ ಆದ್ರೂ ರೈತರಿಗೆ  193 ಕೋಟಿ ಸಬ್ಸಿಡಿ ರೂಪದಲ್ಲಿ ನೀಡಿದ್ದೇವೆ. ಕ್ಷೀರಭಾಗ್ಯ ಯೋಜನೆಯಿಂದ ಪ್ರತಿನಿತ್ಯ 8 ಲಕ್ಷ ಲೀಟರ್ ಹಾಲು ನೀಡ್ತಿದ್ದೇವೆ. ಸಾಮಾನ್ಯ ದರಕ್ಕಿಂತ ಕಡಿಮೆ ದರಕ್ಕೆ ನೀಡಲಾಗ್ತಿದೆ.
ತಿಂಗಳಿಗೆ ಇದರಿಂದ ಸುಮಾರು 10 ಕೋಟಿ ಲಾಸ್ ಆಗ್ತಿದೆ. ನಷ್ಟ ತುಂಬಲು ಬೆಲೆ ಏರಿಕೆ ಅನಿವಾರ್ಯ ಎಂದು ಬಾಲಚಂದ್ರ ಜಾರಕಿಹೋಳಿ ಹೇಳಿದ್ದಾರೆ.


ಇಂದು ರಾತ್ರಿ 11 ಗಂಟೆಯ ನಂತ್ರ ಬೆಲೆ ಏರಿಕೆ


ನಾಳೆ ಬೆಳಿಗ್ಗೆ ಹಾಲು ದರ ಈಗಿದ್ದಷ್ಟೇ ಇರಲಿದ್ದು, ಇಂದು ರಾತ್ರಿ 11 ಗಂಟೆಯ ನಂತರ ದರ ಏರಿಕೆ ಮಾಡಲಾಗುತ್ತದೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಭಾರತದಲ್ಲಿ ಹಾಲಿನ ದರದಲ್ಲಿ 8ನೇ ಸ್ಥಾನದಲ್ಲಿ ನಾವಿದ್ದೇವೆ
ದೀಪಾವಳಿ ಸಂದರ್ಭದಲ್ಲಿ ಮಾತ್ರ ತುಪ್ಪದ ಬೆಲೆ ಜಾಸ್ತಿಯಾಗಿತ್ತು. ಅನಿವಾರ್ಯ ಕಾರಣದಿಂದ ಜಾಸ್ತಿ ಮಾಡಿದ್ದು ನಿಜ
ಇನ್ನು ಜಾಸ್ತಿ ಮಾಡಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.


ಇದನ್ನೂ ಓದಿ: Milk Price Hike: ಮತ್ತೆ ಹಾಲಿನ ದರ ಏರಿಕೆ, ಕಾಫಿ-ಟೀ ಕುಡಿಯೋದೂ ಕಷ್ಟ ಗುರೂ!


ಹಾಲು-   ಹಳೆಯ ದರ   ಹೊಸ‌ ದರ


ಟೋನ್ಡ್ ಹಾಲು - ಹಳೆಯ ದರ 37 -  ಹೊಸ‌ ದರ 39 ರೂ


ಹೋಮೋಜಿನೈಸ್ಡ್ ಟೋನ್ಡ್ ಹಾಲು - 38 - 40 ರೂ


ಹೋಮೋಜಿನೈಸ್ಡ್ ಹಸುವಿನ ಹಾಲು - 42 - 44 ರೂ


ಸ್ಪೆಷಲ್‌ ಹಾಲು - 43 - 45 ರೂ


ಶುಭಂ ಹಾಲು - 43 - 45 ರೂ


ಹೋಮೋಜಿನೈಸ್ಡ್ ಸ್ಟ್ಯಾಂಡರ್ಡೈಸರ್ ಹಾಲು - 44 - 46 ರೂ


ಸಮೃದ್ಧಿ ಹಾಲು - 48 - 50 ರೂ


ಸಂತೃಪ್ತಿ ಹಾಲು - 50 - 52 ರೂ


ಡಬ್ಬಲ್‌ ಟೋನ್ಡ್ ಹಾಲು - 36 - 38 ರೂ


ಮೊಸರು ಪ್ರತಿ ಲೀಟರ್​ಗೆ - 45 - 47 ರೂ ಏರಿಕೆಯಾಗಿದೆ.

Published by:ಪಾವನ ಎಚ್ ಎಸ್
First published: