• Home
  • »
  • News
  • »
  • state
  • »
  • Basavaraj Bommai: ಹಾಲಿನ ಪರಿಷ್ಕೃತ ದರ ಏರಿಕೆಗೆ ಸಿಎಂ ತಡೆ; ಸಭೆ ನಡೆಸಿ ನಿರ್ಧಾರ ಎಂದ್ರು ಬೊಮ್ಮಾಯಿ

Basavaraj Bommai: ಹಾಲಿನ ಪರಿಷ್ಕೃತ ದರ ಏರಿಕೆಗೆ ಸಿಎಂ ತಡೆ; ಸಭೆ ನಡೆಸಿ ನಿರ್ಧಾರ ಎಂದ್ರು ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ನವೆಂಬರ್​ 20ರ ನಂತರ ಸಭೆ ಕರೆದು ನಿರ್ಧರಿಸುತ್ತೇವೆ. ಜನರಿಗೆ ಹೊರೆಯಾಗದ ರೀತಿಯಲ್ಲಿ ಹಾಲಿನ ದರ ಹೆಚ್ಚಿಸುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ಹಾಲಿನ ದರ ಏರಿಕೆಗೆ ತಡೆ ನೀಡಲಾಗಿದೆ. 

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು: ಹಾಲಿನ ಪರಿಷ್ಕೃತ ದರ ಏರಿಕೆಗೆ (Milk Price) ಸಿಎಂ ಬಸವರಾಜ ಬೊಮ್ಮಾಯಿ ಅವರು ತಡೆ ನೀಡಿದ್ದಾರೆ.  ಇತ್ತ ಕೆಎಂಎಫ್ ​ಈಗಾಗಲೇ ನಂದಿನಿ ಹಾಲಿನ (Nandini Milk) ದರವನ್ನು 3 ರೂ ಏರಿಸಿ ಆದೇಶ ಹೊರಡಿಸಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ನಂದಿನಿ ಹಾಲಿನ ದರ ಪ್ರತಿ ಲೀಟರ್​ಗೆ 3 ರೂ. ಹೆಚ್ಚಳ ವಿಚಾರವಾಗಿ ನವೆಂಬರ್​ 20ರ ನಂತರ ಸಭೆ ಕರೆದು ನಿರ್ಧರಿಸುತ್ತೇವೆ. ಜನರಿಗೆ ಹೊರೆಯಾಗದ ರೀತಿಯಲ್ಲಿ ಹಾಲಿನ ದರ ಹೆಚ್ಚಿಸುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ಹಾಲಿನ ದರ ಏರಿಕೆಗೆ (Price Hike) ತಡೆಯಾಗಿದೆ. 


ದರ ಏರಿಕೆಗೆ ಬ್ರೇಕ್​ ಬೀಳಲು ಕಾರಣವೇನು?


ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುವ ಭಯದಿಂದ ಪರಿಷ್ಕೃತ ಹಾಲಿನ ದರವನ್ನು ಸರ್ಕಾರ ಹಿಂಪಡೆದಿದೆ. ಈಗಾಗಲೇ ಜನರಿಗೆ ಬಿಜೆಪಿ ಸರ್ಕಾರದ ಮೇಲೆ ಬೆಲೆ ಏರಿಕೆ ಕೋಪ ಇದೆ. ಸರ್ಕಾರದ ಮೇಲೆ ರಾಜ್ಯದ ಜನರಿಗೆ ಇರುವ ಆಕ್ರೋಶ ಹಾಲಿನ ದರ ಏರಿಕೆ ಮಾಡಿದ್ರೆ ಮತ್ತಷ್ಟು ಹೆಚ್ಚಲಿದೆ ಹೀಗಾಗಿ ದರ ಏರಿಕೆಗೆ ಬ್ರೇಕ್​ ಹಾಕಲಾಗಿದೆ.


ಬೆಲೆ ಏರಿಕೆ ಮಾಡೋದು ಡೌಟ್​!


ಮುಂದಿನ ಚುನಾವಣೆಯಲ್ಲಿ ಹಿನ್ನೆಡೆ ಭೀತಿಯಿಂದ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ. ಹೀಗಾಗಿಕೆಎಂಎಫ್ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿ, ಸೂಕ್ತ ದರ ನಿಗದಿ ಮಾಡಲು ಮುಂದಾಗಿದ್ದಾರೆ. ನವೆಂಬರ್ 20ರ ಬಳಿಕ ಸಭೆ ಮಾಡಿ ಸೂಕ್ತ ನಿರ್ಧಾರ ಮಾಡುವುದಾಗಿ ಸಿಎಂ ಹೇಳಿದ್ದಾರೆ. ‘ಅಂದು ಸಭೆ ಮಾಡಿದ್ರು ದರ ಏರಿಕೆ ನಿರ್ಧಾರ ಮಾಡೋದು ಅನುಮಾನ ಎಂದು ಹೇಳಲಾಗ್ತಿದೆ.


16 ಹಾಲು ಒಕ್ಕೂಟಗಳಿಂದ ಕೆಎಂಎಫ್​​ಗೆ ಮನವಿ


ಪ್ರತಿ ಲೀಟರ್​ಗೆ 3 ರೂಗೆ ಏರಿಕೆ ಮಾಡಬೇಕೆಂದು 16 ಜಿಲ್ಲಾ ಹಾಲು ಒಕ್ಕೂಟಗಳು ಕೆಎಂಎಫ್​​ಗೆ ಮನವಿ ಮಾಡಿದ್ದವು. ಅಲ್ಲದೆ ದರ ಏರಿಕೆಯ ಹಣವನ್ನು ರೈತರಿಗೆ ನೀಡುವುದಾಗಿ ಹೇಳಿದ್ದವು. ಈ ಕುರಿತು ಹಿಂದೊಮ್ಮೆ ಬೆಂಗಳೂರಿನಲ್ಲಿ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಕೆಎಂಎಫ್‌ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆದಿತ್ತು.


Milk price hiked by Rs 3 from tomorrow KMF official information
ಹಾಲಿನ ದರ ಹೆಚ್ಚಳಕ್ಕೆ ತಡೆ


ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು. ಕೆಎಂಎಫ್‌ನ ಎಲ್ಲ 16 ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು.


ಸಚಿವ ಎಸ್.ಟಿ. ಸೋಮಶೇಖರ್ ಭರವಸೆ


ಹಾಲಿನ ಬೆಲೆ ಹೆಚ್ಚಳ ಸೇರಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ರಾಜ್ಯ ಸರ್ಕಾರದ ಅನುಮೋದನೆ ಪಡೆದುಕೊಳ್ಳಬೇಕು. ಹೀಗಾಗಿ ಈ ಪ್ರಸ್ತಾವನೆಯನ್ನು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ಕಿವಿಗು ಹಾಕಲಾಗಿತ್ತು. ಹೀಗಾಗಿ ಎಸ್.ಟಿ. ಸೋಮಶೇಖರ್ ವಿಧಾನಪರಿಷತ್​​ನಲ್ಲಿ ಲೀಟರ್​ ಹಾಲಿಗೆ 3 ರೂ. ಹೆಚ್ಚಳ ಮಾಡಲು ಕೆಎಂಎಫ್​ನಲ್ಲೂ ತೀರ್ಮಾನ ಆಗಿದೆ. ತಕ್ಷಣ ತೀರ್ಮಾನ ತೆಗೆದುಕೊಳ್ಳಲು ಸಿಎಂ ಗಮನಕ್ಕೆ ತರುವೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: KSRTC ಸಿಬ್ಬಂದಿಗೆ ಗುಡ್​ ನ್ಯೂಸ್​; 1 ಕೋಟಿ ರೂ. ಮೊತ್ತದ ಅಪಘಾತ ವಿಮಾ ಯೋಜನೆ ಜಾರಿ


ಭರವಸೆ ನೀಡಿ 8 ತಿಂಗಳು ಕಳೆದರು ಸರ್ಕಾರ ಹಾಲಿನ ದರ ಏರಿಕೆ ಬಗ್ಗೆ ಚಕಾರ ಎತ್ತಿರಲಿಲ್ಲ. ಇದರಿಂದ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಇರುವ ಅಧಿಕಾರವನ್ನು ಬಳಸಿಕೊಂಡು ದರ ಹೆಚ್ಚಳದ ಆದೇಶ ಮಾಡಬೇಕು ಎಂದು ಒಕ್ಕೂಟಗಳು ಅಧ್ಯಕ್ಷರ ಮೇಲೆ ಒತ್ತಡ ಹೇರಿದ್ದವು. ನಂತರ ಕೆಎಂಎಫ್​​ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಅಕ್ಟೋಬರ್​ 31 ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಶೀಘ್ರದಲ್ಲೇ ಹಾಲಿನ ದರ ಏರಿಸುವುದಾಗಿ ಹೇಳಿದ್ದರು. ಹೇಳಿಕೆ ನೀಡಿ 15 ದಿವಸ ಕಳೆಯುವುದರ ಒಳಗಾಗಿ ಕೆಎಂಎಫ್​​ ಹಾಲಿನ ದರವನ್ನು ಏರಿಕೆ ಮಾಡಿದ್ರು. ಆದ್ರೆ ಈಗ ಸಿಎಂ ತಡೆ ನೀಡಿದ್ದಾರೆ.

Published by:ಪಾವನ ಎಚ್ ಎಸ್
First published: