ಬೇವಿನ ಮರದಲ್ಲಿ ಹಾಲು; ವಿಶೇಷ ಪೂಜೆ ಮಾಡುವುದಾಗಿ ಹೇಳಿ ರೈತನಿಗೆ 50 ಸಾವಿರ ವಂಚನೆ

ಬೇವಿನ ಮರದಿಂದ ಬರುತ್ತಿರುವ ಹಾಲು ಸಿಹಿಯಾಗಿದ್ದು, ಜನ ಅದರ ರುಚಿ ನೋಡುತ್ತಿದ್ದಾರೆ. ಅದನ್ನು ಜನ ತೀರ್ಥ ರೂಪದಲ್ಲಿ ಸೇವಿಸುತ್ತಿದ್ದಾರೆ. ದೈವ ಲೀಲೆ ಎಂದೇ ನಂಬಿ ಗಿಡಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಬೇವಿನ ಗಿಡದ ಬುಡಕ್ಕೆ ಕಲ್ಲುಗಳನ್ನಿಟ್ಟಿ ದೇವಿ ರೂಪದಲ್ಲಿ ಪೂಜಿಸುತ್ತಿದ್ದಾರೆ.

news18-kannada
Updated:January 14, 2020, 7:28 AM IST
ಬೇವಿನ ಮರದಲ್ಲಿ ಹಾಲು; ವಿಶೇಷ ಪೂಜೆ ಮಾಡುವುದಾಗಿ ಹೇಳಿ ರೈತನಿಗೆ 50 ಸಾವಿರ ವಂಚನೆ
ಬೇವಿನ ಮರದಲ್ಲಿ ಸೋರುತ್ತಿರುವ ಹಾಲು
  • Share this:
ಕಲಬುರ್ಗಿ(ಜ.14) : ಬೇವಿನ ಮರದಿಂದ ಹಾಲು ಸೋರುತ್ತಿದ್ದು, ಜನಮರುಳೋ ಜಾತ್ರೆ ಮರುಳೋ ಎಂಬಂತೆ ಮರಕ್ಕೆ ಪೂಜೆ ಸಲ್ಲಿಸುತ್ತಿರುವ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಕೊಳ್ಳೂರು ಗ್ರಾಮದಲ್ಲಿ ನಡೆದಿದೆ. ಬೇವಿನ ಮರದಿಂದ ಹಾಲು ಜಿನುಗುತ್ತಿರುವುದನ್ನು ಜನತೆ ಪವಾಡವೆಂದೇ ನಂಬುತ್ತಿದ್ದಾರೆ. ಮಹಾದೇವಪ್ಪ ತಳವಾರ ಎಂಬುವರ ಹೊಲದಲ್ಲಿರೋ ಬೇವಿನ ಮರದಲ್ಲಿ ಹಾಲು ಜಿನುಗುತ್ತಿದೆ. ಕಳೆದ 15 ದಿನದಿಂದ ಹಾಲು ಜಿನುಗುತ್ತಿದೆ.

ಬೇವಿನ ಮರದಿಂದ ಬರುತ್ತಿರುವ ಹಾಲು ಸಿಹಿಯಾಗಿದ್ದು, ಜನ ಅದರ ರುಚಿ ನೋಡುತ್ತಿದ್ದಾರೆ. ಅದನ್ನು ಜನ ತೀರ್ಥ ರೂಪದಲ್ಲಿ ಸೇವಿಸುತ್ತಿದ್ದಾರೆ. ದೈವ ಲೀಲೆ ಎಂದೇ ನಂಬಿ ಗಿಡಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಬೇವಿನ ಗಿಡದ ಬುಡಕ್ಕೆ ಕಲ್ಲುಗಳನ್ನಿಟ್ಟಿ ದೇವಿ ರೂಪದಲ್ಲಿ ಪೂಜಿಸುತ್ತಿದ್ದಾರೆ. ಸುದ್ದಿ ತಿಳಿದು ಸುತ್ತಲಿನ ಗ್ರಾಮಗಳ ಜನ ತಂಡೋಪ ತಂಡವಾಗಿ ಬಂದು ಮರವನ್ನು ವೀಕ್ಷಿಸುತ್ತಿದ್ದಾರೆ. ಹಾಲು ಜಿನುಗುತ್ತಿರುವುದು ಪವಾಡವೆಂದೇ ನಂಬಿ, ಪೂಜೆ ಸಲ್ಲಿಸುತ್ತಿದ್ದಾರೆ. ಹಾಲನ್ನು ಸೇವಿಸಿ ಇಷ್ಟಾರ್ಥಸಿದ್ಧಿಗಾಗಿ ಪ್ರಾರ್ಥಿಸುತ್ತಿದ್ದಾರೆ.

ಮತ್ತೊಂದೆಡೆ ಹೊಲದ ಮಾಲೀಕ ಮಹಾದೇವಪ್ಪ ತಳವಾರ, ಜ್ಯೋತಿಷಿಗಳ ಬಳಿ ಶಾಸ್ತ್ರ ಕೇಳಿದ್ದಾನೆ. ತನ್ನ ಹೊಲದಲ್ಲಿರೋ ಬೇವಿನ ಮರದಲ್ಲಿ ಹಾಲು ಜಿನುಗುತ್ತಿರುವುದರಿಂದ ಏನು ಲಾಭವಾಗುತ್ತೆ ಅಂತ ಜ್ಯೋತಿಷಿಗಳನ್ನು ಕೇಳಿದ್ದಾನೆ.  ಈತನಿಂದ ಹಣ ಪಡೆದ ಜ್ಯೋತಿಷಿಗಳು, ಬೇವಿನ ಮರದಲ್ಲಿ ಸುರಿಯುತ್ತಿರೋ ಹಾಲಿನಿಂದ ನಿನಗೆ ಮುಂದೆ ಹತ್ತಾರು ರೀತಿಯ ಲಾಭವಾಗುತ್ತದೆ. ಇದಕ್ಕಾಗಿ ವಿವಿಧ ಪೂಜೆಗಳನ್ನು ಸಲ್ಲಿಸಬೇಕೆಂದು ಹೇಳಿ, ಹೊಲದ ಮಾಲೀಕನಿಂದ ಹಣ ಪೀಕಿದ್ದಾರೆ.

ವಿವಿಧ ಜ್ಯೋತಿಷಿಗಳಿಗೆ ಹಣ ನೀಡಿ, 50 ಸಾವಿರ ರೂಪಾಯಿಗೂ ಹೆಚ್ಚು ಹಣವನ್ನು ಮಹಾದೇವಪ್ಪ ಕಳೆದುಕೊಂಡಿದ್ದಾನೆ. ಆತನಿಗೆ ಇರೋದು ಕೇವಲ ಎರಡು ಎಕರೆ ಜಮೀನು. ಹೀಗಿರಬೇಕಾದರೆ ಅಲ್ಲಿ-ಇಲ್ಲಿ ಸಾಲ ಮಾಡಿ ಜ್ಯೋತಿಷಿಗಳಿಗೆ ಹಣ ನೀಡಿ, ವಿವಿಧ ಪೂಜೆಗಳನ್ನೂ ಮಾಡಿದ್ದಾನೆ. ಎನ್ನಲಾಗಿದೆ.

ವಿಶೇಷ ಪೂಜೆಗಳನ್ನು ಮಾಡಿದಲ್ಲಿ ಮುಂದೆ ಸಾಕಷ್ಟು ಲಾಭಗಲಾಗಲಿವೆ ಎಂಬ ಮಾತನ್ನು ಕೇಳಿ ಮಹಾದೇವಪ್ಪ ಹಣ ಖರ್ಚು ಮಾಡಿಕೊಂಡಿದ್ದಾನೆ. ಆದರೆ ಇದುವರೆಗೂ ಆತನಿಗೆ ಯಾವುದೇ ರೀತಿಯ ಲಾಭಗಳಾಗಿಲ್ಲದಿದ್ದರೂ ಹಣ ಮಾತ್ರ ಕಳೆದುಕೊಳ್ಳುವಂತಾಗಿದೆ. ಸುತ್ತ-ಮುತ್ತಲ ಹಳ್ಳಿಯ ಜನ ಈಗಲೂ ಆತನ ಹೊಲಕ್ಕೆ ಭೇಟಿ ನೀಡಿ, ಬೇವಿನ ಹಾಲನ್ನು ಕುಡಿದು, ತಮ್ಮ ಇಚ್ಛೆಗಳು ಪೂರೈಕೆಯಾಗಲಿ ಎಂದು ಪ್ರಾರ್ಥಿಸಿ ಹೋಗುತ್ತಿದ್ದಾರೆ.

ಇದನ್ನೂ ಓದಿ : ಮಂಗಳೂರು ಆಯ್ತು, ಈಗ ಬೆಂಗಳೂರು, ಕನಕಪುರ ಮಂದಿಯ ನೆಮ್ಮದಿ ಹಾಳು ಮಾಡುತ್ತಿದ್ದಾರೆ: ಕಲ್ಲಡ್ಕ ವಿರುದ್ಧ ಖಾದರ್ ವಾಗ್ದಾಳಿ

ವೈಜ್ಞಾನಿಕವಾಗಿ ನೋಡಿದಾಗ ಬೇವಿನ ಮರದಲ್ಲಿ ಬಿಳಿ ದ್ರವ ಸುರಿಯೋದು ಸಹಜ ಪ್ರಕ್ರಿಯೆ ಎಂದಿದ್ದರೂ, ಜನ ಮಾತ್ರ ವಿಸ್ಮಯ ಎನ್ನುವ ರೀತಿಯಲ್ಲಿ ಅದನ್ನು ವೀಕ್ಷಿಸಿ ವಾಪಸ್ಸಾಗುತ್ತಿದ್ದಾರೆ
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ